ಮದ್ವೆ ಆಗಿದ್ರೂ, ಲವ್ ಮಾಡ್ತಿದ್ರೂ ಹೆಚ್ಚಿನ ಮಹಿಳೆಯರಿಗೆ ಇರ್ತಾರಂತೆ ಬ್ಯಾಕಪ್ ಸಂಗಾತಿ !
ಜೀವನ ಚೆನ್ನಾಗಿರಬೇಕು ಎಂದು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಬ್ಯಾಕಪ್ ಯೋಜನೆಯನ್ನು ಹೊಂದಿರುತ್ತಾರೆ. ಆದರೆ ಸಂಬಂಧದಲ್ಲಿ ಯಾರಾದರೂ ಅದೇ ಕೆಲಸವನ್ನು ಮಾಡಿದರೆ, ಅದು ಸ್ವಲ್ಪ ವಿಚಿತ್ರವಾಗಿ ತೋರುತ್ತದೆ ಅಲ್ವಾ?. ಸಂಗಾತಿ ಇರೋವಾಗ್ಲೆ, ಬ್ಯಾಕ್ ಅಪ್ ಸಂಗಾತಿನ ಹೊಂದಿರೋದು ಅಂದ್ರೆ ಏನು?
ನಿಮ್ಮ ಜೀವನದಲ್ಲಿ ಬ್ಯಾಕಪ್ ಪ್ಲ್ಯಾನ್ (backup plan)ಇರೋದೇನೋ ಒಳ್ಳೆಯದು. ಆದರೆ ರಿಲೇಶನ್ ಶಿಪ್ ನಲ್ಲಿರೋರು ಯಾರಾದರೂ ಬ್ಯಾಕಪ್ ಪ್ಲ್ಯಾನ್ ಮಾಡಿದ್ರೆ ನೀವು ಏನು ಹೇಳುತ್ತೀರಿ? ಇದು ವಿಚಿತ್ರವಾಗಿ ತೋರುತ್ತದೆ, ಅಲ್ವಾ? ಆದರೆ ಯುಕೆಯಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಸುಮಾರು 50 ಪ್ರತಿಶತದಷ್ಟು ಮಹಿಳೆಯರು ಸಂಬಂಧದಲ್ಲಿದ್ದ ನಂತರವೂ ಬ್ಯಾಕಪ್ ಸಂಗಾತಿಯನ್ನು ಇಟ್ಟುಕೊಳ್ಳುತ್ತಾರೆ.
ಆನ್ಲೈನ್ ಮತ್ತು ಮೊಬೈಲ್ ವೋಟಿಂಗ್ ಪರಿಣತಿ ಹೊಂದಿರುವ ಮಾರ್ಕೆಟಿಂಗ್ ಸಂಶೋಧನಾ ಕಂಪನಿಯಾದ ಒನ್ಪೋಲ್ ಈ ಸಮೀಕ್ಷೆಯಲ್ಲಿ ಯುಕೆಯಲ್ಲಿ 1,000 ಮಹಿಳೆಯರನ್ನು ಒಳಗೊಂಡ ಒಂದು ರಿಸರ್ಚ್ ನಡೆಸಿತ್ತು. ಅದರಲ್ಲಿ 50% ಮಹಿಳೆಯರು ತಾವು ರಿಲೇಶನ್ ಶಿಪ್ ನಲ್ಲಿದ್ರೂ ಸಹ ಬ್ಯಾಕ್ ಅಪ್ ಸಂಗಾತಿ (backup partner) ಇದ್ದಾರೆ ಅನ್ನೋದನ್ನು ಒಪ್ಪಿಕೊಂಡಿದ್ದಾರೆ.
ಬ್ಯಾಕ್ ಅಪ್ ಸಂಗಾತಿ ಯಾಕಂದ್ರೆ ಅವರು ಪ್ರಸ್ತುತ ಸಂಬಂಧ ಹೆಚ್ಚು ಸಮಯ ಉಳಿಯದೇ ಇದ್ದಾಗ, ಬ್ರೇಕ್ ಅಪ್ (breakup)ಆದಾಗ ಇನ್ನೊಬ್ಬ ಸಂಗಾತಿ ಬೇಕಾಗುತ್ತೆ, ಎಂದು ಬ್ಯಾಕ್ ಅಪ್ ಸಂಗಾತಿ ಹೊಂದಿರುತ್ತಾರಂತೆ ಮಹಿಳೆಯರು. ಬ್ಯಾಕಪ್ ಸಂಗಾತಿಯನ್ನು ಹೊಂದಿರುವುದನ್ನು ಒಪ್ಪಿಕೊಂಡ ಹೆಚ್ಚಿನ ಮಹಿಳೆಯರು ತಮ್ಮ ಬ್ಯಾಕಪ್ ಸಂಗಾತಿಯು ತಮ್ಮ ಹಳೆಯ ಸ್ನೇಹಿತ ಎಂದು ಒಪ್ಪಿಕೊಂಡರು.
ಯಾರು ಬೇಕಾದರೂ ಬ್ಯಾಕಪ್ ಪಾರ್ಟ್ನರ್ ಆಗಬಹುದು: ಬ್ಯಾಕಪ್ ಪಾರ್ಟ್ನರ್ ಬಗ್ಗೆ ನಿಮಗೆ ಹೆಚ್ಚು ತಿಳಿದಿಲ್ಲದಿದ್ದರೂ, ಸಂಬಂಧಗಳ ಜಗತ್ತಿನಲ್ಲಿ ಈ ಪದವು ಹೊಸದಲ್ಲ. ಸಮೀಕ್ಷೆಯಲ್ಲಿ, ಮಹಿಳೆಯರು ತಮ್ಮ ಬ್ಯಾಕಪ್ ಸಂಗಾತಿ ತಮ್ಮ ಕಚೇರಿ ಸಹೋದ್ಯೋಗಿ-ಮಾಜಿ ಪತಿ, ಶಾಲಾ ಸ್ನೇಹಿತ ಅಥವಾ ಜಿಮ್ ಫ್ರೆಂಡ್ ಯಾರೇ ಆಗಿರಬಹುದು ಎಂದು ಹೇಳಿದ್ದಾರೆ.
ತನಗೆ ಸಮಸ್ಯೆ ಎಂದು ಬಂದಾಗ ಯಾವ ಹುಡುಗ ತನ್ನ ಸಹಾಯಕ್ಕೆ ಬರುತ್ತಾನೋ, ಅಂತವರನ್ನು ಬ್ಯಾಕ್ ಅಪ್ ಪಾರ್ಟ್ನರ್ ಎನ್ನಲಾಗುತ್ತೆ. ಈ ಸಮೀಕ್ಷೆಯಲ್ಲಿ, 10 ಪ್ರತಿಶತದಷ್ಟು ಮಹಿಳೆಯರು ತಮ್ಮ ಬ್ಯಾಕಪ್ ಸಂಗಾತಿಯೂ ತಮ್ಮ ಎಕ್ಸ್ ಲವರ್ (ex lover) ಆಗಿರಬಹುದು ಎಂದು ಒಪ್ಪಿಕೊಂಡಿದ್ದಾರೆ.
ಮಹಿಳೆಯರು ಬ್ಯಾಕಪ್ ಪಾರ್ಟ್ನರ್ ಏಕೆ ಆಯ್ಕೆ ಮಾಡುತ್ತಾರೆ?
ಮಹಿಳೆಯರು ತಮ್ಮ ಪ್ರಸ್ತುತ ರಿಲೇಶನ್’ಶಿಪ್ ನಲ್ಲಿ (relationship) ಎಲ್ಲವೂ ಚೆನ್ನಾಗಿಲ್ಲ ಎಂದು ಭಾವಿಸಿದಾಗ ಬ್ಯಾಕಪ್ ಸಂಗಾತಿಯನ್ನು ಆಯ್ಕೆ ಮಾಡುತ್ತಾರೆ. ಈ ಸಮಯದಲ್ಲಿ, ಅವಳು ಭಾವನಾತ್ಮಕ ಭದ್ರತೆಯನ್ನು ಪಡೆಯಬಹುದಾದ ಯಾವುದೇ ವ್ಯಕ್ತಿ ಬಳಿ ಹೋಗಲು ಇಷ್ಟಪಡುತ್ತಾಳೆ.
ಅಂತಹ ಸಮಯದಲ್ಲಿ, ಬ್ಯಾಕಪ್ ಪಾರ್ಟ್ನರ್ ಆ ಮಹಿಳೆಯರಿಗೆ ಸೇಫ್ ಝೋನ್ ಆಗಿ ಕಾರ್ಯನಿರ್ವಹಿಸುತ್ತಾರೆ. ಅಂದರೆ ಅವರು ಮಹಿಳೆಯರ ಬಗ್ಗೆ ಹೆಚ್ಚು ಕೇರ್ ತೆಗೆದುಕೊಳ್ಳುತ್ತಾರೆ. ಬ್ಯಾಕಪ್ ಸಂಗಾತಿಯೊಂದಿಗೆ, ಮಹಿಳೆ ತನ್ನ ಸ್ವಾತಂತ್ರ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ಉತ್ತಮ ಜೀವನವನ್ನು ನಡೆಸಬಹುದು.
ಬ್ಯಾಕಪ್ ಪಾರ್ಟ್ನರ್ ಹೊಂದಿರುವುದು ಸರಿಯೇ?
ಬ್ಯಾಕಪ್ ಪಾರ್ಟ್ನರ್ ಟ್ರೆಂಡ್ ಹೆಚ್ಚುತ್ತಿರುವುದರಿಂದ, ಸಂಬಂಧದಲ್ಲಿರುವಾಗ ಬ್ಯಾಕಪ್ ಪಾರ್ಟ್ನರ್ ಹೊಂದಿರುವುದು ಸರಿಯೇ ಎಂಬ ಹೊಸ ಪ್ರಶ್ನೆಯೂ ಉದ್ಭವಿಸಿದೆ. ಬ್ಯಾಕಪ್ ಸಂಗಾತಿಯನ್ನು ಹೊಂದಿರುವುದು ನಿಮ್ಮ ಸಂಗಾತಿಗೆ ಮೋಸ ಮಾಡಿದಂತೆ ಆಗೋದಿಲ್ವಾ? ಎಂದು ನೀವು ಕೇಳಬಹುದು.
ರಿಲೇಶನ್’ಶಿಪ್ ಎಕ್ಸ್’ಪರ್ಟ್ ಹೇಳುವಂತೆ ಬ್ಯಾಕಪ್ ಸಂಗಾತಿಯನ್ನು ಹೊಂದಿರುವುದು ಸಂಬಂಧಕ್ಕೆ ಎಂದಿಗೂ ಸೂಕ್ತವಲ್ಲ. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ಸಂಬಂಧವನ್ನು ಉಳಿಸುವ ಪ್ರಯತ್ನವನ್ನು ಕಡಿಮೆ ಮಾಡುತ್ತೀರಿ. ನೀವು ಬ್ಯಾಕಪ್ ಸಂಗಾತಿಯನ್ನು ಹೊಂದಿದ್ದರೆ, ನಿಮ್ಮ ಸಂಗಾತಿಯನ್ನು ಕಳೆದುಕೊಳ್ಳುವ ಭಯವಿರುವುದಿಲ್ಲ.