MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಚಿನ್ನ ಅಲ್ಲ, ವಜ್ರವೂ ಅಲ್ಲ ಹೆಂಡ್ತಿ ತನ್ನ ಗಂಡನಿಂದ ಬಯಸೋದೇನು ಗೊತ್ತಾ?

ಚಿನ್ನ ಅಲ್ಲ, ವಜ್ರವೂ ಅಲ್ಲ ಹೆಂಡ್ತಿ ತನ್ನ ಗಂಡನಿಂದ ಬಯಸೋದೇನು ಗೊತ್ತಾ?

ಹೆಚ್ಚಿನ ಜನ ತಿಳಿದುಕೊಂಡಿರೋದು ಏನು? ಹೆಂಡ್ತಿಗೆ ಯಾವಾಗ್ಲೂ ಶಾಪಿಂಗ್ ಮಾಡೋದೆ ಚಿಂತೆ, ಅವಳಿಗಾಗಿ ಚಿನ್ನ, ವಜ್ರವನ್ನೇ ಬಯಸುತ್ತಾಳೆ ಬೇರೆನೂ ಬಯಸೋದಿಲ್ಲ ಎಂದು ಅಂದುಕೊಳ್ಳುತ್ತಾರೆ. ಆದರೆ ಮಹಿಳೆಯರು ಯಾವಾಗಲೂ ಯಾರಾದರೂ ತಮ್ಮನ್ನು ಅರ್ಥಮಾಡಿಕೊಳ್ಳಬೇಕೆಂದು ಬಯಸುತ್ತಾರೆ. ನೀವು ರಿಲೇಶನ್ ಶಿಪ್ ನಲ್ಲಿದ್ದರೆ, ಮಹಿಳೆಯರು ಪುರುಷರಿಂದ ನಿಜವಾಗಿ ಏನನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು.

2 Min read
Suvarna News
Published : Feb 01 2023, 05:36 PM IST
Share this Photo Gallery
  • FB
  • TW
  • Linkdin
  • Whatsapp
17

ಮಹಿಳೆಯರನ್ನು ಅರ್ಥಮಾಡಿಕೊಳ್ಳುವುದು (understanding woman) ಸುಲಭವಲ್ಲ ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ ಅವಳು ಕ್ಷಣಾರ್ಧದಲ್ಲಿ ತನ್ನ ಮನಸ್ಸನ್ನು ಬದಲಾಯಿಸುತ್ತಾಳೆ. ಮಹಿಳೆಯರೇ ಇದನ್ನು ಒಪ್ಪಿಕೊಳ್ಳುತ್ತಾರೆ. ಕೆಲವೊಮ್ಮೆ ಅವಳು ಯಾವುದೋ ವಿಷಯದ ಬಗ್ಗೆ ತುಂಬಾ ಸಂತೋಷಪಡುತ್ತಾಳೆ, ಕೆಲವೊಮ್ಮೆ ಒಂದು ಮಿಲಿಯನ್ ಪ್ರಯತ್ನಗಳ ನಂತರವೂ ಅವಳನ್ನು ಸಂತೋಷಪಡಿಸುವುದು ಕಷ್ಟ. ಹಾಗಿದ್ರೆ ಅವಳನ್ನು ಅರ್ಥ ಮಾಡಿಕೊಳ್ಳೋದು ಹೇಗೆ?

27

ತಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆದ ನಂತರವೂ, ಹೆಚ್ಚಿನ ಜನರಿಗೆ ತಮ್ಮ ಹೆಂಡತಿ ಅಥವಾ ಗೆಳತಿ ಅವರಿಂದ ಏನು ಬಯಸುತ್ತಾರೆಂದು ತಿಳಿದಿರೋದಿಲ್ಲ. ಅದಕ್ಕಾಗಿಯೇ ಅವರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ ಅನ್ನೋದು. ಆದಾಗ್ಯೂ, ಪ್ರತಿಯೊಬ್ಬ ಪುರುಷನು ತಿಳಿದುಕೊಳ್ಳಬೇಕಾದ ಮಹಿಳೆಯರ ಬಗ್ಗೆ ಕೆಲವು ಸತ್ಯಗಳು ಇಲ್ಲಿವೆ. ಏಕೆಂದರೆ ಇದರಿಂದ ನಿಮ್ಮಾಕೆಯನ್ನು ಅರ್ಥಮಾಡಿಕೊಳ್ಳಲು ಸುಲಭವಾಗಿಸುತ್ತದೆ.  

37
ಯಾವಾಗಲೂ ಬೆಂಬಲ (support her)

ಯಾವಾಗಲೂ ಬೆಂಬಲ (support her)

ಮಹಿಳೆಯರೊಂದಿಗೆ ಸ್ವಲ್ಪ ಮೋಜು ಮತ್ತು ಸಂಘರ್ಷ ಒಳ್ಳೆಯದು. ಆದರೆ ಮಹಿಳೆಯರನ್ನು ಗೌರವಿಸುವ ವಿಷಯಕ್ಕೆ ಬಂದಾಗ, ತನ್ನ ಸಂಗಾತಿ ಯಾವಾಗಲೂ ತನ್ನ ಪರವಾಗಿ ನಿಲ್ಲಬೇಕೆಂದು ಅವಳು ಬಯಸುತ್ತಾಳೆ. ಮಹಿಳೆ ಬಲಶಾಲಿಯಾಗಿದ್ದರೂ ನಿಮ್ಮ ಬೆಂಬಲ ಅವರಿಗೆ ಬಹಳಷ್ಟು ಮಹತ್ವದ್ದಾಗಿದೆ.

47
ಪ್ರಾಮಿಸ್ ಗಳನ್ನು ಉಳಿಸಿ (keep your promise)

ಪ್ರಾಮಿಸ್ ಗಳನ್ನು ಉಳಿಸಿ (keep your promise)

ಸಾರ್ವಜನಿಕ ಸ್ಥಳದಲ್ಲಿ ಸಂಗಾತಿಯನ್ನು ತಬ್ಬಿಕೊಳ್ಳುವುದು, ಕೈಗಳನ್ನು ಹಿಡಿದುಕೊಳ್ಳುವುದು, ಅವರಿಗೆ ಬೆಂಬಲವಾಗಿ ಇರೋದು, ಪ್ರತಿಯೊಬ್ಬ ಮಹಿಳೆಗೆ ಒಳ್ಳೆಯ ಭಾವನೆಯನ್ನು ನೀಡುತ್ತದೆ. ಅವಳು ಯಾವಾಗಲೂ ತನ್ನ ಸಂಗಾತಿ ತನಗೆ ವಿಶೇಷ ಭಾವನೆ ಮೂಡಿಸಬೇಕೆಂದು ಬಯಸುತ್ತಾಳೆ. 

57

ಲೋಕದ ದೃಷ್ಟಿಯಲ್ಲಿ ನೀವು ಹೇಗಿದ್ದರೂ, ಪತ್ನಿಯ ಭಾವನೆಗಳಿಗೆ ನೀವು ಪ್ರಾಮಾಣಿಕರಾಗಿರಬೇಕು.ಯಾವುದೇ ಮಹಿಳೆ ತನ್ನ ಸಂಗಾತಿಯ ದ್ರೋಹವನ್ನು ಸಹಿಸುವುದಿಲ್ಲ. ನಿರಂತರವಾಗಿ ಸುಳ್ಳು ಹೇಳುವ ಬದಲು ಅವರಿಗೆ ಒಮ್ಮೆ ಸತ್ಯವನ್ನು ಹೇಳಿ. ಅವರೊಂದಿಗೆ ಪ್ರಾಮಾಣಿಕವಾಗಿರುತ್ತೇನೆ ಎಂಬ ವಾಗ್ದಾನವನ್ನು ಉಳಿಸಿಕೊಳ್ಳಿ.

67
ಜೊತೆಯಾಗಿ ಸಮಯ ಕಳೆಯಿರಿ (spend time together)

ಜೊತೆಯಾಗಿ ಸಮಯ ಕಳೆಯಿರಿ (spend time together)

ನಿಮ್ಮ ಸಂಗಾತಿಯು ನಿಮ್ಮ ಸುತ್ತಲೂ ಅಥವಾ ನಿಮ್ಮೊಂದಿಗೆ ಇರುವಾಗ, ನೀವು ಅವಳೊಂದಿಗೆ ಸಾಧ್ಯವಾದಷ್ಟು ಹೆಚ್ಚು ಸಮಯ ಕಳೆಯಬೇಕೆಂದು ಅವಳು ಬಯಸುತ್ತಾಳೆ. ಅವಳು ಆ ಸಮಯದಲ್ಲಿ ನಿಮ್ಮ ಗಮನವನ್ನು ಬಯಸುತ್ತಾಳೆ. ಹಾಗಾಗಿ ನೀವು ಫೋನ್ ಬಿಟ್ಟು ಅವರೊಂದಿಗೆ ಸಮಯ ಕಳೆಯಿರಿ. ನೀವು ಅವರೊಂದಿಗೆ ಮೂವಿ ನೋಡಲು ಹೋಗಬಹುದು ಅಥವಾ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಹೋಗಿ ಅವರೊಂದಿಗೆ ಸಮಯ ಕಳೆಯಬಹುದು.
 

77
ಸ್ಪೆಷಲ್ ಆಗಿ ಟ್ರೀಟ್ ಮಾಡಿ (special treatment)

ಸ್ಪೆಷಲ್ ಆಗಿ ಟ್ರೀಟ್ ಮಾಡಿ (special treatment)

ಪುರುಷರು ಮಹಿಳೆಯರನ್ನು ಬೆಸ್ಟ್ ಫ್ರೆಂಡ್ ನಂತೆ ನೋಡಿಕೊಳ್ಳಬೇಕು. ಪತ್ನಿ ನಿಮ್ಮ ಗೆಳತಿಯಾಗಿದ್ದರೆ, ಅವಳಿಗೆ ವಿಶೇಷ ಭಾವನೆ ಮೂಡಿಸುವುದು ಸಹ ನಿಮ್ಮ ಕರ್ತವ್ಯ. ಅವರು ನಿಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿ. ನೀವು ಇದನ್ನು ಯಾವಾಗಲೂ ತಿಳ್ಕೊಂಡಿರಬೇಕೆಂದು ಅವಳು ಬಯಸುತ್ತಾಳೆ. ಅಷ್ಟೇ ಅಲ್ಲ, ನಿಮ್ಮ ಸಂಗಾತಿ ಹೇಳಿದ ಮಾತುಗಳನ್ನು ಸಹ ನೀವು ಕೇಳಬೇಕು. ಅವರ ಸಲಹೆಗಳನ್ನು ಕೇಳಬೇಕು. ಅವಾಗ ಅವರಿಗೆ ವಿಶೇಷ ಭಾವನೆ ಮೂಡುತ್ತದೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved