ಕೋಟ್ಯಾಧಿಪತಿಗಳಾಗಿದ್ದರೂ ತಮ್ಮ ಮಕ್ಕಳಿಗಾಗಿ ತಾವೇ ಅಡುಗೆ ಮಾಡ್ತಾರಂತೆ ವಿರಾಟ್ -ಅನುಷ್ಕಾ!
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಇಬ್ಬರು ಮಕ್ಕಳ ಬಗ್ಗೆ ತಾವೇ ಗಮನ ಹರಿಸಿ ನಾಜೂಕಾಗಿ ಬೆಳೆಸುತ್ತಿದ್ದಾರೆ. ಈ ಜೋಡಿ ಕೋಟ್ಯಾಧಿಪತಿಗಳಾಗಿದ್ದರೂ ಸಹ ತಮ್ಮ ಮಕ್ಕಳಿಗಾಗಿ ತಾವೇ ಅಡುಗೆ ಮಾಡಿ ಸರ್ವ್ ಮಾಡ್ತಾರಂತೆ ಈ ಜೋಡಿಗಳು.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ (Anushka Sharma and Virat Kohli) ಅವರನ್ನು ಬಾಲಿವುಡ್ ಮತ್ತು ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಕಪಲ್ಸ್ ಗಳು, ಅಷ್ಟೇ ಅಲ್ಲ ಇಬ್ಬರೂ ಅತ್ಯುತ್ತಮ ಪೋಷಕರು ಕೂಡ ಹೌದು. ಅನುಷ್ಕಾ ಮತ್ತು ವಿರಾಟ್ ತಮ್ಮ ಮಕ್ಕಳಿಗೆ ಸಾಮಾನ್ಯ ಬಾಲ್ಯವನ್ನು ನೀಡಲು ಯಾವಾಗಲೂ ಮಾಧ್ಯಮಗಳಿಂದ ದೂರವಿಡಲು ಪ್ರಯತ್ನಿಸುತ್ತಾರೆ. ಇಬ್ಬರೂ ತಮ್ಮ ಮಕ್ಕಳು ಇತರ ಮಕ್ಕಳಂತೆ ಬೆಳೆಯಬೇಕೆಂದು ಬಯಸುತ್ತಾರೆ ಮತ್ತು ಯಾವುದೇ ಸ್ಪೆಷಲ್ ಟ್ರೀಟ್ ಮೆಂಟ್ ಸಿಗಬಾರದು ಎಂದು ಬಯಸುತ್ತಾರೆ.
ತಮ್ಮ ಮಕ್ಕಳನ್ನು ತಮ್ಮ ಬೇರುಗಳು ಮತ್ತು ಸಂಸ್ಕೃತಿಯೊಂದಿಗೆ ಸಂಪರ್ಕಿಸಲು, ಅನುಷ್ಕಾ ಮತ್ತು ವಿರಾಟ್ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದು, ಅದು ಅವರಿಬ್ಬರೂ ತಮ್ಮ ಮಕ್ಕಳಿಗಾಗಿ ಒಟ್ಟಿಗೆ ಸೇರಿ ಅಡುಗೆ ಮಾಡುವುದು. ಹೌದು ಇದು ನಿಜಾ. ಕೋಟ್ಯಾಧಿಪತಿಗಳಾದರೂ, ಕುಕ್ ಇಡದೇ ತಾವೇ ಅಡುಗೆ ಮಾಡೋದು ಯಾಕೆ ಅನ್ನೋದನ್ನು ನೋಡೋಣ.
ಅನುಷ್ಕಾ ಮತ್ತು ವಿರಾಟ್ ತಾವೇ ಅಡುಗೆ ಮಾಡೋದು ಯಾಕೆ?
ಕಳೆದ ವರ್ಷ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಅನುಷ್ಕಾ ಮತ್ತು ವಿರಾಟ್ ಮಾತನಾಡುತ್ತಾ, ಇಬ್ಬರೂ ತಮ್ಮ ತಾಯಂದಿರು ಅಡುಗೆ ಮಾಡುತ್ತಿದ್ದ ಅದೇ ಆಹಾರ ಅಥವಾ ರೆಸಿಪಿಗಳನ್ನು ತಾವು ಮಕ್ಕಳಿಗೆ ನೀಡಲು ಬಯಸಿದ್ದಾರೆ ಎಂದಿದ್ದರು ಈ ಜೋಡಿ.ತಮ್ಮ ತಂದೆ ತಾಯಿ, ತಮಗೆ ತಿನ್ನಿಸಿದ ಆಹಾರವನ್ನು ನಾವು ನಮ್ಮ ಮಕ್ಕಳಿಗೆ ನೀಡದೇ ಇದ್ದರೆ, ಅದು ನಮ್ಮ ಪೀಳಿಗೆಗೆ ಕೊನೆಯಾಗುತ್ತೆ ಎನ್ನುತ್ತಾ, ತಾವೇ ಖುದ್ದಾಗಿ ತಮ್ಮ ಅಮ್ಮಂದಿರು ಹೇಳಿದ ರೆಸಿಪಿಯನ್ನು (mom made foods)ಮಕ್ಕಳಿಗಾಗಿ ತಾವೇ ತಯಾರಿಸುತ್ತಿದ್ದಾರೆ ಈ ಜೋಡಿ.
ನಿಮ್ಮ ಆಹಾರವನ್ನು ನೀವೇ ಬೇಯಿಸಿಕೊಳ್ಳಬೇಕು.
ನಮಗೆ ನಮ್ಮ ತಾಯಿ ಕೊಟ್ಟ ಆಹಾರ, ನಮ್ಮ ಮಕ್ಕಳಿಗೂ ಸಿಗಬೇಕು ಎಂದು ತಾನು ಮತ್ತು ವಿರಾಟ್ ಇಬ್ಬರೂ ಕೆಲವೊಮ್ಮೆ ಮಕ್ಕಳಿಗಾಗಿ ಒಟ್ಟಿಗೆ ಅಡುಗೆ ಮಾಡುತ್ತೇವೆ ಎಂದು ಅನುಷ್ಕಾ ಹೇಳಿದ್ದರು. ಇಬ್ಬರೂ ತಮ್ಮ ತಾಯಿ ಮೊದಲು ಅಡುಗೆ ಮಾಡುತ್ತಿದ್ದಂತೆಯೇ ತಮ್ಮ ಮಕ್ಕಳಿಗೆ ಅಡುಗೆ ಮಾಡಲು ಪ್ರಯತ್ನಿಸುತ್ತಾರೆ. ಎಲ್ಲಾ ರೆಸಿಪಿಗಾಗಿ ಅನುಷ್ಕಾ, ತಮ್ಮ ತಾಯಿಗೆ ಕರೆ ಮಾಡಿ ಕೇಳುತ್ತಾರಂತೆ.
ಅಂತಹ ನಿರ್ಧಾರವನ್ನು ಏಕೆ ತೆಗೆದುಕೊಂಡರು?
ಈ ನಿರ್ಧಾರದ ಬಗ್ಗೆ ಅನುಷ್ಕಾ ಹೇಳುವಂತೆ, ವಿರಾಟ್ ಮತ್ತು ನಾನು ನಮ್ಮ ತಾಯಂದಿರುವ ಮಾಡಿದ ರೆಸಿಪಿ, ಮತ್ತು ಆಹಾರವನ್ನು ತಯಾರಿಸುವ ಮೂಲಕ ಮಕ್ಕಳಿಗಾಗಿ ವಿಶೇಷವಾದುದನ್ನು ನೀಡುತ್ತೇವೆ, ಇದರಿಂದಾಗಿ ಅವರು ಅವರ ಮುಂದಿನ ಪೀಳಿಗೆಗೂ ಸಹ ಇದನ್ನು ಹೇಳಿಕೊಡಬಹುದು ಎಂದಿದ್ದಾರೆ ವಿರುಷ್ಕಾ.
ನಾವು ಮಕ್ಕಳಿಗೆ ಇನ್ನೇನು ಕಲಿಸಬಹುದು?
ವಿರಾಟ್ ಮತ್ತು ಅನುಷ್ಕಾ ತಮ್ಮ ಮಕ್ಕಳಿಗೆ ತಮ್ಮ ಬಾಲ್ಯದ ರುಚಿ, ಪಾಕವಿಧಾನಗಳು ಮತ್ತು ಅವರ ತಾಯಂದಿರ ಅಡುಗೆಯನ್ನು ನೀಡಲು ನಿರ್ಧರಿಸಿದಂತೆಯೇ, ನೀವು ಸಹ ನಿಮ್ಮ ಮಗುವಿಗೆ ನಿಮ್ಮ ಜೀವನದ ಮುಖ್ಯವಾದ ವಿಷ್ಯವನ್ನು ಮಕ್ಕಳಿಗೆ ಕಲಿಯಲು ಅವಕಾಶವನ್ನು ನೀಡಬಹುದು.
Virushka
ಅದು ಅಡುಗೆಯಾಗಿರಬಹುದು ಅಥವಾ ಅಭ್ಯಾಸವಾಗಿರಬಹುದು
ನಿಮ್ಮ ಬಾಲ್ಯದ ಯಾವುದೇ ವಿಶೇಷವಾದ ವಿಷಯವನ್ನು ನಿಮ್ಮ ಮಕ್ಕಳಿಗೆ ನೀಡಬಹುದು, ಉದಾಹರಣೆಗೆ ನಿಮಗಾಗಿ ನೀವು ಮಾಡಿದ ರೆಸಿಪಿ, ನಿಮ್ಮ ಪೋಷಕರಿಂದ ನೀವು ಕಲಿತ ಮತ್ತು ಇನ್ನೂ ನಿಮಗೆ ಉಪಯುಕ್ತವಾದ ಕೆಲವು ಅಭ್ಯಾಸಗಳನ್ನೂ ಸಹ ಮಕ್ಕಳಿಗೆ ಹೇಳಿಕೊಡಬಹುದು. ಇದರೊಂದಿಗೆ, ನಿಮ್ಮ ಮಕ್ಕಳಿಗೆ ಮತ್ತು ನಂತರದ ಪೀಳಿಗೆಗೆ ಶಾ ನಿಮ್ಮ ಪರಂಪರೆಯನ್ನು ನೀವು ಜೀವಂತವಾಗಿರಿಸಬಹುದು.