ಹನಿಮೂನಲ್ಲಿ ಈ ಕೆಲಸ ಮಾಡಿ… ಆಮೇಲೆ ನೋಡಿ ನಿಮ್ಮ ವೈವಾಹಿಕ ಜೀವನ ಹೇಗಿರುತ್ತೆ!
ಮದುವೆಯ ನಂತರ, ದಂಪತಿಗಳು ತಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಬಲಪಡಿಸಲು ಮತ್ತು ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಲು ಮಧುಚಂದ್ರಕ್ಕೆ ಹೋಗುತ್ತಾರೆ. ನಿಮ್ಮ ವೈವಾಹಿಕ ಜೀವನ ಉಜ್ವಲವಾಗಿರಬೇಕು ಅಂದ್ರೆ, ಹನಿಮೂನಲ್ಲಿ ನೀವು ಈ ಕೆಲಸಗಳನ್ನು ಮಾಡಬೇಕು.

ಮದುವೆಯ ನಂತರ, ದಂಪತಿಗಳು ತಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಬಲಪಡಿಸಲು ಮತ್ತು ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಲು ಮಧುಚಂದ್ರಕ್ಕೆ (honeymoon)ಹೋಗುತ್ತಾರೆ. ನಿಮ್ಮ ವೈವಾಹಿಕ ಜೀವನ ಉಜ್ವಲವಾಗಿರಬೇಕು ಅಂದ್ರೆ, ಹನಿಮೂನಲ್ಲಿ ನೀವು ಈ ಕೆಲಸಗಳನ್ನು ಮಾಡಬೇಕು.
ಮದುವೆಯ ಗಡಿಬಿಡಿ ಮತ್ತು ಒತ್ತಡದ ನಡುವೆ ನವ ಜೋಡಿಗಳಿಗೆ ಸರಿಯಾಗಿ ಕೂತು ಮಾತನಾಡೋದೆ ಕಷ್ಟವಾಗಿರುತ್ತೆ. ಅದಕ್ಕಾಗಿಯೇ ಹನಿಮೂನ್ ಅನ್ನೋ ಟ್ರಾವೆಲ್ ಪ್ಲ್ಯಾನ್ ಇರೋದು. ಸಂಸಾರದ ಎಲ್ಲಾ ಜಂಜಾಟದಿಂದ ದೂರ ಉಳಿದು, ಮದುವೆಯ ಎಲ್ಲಾಒತ್ತಡಗಳಿಂದ ದೂರ ಸರಿದು, ಸಂಗಾತಿಯನ್ನು ಮತ್ತಷ್ಟು ಅರ್ಥಮಾಡಿಕೊಳ್ಳಲು ಸಿಗುವ ಏಕಾಂತದ ಸಮಯವೇ ಹನಿಮೂನ್. ಹಾಗಾಗಿ ನೀವು ಹನಿಮೂನ್ ಗೆ ತೆರಳಿದಾಗ ನಿಮ್ಮ ಸಂಬಂಧವನ್ನು ಮತ್ತಷ್ಟು ಸ್ಟ್ರಾಂಗ್ ಮಾಡಲು ನೀವು ಒಂದಿಷ್ಟು ಕೆಲಸಗಳನ್ನು ಮಾಡಬೇಕಾಗುತ್ತದೆ. ಇವುಗಳನ್ನು ಮಾಡಿದ್ರೆ ನಿಮ್ಮ ವೈವಾಹಿಕ ಜೀವನ (married life) ಸಖತ್ ಆಗಿರುತ್ತೆ ನೀವೇ ನೋಡಿ…
ಕ್ವಾಲಿಟಿ ಟೈಮ್ ಜೊತೆಯಾಗಿ ಕಳೆಯೋದು : ಇಂದಿನ ಸಮಯದಲ್ಲಿ, ಮೊಬೈಲ್ ಅಥವಾ ಗ್ಯಾಜೆಟ್ ಗಳಿಂದ ದೂರವಿರುವುದು ತುಂಬಾ ಕಷ್ಟ. ಆದರೆ ಹನಿಮೂನ್ ಸಮಯದಲ್ಲಿ, ದಂಪತಿಗಳು ತಮ್ಮ ಮೊಬೈಲ್ ಫೋನ್ಗಳು, ಇಂಟರ್ನೆಟ್ ಗಳನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಯಾವಾಗ್ಲೂ ನಿಮಗೆ ನಿಮ್ಮ ಕುಟುಂಬದ ಬಗ್ಗೆ ಜೊತೆಯಾಗಿ ಕೂತು ಮಾತನಾಡಲು ಸಾಧ್ಯ ಇಲ್ಲ. ಆದರೆ ಹನಿಮೂನ್ ಜೀವನಕ್ಕೆ ಸಂಬಂಧಿಸಿದ ಪ್ರಮುಖ ವಿಷ್ಯಗಳ ಬಗ್ಗೆ ಮಾತನಾಡಲು ಸಮಯ (quality time) ನೀಡುತ್ತೆ. ಹಾಗಾಗಿ ಮೊಬೈಲ್ ಸೈಡಿಗಿಟ್ಟು ಮಾತನಾಡಿ.
ಮುಕ್ತವಾಗಿ ಮಾತನಾಡಿ: ಹನಿಮೂನ್ ನಿಮ್ಮ ಪ್ರೀತಿಯ ಕಥೆಯನ್ನು ಹೇಳುತ್ತದೆ, ಆದರೆ ಈ ಟೈಮಲ್ಲಿ ನೀವು ನಿಮ್ಮ ಸಂಗಾತಿ ಜೊತೆ ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತೀರಿ. ಹಾಗಾಗಿ ಈ ಸಂದರ್ಭದಲ್ಲಿ ಸಾಧ್ಯವಾದಷ್ಟು ಮನಸ್ಸು ಬಿಚ್ಚಿ, ಮುಕ್ತವಾಗಿ ಮಾತನಾಡಿ (communicate freely) . ಇದರಿಂದ ಸಂಬಂಧ ಗಟ್ಟಿಯಾಗುತ್ತೆ.
ಜೊತೆಯಾಗಿ ಕಳೆದ ಮೊದಲ ಅನುಭವ : ಮದುವೆ ಮೊದಲು ನೀವು ಟ್ರಾವೆಲ್ ಮಾಡಿರೋದೆಲ್ಲ ಒಬ್ಬಂಟಿಯಾಗಿ ಅಥವಾ ಇತರರ ಜೊತೆ. ಆದರೆ ಹನಿಮೂನ್ ಎಂದರೆ ಇಬ್ಬರು ಜೊತೆಯಾಗಿ ಮೊದಲ ಬಾರಿ ಟ್ರಾವೆಲ್ ಮಾಡೋದು. ಹಾಗಾಗಿ ಈ ಸಮಯದಲ್ಲಿ ಜೀವನಪೂರ್ತಿ ನೆನಪಿಟ್ಟುಕೊಳ್ಳುವ ಸಾಹಸ ಮಾಡಿ.
ಅರ್ಥಮಾಡಿಕೊಳ್ಳಲು ಅವಕಾಶ: ಕುಟುಂಬದಲ್ಲಿ ಪ್ರತಿಯೊಬ್ಬರ ನಡವಳಿಕೆ ವಿಭಿನ್ನವಾಗಿರುತ್ತದೆ. ಆದರೆ ನೆನಪಿಡಿ, ನಿಮ್ಮ ಸಂಗಾತಿಯ ನಿಜವಾದ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು (understand each other) ಹನಿಮೂನ್ ಅತ್ಯುತ್ತಮ ಸಮಯವಾಗಿದೆ. ಹನಿಮೂನ್ ಸಮಯದಲ್ಲಿ, ದಂಪತಿಗಳ ಮಧ್ಯೆ ಸಣ್ಣಪುಟ್ಟ ಕಿರಿಕಿರಿ ಉಂಟಾಗೋದು ಸಾಮಾನ್ಯ. ಆದರೆ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಇದು ಉತ್ತಮವಾದ ಅವಕಾಶವಾಗಿದೆ.
ಏನಾದರೂ ವಿಶೇಷವಾದದ್ದನ್ನು ಮಾಡಿ: ಹನಿಮೂನ್ ಗೆ ಹೋದಾಗ ಹೊರಗೆ ಹೋಗುವುದು, ಹೋಟೆಲ್ ನಲ್ಲಿ ಉಳಿಯೋದು ಅಥವಾ ಸುತ್ತಾಡುವುದು ನಿಮ್ಮ ಯೋಜನೆಯ ಒಂದು ಭಾಗವಾಗಿದೆ. ಆದರೆ ಈ ಸಂದರ್ಭದಲ್ಲಿ ವಿಶೇಷವಾದದ್ದನ್ನು ಏನಾದರು ಮಾಡೋ ಅವಕಾಶವನ್ನು ಮಾತ್ರ ಮಿಸ್ ಮಾಡ್ಕೋಬೇಡಿ. ಇದು ರೊಮ್ಯಾಂಟಿಕ್ ಡಿನ್ನರ್ ಡೇಟ್ ಆಗಿರಲಿ, ಒಬ್ಬರಿಗೊಬ್ಬರು ಸಣ್ಣ ಸರ್ಪ್ರೈಸ್ (surprise your partner)ನೀಡೋದು ಅಥವಾ ಸೂರ್ಯಾಸ್ತದ ಸಮಯದಲ್ಲಿ ಸುಂದರವಾದ ಸ್ಥಳದಲ್ಲಿ ಕೈ ಕೈ ಹಿಡಿದು ಕುಳಿತುಕೊಳ್ಳುವುದು ಹೀಗೆ ಮಾಡೋದ್ರಿಂದ ಸಂಬಂಧ ಮತ್ತಷ್ಟು ಸ್ಟ್ರಾಂಗ್ ಆಗುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.