ಮಹಿಳೆಯರು ತಾವು ಇಷ್ಟಪಡೋ ಹುಡುಗನಿಗಾಗಿ ಮಾತ್ರ ಮಾಡ್ತಾರೆ ಈ ಕೆಲಸ
ಮಹಿಳೆಯರು ಪುರುಷರಿಗಿಂತ ಬೇಗನೆ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಪುರುಷರು ಮತ್ತು ಮಹಿಳೆಯರು ವಿಭಿನ್ನವಾಗಿ ಪ್ರೀತಿಸುತ್ತಾರೆ ಮತ್ತು ಅದನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಮಹಿಳೆಯರು ತಾವು ಇಷ್ಟಪಡುವ ಪುರುಷನಿಗಾಗಿ ಮಾತ್ರ ಮಾಡುವ ಕೆಲವು ವಿಷಯಗಳಿವೆ. ಅವುಗಳ ಬಗ್ಗೆ ನೋಡೋಣ.

ಪ್ರೀತಿ ವ್ಯಕ್ತಪಡಿಸೋದು ಹೇಗೆ?
ಪ್ರೀತಿಯ ವಿಷಯಕ್ಕೆ ಬಂದಾಗ, ಮಹಿಳೆಯರು ಮತ್ತು ಪುರುಷರ ಸಾಮಾನ್ಯ ದೂರು ಅಂದ್ರೆ ಅವರು ತಮ್ಮ ಭಾವನೆಗಳನ್ನು ಸರಿಯಾಗಿ ಸ್ಪಂದಿಸೋದಿಲ್ಲ ಅನ್ನೋದು. ಹುಡುಗಿ ತನ್ನ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತಾಳೆ ನೋಡೋಣ.
ನಿಮ್ಮ ಬಗ್ಗೆ ಎಲ್ಲವನ್ನೂ ತಿಳಿಯಲು ಬಯಸುತ್ತಾರೆ
ನಮ್ಮನ್ನು ಪ್ರೀತಿಸುವ ಮಹಿಳೆ ನಿಮ್ಮ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಾಳೆ. ಸಣ್ಣ ಪುಟ್ಟ ವಿಷಯದಿಂದ ಹಿಡಿದು, ದೊಡ್ಡ ದೊಡ್ಡ ಘಟನೆಗಳವರೆಗೂ ಎಲ್ಲವನ್ನೂ ತಿಳಿದುಕೊಳ್ಳಲು ಆಕೆ ಬಯಸುತ್ತಾಳೆ.
ನಿಮ್ಮ ಕನಸುಗಳನ್ನು ಬೆಂಬಲಿಸುತ್ತಾಳೆ
ನೀವು ತುಂಬಾನೆ ಸಂತೋಷವಾಗಿರಬೇಕು ಎಂದು ಆಕೆ ಬಯಸುತ್ತಾಳೆ. ನಿಮ್ಮ ಪ್ರಯತ್ನಗಳಲ್ಲಿ ನಿಮಗೆ ಸಹಾಯ ಮಾಡಲು ಮತ್ತು ಬೆಂಬಲಿಸಲು (supports your dream) ಆಕೆ ಯಾವಾಗಲೂ ತನ್ನ ಕೈಲಾದಷ್ಟು ಮಾಡುತ್ತಾಳೆ. ಒಟ್ಟಲ್ಲಿ ನಿಮ್ಮ ನೆರಳಾಗಿ ಸದಾ ಇರುತ್ತಾಳೆ.
ಕೆಟ್ಟ ಸಮಯದಲ್ಲಿ ನಿಮ್ಮೊಂದಿಗೆ ಇರುತ್ತಾರೆ
ನಿಮ್ಮನ್ನು ಪ್ರೀತಿಸುವ ಹುಡುಗಿ, ನಿಮ್ಮ ಖುಷಿಯಲ್ಲಿ ಮಾತ್ರ ನಿಮ್ಮೊಂದಿಗೆ ಇರೋದಿಲ್ಲ. ಕಠಿಣ ಸಮಯದಲ್ಲಿ, ನಿಮ್ಮ ಸ್ವಾಭಿಮಾನವನ್ನು ಕಾಪಾಡಿಕೊಳ್ಳಲು ಅವಳು ಇನ್ನೂ ಹೆಚ್ಚು ಶ್ರಮಿಸುತ್ತಾಳೆ. ಕಷ್ಟದ ಪರಿಸ್ಥಿತಿಯಲ್ಲಿ ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತಾಳೆ.
ನೀವು ಹೇಗಿದ್ದೀರೋ ಹಾಗೆಯೇ ಸ್ವೀಕರಿಸುತ್ತಾಳೆ.
ಆಕೆ ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ಆಕೆ ನಿಮ್ಮ ನ್ಯೂನತೆಗಳನ್ನು ಕಡೆಗಣಿಸುತ್ತಾಳೆ, ನೀವು ಹೇಗಿದ್ದೀರೋ ಹಾಗೆಯೇ ನಿಮ್ಮ ಸ್ವೀಕರಿಸುತ್ತಾಳೆ. ಎಂದಿಗೂ ಆಕೆ ನಿಮ್ಮನ್ನು ಬದಲಾಯಿಸೋಕೆ ಪ್ರಯತ್ನಿಸೋದೆ ಇಲ್ಲ.
ಗೌರವಿಸುತ್ತಾರೆ
ನೀವು ಕಾಳಜಿ ವಹಿಸುವ ಜನರಿಗೆ ಆಕೆ ಯಾವಾಗಲೂ ಗೌರವವನ್ನು (respect you) ತೋರಿಸುತ್ತಾಳೆ ಏಕೆಂದರೆ ಅವರು ನಿಮಗೆ ಎಷ್ಟು ಮುಖ್ಯ ಅನ್ನೋದು ಅವರಿಗೂ ಗೊತ್ತಿರುತ್ತೆ. ಜೊತೆಗೆ ನಿಮಗೆ ಯಾವುದು ಅಸುರಕ್ಷತೆ ಅನಿಸುತ್ತೋ, ಆ ವಿಷಯದ ಬಗ್ಗೆ ಖಂಡಿತವಾಗಿಯೂ ಅವರು ನಿಮ್ಮೊಂದಿಗೆ ಮಾತನಾಡೋದಿಲ್ಲ.
ನಿಮ್ಮನ್ನು ನಂಬುತ್ತಾರೆ
ಆಕೆ ನಿಮ್ಮನ್ನು ಸಂಪೂರ್ಣವಾಗಿ ನಂಬುತ್ತಾಳೆ ಮತ್ತು ಆಕೆಯ ಹೃದಯದಲ್ಲಿ ನಿಮಗಾಗಿ ವಿಶೇಷ ಸ್ಥಾನವಿರುತ್ತದೆ. ಹಾಗಾಗಿ ಯಾವತ್ತೂ ನಿಮ್ಮ ಮೇಲೆ ಅನುಮಾನ ಪಡೋದಕ್ಕೆ ಹೋಗೋದಿಲ್ಲ. ನಿಮ್ಮನ್ನ ತುಂಬು ಹೃದಯದಿಂದ ಸ್ವೀಕರಿಸುತ್ತಾರೆ ಅವರು.
ನಿಮ್ಮನ್ನು ಎಂದಿಗೂ ಹಗುರವಾಗಿ ಕಾಣೋದಿಲ್ಲ
ನೀವು ಆಕೆಗಾಗಿ ಮಾಡುವ ಎಲ್ಲಾ ವಿಷ್ಯಗಳನ್ನು ಆಕೆ ತುಂಬಾನೆ ಇಷ್ಟಪಟ್ಟು ಸ್ವೀಕರಿಸುತ್ತಾರೆ. ಆಕೆ ಯಾವತ್ತೂ ಇತರರ ಮುಂದೆ ನಿಮ್ಮನ್ನು ಮುಜುಗರಕ್ಕೀಡು ಮಾಡಲು, ನಿಮ್ಮನ್ನು ಕೀಳಾಗಿ ತೋರಿಸಲು ಪ್ರಯತ್ನಿಸುವುದಿಲ್ಲ.