ನಿಮ್ಮ ರಿಲೇಶನ್‌ಶಿಪ್‌ನಲ್ಲೂ ಹೀಗೆಲ್ಲಾ ಆಗ್ತಿದ್ಯಾ? ದೂರ ಇರೋದು ಬೆಸ್ಟ್
ಸಂಬಂಧದಲ್ಲಿ ಇರೋದು ಕಷ್ಟವಲ್ಲ, ಆದರೆ ಸಂಬಂಧವನ್ನು ಕಾಪಾಡಿಕೊಳ್ಳುವುದು ಅದಕ್ಕಿಂತ ಹೆಚ್ಚು ಕಷ್ಟ. ವಿಶೇಷವಾಗಿ ನೀವು ದಂಪತಿಗಳಾಗಿದ್ದರೆ, ಅದನ್ನು ಜೀವನ ಪೂರ್ತಿ ಕಾಪಾಡಿಕೊಳ್ಳೋದು ಸ್ವಲ್ಪ ಕಷ್ಟ. ಕೆಲವು ಜನರಂತೂ ಪ್ರೀತಿಯಲ್ಲಿ ಎಷ್ಟು ಮುಳುಗಿರುತ್ತಾರೆ ಅಂದ್ರೆ, ಅದು ಆರೋಗ್ಯಕರ ಸಂಬಂಧವೇ ಅಲ್ಲವೇ ಅನ್ನೋದು ಗೊತ್ತಾಗೋದಿಲ್ಲ.
ಯಾವುದೇ ಸಂಬಂಧವು (Relationship) ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಜೀವನದಲ್ಲಿ ಆರೋಗ್ಯಕರ ಸಂಬಂಧವನ್ನು ಹೊಂದಿರುವುದು ಬಹಳ ಮುಖ್ಯ. ಅನಾರೋಗ್ಯಕರ ಸಂಬಂಧದಿಂದಾಗಿ, ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ.
ಅನೇಕ ಬಾರಿ ನಮಗೆ ತಿಳಿಯದೆಯೇ ನಮ್ಮ ಸಂಬಂಧದಲ್ಲಿ ಎಷ್ಟು ಕೆಟ್ಟದಾಗಿ ಸಿಕ್ಕಿಹಾಕಿಕೊಳ್ಳುತ್ತೇವೆ ಎಂದರೆ ಅದು ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಪ್ರತಿಯೊಂದು ಸಂಬಂಧವು ಅನ್ಯೋನ್ಯತೆಯಿಂದ ಕೂಡಿ ಬಾಳೋದು ಬಹಳ ಮುಖ್ಯ, ಇದರಿಂದ ಇಬ್ಬರೂ ಸಂತೋಷವಾಗಿರಬಹುದು. ಅನಾರೋಗ್ಯಕರ ಸಂಬಂಧಗಳ ಅಂತಹ ಕೆಲವು ಚಿಹ್ನೆಗಳ ಬಗ್ಗೆ ಈ ತಿಳಿದುಕೊಳ್ಳೋಣ.
ಅನಾರೋಗ್ಯಕರ ಸಂಬಂಧದ ಚಿಹ್ನೆಗಳು: ನಿಮ್ಮ ಸಂಬಂಧದಲ್ಲಿನ ಭಯದಿಂದಾಗಿ ನಿಮ್ಮ ಸಂಗಾತಿಯ ಇಚ್ಛೆಯಂತೆ ನೀವು ಎಲ್ಲವನ್ನೂ ಮಾಡುತ್ತಿದ್ದರೆ, ನೀವು ಕೆಟ್ಟ ರಿಲೇಶನ್ ಶಿಪ್ (unhealthy relationship) ನಲ್ಲಿದ್ದೀರಿ ಎಂದು ಅರ್ಥಮಾಡಿಕೊಳ್ಳಿ. ಸಂಗಾತಿಯ ಪ್ರಕಾರ ಎಲ್ಲವನ್ನೂ ಮಾಡಿದರೂ ನೀವು ತಪ್ಪು ಎಂದು ಸಾಬೀತಾದರೆ, ಆ ಸಂಬಂಧದಲ್ಲಿ ಇರೋದಕ್ಕೆ ಅರ್ಥಾನೆ ಇಲ್ಲ.
ಅನೇಕ ಸಂಗಾತಿಯನ್ನು ಮೆಚ್ಚಿಸಲು ನೀವು ವಿಶೇಷವಾದದ್ದನ್ನು ಮಾಡಬಹುದು, ಆದರೆ ಆ ವಿಷಯವನ್ನು ಮೆಚ್ಚುವ ಬದಲು, ಸಂಗಾತಿಯು ನಿಮಗೆ ಅವಮಾನ ಮಾಡಿದ್ರೆ ಅಥವಾ ಕೆಟ್ಟದಾಗಿ ನಡೆಸಲು ಪ್ರಾರಂಭಿದ್ರೆ, ನಿಮ್ಮ ಪರಿಶ್ರಮದ ಹೊರತಾಗಿಯೂ ಅವರು ಯಾವುದನ್ನೂ ಇಷ್ಟಪಡದಿದ್ದರೆ, ಅದು ಕೆಟ್ಟ ಸಂಬಂಧದ ಸೂಚನೆಯಾಗಿದೆ.
ಕೆಲವೊಮ್ಮೆ ಸಂಗಾತಿಯ ಮಾತು ಕೇಳಿ ನೀವು ನಿಮ್ಮ ವಿಶೇಷ ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿಯಾಗುವುದನ್ನು ನೀವು ಕ್ರಮೇಣ ನಿಲ್ಲಿಸಿದರೆ, ಸ್ವಲ್ಪ ಸಮಯದಲ್ಲೇ ಅದರಿಂದ ಸಮಸ್ಯೆ ಉಂಟಾಗಬಹುದು. ನಿಮ್ಮ ಸಂಗಾತಿಯ ಸಂತೋಷಕ್ಕಾಗಿ ನೀವು ಆರಂಭದಲ್ಲಿಇತರ ಎಲ್ಲಾ ಸಂಬಂಧಗಳಿಂದ ದೂರ ಉಳಿಯಬಹುದು. ಆದರೆ ಸ್ವಲ್ಪ ಸಮಯದ ನಂತರ ಅವರ ಅಗತ್ಯ ಬರಬಹುದು. ಆವಾಗ ನೀವು ನೋವು ಅನುಭವಿಸಬಹುದು.
ಸಂಬಂಧದಲ್ಲಿ, ನೀವು ಇತರ ವ್ಯಕ್ತಿಗೆ ಅರ್ಹರಲ್ಲ ಎಂದು ನಿಮಗೆ ಪದೇ ಪದೇ ಅನಿಸಿದಾಗ. ಇದು ನಿಮ್ಮ ಜೀವನದಲ್ಲಿ ತುಂಬಾ ಕೆಟ್ಟ ಪರಿಣಾಮ ಬೀರಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ವಿಷಕಾರಿ ಮತ್ತು ಅನಾರೋಗ್ಯಕರ ಸಂಬಂಧದಲ್ಲಿದ್ದೀರಿ ಅನ್ನೋದನ್ನು ಅರ್ಥ ಮಾಡ್ಕೊಳಿ.