ಮದುವೆ ಬಳಿಕ ಪತಿಗೆ ನಿಮ್ಮ ಹಳೆ Love Story ಬಗ್ಗೆ ಹೇಳೋದು ಸರೀನಾ?
ಕುಟುಂಬದ ಒತ್ತಾಯಕ್ಕೆ ತಲೆ ಕೊಟ್ಟು, ಹಳೆ ಪ್ರೀತಿಯನ್ನು ಮರೆತು ತಂದೆ-ತಾಯಿ ತೋರಿಸಿದ ಹುಡುಗನನ್ನು ಮದುವೆಯಾಗಿದ್ದಾಗಿದೆ. ಈಗ ಮದುವೆಯಾಗಿದ್ದಾಗಿದೆ. ಈವಾಗ ನಿಮ್ಮ ಪತಿಗೆ ಹಳೆಯ ಸಂಬಂಧದ ಬಗ್ಗೆ ತಿಳಿಸಬೇಕೇ? ಬೇಡವೇ? ಈ ಬಗ್ಗೆ, ಮಹಾರಾಜ್ ಪ್ರೇಮಾನಂದರು ಏನು ಹೇಳುತ್ತಾರೆ ನೋಡೋಣ.

ಇತ್ತೀಚಿನ ದಿನಗಳಲ್ಲಿ, ಅನೇಕ ಯುವಕರು ಮತ್ತು ಮಹಿಳೆಯರು ಮದುವೆಗೆ ಮೊದಲು ಪ್ರಣಯ ಸಂಬಂಧಗಳನ್ನು ಹೊಂದಿದ್ದಾರೆ. ಇದು ಸಾಮಾನ್ಯ ಕೂಡ ಹೌದು. ಕೆಲವೊಮ್ಮೆ ಈ ಪ್ರೀತಿ ಮದುವೆಯಾಗುವ ಮೂಲಕ ಕೊನೆಗೊಂಡರೆ, ಕೆಲವೊಮ್ಮೆ ಮದುವೆಗೆ ಮುನ್ನವೇ ಸಂಬಂಧ ಕೊನೆಗೊಂಡು, ಬೇರೆ ವ್ಯಕ್ತಿ ಜೊತೆ ಮದುವೆಯಾಗಬೇಕಾಗಿ ಬರುತ್ತೆ. ಅಂತಹ ವ್ಯಕ್ತಿಗಳು ತಮ್ಮ ಹೆತ್ತವರ ಇಚ್ಛೆಯಂತೆ ಮದುವೆಯಾಗುತ್ತಾರೆ ಮತ್ತು ತಮ್ಮ ವೈವಾಹಿಕ ಜೀವನವನ್ನು ಪ್ರಾರಂಭಿಸುತ್ತಾರೆ.
ಹಳೆಯ ಪ್ರೇಮದ ಬಗ್ಗೆ ಗಂಡನಿಗೆ ಹೇಳಬೇಕೆ?
ಆದರೆ ತಮ್ಮ ಹಿಂದಿನ ಸಂಬಂಧಗಳ ಬಗ್ಗೆ ತಮ್ಮ ಪತಿ ಅಥವಾ ಪತ್ನಿಗೆ ಹೇಳಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಸಾಮಾನ್ಯವಾಗಿ ಈ ಜನರು ಹೆಚ್ಚಾಗಿ ಕನ್ ಫ್ಯೂಶನ್ ಗೆ ಒಳಗಾಗುತ್ತಾರೆ. ಈ ಪ್ರಶ್ನೆಯನ್ನು ವೃಂದಾವನದಲ್ಲಿರುವ ಜನಪ್ರಿಯ ಗುರುಗಳಾದ ಸಂತ ಪ್ರೇಮಾನಂದ ಜೀ ಮಹಾರಾಜ್ ಅವರಿಗೆ ಕೇಳಲಾಯಿತು ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಅವರಿಂದ ಸಲಹೆಗಳನ್ನು ಕೋರಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಪ್ರೇಮಾನಂದ ಜೀ ಮಹಾರಾಜ್ ಯುವಕರು ಮತ್ತು ಮಹಿಳೆಯರನ್ನು ನೀಡಿದ ಎಚ್ಚರಿಕೆ ಏನಾಗಿತ್ತು ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.
ಗಂಡನಿಗೆ ಹಳೆ ಪ್ರೇಮದ ಬಗ್ಗೆ ಹೇಳೋದೆ ಬೇಡ
ಮಹಾರಾಜ್ ಪ್ರೇಮಾನಂದ್, ಹಳೆಯ ಸಂಬಂಧಗಳ ಬಗ್ಗೆ ಗಂಡನಿಗೆ ಹೇಳದಿರಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ. ಈ ಹಿಂದೆ ಸಂಭವಿಸಿದ ತಪ್ಪನ್ನು ಉಲ್ಲೇಖಿಸಬೇಡಿ, ಏಕೆಂದರೆ ಅದು ಗಂಡನ ಪ್ರೀತಿಯನ್ನು ಕಡಿಮೆ ಮಾಡುತ್ತೆ. ನಿಮ್ಮ ತಪ್ಪನ್ನು ಬಹಿರಂಗಪಡಿಸಬೇಡಿ ಮತ್ತು ಭವಿಷ್ಯದಲ್ಲಿ ಅದನ್ನು ಪುನರಾವರ್ತಿಸದಂತೆ ನೋಡಿಕೊಳ್ಳಿ. ಮದುವೆಗೆ ಮೊದಲು ನೀವು ಬಾಯ್ ಫ್ರೆಂಡ್ ಹೊಂದಿದ್ದರೆ , ತಪ್ಪಾಗಿ ತಪ್ಪು ಹೆಜ್ಜೆ ಇಟ್ಟಿದ್ದರೆ, ಆದರೆ ಆ ಸಂಬಂಧ ಮುರಿದು ಬಿದ್ದು ಈಗ ನೀವು ಬೇರೆಡೆ ಮದುವೆಯಾಗಿದ್ದರೆ, ಹಳೆಯ ಸಂಬಂಧವನ್ನು ಮರೆತುಬಿಡಿ. ಹಳೆಯ ಪ್ರೀತಿಯನ್ನು ಹಿಂದಿನ ಜನ್ಮದ ವಿಷಯದಂತೆ ಪರಿಗಣಿಸಿ, ಮತ್ತೆ ಆ ತಪ್ಪನ್ನು ಮಾಡಬೇಡಿ. ಇಲ್ಲದಿದ್ದರೆ ನಿಮ್ಮ ಕುಟುಂಬ ಮತ್ತು ಸಂಬಂಧಗಳು ಮುರಿದುಹೋಗುವ ಸಾಧ್ಯತೆ ಇದೆ.
ಗಂಡನಿಗೆ ನಿರಾಶೆಯಾಗುತ್ತೆ
ನಿಮ್ಮ ಹಿಂದಿನ ಸಂಬಂಧಗಳ ಬಗ್ಗೆ ನೀವು ಪ್ರಾಮಾಣಿಕವಾಗಿ ನಿಮ್ಮ ಗಂಡನಿಗೆ ಹೇಳಿದ್ದರೆ, ಅವರು ಖಿನ್ನತೆಗೆ ಒಳಗಾಗುತ್ತಾರೆ. ನಿಮ್ಮ ಬಗ್ಗೆ ಅವರಿಗಿದ್ದ ಒಳ್ಳೆಯ ಭಾವನೆಗಳು ಕಡಿಮೆಯಾಗುತ್ತವೆ. ತಮ್ಮ ಗಂಡನ ಪ್ರೀತಿಗಾಗಿ ನೀವು ನಿಮ್ಮ ತಪ್ಪಿಗೆ ಪಶ್ಚಾತ್ತಾಪಪಡಬೇಕು ಮತ್ತು ನೀವು ಇನ್ನೊಬ್ಬ ಪುರುಷನತ್ತ ನೋಡಬಾರದು, ಹಳೆಯ ಸಂಬಂಧದ ಬಗ್ಗೆ ಪ್ರಸ್ತಾಪ ಕೂಡ ಮಾಡಬಾರದು ಎಂದಿದ್ದಾರೆ.
ಪತಿ ಮೆಸೇಜ್ ನೋಡಿದ್ರೆ ತೊಂದರೆ ತಪ್ಪಿದ್ದಲ್ಲ
ನಿಮ್ಮ ಗಂಡನನ್ನು ಗೌರವಿಸಿ ಮತ್ತು ಹಿಂದಿನ ಎಲ್ಲಾ ಸಂಬಂಧಗಳನ್ನು ಸಂಪೂರ್ಣವಾಗಿ ಮರೆಯಿತಿ ಎಂದು ಪ್ರೇಮಾನಂದ್ ಮಹಾರಾಜ್ ಹೇಳಿದ್ದಾರೆ. ಜೊತೆಗೆ ಹಿಂದಿನ ಸಂಬಂಧದ ಮೆಸೇಜ್ ಗಳು ಇದ್ದರೆ ಅದನ್ನು ಪೂರ್ತಿಯಾಗಿ ಡಿಲಿಟ್ ಮಾಡಿ. ಒಂದು ವೇಳೆ ಗಂಡ ಅದನ್ನು ಚೆಕ್ ಮಾಡಿದ್ರೆ, ಸಮಸ್ಯೆ ತಪ್ಪಿದ್ದಲ್ಲ.
ಪುರುಷರು ಸಹ ಈ ತಪ್ಪನ್ನು ಮಾಡಬಾರದು
ಪ್ರೇಮಾನಂದ ಜೀ ಮಹಾರಾಜ್ ಅವರು ಯುವತಿಯರ ಜೊತೆಗೆ ಯುವಕರಿಗೆ ಎಚ್ಚರಿಕೆ ನೀಡಿದರು. ಪ್ರೀತಿ ಮಾಡಿದ್ದ ಪುರುಷರು ಮದುವೆಗೆ ಮೊದಲು ಮಾಡಿದ ಎಲ್ಲಾ ತಪ್ಪುಗಳನ್ನು ಮರೆಮಾಚಬೇಕು ಮತ್ತು ಮದುವೆಯಾದ ನಂತರ, ಅವರು ತಮ್ಮ ಹೆಂಡತಿಯ ಬಗ್ಗೆ ಮಾತ್ರ ಭಾವನೆಗಳನ್ನು ಹೊಂದಿರಬೇಕು. ಅವರು ಬೇರೆ ಯಾರ ಬಗ್ಗೆಯೂ ಭಾವನೆಗಳನ್ನು ಹೊಂದಬಾರದು, ಇಲ್ಲದಿದ್ದರೆ ಪತಿ ಪತ್ನಿ ನಡುವಿನ ಸಂಬಂಧ ಮುರಿದು ಬೀಳುತ್ತೆ ಎಂದಿದ್ದಾರೆ.
ಗಂಡ ಮತ್ತು ಹೆಂಡತಿಗೆ ಮಹಾರಾಜ್ ಪ್ರೇಮಾನಂದ್ ನೀಡಿದ ಸಲಹೆ ಏನು?
ಇತ್ತೀಚಿನ ದಿನಗಳಲ್ಲಿ ಹೊಸ ಜನರೇಶನ್ ಮಕ್ಕಳಿಗೆ ಹೆಚ್ಚಿನ ವಿಷಯ ತಿಳಿದಿಲ್ಲ. ಅವರು ತಮ್ಮ ಜೀವನವನ್ನು ಹಾಳು ಮಾಡುತ್ತಿದ್ದಾರೆ, ಆದರೆ ಮದುವೆಯಾದ ನಂತರ ಅವರು ಸುಧಾರಿಸಿದರೆ, ಅವರ ಜೀವನವು ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ ಎಂದು ಪ್ರೇಮಾನಂದ್ ಹೇಳಿದರು. ಒಬ್ಬ ವ್ಯಕ್ತಿ ತನ್ನ ಗಂಡನನ್ನು ದೇವರು ಮತ್ತು ಹೆಂಡತಿಯನ್ನು ತಮ್ಮ ಜೀವನವೆಂದು ಪರಿಗಣಿಸಿದರೆ, ಮತ್ತು ವಿವಾಹೇತರ ಸಂಬಂಧಗಳಿಂದ ದೂರ ಉಳಿದರೆ, ಇದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತೆ ಎಂದಿದ್ದಾರೆ.