ಈ ರೀತಿ ತಪ್ಪಾಗೋದನ್ನು ತಪ್ಪಿಸಿದ್ರೆ ರಿಲೇಶನ್ ಶಿಪ್ ಬೊಂಬಾಟ್ ಆಗಿರುತ್ತೆ
ಸಂಬಂಧದಲ್ಲಿ ಬದ್ಧತೆ ಮತ್ತು ವಿಶ್ವಾಸಾರ್ಹವಾಗಿರುವುದು ಜೀವನದಲ್ಲಿ ಅತ್ಯಂತ ಮುಖ್ಯವಾಗಿದೆ. ಆದರೆ, ಇದು ಅಷ್ಟು ಸುಲಭವಲ್ಲ ಅತ್ಯಂತ ಸವಾಲಿನದು. ಅನೇಕ ದಂಪತಿಗಳು ಸಂಬಂಧದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ, ಇದರಿಂದ ನಿರಾಶೆಗೆ ಕಾರಣವಾಗುತ್ತದೆ, ಭಾವನೆಗಳನ್ನು ನೋಯಿಸುತ್ತದೆ ಮತ್ತು ಈ ನೋವು ತುಂಬಾ ದೊಡ್ಡದಾಗುತ್ತದೆ, ಇದರಿಂದ ಕೆಲವೊಮ್ಮೆ ಸಂಬಂಧವು ಕೊನೆಗೊಳ್ಳುತ್ತದೆ.
ವೈವಾಹಿಕ ಜೀವನದಲ್ಲಿ (married life) ಹೊಂದಾಣಿಕೆ ತುಂಬಾನೆ ಮುಖ್ಯ. ಕೆಲವೊಮ್ಮೆ ಜೋಡಿಗಳಲ್ಲಿ ಒಬ್ಬರು ಮಾಡುವ ತಪ್ಪು ಸಹ ಸಂಬಂಧ ಕೊನೆಗೊಳಿಸುತ್ತೆ. ಈ ತಪ್ಪುಗಳ ಬಗ್ಗೆ ಮಾತನಾಡುವುದಾದರೆ, ಸರಿಯಾಗಿ ಮಾತುಕತೆ ನಡೆಸದೇ ಇರೋದು, ಅವರಿಗೆ ಬೆಂಬಲ ನೀಡದೇ ಇರೋದು, ಅವರ ಆಸೆಗಳನ್ನು ಈಡೇರಿಸಲು ಸೋತಾಗ ಸಂಬಂಧ ಹದಗೆಡುತ್ತೆ. ಆದಾಗ್ಯೂ, ಈ ತಪ್ಪುಗಳು ಸಂಭವಿಸದಂತೆ ಪ್ರಯತ್ನಿಸುವುದು ಅಥವಾ ಅವುಗಳನ್ನು ನಿವಾರಿಸುವ ಮಾರ್ಗವು ಸಂಬಂಧದಲ್ಲಿ ಬಿರುಕು ಸೃಷ್ಟಿಸುವುದನ್ನು ತಪ್ಪಿಸಬಹುದು. ಅದಕ್ಕೆ ನೀವೇನು ಮಾಡಬೇಕು ನೋಡೋಣ..
ಅರ್ಥ ಮಾಡಿಕೊಳ್ಳೋದು ಮುಖ್ಯ: ಯಾವ ಸಂಬಂಧವೂ ಪರಿಪೂರ್ಣವಲ್ಲ. ಎಲ್ಲಾ ಸಂಬಂಧಗಳು ಅತೃಪ್ತಿಕರ ಅಂಶಗಳನ್ನು ಹೊಂದಿರುತ್ತವೆ. ನೀವು ತಪ್ಪು ವ್ಯಕ್ತಿಯೊಂದಿಗೆ ಇದ್ದೀರಿ ಎಂದು ನಿಮಗೆ ಅನಿಸಿದರೆ, ಈ ಸಂಬಂಧದಿಂದ ಬಲವಂತವಾಗಿ ಹೊರಬರಲು ಪ್ರಯತ್ನಿಸುವ ಬದಲು, ನಿಮ್ಮ ಸಂಗಾತಿಯ ನಡವಳಿಕೆಯನ್ನು ಸ್ವೀಕರಿಸಿ ಮತ್ತು ಅದರ ಬಗ್ಗೆ ಮಾತನಾಡಿ ಮತ್ತು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ.
ಅಗತ್ಯಗಳ ಹಠಮಾರಿತನ: ಸಂಬಂಧದಲ್ಲಿ ಅಗತ್ಯಗಳ ಬಗ್ಗೆ ನೀವು ಯಾವಾಗಲೂ ಹಠಮಾರಿಗಳಾಗಿರಬಾರದು. ಅಗತ್ಯಗಳ ಬಗ್ಗೆ ಅತಿಯಾದ ನಿರೀಕ್ಷೆಗಳು ಮತ್ತು ಅಧಿಕಾರವು ಸಂಬಂಧವನ್ನು ದುರ್ಬಲಗೊಳಿಸುತ್ತದೆ. ಯಾವಾಗಲೂ ಕಯಾವುದೇ ವಿಷಯದ ಮೇಲೆ ಪದೇ ಪದೇ ಒತ್ತಡೆ ಹೇರುತ್ತಿದ್ದರೆ, ಅದು ನಿಮ್ಮ ಮತ್ತು ನಿಮ್ಮ ಸಂಗಾತಿಯೊಂದಿಗಿನ ಸಂತೋಷದ ಕ್ಷಣಗಳನ್ನು ಹಾಳು ಮಾಡುತ್ತೆ..
ಸಂಬಂಧಗಳನ್ನು ಮೀರಿದ ಜೀವನ: ನಿಮ್ಮ ಸಂಬಂಧವನ್ನು ಇಡೀ ಜೀವನವನ್ನಾಗಿ ಮಾಡಬೇಡಿ. ಸಂಬಂಧದಲ್ಲಿ ನಿಮಗಾಗಿ ಮತ್ತು ನಿಮ್ಮ ಸಂಗಾತಿಗೆ ಸ್ವಲ್ಪ ಸ್ಪೇಸ್ (space to pertner) ನೀಡಬೇಕು. ಒಬ್ಬರು ವಿವಿಧ ರೀತಿಯ ಚಟುವಟಿಕೆಗಳು ಮತ್ತು ಜನರೊಂದಿಗೆ ಸಮಯವನ್ನು ಕಳೆಯಬೇಕು. ಇದು ಸಂಘರ್ಷ ಅಥವಾ ಹತಾಶೆಯನ್ನು ತಡೆಯುತ್ತದೆ ಮತ್ತು ನಿಮ್ಮ ಸಂಬಂಧಕ್ಕೆಸ್ಪೇಸ್ ನೀಡುತ್ತೆ.
ದೂಷಿಸುವುದನ್ನು ನಿಲ್ಲಿಸಿ: ಸಂಗಾತಿಯನ್ನು ದೂಷಿಸುವುದು (do not blame partner) ನಿಮ್ಮ ಮತ್ತು ಸಂಗಾತಿಯ ಭಾವನೆಗಳನ್ನು ನೋಯಿಸುತ್ತದೆ. ನೀವು ಕಿರಿಕಿರಿಗೊಳ್ಳುತ್ತೀರಿ. ಸಂತೋಷವು ಇತರರ ನಡವಳಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಕಷ್ಟಕರ ಸಂದರ್ಭಗಳಲ್ಲಿ, ನೀವು ವಿಷಯಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಹ ಕಲಿಯುತ್ತೀರಿ, ಇದು ಸಂಬಂಧದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ.
ಲೈಂಗಿಕತೆಗೆ ಸಂಬಂಧಿಸಿದ ನಿರೀಕ್ಷೆಗಳು: ಸಂಬಂಧದಲ್ಲಿ ಲೈಂಗಿಕತೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ನಿಮ್ಮ ಸಂಗಾತಿಯು ಕೆಲವು ಸಮಯದಲ್ಲಿ ಅದನ್ನು ಬಯಸದಿದ್ದರೆ, ನೀವು ಇದನ್ನು ಒಪ್ಪಿಕೊಳ್ಳಬೇಕು ಅಥವಾ ಅದರ ಬಯಕೆಯನ್ನು ಉತ್ತೇಜಿಸಲು ಕೆಲವು ಪ್ರಯತ್ನಗಳನ್ನು ಮಾಡಬೇಕು. ಇದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ.
ಕೌನ್ಸೆಲಿಂಗ್ ತಪ್ಪಿಸುವುದು: ನಿಮ್ಮ ಸಂಬಂಧದಲ್ಲಿ ವಿವಾದವು ಸಾಕಷ್ಟು ಹೆಚ್ಚಾಗಿದೆ ಮತ್ತು ಎಲ್ಲಾ ಪ್ರಯತ್ನಗಳ ನಂತರವೂ ಅದು ಕಡಿಮೆಯಾಗದಿದ್ದರೆ, ದಂಪತಿಗಳು ಕೌನ್ಸೆಲಿಂಗ್ ಗೆ ಹೋಗಬೇಕು. ಇದಕ್ಕಾಗಿ, ನೀವು ಯಾವುದೇ ರೀತಿಯಲ್ಲಿ ಹಿಂಜರಿಯಬಾರದು. ಅನೇಕ ಬಾರಿ ಕೌನ್ಸೆಲಿಂಗ್ ಮಾಡುವುದು ನಿಮ್ಮ ಸಂಬಂಧವನ್ನು ಸುಧಾರಿಸಲು ಉತ್ತಮ ಮಾರ್ಗವಾಗಿದೆ.