ಯಾವ ವೃತ್ತಿಯ ಗಂಡಂದಿರು ಮೋಸ ಮಾಡ್ತಾರೆ?
ಹೆಂಡತಿಗೆ ಮೋಸ ಮಾಡುವ ಗಂಡಂದಿರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡ್ತಾರೆ ಅನ್ನೋದನ್ನ ನಿಜವಾದ ಮಾಹಿತಿಯೊಂದಿಗೆ ಈ ಪೋಸ್ಟ್‌ನಲ್ಲಿ ನೋಡಬಹುದು.

ಯಾವ ವೃತ್ತಿಯ ಗಂಡಂದಿರು ಮೋಸ ಮಾಡ್ತಾರೆ?
ಹೆಚ್ಚಾಗಿ ಗಂಡ ಹೆಂಡತಿ ಸಂಬಂಧದಲ್ಲಿ ಮುಚ್ಚುಮರೆ ಇರಬಾರದು. ಆದರೆ ಕೆಲವರ ಸಂಬಂಧ ಹಾಗೆ ಇರಲ್ಲ. ಗಂಡ ಹೆಂಡತಿಯಿಂದ ಬೇರೆ ಜೀವನ ನಡೆಸ್ತಿರ್ತಾನೆ. ಸುಳ್ಳು ಮೋಸ ಅವನ ಇನ್ನೊಂದು ಮುಖ. ಈ ಪೋಸ್ಟ್‌ನಲ್ಲಿ ಹೆಂಡತಿಗೆ ಮೋಸ ಮಾಡುವ ಗಂಡಂದಿರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡ್ತಾರೆ ಅನ್ನೋದನ್ನ ನಿಜವಾದ ಮಾಹಿತಿಯೊಂದಿಗೆ ನೋಡಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ಹಲವು ಕುತೂಹಲಕಾರಿ ಮಾಹಿತಿಗಳು ಸಿಗುತ್ತವೆ. ಆ ರೀತಿ ಮೇಡ್‌ಲೈನ್ ಸ್ಮಿತ್ ಎಂಬುವವರು ಹಂಚಿಕೊಂಡಿರುವ ಕೆಲವು ವಿಷಯಗಳನ್ನು ನೋಡಬಹುದು. ಸ್ಮಿತ್ ಹೆಂಡತಿಯನ್ನು ಮೋಸ ಮಾಡುವ ಗಂಡಂದಿರನ್ನು ಪತ್ತೆ ಹಚ್ಚುವುದನ್ನೇ ತನ್ನ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಇವರ ವೃತ್ತಿ ಪತ್ತೇದಾರಿಯಂತೆ. ಇವರ ಗ್ರಾಹಕರು ಹೆಚ್ಚಾಗಿ ಮಹಿಳೆಯರು. ಅದರಲ್ಲೂ ತಮ್ಮ ಗಂಡ, ಪ್ರಿಯಕರನನ್ನು ಕಣ್ಗಾವಲು ಮಾಡಲು ಹೇಳಿ ಮಹಿಳೆಯರು ಇವರನ್ನು ಸಂಪರ್ಕಿಸುತ್ತಾರೆ.
ಕಳೆದ ಮೂರು ವರ್ಷಗಳಲ್ಲಿ ಸುಮಾರು ಐದು ಸಾವಿರ ಪರೀಕ್ಷೆಗಳನ್ನು ಸ್ಮಿತ್ ಮಾಡಿದ್ದಾರೆ. ಅದರಲ್ಲಿ ನೂರಕ್ಕೂ ಹೆಚ್ಚು ಪುರುಷರ ಇನ್ನೊಂದು ಮುಖ ಬೆಳಕಿಗೆ ಬಂದಿದೆ. ಈ ಪುರುಷರ ಬಗ್ಗೆ ಸ್ಮಿತ್ ಹೇಳುವಾಗ, ಅವರು ತಮ್ಮ ಇಚ್ಛೆಗಾಗಿ ಮಾತ್ರ ಬದುಕುತ್ತಾರೆ ಮತ್ತು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಸ್ಮಿತ್ ಅವರ ಸೇವೆಯನ್ನು ಪಡೆಯಲು ಮಹಿಳೆಯರು ನಮ್ಮ ಭಾರತೀಯ ಶುಲ್ಕಕ್ಕೆ ಹೋಲಿಸಿದರೆ ಸುಮಾರು 6 ಸಾವಿರದವರೆಗೆ ನೀಡುತ್ತಾರೆ. ಮೇಡ್‌ಲೈನ್ ಸ್ಮಿತ್, ಸಂಬಂಧಪಟ್ಟ ಮಹಿಳೆಯರ ಗಂಡಂದಿರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕಿಸುತ್ತಾರೆ. ಅವಕಾಶಕ್ಕಾಗಿ ಕಾಯುತ್ತಿರುವ ಪುರುಷರು ಎಂದಾದರೆ ಅವರು ಸಿಕ್ಕಿಬೀಳುವ ಸಂದರ್ಭದಲ್ಲಿ ಅದನ್ನು ಸ್ಕ್ರೀನ್‌ಶಾಟ್‌ಗಳನ್ನಾಗಿ ಮಾಡಿ ತನ್ನ ಗ್ರಾಹಕರಿಗೆ ಸ್ಮಿತ್ ಹಂಚಿಕೊಳ್ಳುತ್ತಾರೆ. ಹೀಗೆ ಮೋಸ ಮಾಡುವ ಗಂಡಂದಿರನ್ನು ಕೈಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಸ್ಮಿತ್.
ಯಾವ ಕ್ಷೇತ್ರದ ಪುರುಷರು ಮೋಸ ಮಾಡುತ್ತಾರೆ?
ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಪುರುಷರು ಹೆಚ್ಚಾಗಿ ಹೆಂಡತಿಯನ್ನು ಮೋಸ ಮಾಡುತ್ತಾರೆ ಎಂದು ಸ್ಮಿತ್ ಹೇಳುತ್ತಾರೆ. ಅವರು ಈ ಕೆಲಸ ಮಾಡಲು ಪ್ರಾರಂಭಿಸಿದಾಗಿನಿಂದ ನೂರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳ ಹೆಂಡತಿಯರು ತಮ್ಮ ಗಂಡನನ್ನು ಕಣ್ಗಾವಲು ಮಾಡಲು ಹೇಳಿದ್ದಾರೆ. ಅದರಲ್ಲಿ ಹಲವರು ಸ್ಮಿತ್ ಅವರ ಬಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಇವರಲ್ಲದೆ ಅಗ್ನಿಶಾಮಕ ದಳದವರು, ಸಹಾಯಕ ವೈದ್ಯರು, ಸೈನಿಕರು ಕೂಡ ಇದಕ್ಕೆ ಹೊರತಾಗಿಲ್ಲ. ಫಿಟ್‌ನೆಸ್ ತರಬೇತುದಾರರು ಕೂಡ ಸ್ವಲ್ಪ ಹಾಗೆಯೇ ಇರುತ್ತಾರೆ. ಈ ಪಟ್ಟಿಯಲ್ಲಿ ವಕೀಲರೂ ಇದ್ದಾರೆ. ವೈದ್ಯರು ಕೊನೆಯಲ್ಲಿ ಬರುವವರು.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.