- Home
- Life
- Relationship
- ಈ ದಿನಾಂಕದಂದು ಹುಟ್ಟಿದವರು ಪ್ರೀತಿಯಲ್ಲಿ ಎಕ್ಸ್‌ಪರ್ಟ್, ಇವರ ಲವ್ ಸ್ಟೋರಿಗೆ ಎಂಡ್ ಕಾರ್ಡ್ ಇಲ್ಲ
ಈ ದಿನಾಂಕದಂದು ಹುಟ್ಟಿದವರು ಪ್ರೀತಿಯಲ್ಲಿ ಎಕ್ಸ್‌ಪರ್ಟ್, ಇವರ ಲವ್ ಸ್ಟೋರಿಗೆ ಎಂಡ್ ಕಾರ್ಡ್ ಇಲ್ಲ
ಸಂಖ್ಯಾಶಾಸ್ತ್ರದ ಪ್ರಕಾರ, ಯುದ್ಧದಲ್ಲಿ ಗೆಲ್ಲುವುದು ಸುಲಭ, ಆದರೆ ಪ್ರೀತಿಯಲ್ಲಿ ಗೆಲ್ಲುವುದು ಕಷ್ಟ. ಆದ್ರೆ, ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದವರು ಪ್ರೀತಿಯ ವಿಷಯದಲ್ಲಿ ಎಕ್ಸ್‌ಪರ್ಟ್‌ಗಳಂತೆ. ಆ ದಿನಾಂಕಗಳು ಯಾವುವು ಎಂದು ತಿಳಿಯೋಣ.

ಈ ದಿನಾಂಕಗಳಲ್ಲಿ ಜನಿಸಿದವರು ಪ್ರೀತಿಯಲ್ಲಿ ಕಿಲಾಡಿ

ಪ್ರೀತಿಯ ರಾಜರು (ದಿನಾಂಕ: 6, 15, 24)
6, 15, 24 ರಂದು ಜನಿಸಿದವರನ್ನು ಸಂಖ್ಯಾಶಾಸ್ತ್ರವು ಪ್ರೀತಿಯ ರಾಜರು ಎಂದು ಹೇಳುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, 6ನೇ ಸಂಖ್ಯೆಯ ಅಧಿಪತಿ ಶುಕ್ರ (Venus). ಪ್ರೀತಿ, ಸೌಂದರ್ಯ ಮತ್ತು ಕಲೆಗೆ ಅಧಿಪತಿಯಾದ ಶುಕ್ರನ ಪ್ರಭಾವದಲ್ಲಿ ಜನಿಸಿದವರು ಸಹಜವಾಗಿಯೇ ಹೆಚ್ಚು ಆಕರ್ಷಕ ಮತ್ತು ಸೌಮ್ಯ ಸ್ವಭಾವದವರಾಗಿರುತ್ತಾರೆ. ಇವರು ಯಾರನ್ನಾದರೂ ಪ್ರೀತಿಸಲು ಪ್ರಾರಂಭಿಸಿದರೆ, ಅವರನ್ನು ತಮ್ಮ ಪ್ರೀತಿಯಿಂದ ಕಟ್ಟಿಹಾಕುವ ಕಲೆ ತಿಳಿದಿರುತ್ತಾರೆ. ಇವರ ಪ್ರೀತಿಗೆ ಅಂತ್ಯ ಎಂಬುದೇ ಇಲ್ಲ. ಇವರ ಪ್ರೀತಿ ಹೆಚ್ಚಾಗಿ ಮದುವೆಯಲ್ಲಿ ಕೊನೆಗೊಳ್ಳುತ್ತದೆ ಮತ್ತು ಸಂತೋಷದ ದಾಂಪತ್ಯ ಜೀವನವನ್ನು ನಡೆಸುತ್ತಾರೆ.
ಭಾವನಾತ್ಮಕ ಪ್ರೇಮಿಗಳು (ದಿನಾಂಕ: 2, 11, 20, 29)
ಧೈರ್ಯವಂತ ಪ್ರೇಮಿಗಳು (ದಿನಾಂಕ: 9, 18, 27)
ಇತರ ಸಂಖ್ಯೆಗಳ ಕಥೆಯೇನು?
ಇದೇ ರೀತಿ, 1, 10, 19, 28 ರಂದು ಜನಿಸಿದವರು ಸೂರ್ಯನ ಪ್ರಭಾವದಿಂದ ಪ್ರೀತಿಯಲ್ಲಿ ಪ್ರಾಬಲ್ಯ ಸಾಧಿಸಲು ಬಯಸುತ್ತಾರೆ. ನಾಯಕತ್ವದ ಗುಣ ಹೆಚ್ಚು ಇರುವುದರಿಂದ, ಕಷ್ಟದ ಸಮಯದಲ್ಲೂ ಸಂಗಾತಿಯನ್ನು ಬೆಂಬಲಿಸುತ್ತಾರೆ. 5, 14, 23 ರಂದು ಜನಿಸಿದವರು ಬುಧನ ಆಕರ್ಷಣೆಯಿಂದ ತಮ್ಮ ಚತುರ ಮಾತಿನಿಂದಲೇ ಪ್ರೀತಿಯನ್ನು ಗೆಲ್ಲುತ್ತಾರೆ. ಇವರು ತುಂಬಾ ಜಾಲಿಯಾಗಿ ಇರುವುದರಿಂದ ಇವರೊಂದಿಗೆ ಇರುವುದು ಯಾವಾಗಲೂ ಖುಷಿ ಕೊಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.