- Home
- Life
- Relationship
- ನಿಶಾ ಯೋಗೇಶ್ವರ್ ಈಗೇನ್ ಮಾಡ್ತಿದ್ದಾರೆ? ಅಪ್ಪನ ವಿರುದ್ಧ ಸುರ್ಜೇವಾಲಾಗೆ ದೂರು ಕೊಟ್ಟಿದ್ದೇಕೆ?
ನಿಶಾ ಯೋಗೇಶ್ವರ್ ಈಗೇನ್ ಮಾಡ್ತಿದ್ದಾರೆ? ಅಪ್ಪನ ವಿರುದ್ಧ ಸುರ್ಜೇವಾಲಾಗೆ ದೂರು ಕೊಟ್ಟಿದ್ದೇಕೆ?
ನಿಶಾ ಯೋಗೇಶ್ವರ್ ಅಪ್ಪನ ವಿರುದ್ಧ ದೂರು ಕೊಟ್ಟಿದ್ದಾದರೂ ಏಕೆ? ಸಿನಿಮಾ, ರಾಜಕೀಯ, ಇತರೆ ಉದ್ಯಮಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದೇ ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳಲು ಕಾಂಗ್ರೆಸ್ ರಾಜ್ಯ ಉಸ್ಯವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಹಾಯ ಕೋರಿದ್ದಾರೆ. ನಿಶಾ ವೃತ್ತಿ, ಜೀವನ ಕುರಿತ ವಿವರ ಇಲ್ಲಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭೇಟಿಯಾದ ಯೋಗೇಶ್ವರ್ ಹಿರಿಯ ಪತ್ನಿ ಹಾಗೂ ಪುತ್ರಿ ನಿಶಾ ಯೋಗೇಶ್ವರ್ ಅವರು ಕಾಂಗ್ರೆಸ್ ಶಾಸಕ ಸಿ.ಪಿ. ಯೋಗೇಶ್ವರ್ ವಿರುದ್ಧ ದೂರು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುರ್ಜೆವಾಲಾ ಭೇಟಿ ಮಾಡಿ ಸಿ.ಪಿ. ಯೋಗೇಶ್ವರ್ ಅವರಿಂದ ದೌರ್ಜನ್ಯ ಆಗುತ್ತಿದೆ. ನಮ್ಮ ಕುಟುಂಬಕ್ಕೆ ತೊಂದರೆ ಕೊಡ್ತಿದ್ದಾರೆ. ಪದೇ ಪದೇ ಕೋರ್ಟ್ ಕೇಸ್ ಹಾಕುತ್ತಿದ್ದಾರೆ. ಕಾನೂನಾತ್ಮಕವಾಗಿ ನಾವು ದೂರವಾಗಿಲ್ಲ. ಆದರೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅದನ್ನು ಸರಿಪಡಿಸಿಕೊಡಿ ಎಂದು ದೂರು ನೀಡಿದ್ದಾರೆ.
ನಿಶಾ ಅವರು ಮಾತನಾಡಿ, ಸಮಯ ಎಲ್ಲರಿಗಿಂತ ಶಕ್ತಿಶಾಲಿ. ಸಮಯ ಬಂದಾಗ ನ್ಯಾಯ ಸಿಗುತ್ತದೆ. ಆ ನ್ಯಾಯಕ್ಕಾಗಿ ನಾನು ಕಾಯುತ್ತಿದ್ದೇನೆ. ಅದಕ್ಕೆ ಬೇಕಾದ ಎಲ್ಲ ಜವಾಬ್ದಾರಿಗಳನ್ನು ನಾನೇ ತೆಗೆದುಕೊಂಡಿದ್ದೇನೆ. ಬೆಳಗಾದರೆ ನಾವೇ ಕಷ್ಟಪಡಬೇಕು. ಇವತ್ತು ನಾನು ಇಲ್ಲಿ ಬಂದು ನಿಂತಿದ್ದೇನೆ ಎಂದರು.
ದಿನನಿತ್ಯ ಮನೆಯಲ್ಲಿ ಮನಸ್ಸಿನಲ್ಲಿ ದಿನಾಲೂ ನಡೆಯುತ್ತಿದೆ. ದೊಡ್ಡ ವ್ಯಕ್ತಿ ನನ್ನ ತಂದೆಯ ಬಗ್ಗೆ ಪ್ರಶ್ನೆ ಮಾಡುವಂತಹ ಪರಿಸ್ಥಿತಿ ಬಂದಿದೆ. ಅನ್ಯಾಯವನ್ನು ಎಷ್ಟು ಸಹಿಸಿಕೊಂಡು ಹೋಗಲು ಆಗುತ್ತದೆ. ನಾವೇನು ತಪ್ಪು ಮಾಡಿದ್ದೇವೆ ಎಂಬುದಕ್ಕೆ ಉತ್ತರ ಬೇಕಲ್ಲವಾ? ಅದಕ್ಕೆ ನಾನು ಇಲ್ಲಿಗೆ ಬಂದಿದ್ದೇವೆ ಎಂದು ನಿಶಾ ಯೋಗೇಶ್ವರ್ ತಿಳಿಸಿದರು.
ನಮ್ಮ ಕುಟುಂಬದಲ್ಲಿ ದೊಡ್ಡ ಸಮಸ್ಯೆ ಬಂದಿದೆ. ದೊಡ್ಡ ರಾಜಕೀಯ ಪಕ್ಷದ ನಾಯಕನಾಗಿರುವ ಅವರು, ಸಣ್ಣ ವಿಚಾರವನ್ನು ಮನೆಯಲ್ಲಿ ಬಗೆಹರಿಸಿಕೊಳ್ಳಬೇಕಿದೆ. ಅದಕ್ಕೆ ಸಾಧ್ಯವಾದಷ್ಟು ಅವರಿಗೆ ತಿಳಿಸಿ ಎಂದು ಸುರ್ಜೇವಾಲಾ ಅವರಲ್ಲಿ ಮನವಿ ಮಾಡಿದ್ದೇವೆ. ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುವುದು ಅನಿವಾರ್ಯ ಆಗಿದೆ. ಅವರು ಕೇಸ್ ಹಾಕಿದ್ದಾರೆ ಎಂದರೆ ನಾವು ಹೋಗಿ ಅಟೆಂಡ್ ಮಾಡಲೇಬೇಕಿದೆ. ನನ್ನ ವಿರುದ್ಧ ಏಕೆ ಅವರು ಇಷ್ಟೆಲ್ಲಾ ಕೇಸ್ ಹಾಕಿ, ಹಗೆ ಸಾಧಿಸುತ್ತಿದ್ದಾರೆ ಎಂಬ ಪ್ರಶ್ನೆ ನಮಗೆ ಕಾಡುತ್ತಿದೆ ಎಂದು ನಿಶಾ ಹೇಳಿದರು.
ನಿಶಾ ಯೋಗೇಶ್ವರ್ ಶಿಕ್ಷಣ, ಜೀವನ ಮತ್ತು ವೃತ್ತಿ:
ನಿಶಾ ಯೋಗೇಶ್ವರ್ ಮೊದಲ ಸಿನಿಮಾ ಅಂಬರೀಶ. ಆದರೆ, ಈ ಸಿನಿಮಾದಲ್ಲಿ ಕೊನೇ ಸಮಯದಲ್ಲಿ ಅವಕಾಶ ಕೈತಪ್ಪಿತು. ನಿಶಾ ಅಮೆರಿಕದಲ್ಲಿ ಉದ್ಯಮ ಮತ್ತು ಸಂಖ್ಯಾಶಾಸ್ತ್ರದಲ್ಲಿ (statistics and business) ಪದವಿ ಪಡೆದಿದ್ದಾರೆ. ಜೊತೆಗೆ, ಅಪ್ಪ ಚಿತ್ರರಂಗದವರಾಗಿದ್ದರಿಂದ ನಿಶಾ ಕೂಡ ರಂಗ ತರಬೇತಿ ಪಡೆದಿದ್ದಾರೆ. ಸಂಗೀತದಲ್ಲಿಯೂ ಆಸಕ್ತಿ ಇರುವ ನಿಶಾ ಸಂಗೀತವನ್ನೂ ಅಭ್ಯಾಸ ಮಾಡಿದ್ದಾರೆ.
ಸಿನಿಮಾ ಸೆಟ್ಟೇರದ ಕಾರಣ ರಾಜಕಾರಣಕ್ಕೆ ಬರಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಕೌಟುಂಬಿಕ ಕಾರಣದಿಂದ ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೇ ಅಪ್ಪನ ವಿರುದ್ಧವೇ ಹೋರಾಡುವ ಪರಿಸ್ಥಿತಿಯಲ್ಲಿದ್ದಾರೆ. ಇದೀಗ ಎಲ್ಲಿಯೂ ಕೆಲಸಕ್ಕೆ ಹೋಗದೇ ಮನೆಯ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ.
ಸಿಪಿ ಯೋಗೇಶ್ವರ್ ಪತ್ನಿ ಮಂಜುಳಾ ಮಾತನಾಡಿ, ನಮ್ಮಲ್ಲಿ ನಡೆಯುತ್ತಿರುವ ಫ್ಯಾಮಿಲಿ ಸಮಸ್ಯೆ ಸುರ್ಜೆವಾಲ ಮುಂದಿಟ್ಟಿದ್ದೇವೆ. ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಪರಮೇಶ್ವರ ಅವರೊಂದಿಗೆ ಮಾತಾಡುವುದಾಗಿ ಭರವಸೆ ನೀಡಿದ್ದಾರೆ. ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ. ನಮ್ಮ ಕುಟುಂಬದ ವಿಚಾರ ಹೇಗಾಗಿದೆ ಅಂದರೆ ಅವರಿವರ ಕಚೇರಿ ಬಾಗಿಲು ತಟ್ಟಬೇಕಾದ ಸ್ಥಿತಿ ಬಂದಿದೆ ಎಂದರು.
ನಮ್ಮ ಮಕ್ಕಳು ಉಸಿರಾಡುವುದಕ್ಕೂ ಅವಕಾಶ ಆಗುತ್ತಿಲ್ಲ. ನಮ್ಮ ಮಕ್ಕಳ ಮೇಲೆ ಕೇಸ್ ಹಾಕಿದ್ದಾರೆ. ರಾಜಕೀಯದಲ್ಲಿ ಅವರು ಇರುವುದರಿಂದ ನಮಗೆ ಉಸಿರಾಡುವುದಕ್ಕೇ ಆಗುತ್ತಿಲ್ಲ. ನಮಗೆ ನ್ಯಾಯ ಪಡೆಯಲು ಕಷ್ಟ ಆಗುತ್ತಿದೆ. ಒಬ್ಬ ತಾಯಿಯಾಗಿ ಎಲ್ಲೆಲ್ಲಿ ನ್ಯಾಯಕ್ಕಾಗಿ ಓಡಾಡಬೇಕೋ ಅಲ್ಲಲ್ಲಿ ಓಡಾಡುತ್ತಿದ್ದೇನೆ. ನಾಲ್ಕೈದು ಕೇಸ್ ಹಾಕಿದ್ದಾರೆ ಎಂದು ತಿಳಿಸಿದರು.
ನಾವು 300 ಪ್ರಾಪರ್ಟಿಗಳ ಮೇಲೆ ಸ್ಟೇ ತಂದಿದ್ದೇವೆ. ನಮ್ಮ ಮಕ್ಕಳು ಬೀದಿಗೆ ಬಂದು ಹೋರಾಟ ಮಾಡುವ ಶಕ್ತಿ ಇಲ್ಲ. ನಮ್ಮ ಹತ್ರ ಹಣದ ಶಕ್ತಿ ರಾಜಕೀಯ ಶಕ್ತಿ ಇಲ್ಲ. ಅದಕ್ಕೆ ದುಖಃ ಇದೆ, ಆದರೆ ತಾಯಿಯಾಗಿ ನಾನು ಹೋರಾಡಲೇಬೇಕಿದೆ. ರಣದೀಪ್ ಸುರ್ಜೆವಾಲಾ ಪೊಲೈಟ್ ಆಗಿ ಸಮಯ ಕೊಟ್ಟರು.
ಯೋಗೇಶ್ವರ್ ಒಬ್ಬ ಜನಪ್ರತಿನಿಧಿ. ಅವರ ಕುಟುಂಬದ ವಿಷಯವನ್ನು ಅವರೇ ಬೀದಿಗೆ ತಂದಿದ್ದಾರೆ. ಇದರಿಂದ ಜನರಿಗೆ ಅವರು ಏನು ಸಂದೇಶ ಕೊಡ್ತಿದ್ದಾರೆ. ನಾಯಕರ ಮೇಲೆ ನ್ಯಾಯದ ಮೇಲೆ ಭರವಸೆ ಇದೆ. ಸತ್ಯಕ್ಕೆ ಜಯ ಸಿಗಬಹುದು ಎಂದು ಯೋಗೇಶ್ವರ್ ಪತ್ನಿ ಮಂಜುಳಾ ತಿಳಿಸಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
