ಕಾಂಗ್ರೆಸ್ ಮುಖಂಡರಲ್ಲಿದೆಯಾ ನಿಶಾಲ ಸ್ಫೋಟಕ ಸಿಡಿ, ಸಿಪಿ ಯೋಗೇಶ್ವರ್ ಪುತ್ರಿ ಬಿಚ್ಚಿಟ್ಟ ರಹಸ್ಯ!

ಚನ್ನಪಟ್ಟಣ ಉಪ ಚುನಾವಣೆ ಕಾವೇರುತ್ತಿದ್ದಂತೆ ಕೆಲ ಸ್ಫೋಟಕ ಮಾಹಿತಿಗಳು, ವರದಿಗಳು ಹರಿದಾಡುತ್ತಿದೆ. ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿಕೊಂಡಿರುವುದರ ಹಿಂದೆ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಸಿಡಿ ಕಾರಣವೇ? ಡಿಕೆ ಶಿವಕುಮಾರ್ ಈ ಸಿಡಿ ಮೂಲಕ ರಣತಂತ್ರ ಹೆಣೆದಿದ್ದಾರಾ? ಈ ಆರೋಪಗಳಿಗೆ ಖುದ್ದು ನಿಶಾ ಯೋಗೇಶ್ವರ್ ಉತ್ತರ ನೀಡಿದ್ದಾರೆ.

Nisha yogeshwar ask congress leaders to release CD question father CP Yogeshwar political move ckm

ಬೆಂಗಳೂರು(ಅ.27) ಚನ್ನಪಟ್ಟಣ ಚುನಾವಣೆಯ ರಾಜಕೀಯ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್, ಇತ್ತ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಡುವೆ ಜಂಗಿ ಕುಸ್ತಿ ನಡೆಯುತ್ತಿದೆ. ರಾಜಕೀಯ ಆರೋ ಪ್ರತ್ಯಾರೋಪಗಳು, ವಾಕ್ಸಮರಗಳು ನಡೆಯುತ್ತಿದೆ. ಆದರೆ ಇದರ ನಡುವೆ ಸಿಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಕಣ್ಣೀರಿಡುತ್ತಿದ್ದಾರೆ. ತಂದೆ ತನ್ನನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಸಿಡಿ ಕತೆಯನ್ನು ಬಿಚ್ಚಿಟ್ಟಿದ್ದಾರೆ. ಸಿಪಿ ಯೋಗೇಶ್ವರ್ ಬಿಜೆಪಿಯಿಂದ ಕಾಂಗ್ರೆಸ್ ಸೇರಿಕೊಳ್ಳಲು ನಿಶಾ ಯೋಗೇಶ್ವರ್ ಅವರ ಸಿಡಿ ಕಾರಣ ಅನ್ನೋ ಮಾತುಗಳು ವರದಿಗಳು ಹರಿದಾಡುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಸಿಡಿ ಮುಂದಿಟ್ಟು ಸಿಪಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್‌ ಸೇರಿಕೊಳ್ಳುವಂತೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಆರೋಪಗಳಿಗೆ ನಿಶಾ ಯೋಗೇಶ್ವರ್ ಉತ್ತರ ನೀಡುತ್ತಾ, ಡಿಕೆ ಶಿವಕುಮಾರ್ ಬಳಿಯಿಂದಲೂ ಸ್ಪಷ್ಟನೆ ಕೇಳಿದ್ದಾರೆ.

ಸಿಡಿ ಕುರಿತು ನಿಶಾ ಯೋಗೇಶ್ವರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋ ಪೋಸ್ಟ್ ಮಾಡಿರುವ ನಿಶಾ ಯೋಗೇಶ್ವರ್, ತನ್ನ ಸಿಡಿ ವಿಚಾರಕ್ಕೆ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿಕೊಂಡಿದ್ದಾರೆ ಅನ್ನೋದು ತನ್ನ ತಂದೇ ಸಿಪಿ ಯೋಗೇಶ್ವರ್ ಅವರು ಮಾಡಿದ ಕುತಂತ್ರದ ಸುಳ್ಳು ಪ್ರಚಾರ ಎಂದಿದ್ದಾರೆ. ಈ ರೀತಿ ಯಾವುದೇ ಸಿಡಿ ಡಿಕೆ ಶಿವಕುಮಾರ್ ಬಳಿ ಇದ್ದರೆ ಯಾವುದೇ ಯೋಚನೆ ಮಾಡದೆ ಬಿಡುಗೆ ಮಾಡಿ ಎಂದು ನಿಶಾ ಯೋಗೇಶ್ವರ್ ಆಗ್ರಹಿಸಿದ್ದಾರೆ.

ಯೋಗಿ ವಿರುದ್ಧ ಪುತ್ರಿ ನಿಶಾ ಸಮರ: ಎಲ್ಲವನ್ನೂ ಬಯಲು ಮಾಡುವೆ ಎಂದ ಸೈನಿಕನ ಮಗಳು!

ಪುತ್ರಿ ನಿಶಾ ಯೋಗೇಶ್ವರ್ ಮಾನ ರಕ್ಷಣೆಗಾಗಿ ಸಿಪಿ ಯೋಗೇಶ್ವರ್ ಬಿಜೆಪಿಯಿಂದ ಕಾಂಗ್ರೆಸ್ ಸೇರಿಕೊಂಡಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇದು ಸುಳ್ಳು ಸುದ್ದಿ. ನನ್ನ ಅಸಲಿ ನೋವು, ಕಣ್ಣೀರ ಹಾದಿಯನ್ನು ಯಾರು ವರದಿ ಮಾಡುತ್ತಿಲ್ಲ, ಇದಕ್ಕೆ ತನ್ನ ತಂದೆಯೇ ನಿರ್ಬಂಧ ಹಾಕಿದ್ದಾರೆ. ಆದರೆ ತಮಗೆ ಇಷ್ಟಬಂದ ರೀತಿ ಈ ರೀತಿಯ ಸುದ್ದಿ ಹಾಕುತ್ತಿದ್ದಾರೆ. ಇದು ತಂದೆ ಸಿಪಿ ಯೋಗೇಶ್ವರ್ ಅನುಕಂಪ ಗಿಟ್ಟಿಸಿಕೊಳ್ಳಲು ಮಾಡಿದ ಮತ್ತೊಂದು ತಂತ್ರ ಎಂದು ನಿಶಾ ಯೋಗೇಶ್ವರ್ ಹೇಳಿದ್ದಾರೆ.

 

 

ನನ್ನ ಸಿಡಿ ಬಳಸಿ,ತಂದೆ ಸಿಪಿ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆಯಿಸಿಕೊಂಡಿದ್ದೀರಿ ಅನ್ನೋ ಗಂಭೀರ ಆರೋಪ  ಡಿಕೆ ಶಿವಕುಮಾರ್ ನಿಮ್ಮ ಮೇಲಿದೆ. ನಾನು ಭರವಸೆ ನೀಡುತ್ತಿದ್ದೇನೆ. ನೀವು ಯಾರಿಗೂ ಹೆದರಬೇಡಿ, ಈ ರೀತಿಯ ಸಿಡಿ ನಿಮ್ಮಲ್ಲಿದ್ದರೆ ದಯವಿಟ್ಟು ಯೋಚನೆ ಮಾಡಿದೆ ರಿಲೀಸ್ ಮಾಡಿ ಎಂದು ನಿಶಾ ಯೋಗೇಶ್ವರ್ ಸವಾಲು ಹಾಕಿದ್ದಾರೆ. ನನ್ನ ಅಗ್ನಿಪರೀಕ್ಷೆ ನಡೆಯುತ್ತಿದೆ. ಇದು ನಡೆದು ಹೋಗಲಿ. ಒಂದು ವೇಳೆ ನಿಮ್ಮಲ್ಲಿ ಸಿಡಿ ಇಲ್ಲ ಎಂದಾದರೆ ಅದನ್ನೂ ಬಂದು ಜನರ ಮುಂದೆ ಹೇಳಿಬಿಡಿ. ನಿಮಗೆ ಸಿಡಿ ವಿಷಯಗಳು ಮಾಮೂಲಿ. ಆದರೆ ಮಕ್ಕಳನ್ನು , ಹೆಣ್ಣುಮಕ್ಕಳನ್ನು ಇದಕ್ಕೆ ಏಳೆಯುತ್ತೀರಾ ಅಂದರೆ ಶಾಕ್ ಆಗುತ್ತಿದೆ ಎಂದ ನಿಶಾ ಯೋಗೇಶ್ವರ್ ಹೇಳಿದ್ದಾರೆ. ನಮ್ಮ ಪೀಳಿಗೆಗೆ ಸ್ಪಷ್ಟತೆ ಬೇಕು. ಈ ಸ್ಪಷ್ಟತೆಯನ್ನು ನೀವೆ ಕೊಡಿ ಎಂದು ನಿಶಾ ಆಗ್ರಹಿಸಿದ್ದಾರೆ.

ಯಾವತ್ತು ಇಲ್ಲದಿರುವ ಸಿಡಿ ವಿಚಾರ ಚುನಾವಣೆ ಹತ್ತಿರಬಂದಾಗಲೇ ಯಾಕೆ ಬಂದಿದೆ? ಎಂದು ನಿಶಾ ಪ್ರಶ್ನಿಸಿದ್ದಾರೆ. ತನ್ನ ತಂದೆ ಸಿಪಿ ಯೋಗೇಶ್ವರ್ ಮಹಾ ತಂದೆ. ಒಂದು ಎಳ್ಳಷ್ಟು ಕಾಳಜಿ ವಹಿಸಿದ್ದರೆ ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇಲ್ಲೀವರೆಗೆ ನನ್ನ ಬಗ್ಗೆ ಯೋಚನೆ ಮಾಡದ ತಂದೆ ಸಿಪಿ ಯೋಗೇಶ್ವರ್ ಈಗ ನನಗಾಗಿ ಪಕ್ಷಾಂತರ ಮಾಡುವುದು ಬೇಡ. ಯಾವ ತಂದೆ ತನ್ನ ಮಗಳ ಸಿಡಿ ಇದೆ ಎಂದವರ ಬಳಿ ಹೋಗಿ ಕೈ ಕುಲುಕುತ್ತಾರೆ. ಕೆಲ ತಿಂಗಳ ಹಿಂದೆ ಮಲತಾಯಿ ಕರೆ ಮಾಡಿ, ಈ ಆಟ ನಿಲ್ಲಿಸದಿದ್ದರೆ, ನಿನ್ನ ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಸಿಪಿ ಯೋಗೇಶ್ವರ್ ಹೇಳಿದ್ದಾರೆ ಎಂದಿದ್ದರು. ಸದ್ಯ ಹೊರಬಂದಿರುವ ಸಿಡಿ ವಿಚಾರ ಯಾರ ಹೊರಬಿಟ್ಟಿದ್ದಾರೆ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ ಎಂದು ನಿಶಾ ಯೋಗೇಶ್ವರ್ ಹೇಳಿದ್ದಾರೆ.

 

 

ನಾನು ತೋಡಿಕೊಂಡ ನೋವು, ಸುದ್ದಿಗಳನ್ನು ನನ್ನ ತಂದೆಯಾಗಿ ನೀವು ಎಲ್ಲಾ ಸುದ್ದಿ ಚಾನೆಲ್ ಬ್ಲಾಕ್ ಮಾಡಿದ್ದೀರಿ. ನನ್ನನ್ನು ದಾಳವಾಗಿ ಉಪಯೋಗಿಸಿಕೊಂಡು ನೀವು ಕೆಲಸ ಮಾಡುತ್ತಿದ್ದೀರಿ. ನಿಮ್ಮ ಈ ಕುತಂತ್ರ ಎದುರಿಸಲು ನಾನು ತಯಾರಾಗಿದ್ದೇನೆ ಎಂದು ನಿಶಾ ಯೋಗೇಶ್ವರ್ ಸವಾಲು ಹಾಕಿದ್ದಾರೆ.

ಬಿಗ್ ಬಾಸ್ ಮನೆಗೆ ಯಾವತ್ತೂ ಕಾಲಿಡುವುದಿಲ್ಲವೆಂದ ನಿಶಾ ಯೋಗೇಶ್ವರ್!
 

Latest Videos
Follow Us:
Download App:
  • android
  • ios