ಏನಿದು Boysober, ಯುವ ಜನತೆಯಲ್ಲಿ ಟ್ರೆಂಡ್ ಆಗುತ್ತಿದೆ ವೈರಲ್ ರಿಲೇಷನ್‌ಷಿಪ್!
ಆಧುನಿಕ ಡೇಟಿಂಗ್‌ನಲ್ಲಿನ ಅಸಮಾಧಾನದಿಂದ ಹೊರಹೊಮ್ಮಿದ ಬಾಯ್‌ಸೋಬರ್ ಡೇಟಿಂಗ್ ಪ್ರವೃತ್ತಿ 20 ವರ್ಷದೊಳಗಿನ ಯುವಜನರಿಗೆ ಡೇಟಿಂಗ್‌ನಿಂದ ದೂರವಿರಲು ಪ್ರೋತ್ಸಾಹಿಸುತ್ತದೆ. ಇದು ಸ್ವ-ಪ್ರೀತಿ ಮತ್ತು ಭವಿಷ್ಯದ ಗುರಿಗಳ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.
ಸೋಶಿಯಲ್ ಮೀಡಿಯಾ ಮತ್ತು ಡೇಟಿಂಗ್ ಅಪ್ಲಿಕೇಶನ್‌ಗಳ ಹೆಚ್ಚಳದೊಂದಿಗೆ, ಹೆಚ್ಚಿನ ಜನರೊಂದಿಗೆ ಸಂಪರ್ಕ ಸಾಧಿಸುವುದು ಸುಲಭವಾಗಿದೆ. ಆನ್‌ಲೈನ್ ಡೇಟಿಂಗ್ ಈಗ ಆಧುನಿಕ ಪ್ರಣಯದ ಪ್ರಧಾನ ಅಂಶವಾಗಿದೆ, ಫಿಜ್ಲಿಂಗ್ ಮತ್ತು ಮಾಸ್ಟರ್‌ಡೇಟಿಂಗ್‌ನಂತಹ ಪದಗಳನ್ನು ಪರಿಚಯಿಸಿದ್ದೇ ಆನ್‌ಲೈನ್ ಡೇಟಿಂಗ್.
Gen Z ಪ್ರಸ್ತುತ ಡೇಟಿಂಗ್ ವಿಚಾರದಲ್ಲಿ ಮುಂಚೂಣಿಯಲ್ಲಿದೆ, ಹೊಸ ಪ್ರವೃತ್ತಿಗಳನ್ನು ಅನ್ವೇಷಣೆ ಮಾಡುತ್ತಿದೆ. ಇಂಥ ಒಂದು ಡೇಟಿಂಗ್ ಪ್ರವತ್ತಿ 'ಬಾಯ್ಸೋಬರ್' (boysober). ಇದರ ವಿಶೇಷ ಏನೆಂದರೆ, ಆಧುನಿಕ ಡೇಟಿಂಗ್‌ನ ಪ್ರ್ಯಾಕ್ಟೀಸ್ ಕುರಿತಾಗಿ ಇರುವ ಅಸಮಾಧಾನಕ್ಕೆ ಪ್ರತಿಯಾಗಿ ಇದು ಹೊರಹೊಮ್ಮಿದೆ. ದಿ ಇಂಡಿಪೆಂಡೆಂಟ್ ಪ್ರಕಾರ, ಅಮೆರಿಕನ್ ಕಾಮೆಡಿಯನ್ ಹೋಪ್ ವುಡಾರ್ಡ್ ಅವರು 'ಬಾಯ್ಸೋಬರ್' ಎಂಬ ಪದವನ್ನು ಮೊದಲಿಗೆ ಪರಿಚಯಿಸಿದ್ರು.
ಏನಿದು ಬಾಯ್ಸೋಬರ್
ಬೇರೆಲ್ಲ ಡೇಟಿಂಗ್‌ಗಿಂತ ಬಾಯ್ಸೋಬರ್ ಡೇಟಿಂಗ್ ಪ್ರವೃತ್ತಿ ಭಿನ್ನ. ಇದು ಭಾರತದ ಪೋಷಕರಿಗೆ ಇಷ್ಟವಾಗುವ ಡೇಟಿಂಗ್. ಯಾಕೆಂದರೆ, ಇಲ್ಲಿ ವಿಷಕಾರಿ ಡೇಟಿಂಗ್, ಸಂಕೀರ್ಣ ಸಂಬಂಧಗಳಿಂದ ಯಾವುದೇ ವ್ಯಕ್ತಿಯ ಮೊದಲ 20 ವರ್ಷವನ್ನು ಮುಕ್ತವಾಗಿ ಇರಿಸಿಕೊಳ್ಳುವುದು ಮುಖ್ಯ. ಅಂದರೆ, 20ನೇ ವರ್ಷ ಆಗುವವರೆಗೂ ನೋ ಡೇಟಿಂಗ್‌ನಲ್ಲಿದ್ದರೆ, ಅದು ಬಾಯ್ಸೋಬರ್ ಡೇಟಿಂಗ್ ಎನಿಸಿಕೊಳ್ಳುತ್ತದೆಯಂತೆ.
ವ್ಯಕ್ತಿ ಹದಿಹರೆಯಕ್ಕೆ ಬಂದ ಬಳಿಕ, ಸೆಲ್ಫ್ ಕೇರ್‌ನ ಭಾಗವಾಗಿ ಬಾಯ್ಸೋಬರ್ ಡೇಟಿಂಗ್‌ಗೆ ಒಳಗಾದರೆ ಒಳ್ಳೆಯದು ಎನ್ನುತ್ತಾರೆ ವುಡಾರ್ಡ್. ಸೆಕ್ಸ್ ಸೇರಿದಂತೆ ಯಾವುದೇ ರೀತಿಯ ಡೇಟಿಂಗ್‌ನಲ್ಲೂ ಇವರು ಇರುವಂತಿಲ್ಲ. ಹಾಗಂತ ಇದು ಮಹಿಳೆಯರಿಗೆ ಮಾತ್ರವೇ ಸೀಮಿತವಾದ ಪದವಲ್ಲ. ಇದು ಲಿಂಗ ತಟಸ್ಥ ಪದ.
ಡೇಟಿಂಗ್, ಸಿಚುವೇಷನ್‌ಷಿಪ್, ಮುರಿದು ಬಿದ್ದ ಪ್ರೇಮ ಸಂಬಂಧ, ವಿಷಕಾರಿ ಸಂಬಂಧಗಳು ಮತ್ತು ಹುಕ್-ಅಪ್‌ಗಳಿಂದ ವಿರಾಮ ತೆಗೆದುಕೊಳ್ಳಲು ಇದು ಯುವ ಸಿಂಗಲ್ಸ್ ಅನ್ನು ಪ್ರೋತ್ಸಾಹಿಸುತ್ತದೆ. ಈ ಅವಧಿಯು ವ್ಯಕ್ತಿಗಳು ತಮ್ಮ ಭವಿಷ್ಯದ ಆಸೆಗಳನ್ನು ಪ್ರತಿಬಿಂಬಿಸಲು, ಗುಣಪಡಿಸಲು ಮತ್ತು ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ.
ಬಾಯ್‌ಸೋಬರ್ ಪ್ರಣಯ ಸಂಬಂಧಗಳಲ್ಲಿ ಸ್ವ-ಪ್ರೀತಿಗೆ ಒತ್ತು ನೀಡುವ ಮೂಲಕ ಜೆನ್ ಝಡ್‌ನ ಸೆಕ್ಸ್ ಪಾಸಿಟಿವಿಟಿಯನ್ನು ಪ್ರತಿನಿಧಿಸುತ್ತದೆ. ಬಾಯ್ಸೋಬರ್ ಅಂದ್ರೆ ಬ್ರಹ್ಮಚರ್ಯ ಅಲ್ಲ ಎಂದೂ ವುಡಾರ್ಡ್ ಸ್ಪಷ್ಟಪಡಿಸಿದ್ದಾರೆ.20ನೇ ವರ್ಷದ ಬಳಿಕ ರಿಲೇಷನ್‌ಷಿಪ್‌ಗಳ ಅರ್ಥಗಳು ಯುವ ಜನಾಂಗಕ್ಕೆ ಹೆಚ್ಚು ಅರ್ಥವಾಗುತ್ತದೆ ಎಂದಿದ್ದಾರೆ.