ಲೈಂಗಿಕತೆಯ ಬಗ್ಗೆ ಪುರುಷರು ತಿಳಿದುಕೊಳ್ಳಲೇಬೇಕಾದ ವಿಷ್ಯಗಳು...
First Published Jan 11, 2021, 4:33 PM IST
ಆರೋಗ್ಯಕರ ಲೈಂಗಿಕ ಜೀವನವು ಒಬ್ಬರ ಉತ್ತಮ ದಾಂಪತ್ಯ ಜೀವನ ಮತ್ತು ಉತ್ತಮ ಆರೋಗ್ಯಕ್ಕೆ ಪ್ರಮುಖವಾಗಿದೆ. ಆದಾಗ್ಯೂ, ಇದರ ಸುತ್ತಲೂ ಹಲವಾರು ಊಹಾಪೋಹಗಳಿವೆ, ಮತ್ತು ಸಂಭೋಗದ ಸಂತೋಷವನ್ನು ಎಂದಿಗೂ ಅನುಭವಿಸದ ಪುರುಷರು ಈ ಊಹಾಪೋಹಗಳಿಗೆ ಹೆಚ್ಚು ಒಳಗಾಗುತ್ತಾರೆ. ವರ್ಜಿನ್ ಪುರುಷರು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ.

ನಿಮಿರುವಿಕೆಗಳು 3-5 ನಿಮಿಷಗಳಿಗಿಂತ ಹೆಚ್ಚು ಕಾಲ ಇರಲಾರದು: ನೀಲಿ ಚಿತ್ರಗಳಲ್ಲಿ ಹಲವು ಸಮಯದವರೆಗೆ ತಡೆರಹಿತ ಪ್ರದರ್ಶನ ನೀಡುವುದನ್ನು ನೋಡಿರಬಹುದು, ಆದರೆ ಇದು ನಿಜ ಜೀವನದಲ್ಲಿ ಆಗುವುದಿಲ್ಲ. ಅಧ್ಯಯನದ ಪ್ರಕಾರ, ಹೆಚ್ಚಿನ ಪುರುಷರು ಪೆನೇಟ್ರೇಷನ್ ನಂತರ 3 ರಿಂದ 5 ನಿಮಿಷಗಳಲ್ಲಿ ಸ್ಖಲನ ಮಾಡುತ್ತಾರೆ.

ಫೋರ್ಪ್ಲೇ ಅಷ್ಟೇ ಮುಖ್ಯ: ಹೆಚ್ಚಾಗಿ, ಸಂಭೋಗದಿಂದ ಮಾತ್ರ ಮಹಿಳೆ ಪರಾಕಾಷ್ಠೆಗೆ ತಲುಪುವಂತೆ ಮಾಡಲು ಸಾಕಾಗುವುದಿಲ್ಲ. ಉತ್ತಮ ಪ್ರೇಮಿಯಾಗಲು ಬಯಸಿದರೆ, ಎಲ್ಲಾ ಪ್ರಮುಖ ಅಂಶಗಳನ್ನು ತಿಳಿದಿರಬೇಕು - ಮತ್ತು ಅದು ಉತ್ತಮ ಚುಂಬನ, ಸ್ಪರ್ಶ ಎಲ್ಲವೂ ಆಗಿರುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?