MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಯಾರೋ ಮೇಲೆ ಲೈಂಗಿಕ ಆಕರ್ಷಣೆ ಇದ್ದರೂ ಅದಕ್ಕೊಂದು ಡೇಟಿಂಗ್ ವ್ಯಾಖ್ಯಾನವಿದೆ!

ಯಾರೋ ಮೇಲೆ ಲೈಂಗಿಕ ಆಕರ್ಷಣೆ ಇದ್ದರೂ ಅದಕ್ಕೊಂದು ಡೇಟಿಂಗ್ ವ್ಯಾಖ್ಯಾನವಿದೆ!

ಡೇಟಿಂಗ್ ವಿಷಯದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜನರೇಶನ್ ಬದಲಾದಂತೆ ಕ್ರಮೇಣ, ಸಂಬಂಧದ ಬಗ್ಗೆ ಹೊಸ ಪರಿಭಾಷೆಗಳು ಸಹ ಹುಟ್ಟಿಕೊಳ್ಳುತ್ತಿವೆ.. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಡೇಟಿಂಗ್ ಡಿಕ್ಷನರಿಯನ್ನು ಸಹ ನೀವು ಅಪ್ ಡೇಟ್ ಮಾಡಿಕೊಳ್ಳೋದು ಮುಖ್ಯ.. 

2 Min read
Suvarna News
Published : Apr 10 2023, 04:35 PM IST
Share this Photo Gallery
  • FB
  • TW
  • Linkdin
  • Whatsapp
111

ಡೇಟಿಂಗ್ ಪರಿಭಾಷೆಯು ದಿನದಿಂದ ದಿನಕ್ಕೆ ಬದಲಾಗುತ್ತಲೇ ಇರುತ್ತದೆ. ಹಿಂದೆ ಪ್ರೀತಿ, ವಾತ್ಸಲ್ಯ, ಪ್ರೇಮ, ಸಾಮರಸ್ಯ ಇದ್ದದ್ದು, ಈಗ ಪ್ರೀತಿ, ಕಾಮ ಮತ್ತು ಭಾವೋದ್ರೇಕವು ಅದರ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಸಮಯದಲ್ಲಿ ಪ್ರೇಮಿಗಳು ಹೊಸ ಹೊಸ ಪದಗಳನ್ನು ಬಳಕೆ ಮಾಡ್ತಾ ಇದ್ದಾರೆ. ಆದರೆ ಅನೇಕ ಜನರಿಗೆ ಇನ್ನೂ ಈ ಪದಗಳ ಅರ್ಥ ತಿಳಿದಿಲ್ಲ. ನೀವು ಡೇಟಿಂಗ್ ವಿಷ್ಯದಲ್ಲಿ ಅಪ್ ಡೇಟ್ ಆಗಿರಬೇಕು ಅನ್ನೋದಾದ್ರೆ ಈ ಪದಗಳನ್ನು ತಿಳಿದುಕೊಂಡಿರಿ. 

211
ऑनलाइन डेटिंग

ऑनलाइन डेटिंग

ಟೆಕ್ಸ್ಟೇಷನ್‌ಶಿಪ್ (Textationship)
ಹೆಸರೇ ಸೂಚಿಸುವಂತೆ, ಇದು ಒಂದು ಸಂಬಂಧವಾಗಿದ್ದು, ಇದರಲ್ಲಿ ಸಂಬಂಧವನ್ನು ಟೆಕ್ಸ್ಟ್ ಮೂಲಕ ಮಾತ್ರ ಇಟ್ಟುಕೊಳ್ಳಲಾಗುತ್ತೆ. ಕರೆ ಮಾಡುವುದಿಲ್ಲ, ಡೇಟ್ ಮಾಡುವುದಿಲ್ಲ, ಅಥವಾ ಬೇರೆ ಯಾವುದೇ ರೀತಿಯ ಸಂಬಂಧ ಇರೋದಿಲ್ಲ. ಈ ಸಂದರ್ಭದಲ್ಲಿ, ಇಬ್ಬರೂ ಸಂಗಾತಿಗಳು ಟೆಕ್ಸ್ಟ್ ಮೆಸೇಜ್ ಮಾತ್ರ ಕಳುಹಿಸುತ್ತಾರೆ. 

311

ಸಿಚುವೇಶನ್ ಶಿಪ್ (Situationship)
ಇಬ್ಬರು ವ್ಯಕ್ತಿಗಳು ಸ್ನೇಹಿತರಿಗಿಂತ ಸ್ವಲ್ಪ ಹೆಚ್ಚು ಮತ್ತು ದಂಪತಿಗಳಿಗಿಂತ ಸ್ವಲ್ಪ ಕಡಿಮೆ ಇರುವ ಪರಿಸ್ಥಿತಿಯನ್ನು ಸಿಚುವೇಶನ್ಶಿಪ್ ಎನ್ನುತ್ತಾರೆ. ಈ ರೀತಿಯ ಸಂಬಂಧದಲ್ಲಿ, ಇನ್ನೊಬ್ಬ ವ್ಯಕ್ತಿಯು ಪ್ರತ್ಯೇಕವಾಗಿರೋದಿಲ್ಲ. ಅಲ್ಲದೆ, ಯಾವುದೇ ರಿಲೇಶನ್ ಶಿಪ್ ನಲ್ಲಿರೋ ಕಮಿಟ್‌ಮೆಂಟ್ ಕೂಡ ಇರೋದಿಲ್ಲ. ಕೆಲವು ಸಂದರ್ಭಗಳಲ್ಲಿ ರಿಲೇಶನ್ ಶಿಪ್ ಸೀರಿಯಸ್ ಕೂಡ ಆಗಿರಬಹುದು.
 

411

ಆಫರ್ಡೇಟಿಂಗ್(Affordating)
ಇದನ್ನು ಬಜೆಟ್ ಸ್ನೇಹಿ ಡೇಟಿಂಗ್ ವಿಧಾನವೆಂದು ಎನ್ನುತ್ತಾರೆ. ಕಡಿಮೆ ವೆಚ್ಚದ ಚಟುವಟಿಕೆಗಳನ್ನು ಇಲ್ಲಿ ಆಯ್ಕೆ ಮಾಡಲಾಗುತ್ತದೆ ಇದರಿಂದ ಜನರು ತಮ್ಮ ಡೇಟಿಂಗ್ ವೆಚ್ಚವನ್ನು ಕಡಿಮೆ ಮಾಡಬಹುದು.
 

511

ರಿಜ್ (Rizz)
ರಿಜ್ ಎಂಬುದು ಮತ್ತೊಂದು ಟ್ರೆಂಡಿಂಗ್ ಪದವಾಗಿದ್ದು, ಅದು ನಿಜವಾಗಿಯೂ ಮೋಹಕ ಅಥವಾ ಮೋಡಿ ಮಾಡುವುದು ಎಂದರ್ಥ. ನೀವು ರಿಜ್ ಹೊಂದಿದ್ದೀರಿ ಎಂದರೆ, ನೀವು ಲೈಂಗಿಕ ಆಕರ್ಷಣೆಯನ್ನು ಹೊಂದಿದ್ದೀರಿ ಎಂದರ್ಥ. ಇದನ್ನು 'ಲೈಂಗಿಕ ಆಕರ್ಷಣೆ'ಗೆ ಆಧುನಿಕ ಸಮಾನಾರ್ಥಕ ಎಂದು ಕರೆಯಲಾಗುತ್ತದೆ.

611

ಕ್ಲೋವಿಂಗ್ (Clowning)  
ಇದು ಹೆಚ್ಚಾಗಿ ಕೋಡಂಗಿ ಅಥವಾ ಜೋಕರ್ ಎಮೋಜಿಯೊಂದಿಗೆ ಬಳಸುವ ಪದ. ಇದರರ್ಥ ನಿಮ್ಮನ್ನು ಜೋಕರ್‌ನಂತೆ ತೋರಿಸುವುದು ಅಥವಾ ನಿಮ್ಮನ್ನು ಗೇಲಿ ಮಾಡುವುದು. ನೀವು ಈ ಪದವನ್ನು ವಾಕ್ಯಗಳಲ್ಲಿ ಬಳಸುವ ಅಗತ್ಯವಿಲ್ಲ. ಅನೇಕ ಸಂದರ್ಭಗಳಲ್ಲಿ, emoji ಸಾಕಾಗುತ್ತದೆ.

711

ಸಾಲ್ಟಿ (Salty)
ಇಲ್ಲಿ ಸಾಲ್ಟ್ ಬಗ್ಗೆ ಮಾತನಾಡಲಾಗುತ್ತಿಲ್ಲ. ಇಲ್ಲಿ ಟೋನ್ ಬಗ್ಗೆ ಮಾತನಾಡಲಾಗುತ್ತಿದೆ. ಸಂಗಾತಿ ಮಾತನಾಡುವ ವಿಷಯದ ಬಗ್ಗೆ ಹೇಳಲಾಗುತ್ತೆ. ಆದಾಗ್ಯೂ, ವಾಕ್ಯಕ್ಕೆ ಅನುಗುಣವಾಗಿ ಅದರ ಅರ್ಥ ಬದಲಾಗಬಹುದು. ಯಾರನ್ನಾದರೂ ರೋಸ್ತ್ ಮಾಡಲು ಸಹ ಇದನ್ನು ಬಳಸಬಹುದು.  

811

ಗ್ರೀನ್ ಡೇಟಿಂಗ್ (Green Dating)
ಗ್ರೀನ್ ಡೇಟಿಂಗ್ ಯಾವಾಗಲೂ ಪರಿಸರಕ್ಕೆ ಅನುಗುಣವಾಗಿ ಡೇಟಿಂಗ್ ಪ್ಲ್ಯಾನ್ ಮಾಡುವುದು. ಈ ಜನರು ಪರಿಸರದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ ಮತ್ತು ಯಾವಾಗಲೂ ಸುಸ್ಥಿರತೆಯ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರ ಬಟ್ಟೆಗಳ ಆಯ್ಕೆಯಿಂದ ಹಿಡಿದು ಆಹಾರ ಭಕ್ಷ್ಯಗಳವರೆಗೆ, ಎಲ್ಲವೂ ಪರಿಸರಕ್ಕೆ ಅನುಗುಣವಾಗಿರುತ್ತದೆ.  

911

ಲವ್ ಹೇಜ್ (Love Haze)
ನೀವು ಯಾರನ್ನಾದರೂ ತುಂಬಾ ಪ್ರೀತಿಸಿದಾಗ, ಅವರ ನ್ಯೂನತೆಗಳನ್ನು ನೀವು ನೋಡದಿದ್ದಾಗ, ಪ್ರೀತಿಯ ಲವ್ ಹೇಜ್ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಈ ಸ್ಥಿತಿಯು ಹಳೆಯದಾಗಿದ್ದರೂ, ಅದನ್ನು ಈಗಷ್ಟೇ ಈ ರೀತಿ ಹೆಸರಿಸಲಾಗಿದೆ.  
 

1011

ಡೇಟರ್ ವ್ಯೂ (Daterview)
ಡೇಟಿಂಗ್ ಮಾಡುವಾಗ ಯಾರಾದರೂ ನಿಮಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದರೆ ಮತ್ತು ನಂತರ ನೀವು ಉದ್ಯೋಗ ಸಂದರ್ಶನದಲ್ಲಿದ್ದೀರಿ ಎಂದು ನಿಮಗೆ ಅನಿಸಲು ಪ್ರಾರಂಭಿಸುತ್ತದೆ. ನಂತರ ನಿಮ್ಮ ಡೇಟಿಂಗ್ ಡೇಟರ್ ವ್ಯೂ ಆಗುತ್ತದೆ. ಈಗ ಆರಂಭಿಕ ಹಂತಗಳಲ್ಲಿ ಯಾರೂ ಬಹಳಷ್ಟು ಪ್ರಶ್ನೆಗಳನ್ನು ಇಷ್ಟಪಡುವುದಿಲ್ಲ. ಆದ್ದರಿಂದ, ಈ ಪದವನ್ನು ನಕಾರಾತ್ಮಕ ಅರ್ಥದಲ್ಲಿ ತೆಗೆದುಕೊಳ್ಳಲಾಗಿದೆ.  

1111

ಟಾಕಿಂಗ್ ಫೇಸ್ (Talking Phase) 
ಹೌದು, ಈ ಪದವು ತುಂಬಾ ವಿಚಿತ್ರವಾಗಿದೆ, ನೀವು ಪರಸ್ಪರರ ಬಗ್ಗೆ ತಿಳಿಯಲು ಹೆಚ್ಚು ಉತ್ಸುಕರಾದಾಗ ಸಂಬಂಧದಲ್ಲಿ ತಾಜಾತನ ಬರುತ್ತದೆ. ನಿಮ್ಮ ಸಂಗಾತಿಯ ಬಗ್ಗೆ ಪ್ರತಿಯೊಂದು ಸಣ್ಣ ವಿಷಯವನ್ನು ಅವರ ಮಾತುಗಳ ಮೂಲಕ ನೀವು ತಿಳಿದುಕೊಳ್ಳುತ್ತೀರಿ.  ಇದನ್ನು ಟಾಕಿಂಗ್ ಫೇಸ್ ಎನ್ನಲಾಗುತ್ತೆ.

About the Author

SN
Suvarna News
ಪ್ರೀತಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved