ಈ ಕಿಸ್ಸಲೀ ಏನೋ ಇದೆ... ಏನಿದೆ ಅನ್ನೋದನ್ನು ನೀವೇ ತಿಳಿದುಕೊಳ್ಳಿ...
First Published Jan 4, 2021, 7:42 PM IST
ಸ್ನೇಹ, ಪ್ರೀತಿ, ಸಂಬಂಧ ಏನೇ ಇರಬಹುದು, ತಾಯಿ ಮಗುವಿನ ಸಂಬಂಧವೇ ಇರಬಹುದು ಎಲ್ಲಾ ಸಂಬಂಧದಲ್ಲೂ ಮುತ್ತು ಅಥವಾ ಕಿಸ್ ಸಂಬಂಧ ಬೆಸೆಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದರಿಂದ ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಜೊತೆ ಜೊತೆಗೆ ಇಬ್ಬರ ಬಾಂದವ್ಯ ಕೂಡ ವೃದ್ಧಿಯಾಗುತ್ತದೆ.

ಹೆಚ್ಚಾಗಿ ಪ್ರೇಮಿಗಳು ಪರಸ್ಪರ ಕಿಸ್ ಮಾಡುವ ಮೂಲಕ ಪ್ರೀತಿ ಹಂಚುತ್ತಾರೆ. ಕಿಸ್ ಮಾಡುವುದು ಎಂದರೆ ಸಂಗಾತಿಗೆ ಅವರ ಬಗ್ಗೆ ಏನು ಫೀಲ್ ಮಾಡುತ್ತೀರಿ ಅನ್ನೋದನ್ನು ಸುಲಭವಾಗಿ ಹೇಳುವ ವಿಧಾನ. ಆದುದರಿಂದ ಸಂಗಾತಿಗೆ ಕಿಸ್ ಮಾಡಿ ಅವರಿಗೆ ಮನಸ್ಸಿನ ಭಾವನೆಯನ್ನು ತಿಳಿ ಹೇಳಲು ಕಿಸ್ ಮಾಡಬಹುದು. ಈ ಕಿಸ್ ಗೆ ದೈಹಿಕ ಮತ್ತು ಮಾನಸಿಕವಾಗಿ ಮನುಷ್ಯರನ್ನು ಉತ್ತರಾಮವಾಗಿಡುತ್ತದೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ...

ಸಂತೋಷಕರ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ.
ಚುಂಬನವು ಮೆದುಳಿಗೆ ರಾಸಾಯನಿಕಗಳನ್ನು ಬಿಡುಗಡೆ ಮಾಡಲು ಪ್ರಚೋದಿಸುತ್ತದೆ, ಲವ್ ಹಾರ್ಮೋನ್ ಆಕ್ಟೀವ್ ಆಗುತ್ತವೆ. ವೈವಾಹಿಕ ಜೀವನದಲ್ಲಿ ಮಿಲನಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಕಿಸ್ ಮಾಡುವುದರಿಂದ ಇಬ್ಬರ ನಡುವೆ ಸೆಕ್ಸ್ ಇಚ್ಛೆ ಜಾಗೃತವಾಗುತ್ತದೆ.
Today's Poll
ಹೊಸ ಆನ್ಲೈನ್ ಆಟಗಳನ್ನು ಹೇಗೆ ಹುಡುಕಿ ಕೊಳ್ಳುತ್ತೀರಿ?