MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಬೊಜ್ಜು, ಸ್ಮೋಕಿಂಗಿನಷ್ಟೇ ಅಪಾಯಕಾರಿ ಒಂಟಿತನ...

ಬೊಜ್ಜು, ಸ್ಮೋಕಿಂಗಿನಷ್ಟೇ ಅಪಾಯಕಾರಿ ಒಂಟಿತನ...

ಒಂಟಿತನ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಹೊಸ ಸಂಶೋಧನಾ ಅಧ್ಯಯನ ತೋರಿಸಿದೆ. ಇದು ವಯಸ್ಸನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಒಂಟಿತನವು ಬೊಜ್ಜು ಅಥವಾ ಧೂಮಪಾನದಷ್ಟೇ ಆರೋಗ್ಯಕ್ಕೆ ಅಪಾಯಕಾ. ಈ ಅಧ್ಯಯನವನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರು ನಡೆಸಿದರು. ಈ ವರದಿಯು ಏಜಿಂಗ್ ಆ್ಯಂಡ್ ಮೆಂಟಲ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

2 Min read
Suvarna News | Asianet News
Published : Sep 02 2021, 05:23 PM IST
Share this Photo Gallery
  • FB
  • TW
  • Linkdin
  • Whatsapp
16

ಸ್ನೇಹಿತರನ್ನು ಸಂಪಾದಿಸುವಲ್ಲಿ ತೊಂದರೆಗಳು
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್‌ನ ಮನೋವೈದ್ಯ ಶಾಸ್ತ್ರ ವಿಭಾಗದ ಸಂಶೋಧನಾ ಫೆಲೋ ಅಲೆಕ್ಸಾಂಡ್ರಾ ಪಾರ್ಡೀಸ್ ಅವರು ಸಂಶೋಧನೆಯೊಂದರಲ್ಲಿ ತಿಳಿಸಿರುವಂತೆ ಕೆಲವರ ಒಂಟಿತನಕ್ಕೆ ತಮ್ಮ ಕುಟುಂಬ ಸದಸ್ಯರು, ಸಂಗಾತಿಗಳು ಮತ್ತು ಸ್ನೇಹಿತರ ಸಾವು ಕಾರಣವಾಗುತ್ತದೆ. ಮತ್ತೊಂದೆಡೆ, ಕೆಲವರು ವಯಸ್ಸಾದ ನಂತರ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಕಷ್ಟ.

26

ರೋಗಗಳ ಅಪಾಯ
ತಮ್ಮ ವೃದ್ಧಾಪ್ಯದಲ್ಲಿ ಹೆಚ್ಚು ಒಂಟಿತನವನ್ನು ಅನುಭವಿಸುವ ಜನರು ರೋಗಗಳನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯ ಹೊಂದಿದ್ದಾರೆ ಎಂದು ಅಧ್ಯಯನ ಕಂಡು ಕೊಂಡಿದೆ. ಅವರು ಜನರಿಂದ ಪ್ರತ್ಯೇಕವಾಗಿ ಏಕಾಂಗಿಯಾಗಿ ವಾಸಿಸಲು ಬಯಸುತ್ತಾರೆ. ಇದರ ಹಿಂದೆ ಅನೇಕ ಕುಟುಂಬ ಮತ್ತು ಸಾಮಾಜಿಕ ಕಾರಣಗಳಿರಬಹುದು.

36

ಯುವಕರು ಸಹ ಈ ಸಮಸ್ಯೆಯಿಂದ ಬಳಲುತ್ತಾರೆ
ಹೆಚ್ಚು ವಯಸ್ಸಾದ ಜನರು ಮಾತ್ರ ಒಂಟಿತನದ ಸಮಸ್ಯೆಯಿಂದ ಬಳಲುವುದಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಒಂಟಿತನದ ಸಮಸ್ಯೆಯಿಂದ ಬಳಲುತ್ತಿರುವ ಯುವಕರ ಸಂಖ್ಯೆಯೂ ಕಡಿಮೆಯೇನಲ್ಲ. ಸಂಬಂಧವನ್ನು ಬೆಳೆಸಲು ಅವರಿಗೆ ಕಷ್ಟ. ಇದರಿಂದ ಅವರ ಆತ್ಮ ವಿಶ್ವಾಸವೂ ಕಡಿಮೆಯಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ. 
 

46

ಉತ್ಸಾಹದ ಕೊರತೆ
ಏಕಾಂಗಿಯಾಗಿ ಇರುವವರಲ್ಲಿ ಜೀವನ ಉತ್ಸಾಹವೇ ಇರುವುದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಮತ್ತೊಂದೆಡೆ, ಒಬ್ಬಂಟಿಯಾಗಿರುವ ಅನೇಕ ಜನರು ಯಾರೊಂದಿಗೂ ಸಂಪರ್ಕ ಹೊಂದಲು ಬಯಸುವುದಿಲ್ಲ. ಅವರಿಗೆ ಉತ್ಸಾಹ ಮತ್ತು ಭರವಸೆಯ ಕೊರತೆ ಇರುತ್ತದೆ. ಅವರು ತಮ್ಮ ಮೇಲೆಯೇ ಯಾವುದೇ ನಿಯಂತ್ರಣವನ್ನು ಹೊಂದಿರುವುದಿಲ್ಲ.

56

ಎಷ್ಟು ಜನರ ಮೇಲೆ ಅಧ್ಯಯನ ಮಾಡಲಾಯಿತು
ಸಂಶೋಧಕರು ಒಂಟಿತನದ ಭಾವನೆಯನ್ನು ಕಡಿಮೆ ಮಾಡುವ ಬೌದ್ಧಿಕತೆ, ಸಹಾನುಭೂತಿ ಮತ್ತು ಇತರ ವಿಷಯಗಳನ್ನು ಕಂಡು ಹಿಡಿಯಲು ಪ್ರಯತ್ನಿಸಿದರು. ಈ ಅಧ್ಯಯನಕ್ಕಾಗಿ, ಸಂಶೋಧಕರು 67-92 ವರ್ಷ ವಯಸ್ಸಿನ 30 ಜನರನ್ನು ಸಂದರ್ಶಿಸಿದರು ಮತ್ತು ಅವರ ದೈಹಿಕ, ಮಾನಸಿಕ ಮತ್ತು ಅರಿವಿನ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡಿದರು. 

66

ಕುಟುಂಬದ ಬೆಂಬಲ ಅತ್ಯಗತ್ಯ
ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್ ಮನೋವೈದ್ಯಶಾಸ್ತ್ರ ಮತ್ತು ನರವಿಜ್ಞಾನದ ಪ್ರಸಿದ್ಧ ಪ್ರೊಫೆಸರ್ ದಿಲೀಪ್ ವಿ. ಗೆಸ್ಟೆ, ಸಂಶೋಧನಾ ಅಧ್ಯಯನದ ಪ್ರಮುಖ ಲೇಖಕರು ಇದರ ಬಗ್ಗೆ ವಿವರಣೆ ನೀಡಿ, ನಾವು ಒಂಟಿತನದಲ್ಲಿ ವೃದ್ಧರ ಅನುಭವಗಳು ಮತ್ತು ಆಲೋಚನೆಗಳನ್ನು ಅಧ್ಯಯನ ಮಾಡಿದ್ದೇವೆ ಮತ್ತು ಅವರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ ಎಂದಿದ್ದಾರೆ. ವಯಸ್ಸಾದವರು ಕುಟುಂಬದೊಂದಿಗೆ ಇರಬೇಕು. ಇಲ್ಲವಾದರೆ ಒಂಟಿತನ ಅವರ ಚೈತನ್ಯವನ್ನು ನಾಶಮಾಡಲು ಪ್ರಾರಂಭಿಸುತ್ತದೆ ಎಂದು ಅದು ತೋರಿಸಿತು. 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved