ಟೀನೇಜ್ ಮಗಳೊಂದಿಗೆ ಅಪ್ಪ ಹೇಗೆ ಬಿಹೇವ್ ಮಾಡಿದ್ರೆ ಚಂದ?
ಹದಿಹರೆಯದ ಮಗಳೊಂದಿಗೆ ತಂದೆ ಹೇಗೆ ವ್ಯವಹರಿಸಬೇಕು ಎಂಬುದರ ಬಗ್ಗೆ ಈ ಲೇಖನವು ಸಲಹೆಗಳನ್ನು ನೀಡುತ್ತದೆ. ಲೈಂಗಿಕತೆ, ದೈಹಿಕ ಬದಲಾವಣೆಗಳು ಮತ್ತು ಸಂಬಂಧಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ಮುಖ್ಯ. ಕೆಟ್ಟ ಸ್ನೇಹಿತರಿಂದ ದೂರವಿರಲು ಮತ್ತು ಆತ್ಮವಿಶ್ವಾಸವನ್ನು ಬೆಳೆಸಲು ಪ್ರೋತ್ಸಾಹಿಸಿ.

ಹದಿ ವಯಸ್ಸಿಗೆ ಮಗಳು ಕಾಲಿಟ್ಟಿದ್ದಾಳೆ. ತಕ್ಷಣವೇ ಅಪ್ಪನಾದವನು ಏನೋ ಡಿಸ್ಟೆನ್ಸ್ ಮೆಂಟೇನ್ ಮಾಡಲು ಶುರು ಮಾಡುತ್ತಾನೆ. ತಲೆ ಮೇಲೆ ಕೂರಿಸಿಕೊಂಡು ಮೆರೆಯುತ್ತಿದ್ದ ಅಪ್ಪನ ಈ ನಡವಳಿಕೆಗೆ ಮಗಳು ಕಂಗಾಲು ಆಗುವ ಚಾನ್ಸ್ ಇದೆ. ಮನಸ್ಸೊಳಗೆ ಮಣ್ಣಿಗೆ ತಿಂತಾಳೆ. ಅಷ್ಟಕ್ಕೂ ಈ ಟೈಮಲ್ಲಿ ಅಪ್ಪ ಮಗಳೊಂದಿಗೆ ಹೇಗೆ ನಡೆದುಕೊಂಡರೆ ಚಂದ?
ಮಗಳು ಋತುಮತಿಯಾಗುತ್ತಿದ್ದಾಳೆಂದ ಕೂಡಲೇ ಅಪ್ಪನಿಗೆ ಎಲ್ಲಿಲ್ಲದ ಟೆನ್ಷನ್ ಶುರುವಾಗುತ್ತೆ. ಹೆಗಲು ಮೇಲೆ ಕೂರಿಸಿಕೊಂಡು, ಆನೆ ಅಂಬಾರಿ ಮಾಡಿಸುತ್ತಿದ್ದ ಮಗಳು ದೊಡ್ಡವಳಾಗಿದ್ದಾಳೆಂದೆ ಅಪ್ಪನಿಗೋ ಅದೆಂಥದ್ದೋ ಹಮ್ಮು ಬಿಮ್ಮು. ಅಂತರ ಕಾಯ್ದುಕೊಳ್ಳಲು ಶುರು ಮಾಡುತ್ತಾನೆ. ಮುದ್ದಿನ ಮಗಳೊಂದಿಗೆ ಅಂತರ ಬೆಳೆಸಲು ಶುರು ಮಾಡುತ್ತಾನೆ. ಏನೋ ಹೇಳಲು ಹೊರಡುತ್ತಾನೆ. ಆದರದು ನಾಲಿಗೆ ತುದಿ ಬರುವುದೇ ಇಲ್ಲ.
ಮಗಳ ಮೇಲೆ ಸುಮ್ಮನೆ ರೇಗುತ್ತಾನೆ. ಅನಗತ್ಯ ಸೀರಿಯಸ್ ಆಗಿ ಬಿಹೇವ್ ಮಾಡುತ್ತಾನೆ. ಅದರ ಬದಲು ಮುದ್ದು ಮರಿಗೆ ಹುಡುಗರ ಬಗ್ಗೆ, ಅವರ ಸ್ವಭಾವ, ಲೈಂಗಿಕತೆ ಬಗ್ಗೆ ಅಪ್ಪನೇ ಅರಿವು ಮೂಡಿಸುವ ಬಗ್ಗೆ ಯಾಕೆ ಯೋಚಿಸೋಲ್ಲ? ಈ ಕಾಲದಲ್ಲಿ ಇಂಟರ್ನೆಟ್ ಮೂಲಕ ಬೇಕಾದ್ದು, ಬೇಡವಾದದ್ದರ ಬಗ್ಗೆ ಅರಿವು ಮೂಡಿಸಿಕೊಳ್ಳುವ ಮಕ್ಕಳು ಲೈಂಗಿಕ ಶಿಕ್ಷಣವನ್ನು ಅಪ್ಪನ ಮೂಲಕವೇ ಕಲಿತರೆ ಒಳ್ಳೆಯದು ಅಲ್ವಾ? ಏನೇನೋ ಮಾಡಲು ಹೋಗಿ ಯಡವಟ್ಟು ಮಾಡಿಕೊಳ್ಳುವುದಾದರೂ ತಪ್ಪುತ್ತೆ. ಹದಿಹರೆಯದ ಮಗಳ ತಂದೆ ಆಗಿದ್ದರೆ ಮುಕ್ತ ಮನಸ್ಸಿಂದ ಮಗಳಿಗೆ ಹೇಳಬೇಕಾದ್ದನ್ನು ಹೇಳಿ ಕೊಟ್ಟರೊಳಿತು.
ಲೈಂಗಿಕತೆ ಸರಿಯಾದ ರೀತಿಯಲ್ಲಿರಲಿ: ಬಹುತೇಕ ಅಪ್ಪಂದಿರರೇ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳ ಬಗ್ಗೆ ನೆಗಟಿವ್ ಒಪಿನಿಯರ್ ಬರೋ ಹಾಗೆ ಏನೇನೋ ಹೇಳುತ್ತಾರೆ. ಹುಡುಗರು ಕೆಟ್ಟವರು, ಅವರೊಂದಿಗೆ ಹೋಗಬೇಡ, ಅವರ ಜೊತೆಗಿನ ಒಡನಾಟ ಕೆಟ್ಟದ್ದು ಅನ್ನುವಂತೆಯೇ ಪಾಠ ಮಾಡುತ್ತಾರೆ. ಅಪ್ಪನೇ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಹೀರೋ. ಇಂಥ ಮಾತುಗಳು ಹರೆಯದ ಮಗಳಿಗೆ (Teenage Daughter) ಪುರುಷರ ಬಗ್ಗೆ ಪೂರ್ವಾಗ್ರಹ (Prejudiced) ಮೂಡಿಸುತ್ತದೆ. ಹುಡುಗರ ಬಗ್ಗೆ ಮಗಳಲ್ಲಿ ಭಯ ಉಂಟಾಗಬಹುದು. ಆಕೆಯ ಸ್ನೇಹಿತರು, ಭವಿಷ್ಯದಲ್ಲಿ ಕಟ್ಟಿಕೊಂಡವನನ್ನೇ ನಂಬಲು ಒದ್ದಾಡುವಂತಾಗುತ್ತದೆ.
ಹುಡುಗರ ಬಗ್ಗೆ ಮಗಳಿಗೆ ಯಾವ ಅಭಿಪ್ರಾಯ ಇದೆ ಎಂಬುದನ್ನು ಕನ್ಫರ್ಮ್ ಮಾಡಿಕೊಳ್ಳಿ. ನಿಮ್ಮ ಬಗ್ಗೆ ಮಾತನಾಡಿ, ಹೇಳಿಕೊಳ್ಳುವಂಥ ವಿಚಾರಗಳನ್ನು ಹಂಚಿಕೊಳ್ಳಿ. ಹುಡುಗರು ಯಾವುದನ್ನು ಬೇಗ ಗ್ರಹಿಸುತ್ತಾರೆ, ಯಾವುದು ಇಷ್ಟಪಡುವುದಿಲ್ಲ ಹಾಗೂ ಯಾವುದನ್ನು ಇಷ್ಟಪಡುತ್ತಾರ ಎಂಬ ಸ್ಪಷ್ಟ ಅರಿವು ಮೂಡಿಸಿ. ಮುಕ್ತವಾಗಿ ಮಾತನಾಡಿ. ಲಿಂಗಭೇದ ಮಾಡಬಾರದು.
ಮಾನಸಿಕ, ದೈಹಿಕ ಬದಲಾವಣೆ ಹೇಗಾಗುತ್ತೆ?: ಲೈಂಗಿಕ ಆಕರ್ಷಣೆ ಹದಿಹರೆಯಲ್ಲಿ ಸಹಜ. ಮಗಳು ಹುಡುಗರೆಡೆಗೆ ಆಕರ್ಷಿತರಾಗಬಹುದು. ಪ್ರೀತಿಯಲ್ಲಿ ಬೀಳಬಹುದು. ಬೇರೆಯವರ ಇಷ್ಟ, ಕಷ್ಟಗಳು ಗಣನೆಗೆ ಬರುವುದಿಲ್ಲ. ಹದಿಹರೆಯದವರಲ್ಲಿ ಆಗುವ ಹಾರ್ಮೋನ್ ಬದಲಾವಣೆಯನ್ನು ಯಾರೂ ತಡೆಯಲು ಆಗುವುದಿಲ್ಲ. ಈ ಬಗ್ಗೆ ಮಗಳಿಗೆ ಗೊತ್ತಾಗಲಿ. ಯಾವಾಗ ಸಂಗಾತಿಯ ಆಯ್ಕೆ ಮಾಡಬೇಕು, ಅದು ಹೇಗಿರಬೇಕು. ಅದಕ್ಕೂ ಮುನ್ನ ಮನಸ್ಸನ್ನು ಹೇಗೆ ನಿಯಂತ್ರಿಸಬೇಕು ಅನ್ನೋದನ್ನು ತಿಳಿ ಹೇಳಿ. ಅಷ್ಟೇ ಅಲ್ಲ Opposite Sex ಜೊತೆ ಮಾತನಾಡುವಾಗ Body Language ಹೇಗಿರಬೇಕೆಂಬುದನ್ನು ಅರ್ಥವಾಗುವಂತೆ ಹೇಳಿ ಕೊಡಿ.
ಕೆಟ್ಟ ಸ್ನೇಹಿತರಿಂದ ಇರಲಿ ದೂರ: ಹದಿಹರೆಯದಲ್ಲಿ ಲೈಂಗಿಕ ಆಕಾಂಕ್ಷೆ ಹೆಚ್ಚು. ಇದರಿಂದ ಏನೇನೋ ಆಗಬಹುದು. ಹೀಗಾಗಿ ಸಾಧ್ಯವಾದಷ್ಟು ಕೆಟ್ಟ ಸ್ನೇಹಿತರಿಂದ ಮಗಳನ್ನು ದೂರವಿಡಿ. ಕೆಲವು ಫ್ರೆಂಡ್ಸ್ ಹಾಗೂ ಬಾಯ್ ಫ್ರೆಂಡ್ ತುಂಬಾ ಒಳ್ಳೆಯವರಾಗಿರಬಹುದು. ಕೆಲವರು ದೈಹಿಕ ಆಕರ್ಷಣೆಗೆ ಒಳಗಾಗಿ ದುರ್ಲಾಭ ಪಡೆಯಲು ಬಯಸುಬಹುದು. ಇಂತಹ ಸ್ನೇಹಿತರು ಅಥವಾ ಹುಡುಗರಿಂದ ದೂರ ಇರುವುದು ಹೇಗೆ ಎಂದು ತಿಳಿಸಲು ನೀವು ಮಗಳ ಜತೆಗೆ ಮಾತನಾಡಬೇಕು. ಆಕೆ ಬೇರೆಯವರ ಪ್ರೀತಿ (Love) ಅಥವಾ ಭೀತಿಯಿಂದ ದೇಹವನ್ನು ಅರ್ಪಿಸುತ್ತಿದ್ದರೆ ತಪ್ಪೆಂದು ತಿಳಿ ಹೇಳಿ. ಭೀತಿಯಿಂದ ಮಾಡುವ ಕ್ರಿಯೆಗಿಂತಲೂ ಏಕಾಂಗಿತನ (Loneliness) ಒಳ್ಳೆಯದೆಂದು ಆಕೆಗೆ ಗೊತ್ತಾಗಲಿ.
ಇದರ ಜೊತೆಗೆ ಅವಳಿಗೆ ನೀವು ಮಾರ್ಗದರ್ಶಕರಾಗಬೇಕೋ ಹೊರತು ಆಕೆಯ ಕ್ರಮಕ್ಕೆ ತೀರ್ಪು ನೀಡಲು ಹೋಗಬೇಡಿ. ತನ್ನ ಒಳಮನಸ್ಸು ಇಲ್ಲವೆಂದು ಹೇಳಿದರೆ, ಆಗ ಅದನ್ನು ಪಾಲಿಸಬೇಕು ಎಂದು ಹೇಳಿ. ಪುರುಷರ ವಿಚಾರದಲ್ಲಿ ಸಂಬಂಧ, ಲೈಂಗಿಕತೆ ಬಗ್ಗೆ ತನ್ನ ನಿರ್ಧಾರಗಳನ್ನು ಬಲಪಡಿಸಲು ಹೇಳಿ. ದೈಹಿಕ ಮತ್ತು ಮಾನಸಿಕವಾಗಿ ಬಲಿಷ್ಠವಾಗುವ ವಯಸ್ಸು ಯಾವುದು ಎಂದು ಹೇಳಿ. ಬೀದಿ ಕಾಮಣ್ಣರ ಬಗ್ಗೆ ಜಾಗ್ರತರಾಗಿರುವುದು ಹೇಗೆ ಅಂತ ತಿಳಿಸಿ. ಅವರನ್ನು ಎದುರಿಸಲು ಮಾನಸಿಕವಾಗಿ ಹೇಗೆ ಬಲಿಷ್ಠವಾಗಿರಬೇಕು ಎಂದು ತಿಳಿಸಿ ಮತ್ತು ಆಕೆಯು ದೈಹಿಕವಾಗಿ ಬಲಿಷ್ಠವಾಗಿರಲು ಪ್ರೋತ್ಸಾಹಿಸಿ, ಆತ್ಮರಕ್ಷಣೆ ಮಾಡುವಂತಹ ಯಾವುದಾದರೂ ತರಗತಿಗಳಿಗೆ ಆಕೆಯನ್ನು ಸೇರಿಸಿ. ಯಾರನ್ನೇ ಆದರೂ ಎದುರಿಸುವಂತಹ ಧೈರ್ಯವು ಆಕೆಗಿರಬೇಕು.
ಲೈಂಗಿಕತೆ ಬಗ್ಗೆ ಮಕ್ತವಾಗಿ ಮಾತನಾಡಿ: ಈ ವಿಚಾರವನ್ನು ಮಕ್ಕಳ ಮುಂದೆ ಮಾತನಾಡಲು ಬಹುತೇಕ ಪೋಷಕರು ಹಿಂದು ಮುಂದು ನೋಡುತ್ತಾರೆ. ಆದರೆ, ಯಾರ ಮನೆಯಲ್ಲಿ ಈ ವಿಷಯವನ್ನು ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯ ಇರುತ್ತೋ ಅವರ ಮಕ್ಕಳು ಆತ್ಮವಿಶ್ವಾಸದಿಂದ ಬೆಳೆಯುತ್ತಾರೆ. ತಪ್ಪು ತಿಳವಳಿಕೆಯಿಂದ ದೂರವಿದ್ದು, ಒಳ್ಳೇಯದನ್ನೇ ಕಲಿತುಕೊಡುತ್ತಾರೆ. ಇಂಥ ವಿಷಯಗಳು ಬೇರೆ ಕಡೆಯಿಂದ ಕಲಿತುಕೊಂಡರೆ ದುಷ್ಪರಿಣಾಮ ಬೀರಬಹುದು. ಪೋಷಕರೇ ಮಾತನಾಡದರೆ ಬಹುತೇಕ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು. ಈ ವಿಷಯಕ್ಕೆ ಸಂಬಂಧಸಿದ ಒಳ್ಳೊಳ್ಳೆ ಪುಸ್ತಕಗಳನ್ನು ಓದಲು ಕೊಡಿ.
ಗರ್ಭಧಾರಣೆ, ಗರ್ಭನಿರೋಧಕ ಮತ್ತು ಹೆರಿಗೆ ಬಗ್ಗೆಯೂ ಸ್ವಲ್ಪ ಸ್ವಲ್ಪ ಅರಿವು ಮೂಡಿಸಿದರೆ ಒಳಿತು. ಅದರಲ್ಲಿಯೂ ಅಮ್ಮನಿಲ್ಲದ ಮಕ್ಕಳಿಗಂತೂ ಅಪ್ಪಂದಿರು ಎಷ್ಟು ಹೇಳಿ ಕೊಟ್ಟರೂ ಸಾಲದು.
ಲೈಂಗಿಕ ಕ್ರಿಯೆಯು ಕೊಳಕೆಂಬ ಭಾವ ಬಿತ್ತಬೇಡಿ: ಪ್ರಕೃತಿ ಸಹಜವಾದ ಈ ಕ್ರಿಯೆ ಬಗ್ಗೆ ಯಾರಿಗೂ ಅಸಹ್ಯ ಹುಟ್ಟಬಾರದು. ಪ್ರತಿಯೊಬ್ಬ ಮನುಷ್ಯನಿಗೂ ಇರಲೇಬೇಕಾದ ಸಹಜ ವಾಂಛೆ ಇದು ಎಂಬುವುದು ಸ್ಪಷ್ಟವಾಗಲಿ. ಆದರೆ, ಒಂದಡಿ ಮುಂದೆ ಹೆಜ್ಜೆ ಇಡುವಾಗ ಎಷ್ಟರ ಮಟ್ಟಿಗೆ ಹುಷಾರಾಗಿರಬೇಕೆಂದು ಮಕ್ಕಳಿಗೆ ಸ್ಪಷ್ಟವಾಗಿ ತಿಳಿದಿರಬೇಕು. ದೈಹಿಕ ಕ್ರಿಯೆಗೆ ಮಾನಸಿಕ ಹಾಗೂ ದೈಹಿಕವಾಗಿ ತಯಾರಾಗುವ ಪರಿಯನ್ನು ಹೇಳಿ ಕೊಡಿ.
8ರಿಂದ 12ನೇ ತರಗತಿ ಮಕ್ಕಳಿಗೆ ಲೈಂಗಿಕ ಶಿಕ್ಷಣ..; ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ನಿರ್ಧಾರ!
ದೈಹಿಕ ಸಂಬಂಧ ಹೊಂದಲು ಹೇಗೆ ಎರಡು ಜೀವಗಳು ಮಾನಸಿಕವಾಗಿ ಸನ್ನದ್ಧರಾಗಬೇಕೆಂಬ ಅರಿವು ಮಕ್ಕಳಿಗೆ ಇರಲಿ. ಇವು ಕೆಲವು ತಪ್ಪು ನಿರ್ಧಾರಗಳು ಮತ್ತು ಬೇರೆಯವರ ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸುತ್ತದೆ. ಇಂಥ ವಿಚಾರಗಳನ್ನು ಪೋಷಕರೇ ಮಗಳಿಗೆ ತಿಳಿಸಿದರೆ ಅತ್ಯುತ್ತಮ. ಇಂಥ ಸ್ನೇಹವೂ ಅಪ್ಪ ಮಗಳ ಮಧ್ಯೆ ಬೆಳೆಯಬೇಕು.
ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹದಿಹರೆಯದ ಗರ್ಭಧಾರಣೆ; ಯಾವ ಜಿಲ್ಲೆಯಲ್ಲಿ ಹೆಚ್ಚು ಕೇಸ್?