ಮದ್ವೆಯ ಇವಕ್ಕೆಲ್ಲಾ ಹಣ ಖರ್ಚು ಮಾಡೋದು ವೇಸ್ಟ್… ಅವೈಡ್ ಮಾಡಿ
ಕಪಲ್ಸ್ ತಮ್ಮ ಬಿಗ್ ಡೇ ಗಾಗಿ ಕೆಲವು ವಿಷಯಗಳಿಗೆ ಹಣ ವ್ಯರ್ಥ ಮಾಡೋದನ್ನು ನಿಲ್ಲಿಸಬೇಕು ಎಂದು ವೆಡ್ಡಿಂಗ್ ಇಂಡಸ್ಟ್ರಿ ಸ್ಪೆಷಲಿಸ್ಟ್ ಗಳೇ ತಿಳಿಸಿದ್ದಾರೆ. ಅದೇನಂದ್ರೆ ನೀವು ಮದ್ವೆ ಪ್ಲ್ಯಾನ್ ಮಾಡವಾಗ ಆಹ್ವಾನ ಪತ್ರಿಕೆಗೆ ವಿಪರೀತ ಹಣ ವ್ಯಯಿಸೋದು ವೇಸ್ಟ್. ಇಂಥ ಹಲವು ವಿಷಯಗಳ ಕಡೆ ಗಮನ ಕೊಟ್ಟರೆ ಮಾತ್ರ ನೀವು ಹಣ ಉಳಿಸಲು ಸಾಧ್ಯವಾಗುತ್ತೆ.

ನೀವು ಎಷ್ಟೇ ಕಷ್ಟಪಟ್ಟು ಪ್ರಯತ್ನಿಸಿದರೂ, ಮದುವೆ ಅದ್ಧೂರಿಯಾಗಿ ಮಾಡಲು ನೀವು ಯಾವಾಗಲೂ ವಿಭಿನ್ನವಾದದ್ದನ್ನು ಬಯಸುತ್ತೀರಿ. ಆದರೆ ಮದ್ವೆ ಪ್ಲ್ಯಾನ್ ಮಾಡುತ್ತಾ ಮಾಡ್ತಾ, ನೀವು ನಿಮ್ಮ ಬಜೆಟ್ ನಿರ್ಧರಿಸುವುದಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಗಬಹುದು. ನಿಮ್ಮ ಎಲ್ಲಾ ಕುಟುಂಬ ಸದಸ್ಯರು ಎಲ್ಲವನ್ನೂ ಸರಿಪಡಿಸಲು ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಾರೆ. ಆದರೆ ನೀವೂ ಇನ್ನೂ ಹೆಚ್ಚಿನದನ್ನು ಮಾಡಲು ಹೋಗಿ, ಸಮಯ ಜೊತೆ ಜೊತೆಗೆ ಹಣವನ್ನು ವ್ಯರ್ಥ ಮಾಡುತ್ತೀರಿ. ಮದುವೆಗೆ ಪ್ಲ್ಯಾನ್ (wedding plan) ಮಾಡೋವಾಗ ನೀವು ಒಂದಿಷ್ಟು ವಿಷಯಗಳನ್ನು ಅವಾಯ್ಡ್ ಮಾಡೋದು ನಿಜವಾಗಿಯೂ ಬುದ್ದಿವಂತಿಕೆಯ ಲಕ್ಷಣ. ಅಂತಹ ಒಂದಷ್ಟು ವಿಷ್ಯಗಳ ಬಗ್ಗೆ ತಿಳಿಯೋಣ.
ನಿಮ್ಮ ಮದುವೆಗೆ ನಿಜವಾಗಿಯೂ ಅಗತ್ಯವಿಲ್ಲದ 10 ವಿಷಯಗಳು:
ಮದ್ವೆ ಡ್ರೆಸ್ (wedding dress)
ನಂಬುತ್ತೀರೋ ಇಲ್ಲವೋ, ನಿಮ್ಮ ಮದುವೆಯ ಉಡುಗೆಯ ವಿಷಯಕ್ಕೆ ಬಂದಾಗ ಬಾಡಿಗೆ ಒಂದು ಆಯ್ಕೆಯಾಗಬಹುದು.ನೀವು ಬಾಡಿಗೆಗೆ ಪಡೆಯಲು ಬಯಸದಿದ್ದರೆ, ನೀವು ಅದನ್ನು ದೊಡ್ಡ ಡಿಸೈನರ್‌ನಿಂದ ತಯಾರಿಸದೆ ನಿಮ್ಮ ನಗರದ ಮಾರುಕಟ್ಟೆಯಿಂದ ತೆಗೆದುಕೊಳ್ಳಬಹುದು, ಇದು ನಿಮಗೆ ಸಾಕಷ್ಟು ಹಣ ಉಳಿಯುವಂತೆ ಮಾಡುತ್ತದೆ. ಏಕೆಂದರೆ ಮದುವೆ ಉಡುಪನ್ನು ಒಂದು ಅಥವಾ ಎರಡು ಬಾರಿ ಧರಿಸೋದು, ಮತ್ತೆ ಧರಿಸೋದು ತುಂಬಾ ಕಡಿಮೆ. ಹಾಗಾಗಿ ಕಡಿಮೆ ಬೆಲೆಯ ಡ್ರೆಸ್ ಖರೀದಿಸೋದು ಬೆಸ್ಟ್..
ದುಬಾರಿ ವೆಡ್ಡಿಂಗ್ ಹೀಲ್ಸ್ (Costly wedding heels)
ನೀವು ಧರಿಸುವ ಉದ್ದನೆಯ ಉಡುಗೆ ಅಥವಾ ಲೆಹೆಂಗಾದೊಂದಿಗೆ ನಿಮ್ಮ ಮದುವೆ ಹೈ ಹೀಲ್ಸ್ ಅನ್ನು ಯಾರೂ ನೋಡುವುದಿಲ್ಲ. ಇವು ಕಾಣೋದು ಸಹ ಕಡಿಮೆಯೇ. ಹಾಗಾಗಿ ಇದಕ್ಕೆ ತುಂಬಾ ದುಬಾರಿ ಹೀಲ್ಸ್ ಖರೀದಿಸೋ ಅಗತ್ಯವಿಲ್ಲ. ಕಡಿಮೆ ಬೆಲೆಯ ಹೀಲ್ಸ್ ಧರಿಸೋದು ಬೆಸ್ಟ್ ಆಯ್ಕೆಯಾಗಿದೆ. ಯಾಕಂದ್ರೆ ಇದನ್ನು ಮತ್ತೆ ಹಾಕೋ ಚಾನ್ಸ್ ಕೂಡ ಕಡಿಮೆಯೆ.
ಮಲ್ಟಿ-ಟೈರ್ ವೆಡ್ಡಿಂಗ್ ಕೇಕ್ (multi tire wedding cake)
ಇವು ನೋಡಲು ಸುಂದರವಾಗಿರುತ್ತವೆ, ಆದರೆ ಆ ಕೇಕ್ ನ ಹೆಚ್ಚಿನ ಭಾಗವನ್ನು ಸಾಮಾನ್ಯವಾಗಿ ರಾತ್ರಿಯ ಕೊನೆಯಲ್ಲಿ ಎಸೆಯಲಾಗುತ್ತದೆ. ಹಾಗಾಗಿ ಕಪಲ್ಸ್ ಸಣ್ಣ ಕೇಕ್ ಕತ್ತರಿಸಿ, ತದನಂತರ ಕಪ್ ಕೇಕ್, ಮಿನಿ-ಪೈಗಳು, ಕುಕೀಗಳು, ಇತ್ಯಾದಿಗಳಂತಹ ಹಲವಾರು ಸಣ್ಣ ಸಿಹಿತಿಂಡಿಗಳನ್ನು ಜನರಿಗೆ ನೀಡಬಹುದು.
ವೆಡ್ಡಿಂಗ್ ಪ್ಲ್ಯಾನರ್ (wedding planner)
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರು ತಮ್ಮ ಮದ್ವೆ ಬಗ್ಗೆ ಪ್ಲ್ಯಾನ್ ಮಾಡಲು ಒಬ್ಬ ವೆಡ್ಡಿಂಗ್ ಪ್ಲ್ಯಾನರ್ ನೇಮಿಸಿಕೊಳ್ಳುತ್ತಾರೆ. ಇದೊಂದು ಟ್ರೆಂಡ್ ಆಗಿದೆ. ನಿಮಗೆ ಹೆಚ್ಚಿನ ಸ್ನೇಹಿತರು ಮತ್ತು ಸಂಬಂಧಿಕರು ಇದ್ರೆ, ನಿಮಗೆ ವೆಡ್ಡಿಂಗ್ ಪ್ಲ್ಯಾನರ್ ಅಗತ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಸಕ್ತಿ ಮತ್ತು ಜ್ಞಾನಕ್ಕೆ ಅನುಗುಣವಾಗಿ ಚೆನ್ನಾಗಿ ವೆಡ್ಡಿಂಗ್ ಪ್ಲ್ಯಾನ್ ಮಾಡಬಹುದು.
ಮೆನು ಕಾರ್ಡ್ (menu card)
ಹೆಚ್ಚಿನ ಪಾಶ್ಚಿಮಾತ್ಯ ಮದ್ವೆಗಳಲ್ಲಿ ಮೇಜಿನ ಮೇಲೆ ಮೆನು ಕಾರ್ಡ್ಇಡುವ ಪ್ರವೃತ್ತಿಯನ್ನು ಹೊಂದಿವೆ. ನೀವು ತುಂಬಾ ವಿಭಿನ್ನ ಮತ್ತು ದೊಡ್ಡ ಮೆನುಗಳನ್ನು ಹೊಂದಿಲ್ಲದಿದ್ದರೆ ನೀವು ಅವುಗಳನ್ನು ಸುಲಭವಾಗಿ ಅವಾಯ್ಡ್ ಮಾಡಬಹುದು. ಮೆನು ಕಾರ್ಡ್ ಇದ್ದೇ ಇರಬೇಕು ಅನ್ನೋ ಡಿಮಾಂಡ್ ಯಾರಿಗೂ ಇರಲ್ಲ.
ಪ್ರೀ ವೆಡ್ಡಿಂಗ್ ಸೆಲೆಬ್ರೆಶನ್ (pre wedding celebration)
ಪ್ರೀ ವೆಡ್ಡಿಂಗ್ ಸೆಲೆಬ್ರೆಶನ್ ಕುಟುಂಬದೊಂದಿಗೆ ಆಚರಿಸಲು ಮತ್ತು ವಿಶ್ರಾಂತಿ ಪಡೆಯಲು ಎಂಜಾಯ್ ಮಾಡಲು ಅತ್ಯುತ್ತಮ ಆಯ್ಕೆ. ಹಾಗಾಗಿ ಅದನ್ನು ಖಾಸಗಿಯಾಗಿ ಮತ್ತು ಕೆಲವು ಆಪ್ತರೊಂದಿಗೆ ಮಾತ್ರ ಸೆಲೆಬ್ರೇಟ್ ಮಾಡೋದು ಬೆಸ್ಟ್. ಹೆಚ್ಚು ಜನ ಸೇರಿದ್ರೆ ಹಣ ನಷ್ಟ. ನಿಮ್ಮ ಪ್ರೈವೆಸಿಯೂ ಸಿಗೋದಿಲ್ಲ.
ಸ್ಪೆಷಲ್ ಫ್ಲೋರಿಸ್ಟ್ (special florist)
ಕೆಲವು ಮದುವೆಗಳಲ್ಲಿ, ಅಲಂಕಾರಗಳಲ್ಲಿ ಬಳಸುವ ಹೂವುಗಳನ್ನು ಮತ್ತು ವಧು ಮತ್ತು ವರರು ಬಳಸುವ ಹೂವುಗಳನ್ನು ಆರಿಸಲು ವಿಶೇಷ ಫ್ಲೋರಿಸ್ಟ್ ಅನ್ನು ನೇಮಿಸಿಕೊಳ್ಳಲಾಗುತ್ತದೆ. ಇದು ವೇಸ್ಟ್ ಅಂತ ನಿಮಗೆ ಅನಿಸಲ್ವಾ? ಇದನ್ನು ನೀವು ಅಥವಾ ನಿಮ್ಮ ಆಪ್ತ ಸ್ನೇಹಿತರು ಅಥವಾ ನಿಮ್ಮ ಆಯ್ಕೆಗಳನ್ನು ತಿಳಿದಿರುವ ಕುಟುಂಬದ ಸದಸ್ಯರು ಸಹ ಮಾಡಬಹುದು ಅಲ್ವಾ?.
ಮ್ಯೂಸಿಕ್ ಬ್ಯಾಂಡ್ ಗಳು (music bands)
ಎಲ್ಲರೂ ಮಾಡ್ತಾರೆ ಅಂತಾ ನೀವು ದೊಡ್ಡ ದೊಡ್ಡ ಮ್ಯೂಸಿಕ್ ಬ್ಯಾಂಡ್ ಕರೆಸಿಕೊಂಡು ಮದುವೆ ಸಮಾರಂಭವನ್ನು ಎಂಜಾಯ್ ಮಾಡುತ್ತೀರಿ ಅಂದರೆ, ಅದು ದುಡ್ಡ ಖರ್ಚು ಅಲ್ಲದೆ ಬೇರೇನಿಲ್ಲ. ಇದರ ಬದಲಿಗೆ ನಿಮ್ಮ ನೆಚ್ಚಿನ ಪ್ಲೇ ಲಿಸ್ಟ್ ಮಾಡಿ ಪೆನ್ ಡ್ರೈವ್ ಗೆ ಹಾಕಿ ಹಾಡು ಪ್ಲೇ ಮಾಡಿ, ಎಲ್ಲರಿಗೂ ಇಷ್ಟ ಆಗುತ್ತೆ.
ಸಪರೇಟ್ ರಿಸೆಪ್ಶನ್ (separate reception)
ಭಾರತೀಯ ಮದುವೆಗಳಲ್ಲಿನ ಕೆಲವು ಸಂಸ್ಕೃತಿಗಳಲ್ಲಿ, ಮದುವೆ ಸಮಾರಂಭದ ಒಂದು ಅಥವಾ ಎರಡು ದಿನಗಳ ನಂತರ ವರನ ಕುಟುಂಬವು ಪ್ರತ್ಯೇಕ ರಿಸೆಪ್ಶನ್ ನಡೆಸುತ್ತದೆ. ಆದರೆ ಇದರಿಂದ ಹಣ ಸಮಯ ಎರಡೂ ವ್ಯರ್ಥವಾಗುತ್ತೆ. ಸಮಯ ಮತ್ತು ಹಣ ಉಳಿಸಲು ಪ್ರತ್ಯೇಕ ಕಾರ್ಯಕ್ರಮಗಳ ಬದಲು ಒಂದೇ ದೊಡ್ಡ ವಿವಾಹ ಸಮಾರಂಭ ಆಚರಿಸುವುದು ಉತ್ತಮ.