Relationship Tips: ಇಂಥಾ ತಪ್ಪು ಮಾಡಿದ್ರೆ ಹೆಂಡ್ತಿ ದೂರ ಆಗೋದು ಖಂಡಿತ
ಸಂಬಂಧ ಮುರಿಯೋದಕ್ಕೆ ದೊಡ್ಡ ದೊಡ್ಡ ಕಾರಣಗಳೇನು ಬೇಕಾಗಿಲ್ಲ. ನಿಮ್ಮ ಸಂಬಂಧವನ್ನು ಕ್ಷಣಾರ್ಧದಲ್ಲಿ ಹಾಳುಮಾಡುವ ಕೆಲವು ಅಭ್ಯಾಸಗಳನ್ನು ನೀವು ಹೊಂದಿರಬಹುದು. ನೀವು ಕೆಲವೊಮ್ಮೆ ನಿರ್ಲಕ್ಷಿಸುವ ಕೆಲವು ಅಭ್ಯಾಸಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಅವುಗಳನ್ನು ಸರಿಮಾಡಿಕೊಂಡರೆ ನಿಮಗೆ ಎಂದಿಗೂ ಸಂಬಂಧದಲ್ಲಿ ಯಾವುದೇ ಸಮಸ್ಯೆ ಬರೋದಿಲ್ಲ.
ರಿಲೇಶನ್ ಶಿಪ್ ಆರಂಭವಾದಾಗ, ಅದರಲ್ಲಿ ಸಣ್ಣ ವಿಷಯಗಳು ಮುಖ್ಯವಾಗುತ್ತವೆ ಮತ್ತು ಅವುಗಳನ್ನು ನೋಡಿಕೊಳ್ಳದಿದ್ದರೆ, ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ದೂರದಲ್ಲಿದ್ದುಕೊಂಡು ಪ್ರೀತಿ ಮಾಡುವಾಗ ಯಾವ ವಿಷಯಗಳು ಸರಿಯಾಗಿ ತಿಳಿಯೋದಿಲ್ಲ. ಆದರೆ ಸಂಗಾತಿಯೊಂದಿಗಿರುವ ಸಮಯದಲ್ಲಿ, ನೀವು ಮೊದಲ ಬಾರಿಗೆ ಅನೇಕ ವಿಷಯಗಳನ್ನು ಎದುರಿಸುತ್ತೀರಿ, ಇದರಿಂದಾಗಿ ನಿಮಗೆ ಅನೇಕ ವಿಷಯಗಳನ್ನು ಬ್ಯಾಲೆನ್ಸ್ ಮಾಡೋದು ಕಷ್ಟವಾಗುತ್ತೆ. ಈ ಸಂಬಂಧದಲ್ಲಿ ಪರಿಪೂರ್ಣ ಸಮತೋಲನವನ್ನು (balance in relationship) ಸೃಷ್ಟಿಸಲು ನಿಮಗೆ ಸಾಧ್ಯವಾಗದಿದ್ದಾಗ, ಸಂಗಾತಿಯಿಂದ ದೂರ ಸರಿಯುವ ಯೋಚನೆ ಮಾಡುತ್ತೀರಿ.
ಯಾವ ಅಭ್ಯಾಸಗಳು ಸಂಗಾತಿಯಿಂದ ನಿಮ್ಮನ್ನು ದೂರ ಮಾಡುತ್ತೆ? ಮತ್ತೆ ಮತ್ತೆ ನಿಮ್ಮ ವೈವಾಹಿಕ ಜೀವನದಲ್ಲಿ ತೊಡಕುಗಳು ಕಾಣಿಸಿಕೊಳ್ಳುತ್ತಿದ್ದರೆ, ಅದಕ್ಕೆ ಕಾರಣ ಏನು ಅನ್ನೋದನ್ನು ನೀವು ತಿಳಿಯಬೇಕು. ನಿಮ್ಮ ಕೆಲವು ಅಭ್ಯಾಸಗಳು ಸಂತೋಷದ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಬಹುದು. ಆ ಅಭ್ಯಾಸಗಳನ್ನು ಸಂಪೂರ್ಣವಾಗಿ ತ್ಯಜಿಸೋದು ಉತ್ತಮ.
ನಕಾರಾತ್ಮಕ ಸ್ವಭಾವ (negative character)
ರಿಲೇಶನ್ ಶಿಪ್ ನಲ್ಲಿರೋವಾಗ, ನೀವು ಸಕಾರಾತ್ಮಕತೆಯಿಂದ ತುಂಬಿರುವುದು ಬಹಳ ಮುಖ್ಯ. ನಿಮ್ಮ ನಡವಳಿಕೆಯು ಯಾವಾಗಲೂ ನಕಾರಾತ್ಮಕವಾಗಿದ್ದರೆ, ಸಂಗಾತಿ ನಿಮ್ಮ ಬಗ್ಗೆ ಕಿರಿಕಿರಿಗೊಳ್ಳಬಹುದು ಮತ್ತು ನಿಮ್ಮಿಂದ ದೂರವಿರಲು ಪ್ರಾರಂಭಿಸಬಹುದು. ಯಾವಾಗಲೂ ನಿಮ್ಮ ಸಂಗಾತಿಯನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ಅಥವಾ ನಿಮ್ಮ ಗೊಂದಲದ ಬಗ್ಗೆ ಅಳುವುದು ನಿಮ್ಮ ಮೇಲೆ ಪರಿಣಾಮ ಬೀರಬಹುದು.
ಉತ್ತಮ ಸಂಬಂಧಕ್ಕಾಗಿ ನಿಮ್ಮ ಮನಸ್ಥಿತಿಗೆ ಅನುಗುಣವಾಗಿ ಸಂಗಾತಿ ಜೊತೆ ವರ್ತಿಸುವುದನ್ನು ನಿಲ್ಲಿಸಿ. ನಿಮ್ಮ ಸಮಸ್ಯೆಗಳನ್ನು ಅವರಿಗೆ ತಿಳಿಸಿ, ಆವಾಗ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಸುಮ್ಮನೆ ಸಂಗಾತಿ ಮೇಲೆ ಕೋಪ ಮಾಡುತ್ತಿದ್ದರೆ, ಆ ಸಂಬಂಧ ಹೆಚ್ಚು ಸಮಯ ಉಳಿಯೋದಿಲ್ಲ.
ನಿಮ್ಮನ್ನು ದೂಷಿಸುವುದು ಸರಿಯಲ್ಲ.
ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಇರಲು ಸಾಧ್ಯವೇ ಇಲ್ಲ, ಸಮಸ್ಯೆ ಬರೋದು ಹೋಗೋದು ಸಾಮಾನ್ಯ. ಆದರೆ ಎಲ್ಲದಕ್ಕೂ ನೀವು ನಿಮ್ಮನ್ನು ದೂಷಿಸಿಕೊಂಡರೆ, ನೀವು ಒಳಗಿನಿಂದ ಸಂಪೂರ್ಣವಾಗಿ ಕುಗ್ಗಿ ಹೋಗುವಿರಿ. ನಿಮ್ಮನ್ನು ನಂಬಿ ಮತ್ತು ನಗುವ ಮೂಲಕ ಜೀವನದ ಸಮಸ್ಯೆಗಳನ್ನು (problems of life) ಪರಿಹರಿಸಿಕೊಳ್ಳಿ.
ಸಕಾರಾತ್ಮಕ ವಿಷಯಗಳಿಗೆ ಹೆಚ್ಚಿನ ಗಮನ ನೀಡಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವಾಗ ಜೀವನದ ಸಮಸ್ಯೆಗಳನ್ನು ಚರ್ಚಿಸಬೇಡಿ. ಖಿನ್ನತೆ ಮತ್ತು ಕಿರಿಕಿರಿಯ ವ್ಯಕ್ತಿಯೊಂದಿಗೆ ಬದುಕಲು ಯಾರೂ ಬಯಸುವುದಿಲ್ಲ ಅನ್ನೋದನ್ನು ಅರ್ಥಮಾಡಿಕೊಳ್ಳಿ. ಸಂತೋಷವಾಗಿದ್ದರೆ, ಜೀವನವೂ ಹ್ಯಾಪಿಯಾಗಿರುತ್ತೆ.
ನೋ ಅನ್ನೋದನ್ನು ಕಲಿಯಿರಿ
ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಯೋಚಿಸುವುದು ಮತ್ತು ಬಯಸುವುದು ಸರಿ, ಆದರೆ ನಿಮ್ಮ ಸುತ್ತಲಿನ ಎಲ್ಲರನ್ನೂ ಸಂತೋಷವಾಗಿಡಬೇಕು ಎಂದು ನೀವು ಭಾವಿಸಿದರೆ, ಅದು ಸಾಧ್ಯವಿಲ್ಲ. ನೀವು ಎಷ್ಟೇ ಪ್ರಯತ್ನಿಸಿದರೂ, ನೀವು ಎಲ್ಲರನ್ನೂ ಸಂತೋಷವಾಗಿಡಲು ಸಾಧ್ಯವಿಲ್ಲ. ಆದುದರಿಂದ ನಿಮಗೆ ಇಷ್ಟವಿಲ್ಲದ ವಿಷಯಕ್ಕೆ ನೋ ಅನ್ನೋದನ್ನು ಹೇಳಲು ಕಲಿಯಿರಿ.
ನಿಮ್ಮ ಸಂತೋಷಕ್ಕೆ ಬೇರೆ ಯಾರೂ ಜವಾಬ್ಧಾರರಲ್ಲ
ಸಂಬಂಧದಲ್ಲಿರೋವಾಗ, ಸಂಗಾತಿಯನ್ನು ಅವಲಂಬಿಸೋದು ಸಾಮಾನ್ಯ, ಆದರೆ ನಿಮ್ಮ ಸಂತೋಷದ ಕೀಲಿಯನ್ನು ನೀವು ಅವರ ಕೈಯಲ್ಲಿ ನೀಡೋದು ತಪ್ಪು. ಅದೇ ಸಮಯದಲ್ಲಿ, ನಿಮ್ಮ ಸಂಬಂಧವನ್ನು ಇತರರೊಂದಿಗೆ ಎಂದಿಗೂ ಹೋಲಿಸಬೇಡಿ (do not compare), ಇಲ್ಲದಿದ್ದರೆ ನಿಮ್ಮ ಈ ಅಭ್ಯಾಸವು ನಿಮ್ಮ ಮೇಲೆ ಪರಿಣಾಮ ಬೀರಬಹುದು. ಇದರಿಂದ ಸಂತೋಷವಾಗಿರಲು ಸಾಧ್ಯವೇ ಇರೋದಿಲ್ಲ.