MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಮದುವೆ ಬಂಧ ಒಪ್ಪಿಕೊಳ್ಳೋ ಹುಡುಗಿ ಸಿದ್ಧವಾಗಿದ್ದರೆ ಸಂಬಂಧಕ್ಕೆ ಕೊಡ್ತಾಳೆ ಬೆಲೆ!

ಮದುವೆ ಬಂಧ ಒಪ್ಪಿಕೊಳ್ಳೋ ಹುಡುಗಿ ಸಿದ್ಧವಾಗಿದ್ದರೆ ಸಂಬಂಧಕ್ಕೆ ಕೊಡ್ತಾಳೆ ಬೆಲೆ!

ಪೋಷಕರ ಆಯ್ಕೆಯಿಂದ ಮಾಡಿದ ಮದುವೆಗಳು ಪ್ರೇಮ ವಿವಾಹಗಳಿಗಿಂತ ಹೆಚ್ಚು ಕಾಲ ಉಳಿಯುತ್ತವೆ ಎಂದು ಅನೇಕ ಜನರು ನಂಬುತ್ತಾರೆ. ಏಕೆಂದರೆ ಅರೇಂಜ್ ಮ್ಯಾರೇಜ್ ಗಳಲ್ಲಿ  ಸುಧಾರಣೆಗೆ ಅವಕಾಶವಿದೆ ಆದರೆ ಪ್ರೇಮ ವಿವಾಹಗಳಲ್ಲಿ ಇದು ಸಂಭವಿಸುವುದಿಲ್ಲ ಎಂದು ಜನರು ಅಂದುಕೊಂಡಿದ್ದಾರೆ.  

2 Min read
Suvarna News
Published : Dec 27 2023, 03:25 PM IST
Share this Photo Gallery
  • FB
  • TW
  • Linkdin
  • Whatsapp
18

"ಹೇ! ನೀವು ತುಂಬಾ ಅದೃಷ್ಟವಂತರು, ನೀವು ಬಯಸಿದ ರೀತಿಯ ಹುಡುಗಿಯನ್ನು ನೀವು ಕಂಡುಕೊಂಡಿದ್ದೀರಿ. "ಓಹ್, ನಿಮ್ಮ ಭಾವಿ ಪತ್ನಿ ತುಂಬಾ ಸುಂದರ ಮತ್ತು ಸುಸಂಸ್ಕೃತಳು. ವಾವ್ ನೀವಿಬ್ಬರೂ ಪರ್ಫೆಕ್ಟ್ ಜೋಡಿ (perfect couples). ಕೆಲವು ಜೋಡಿಗಳನ್ನು ನೋಡಿದಾಗ ಈ ಮಾತು ಬರೋದು ಸಾಮಾನ್ಯ. ಆದರೆ ಎಲ್ಲಾ ಜೋಡಿಯೂ ಒಂದೇ ತರ ಇರೋದಕ್ಕೆ ಸಾಧ್ಯವೇ? ಖಂಡಿತಾ ಇಲ್ಲ ಅಲ್ವಾ?

28

ಅರೇಂಜ್ ಮ್ಯಾರೇಜ್ (Arranged Marriage) ಆಗಿರಲಿ ಅಥವಾ ಲವ್ ಮ್ಯಾರೇಜ್ ಆಗಿರಲಿ ಯಾವುದೇ ಮದುವೆ ಪರಿಪೂರ್ಣವಲ್ಲ ಎಂದು ಯಾರೋ ಸರಿಯಾಗಿ ಹೇಳಿದ್ದಾರೆ. ಹೌದು, ಜನರು ಪ್ರೇಮ ವಿವಾಹಕ್ಕಿಂತ ಹೆಚ್ಚಾಗಿ ಪೋಷಕರ ಆಯ್ಕೆಯಿಂದ ಮಾಡಿದ ಮದುವೆಗಳನ್ನು ನಂಬುತ್ತಾ. ಪ್ರೇಮ ವಿವಾಹದ ಈ ಯುಗದಲ್ಲಿ, 80 ಪ್ರತಿಶತದಷ್ಟು ಮದುವೆಗಳು ಅರೇಂಜ್ ಮ್ಯಾರೇಜ್ ಆಗಿವೆ ಅನ್ನೋದು ನಿಜಕ್ಕೂ ಅಚ್ಚರಿ ನೀಡುವಂತಹ ವಿಷಯವಾಗಿದೆ. .
 

38

ಇತ್ತೀಚಿನ ದಿನಗಳಲ್ಲಿ ಪ್ರೀತಿ-ವ್ಯವಸ್ಥಿತ ವಿವಾಹಗಳ ಟ್ರೆಂಡ್ (marriage trend) ಎರಡೂ ಚಾಲ್ತಿಯಲ್ಲಿದೆ. ಲವ್ ಮ್ಯಾರೇಜ್ ನಲ್ಲಿ ಇಬ್ಬರು ಪ್ರೀತಿಸುವ ಜೋಡಿಗಳು ತಮ್ಮ ಕುಟುಂಬಗಳ ಸಮ್ಮುಖದಲ್ಲಿ ಸಂತೋಷದಿಂದ ಮದುವೆಯಾಗುತ್ತಾರೆ. ಆದರೆ  ಅರೇಂಜ್ ಮ್ಯಾರೇಜ್ ನಲ್ಲಿ ಈ ಕ್ರೇಜ್ ಇನ್ನೂ ವಿಭಿನ್ನವಾಗಿರುತ್ತೆ ಏಕೆಂದರೆ ಮೊದಲಿನಿಂದಲೂ ಇಡೀ ಕುಟುಂಬವು ಸಂತೋಷದಿಂದ ಕಾಣುತ್ತದೆ. ಆರಂಭದಲ್ಲಿ ಎರಡು ಕುಟುಂಬಗಳು ಒಂದಾಗುತ್ತವೆ, ನಂತರ ಇಬ್ಬರು ಜೋಡಿಗಳು, ಸೇರುತ್ತಾರೆ, ಒಬ್ಬರನ್ನೊಬ್ಬರು ನಿಧಾನವಾಗಿ ಅರಿತುಕೊಳ್ಳುತ್ತಾರೆ, ನಂತರ ಎಲ್ಲರೂ ಒಟ್ಟಾಗಿ ಸೇರಿ ಸಂತೋಷದಿಂದ ಮದುವೆಯಾಗುತ್ತಾರೆ. 

48

ಅರೇಂಜ್ ಮ್ಯಾರೇಜ್ ನಲ್ಲಿ ಹುಡುಗ - ಹುಡುಗಿಗೆ ಪರಸ್ಪರ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ತಿಳಿದಿರೋದೆ ಇಲ್ಲ. ಇಂತಹ ಸಂದರ್ಭದಲ್ಲಿ ಅವರನ್ನು ಅರ್ಥ ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಹಾಗಾಗಿ ನಾವು ನಿಮಗೆ ಮದುವೆಯಾಗುವ ಹುಡುಗಿಯರು ಯಾವೆಲ್ಲಾ ರೀತಿಯಲ್ಲಿ ಇರುತ್ತಾರೆ ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿ ನೀಡುತ್ತೇವೆ. 

58

ನಾನು ಮ್ಯಾರೇಜ್ ಮೆಟೀರಿಯಲ್ ಅಲ್ಲ
ಈಗಾಗಲೇ ಸ್ವತಂತ್ರಳಾಗಿರುವ ಮತ್ತು ತನ್ನ ಸ್ವಂತ ಕಾಲ ಮೇಲೆ ನಿಂತಿರುವ ಹುಡುಗಿಯನ್ನು ನೀವು ಮದುವೆ ಆಗಲು ಹೊರಟಿದ್ದರೆ, ಅವಳನ್ನು ಅರ್ಥಮಾಡಿಕೊಳ್ಳಲು ನೀವು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಏಕೆಂದರೆ ಅಂತಹ ಹುಡುಗಿಯರು ಮದುವೆಯಲ್ಲಿ ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ಸ್ವಾತಂತ್ರ್ಯದ ಬಗ್ಗೆ ಅವಳ ಕಲ್ಪನೆಯನ್ನು (not marriage material) ನೀವು ಗೌರವಿಸುತ್ತೀರಿ ಎಂದು ನೀವು ಅವಳಿಗೆ ಹೇಳಬೇಕು. ಮದುವೆ ಎಂದರೆ ಅವಳನ್ನು ಬಂಧಗಳಲ್ಲಿ ಬಂಧಿಸಬೇಕು ಎಂದರ್ಥವಲ್ಲ.
 

68

ತಾಯಿ ಮನೆಯಲ್ಲಿ ಸಿಗುತ್ತಿದ್ದ ಪ್ರೀತಿ ಬಯಸೋ ಹುಡುಗಿ
ಒಬ್ಬ ಹುಡುಗಿ ತನ್ನ ಹೆತ್ತವರು ಇಷ್ಟಪಡುವ ಅರೇಂಜ್ ಮ್ಯಾರೇಜ್ ಗೆ ಒಪ್ಪಿಕೊಂಡಿದ್ದರೆ, ಅವಳು ಮದುವೆಯ ನಂತರ ತನ್ನ ಗಂಡನಿಂದ ತನ್ನ ಮನೆಯಲ್ಲಿ ತನಗೆ ಸಿಗುತ್ತಿದ್ದ ಅದೇ ಟ್ರೀಟ್ ಮೆಂಟ್ ಗಂಡನಿಂದಲೂ ಸಿಗಬೇಕೆಂದು ಬಯಸುತ್ತಾಳೆ. ವಾಸ್ತವವಾಗಿ, ನೀವು ಅವಳನ್ನು ಅವಳ ಹೆತ್ತವರಂತೆಯೇ ನೋಡಿಕೊಳ್ಳಬೇಕೆಂದು ಅವಳು ನಿರೀಕ್ಷಿಸುತ್ತಾಳೆ. ಇದರರ್ಥ ಮದುವೆಯ ನಂತರ, ನೀವು ಅವಳ ಎಲ್ಲಾ ಆಸೆಗಳು ಮತ್ತು ಬಯಕೆಗಳನ್ನು ಈಡೆರಿಸಬೇಕು.
 

78

ಪರ್ಫೆಕ್ಟ್ ಸೊಸೆ (perfect daughter in law)
ಸಂಬಂಧವನ್ನು ನೋಡುವಾಗ, ಮದುವೆಯ ಬಂಧವನ್ನು ಸಂಪೂರ್ಣ ಮನಸ್ಸಿನಿಂದ ಒಪ್ಪಿಕೊಳ್ಳಲು ಬಯಸುವ ಹುಡುಗಿಯನ್ನು ಸಹ ನೀವು ಭೇಟಿಯಾಗಬಹುದು. ಅಂತಹ ಹುಡುಗಿಯರು ಪರ್ಫೆಕ್ಟ್ ಸೊಸೆಯಂದಿರಾಗುತ್ತಾರೆ. ಏಕೆಂದರೆ ಆ ಹುಡುಗಿಯರು ಮದುವೆಯ ನಂತರ ತಮ್ಮ ಸಂಬಂಧವನ್ನು ಹೇಗೆ ನಡೆಸಬೇಕೆಂದು ತಿಳಿದಿದ್ದಾರೆ. ನೀವು ಅಂತಹ ಹುಡುಗಿಯನ್ನು ಮದುವೆಯಾದರೆ, ಅವಳು ಯಾವಾಗಲೂ ನಿಮ್ಮನ್ನು ಮತ್ತು ನಿಮ್ಮ ಹೆತ್ತವರನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾಳೆ.

88

ನಾನು ನನ್ನ ಕನಸುಗಳನ್ನು ಕೊಲ್ಲಲು ಸಾಧ್ಯವಿಲ್ಲ
ನಿಮಗೆ ಆರ್ಥಿಕವಾಗಿ ಸಪೋರ್ಟ್ ಅಗತ್ಯವಿಲ್ಲದ ಹುಡುಗಿಯನ್ನು ನೀವು ಮದುವೆಯಾಗಲು ಬಯಸಿದರೆ, ಅವಳ ಕೆಲಸ ಮತ್ತು ಅವಳ ಆಕಾಂಕ್ಷೆಗಳು ನಿಮ್ಮದಕ್ಕಿಂತ ಹೆಚ್ಚು ಮುಖ್ಯವಾಗಬಹುದು ಎಂಬುದನ್ನು ನೆನಪಿಡಿ. ಅವಳು ಎಂದಿಗೂ ಮನೆಯಲ್ಲಿ ಕುಳಿತಿರುವ ಗೃಹಿಣಿಯ ಜೀವನವನ್ನು ನಡೆಸಲು ಒಪ್ಪುವುದಿಲ್ಲ. ಆರ್ಥಿಕವಾಗಿ ಸ್ವತಂತ್ರವಾಗಿರುವ (financially independant wife) ಹೆಂಡ್ತಿಯನ್ನು ಪಡೆಯೋದು ಉತ್ತಮ ವಿಷಯವೇ ಸರಿ.
 

About the Author

SN
Suvarna News
ಮದುವೆ
ಪ್ರೀತಿ
ಸಂಬಂಧಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved