ಸಣ್ಣ ವಿಷಯ ದೊಡ್ಡ ದುರಂತ, ಯೂಟ್ಯೂಬ್ ನೋಡಿ ಹೆಂಡತಿಯ ಹತ್ಯೆ
YouTube ಕಟ್ಟಿಕೊಂಡ ಹೆಂಡತಿ ದಪ್ಪ ಆಗುತ್ತಿದ್ದಾಳೆ ಎಂದು ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿ ಆಕೆಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದ ಈ ಘಟನೆಯಲ್ಲಿ ನಿಜವಾಗಿ ನಡೆದಿದ್ದೇನು ಗೊತ್ತಾ?

ಗಂಡ-ಹೆಂಡಿರ ಸಂಬಂಧಕ್ಕೇ ಕಳಂಕ ತಂದ ಘಟನೆ
ಅಸಲಿಗೆ ನಡೆದಿದ್ದೇನು?
ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪ್ರೊದ್ದುಟೂರು ನಿವಾಸಿ ಕಿರಣ್, ಮದ್ದೂರಿನ ಪದ್ಮಜಾಳನ್ನು ಮದುವೆಯಾಗಿದ್ದ. ಮದುವೆ ಸಮಯದಲ್ಲಿ ಪದ್ಮಜಾ ಸ್ವಲ್ಪ ದಪ್ಪಗಿದ್ದಳು. ಆದರೆ ಆಕೆಯ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಕಿರಣ್, ಮನೆ ಅಳಿಯನಾಗಿ ಹೋಗಿದ್ದ. ಈ ದಂಪತಿ ಮದ್ದೂರಿನ ಹೊಸಕೋಟೆಯಲ್ಲಿ ವಾಸವಾಗಿದ್ದರು. ಇವರಿಗೆ ಒಬ್ಬ ಹೆಣ್ಣು ಮಗಳಿದ್ದಾಳೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಕಿರಣ್, ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದ. ಕೆಲವು ಕಾಲ ಇವರ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ಕಿರಣ್, ಹೆಂಡತಿಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದ. ಆಕೆ ದಪ್ಪಗಿದ್ದು, ಸುಂದರವಾಗಿಲ್ಲ ಎಂದು ಭಾವಿಸಿದ್ದ. ಸಣ್ಣಗಾಗುವಂತೆ ಆಕೆಯ ಮೇಲೆ ಒತ್ತಡ ಹೇರುತ್ತಿದ್ದ. ಆದರೂ ಪದ್ಮಜಾ ತೂಕ ಇಳಿಸಿಕೊಳ್ಳದಿದ್ದಾಗ, ಆಕೆಯನ್ನು ತೊಡೆದುಹಾಕಲು ನಿರ್ಧರಿಸಿದ.
ಪತ್ನಿ ಹತ್ಯೆಗೆ ಯೂಟ್ಯೂಬ್ ಮೊರೆಹೋದ ಪತಿ!
ಪೋಸ್ಟ್‌ಮಾರ್ಟಂನಲ್ಲಿ ಬಯಲಾದ ಸತ್ಯ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.