ಈ 4 ಕಾರಣಗಳಿಂದ ಸಂಬಂಧ ಹಾಳಾಗುತ್ತೆ, ನಿಮ್ಮ ಪಾರ್ಟನರ್ ಜೊತೆ ಹೀಗೆ ಮಾಡ್ಬೇಡಿ!
ಬದುಕಲ್ಲಿ ಒಬ್ಬಂಟಿ ಇರೋಕೆ ಆಗಲ್ಲ. ಪಾರ್ಟ್ನರ್ ಬೇಕೇ ಬೇಕು. ಆದ್ರೆ ಸಂಬಂಧದಲ್ಲಿ ಕೆಲವು ವಿಷಯಗಳನ್ನ ಗಮನದಲ್ಲಿಟ್ಟುಕೊಳ್ಳಬೇಕು. ಈ ನಾಲ್ಕು ವಿಷಯಗಳಿಂದಾಗಿ ಸಂಬಂಧ ಹಾಳಾಗುತ್ತದೆ. ಆದ್ದರಿಂದ ಈ ತಪ್ಪುಗಳನ್ನು ಎಂದಿಗೂ ಮಾಡಬಾರದು. ಇಲ್ಲವಾದ್ರೆ ನೀವು ಏಕಾಂಗಿಯಾಗಿಯೇ ಜೀವನ ನಡೆಸಬೇಕಾಗುತ್ತದೆ.

ಕೆಲವರ ಬದುಕಲ್ಲಿ ಸ್ನೇಹಿತರು ತುಂಬಾ ಇರ್ತಾರೆ. ಆದ್ರೆ ಒಬ್ಬ ಸ್ಪೆಷಲ್ ವ್ಯಕ್ತಿಯ ಕೊರತೆ ಇರುತ್ತೆ. ಅವರ ಬದುಕಲ್ಲಿ ಯಾರೂ ಬರಲ್ಲ ಅಂತ ಅಲ್ಲ. ಬರ್ತಾರೆ, ಹೋಗ್ತಾರೆ. ಇದಕ್ಕೆ ಅವರ ವರ್ತನೆ ಮತ್ತು ಮಾತುಗಳೇ ಕಾರಣ. ಪಾರ್ಟ್ನರ್ ಬೇಸತ್ತು ಬ್ರೇಕಪ್ ಮಾಡ್ಕೊಂಡು ಹೋಗ್ತಾರೆ. ಹಾಗಾಗಿ ಪಾರ್ಟ್ನರ್ ಗೆ ಹೇಳಬಾರದ ನಾಲ್ಕು ವಿಷಯಗಳ ಬಗ್ಗೆ ಈ ಲೇಖನದಲ್ಲಿ ಹೇಳುತ್ತಿದ್ದೇವೆ.
1. ಎಲ್ಲದಕ್ಕೂ ಸಂಗಾತಿ ಮೇಲೆ ದೂಷಣೆ
ಸಂಬಂಧದಲ್ಲಿದ್ದಾಗ ಏನಾದ್ರೂ ತಪ್ಪಾದ್ರೆ ಪಾರ್ಟ್ನರ್ ಮೇಲೆ ದೂಷಣೆ ಹಾಕೋದು ಸಾಮಾನ್ಯ. ಕೆಲವರಿಗೆ ತಾವು ಯಾವಾಗಲೂ ಸರಿ ಅಂತ ಅನ್ನಿಸುತ್ತೆ. ತಪ್ಪು ಪಾರ್ಟ್ನರ್‌ದು ಅಂತ ಭಾವಿಸ್ತಾರೆ. ಇದು ನಿಮ್ಮನ್ನ ಪಾರ್ಟ್ನರ್ ಕಣ್ಣಲ್ಲಿ ಕೀಳಾಗಿ ಕಾಣುವಂತೆ ಮಾಡುತ್ತೆ. ನೀವು ಎಲ್ಲಾದರೂ ತಪ್ಪು ಮಾಡಿದ್ರೆ ಒಪ್ಪಿಕೊಳ್ಳಿ. ಇದು ನಿಮ್ಮ ಸಂಬಂಧವನ್ನ ಗಟ್ಟಿಗೊಳಿಸುತ್ತದೆ. ಇಲ್ಲದಿದ್ರೆ, ಬ್ರೇಕಪ್ ಆಗಬಹುದು. ಹಾಗಾಗಿ ನಿಮ್ಮ ತಪ್ಪನ್ನ ಒಪ್ಪಿಕೊಳ್ಳಲು ಸಿದ್ಧರಿರಿ. ಯಾಕಂದ್ರೆ ಒಬ್ಬ ವ್ಯಕ್ತಿ ಯಾವಾಗಲೂ ಸರಿ ಇರೋಕೆ ಸಾಧ್ಯವಿಲ್ಲ.
2. ಪಾರ್ಟ್ನರ್ ನ ನ್ಯೂನತೆಗಳನ್ನ ಹೇಳ್ತಾನೆ ಇರೋದು
ನಿನಗೆ ಡ್ರೆಸ್ ಮಾಡೋಕೆ ಬರಲ್ಲ. ನಿನಗೆ ಇದು ಮಾಡೋಕೆ ಆಗಲ್ಲ. ನಿನಗೇನು ಗೊತ್ತು..? ಹೀಗೆ ಪಾರ್ಟ್ನರ್ ಗೆ ಹೇಳ್ತಾನೆ ಇರ್ತೀರಿ. ಒಳ್ಳೆ ಗುಣಗಳಿಗಿಂತ ಹೆಚ್ಚಾಗಿ ನ್ಯೂನತೆಗಳನ್ನ ಹುಡುಕ್ತೀರಿ. ಅವರ ದೌರ್ಬಲ್ಯಗಳನ್ನ ಮಾತಿನಿಂದ ಚುಚ್ಚುತ್ತೀರಿ. ಇದು ಪಾರ್ಟ್ನರ್ ಗೆ ನೋವು ಕೊಡುತ್ತೆ. ನೀವು ಹೀಗೆ ಮಾಡ್ತಾನೆ ಇದ್ರೆ, ಒಂದು ದಿನ ಪಾರ್ಟ್ನರ್ ನಿಮ್ಮನ್ನ ಬಿಟ್ಟು ಹೋಗ್ತಾರೆ. ನೀವು ಒಂಟಿಯಾಗ್ತೀರಿ.
3. ಪಾರ್ಟ್ನರ್ ಜೊತೆ ಸ್ಪರ್ಧೆ
ಕೆಲವೊಮ್ಮೆ ನಾವು ಪಾರ್ಟ್ನರ್ ಜೊತೆ ಸ್ಪರ್ಧೆಗೆ ಇಳಿಯುತ್ತೇವೆ. ಇದು ಸಂಬಂಧವನ್ನ ಹಾಳು ಮಾಡುತ್ತೆ. ಪಾರ್ಟ್ನರ್ ಪ್ರಗತಿಯನ್ನ ನೋಡಿ ಹೊಟ್ಟೆಕಿಚ್ಚು ಪಡ್ತೀರಿ. ಇದರಿಂದ ಸಂಬಂಧ ಮುರಿದು ಬೀಳಬಹುದು. ಪಾರ್ಟ್ನರ್ ಜೊತೆ ಸ್ಪರ್ಧಿಸುವ ಬದಲು, ಅವರನ್ನ ಬೆಂಬಲಿಸಿ. ಅವರ ಕೆಲಸವನ್ನ ಮೆಚ್ಚಿ. ಕೆಲಸ ಮತ್ತು ಪ್ರೀತಿ ಎರಡನ್ನೂ ಬೇರೆ ಬೇರೆಯಾಗಿ ನೋಡಿ. ಎರಡನ್ನೂ ಮಿಕ್ಸ್ ಮಾಡ್ಬೇಡಿ.
4. ನಾನು ಒಬ್ಬಂಟಿ ಇರೋಕೆ ಆಗಲ್ಲ
ಸಂಬಂಧದಲ್ಲಿದ್ದಾಗ, ಅದನ್ನ ಕಳೆದುಕೊಳ್ಳುವ ಭಯದಿಂದ, ನಾನು ಒಬ್ಬಂಟಿ ಇರೋಕೆ ಆಗಲ್ಲ ಅಂತ ಹೇಳ್ತೀವಿ. ಪಾರ್ಟ್ನರ್ ಮುಂದೆ ಹೀಗೆ ಹೇಳಿದ್ರೆ, ನೀವು ಯಾವಾಗ ಬೇಕಾದ್ರೂ ಮೋಸ ಮಾಡಬಹುದು ಅಂತ ಅವರಿಗೆ ಅನ್ಸುತ್ತೆ. ಏನಾದ್ರೂ ಕಾರಣಕ್ಕೆ ದೂರ ಇರಬೇಕಾದ್ರೆ, ನೀವು ಮೋಸ ಮಾಡಬಹುದು ಅಂತ ಅವರು ಭಾವಿಸ್ತಾರೆ. ಇದು ನಿಮ್ಮ ಇಮೇಜ್ ಹಾಳು ಮಾಡುತ್ತೆ. ಇದರಿಂದ ಸಂಬಂಧ ಮುರಿದು ಬೀಳಬಹುದು.