- Home
- Jobs
- Private Jobs
- Google, Meta.. ದೊಡ್ಡ ಕಂಪನಿ ಕೆಲಸಕ್ಕೆ ಹಾತೊರೆಯೋ ಭಾರತ; ಅಲ್ಲಿ ಜಾಬ್ ಬೇಡ ಎಂದ 75% ಅಮೆರಿಕಾದವ್ರು!
Google, Meta.. ದೊಡ್ಡ ಕಂಪನಿ ಕೆಲಸಕ್ಕೆ ಹಾತೊರೆಯೋ ಭಾರತ; ಅಲ್ಲಿ ಜಾಬ್ ಬೇಡ ಎಂದ 75% ಅಮೆರಿಕಾದವ್ರು!
ಇಂದು ಕಾರ್ಪೋರೇಟ್ ಕ್ಷೇತ್ರವು ದೊಡ್ಡಮಟ್ಟದಲ್ಲಿ ಬದಲಾವಣೆಯಾಗುತ್ತಿದೆ. ಒಂದು ಕಾಲದಲ್ಲಿ ಗೂಗಲ್, ಮೆಟಾ, ಆಪಲ್ ಅಥವಾ ಅಮೆಜಾನ್‌ನಂತಹ ಕಂಪನಿಗಳಲ್ಲಿ ಕೆಲಸ ಪಡೆಯುವುದು ಯಶಸ್ಸಿನ ಅಂತಿಮ ಸಾಧನೆಯಾಗಿತ್ತು. ಆದರೆ ಈಗ ಹಾಗಿಲ್ಲ. ಇಂದು ಹೊಸ ಜನತೆಯ ಯಶಸ್ಸಿನ ಸೂತ್ರ, ಯಶಸ್ಸಿನ ವ್ಯಾಖ್ಯಾನವು ಬೇರೆ ಆಗಿದೆ.

ಇಂದಿನವರು ಯಾವುದಕ್ಕೆ ಬೆಲೆ ಕೊಡ್ತಾರೆ?
ನೆಟ್‌ವರ್ಕ್ ಟ್ರೆಂಡ್ಸ್ ಸಮೀಕ್ಷೆಯ ಪ್ರಕಾರ, 76% ವಿದ್ಯಾರ್ಥಿಗಳು ಸಂಬಳ, ಹೆಸರು ಅಥವಾ ತಾವು ಮಾಡುವ ಕೆಲಸದ ಸ್ಥಳಕ್ಕಿಂತ ಕೆಲಸದ ಸ್ಥಿರತೆಗೆ ಆದ್ಯತೆ ನೀಡುತ್ತಾರೆ. ಇಂದು ಆರೋಗ್ಯ, ಸಾಮಾಜಿಕ ಸೇವೆಗಳು, ಸಾರ್ವಜನಿಕ ಆರೋಗ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯೋಗಗಳಿವೆ. ಈ ಕೆಲಸಗಳಲ್ಲಿ ಕಡಿತ ಆಗೋದಿಲ್ಲ, ಡಿಮ್ಯಾಂಡ್ ಕೂಡ ಕಡಿಮೆ ಆಗೋದಿಲ್ಲ. ಹೀಗಾಗಿ ಈ ಕ್ಷೇತ್ರಗಳತ್ತ ಮುಖ ಮಾಡುತ್ತಿದ್ದಾರೆ. ಸ್ಪೇನ್‌ನಲ್ಲಿ, ಉದಾಹರಣೆಗೆ, 2018 ಮತ್ತು 2024ರ ನಡುವೆ ಆರೋಗ್ಯ, ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ದಾಖಲಾತಿಯು ಹೆಚ್ಚಿತ್ತು.
ಬಿಗ್ ಟೆಕ್‌ನ ಆಕರ್ಷಣೆ ಏಕೆ ಕಡಿಮೆಯಾಗುತ್ತಿದೆ?
ಬೆಂಗಳೂರಿನಲ್ಲಿ ಅಥವಾ ಸಿಲಿಕಾನ್ ಸಿಟಿಯಲ್ಲಿ ಕೆಲಸ ಮಾಡೋದು, ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಫೋರ್ಬ್ಸ್ ವರದಿಯ ಪ್ರಕಾರ, ನ್ಯಾಷನಲ್ ಸೊಸೈಟಿ ಆಫ್ ಹೈ ಸ್ಕೂಲ್ ಸ್ಕಾಲರ್ಸ್ (NSHSS) ನಡೆಸಿದ ಅಧ್ಯಯನದ ಪ್ರಕಾರ ಹೊಸ ಪೀಳಿಗೆಯವರು ದೊಡ್ಡ ಕಂಪನಿಗಳನ್ನು ಆದರ್ಶ ಕಂಪೆನಿ ಎಂದು ಭಾವಿಸೋದಿಲ್ಲ. ಇದಕ್ಕೆ ಎಐ ತಂತ್ರಜ್ಞಾನ, ಮಶಿನ್ ಬಳಕೆಯ ಏರಿಕೆಯು ಕಾರಣ ಆಗಿರಬಹುದು. ಒಮ್ಮೆ ಅವಕಾಶ ನೀಡುತ್ತಿದ್ದ ಟೆಕ್ ಉದ್ಯಮವು ಈಗ ಅಸ್ಥಿರತೆಯನ್ನು ಹೊಂದಿದೆ. ಉದ್ಯೋಗಿಗಳಿಗೆ ಫೇವರಿಟ್ ಆಗಿದ್ದ ಕಂಪೆನಿಯು ಈಗ ಲೇಆಫ್ ಮಾಡುತ್ತಿದೆ.
ಟೆಕ್ ಉದ್ಯಮದಲ್ಲಿ ಆಸಕ್ತಿ ಕಡಿಮೆ!
ಇಂದು ತಂತ್ರಜ್ಞಾನ ತುಂಬ ಬದಲಾಗ್ತಿದೆ. ಹೀಗಾಗಿ ಎಷ್ಟು ದಿನಗಳ ಕಾಲ ಕೆಲಸ ಇರುತ್ತದೆ ಎಂದು ಹೇಳೋಕೆ ಆಗದು. ಒಂದು ಕಾಲದಲ್ಲಿ ಹೊಸತನ, ಬೆಳವಣಿಗೆಯ ಭರವಸೆ ನೀಡಿದ ಕಂಪನಿಗಳು ಲೇಆಫ್, ನಷ್ಟಕ್ಕೆ ಹೆಸರವಾಗಿವೆ. ಹೊಸ ಪ್ರತಿಭೆಗಳು ಟೆಕ್ ಉದ್ಯಮದಲ್ಲಿ ಆಸಕ್ತಿ ಕಳೆದುಕೊಂಡರೆ, ಕಂಪೆನಿಗಳು ನವೀನತೆಯನ್ನು ಹೇಗೆ ಉಳಿಸಿಕೊಳ್ಳುತ್ತವೆ?
ಉದ್ಯೋಗಿಗಳು ಕೇಳುವ ಪ್ರಶ್ನೆ ಏನು?
ಇಂದಿನ ಉದ್ಯೋಗಿಗಳು, ಈ ಕೆಲಸದ ನೈತಿಕ ಮೌಲ್ಯವೇನು? ಐದು ವರ್ಷಗಳ ನಂತರ ನನ್ನ ಹುದ್ದೆ ಇರುತ್ತದೆಯೇ? ನಾನು ಸಾರ್ವಜನಿಕ ಒಳಿತಿಗೆ ಏನಾದರೂ ಕೊಡುಗೆ ಕೊಡ್ತಿದ್ದೀನಾ?, ಅಥವಾ ಕೇವಲ ಕಾರ್ಪೊರೇಟ್ ಲಾಭಕ್ಕೆ ಮಾತ್ರ ಕೆಲಸ ಮಾಡ್ತಿದ್ದೀನಾ? ಎಂದು ಪ್ರಶ್ನೆ ಕೇಳುತ್ತಿದ್ದಾರೆ.
ಏನು ಮಾಡಬೇಕಿದೆ?
ಸಾಮಾಜಿಕ ಜವಾಬ್ದಾರಿಗೆ ಆದ್ಯತೆ ಕೊಡಬೇಕು, ನೈತಿಕ ಪರಿಣಾಮಕ್ಕೆ ಗಮನ ಕೊಡಬೇಕು, ಹುದ್ದೆಯ ಜೊತೆಗೆ ಉದ್ದೇಶವನ್ನು ನೀಡುವ ಜಾಬ್ ರೂಪಿಸಬೇಕು. ಚೆನ್ನಾಗಿ ಕಾಣುವಂತೆ ಬ್ರ್ಯಾಂಡ್ ಮಾಡೋದಲ್ಲ, ಅದರ ಉದ್ದೇಶ ಸರಿಯಾಗಿರಬೇಕು. ಹೀಗಾಗಿ ದೊಡ್ಡ ದೊಡ್ಡ ಕಂಪೆನಿಗಳಿಂದ 75% ಜನರು ಹೊರಗಡೆ ಬರುತ್ತಿದ್ದಾರೆ.