- Home
- Jobs
- Private Jobs
- ಡೈಲಿಹಂಟ್‌ನಲ್ಲಿ ಭರ್ಜರಿ ಉದ್ಯೋಗ ಕಡಿತ, ಒನ್‌ಇಂಡಿಯಾ ನ್ಯೂಸ್‌ನಲ್ಲಿ ಕೆಲಸ ಕಳಕೊಂಡ ನೂರಾರು ಮಂದಿ!
ಡೈಲಿಹಂಟ್‌ನಲ್ಲಿ ಭರ್ಜರಿ ಉದ್ಯೋಗ ಕಡಿತ, ಒನ್‌ಇಂಡಿಯಾ ನ್ಯೂಸ್‌ನಲ್ಲಿ ಕೆಲಸ ಕಳಕೊಂಡ ನೂರಾರು ಮಂದಿ!
ವರ್ಸೆ ಇನ್ನೋವೇಶನ್ ತನ್ನ ದೀರ್ಘಕಾಲೀನ ಗುರಿಗಳಿಗೆ ಹೊಂದಿಕೊಳ್ಳುವ ದೃಷ್ಟಿಯಿಂದ 350 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. AI ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಮಾಡುವುದು ಮತ್ತು ಕಾರ್ಯಾಚರಣೆಗಳನ್ನು ಸುಗಮಗೊಳಿಸುವುದು ಕಂಪನಿಯ ಉದ್ದೇಶವಾಗಿದೆ ಎಂದು ಹೇಳಿದೆ. ಈ ಬಗ್ಗೆ ಇಂಡಿಯನ್ ಎಕ್ಸೆಪ್ರೆಸ್, ಮನಿ ಕಂಟ್ರೋಲ್, ಎಕಾನಮಿಕ್ ಟೈಮ್ಸ್ ಸೇರಿ ಹಲವು ವೆಬ್‌ಸೈಟ್ಸ್ ಸೇರಿ ಹಲವು ವೆಬ್‌ತಾಣಗಳು ಸುದ್ದಿ ಪ್ರಕಟಿಸಿದೆ.

ನ್ಯೂಸ್ ಅಗ್ರಿಗೇಟರ್ಸ್ ಆಗಿರುವ ಡೈಲಿ ಹಂಟ್, ಶಾರ್ಟ್ ವಿಡಿಯೋ ಜೋಶ್ , ಡಿಜಿಟಲ್ ಸುದ್ದಿಗಳನ್ನು ಜಗತ್ತಿಗೆ ನೀಡುವ ಒನ್‌ಇಂಡಿಯಾ ನ್ಯೂಸ್ ಸೇರಿದಂತೆ ಹಲವು ಸಂಸ್ಥೆಗಳ ಮಾತೃ ವರ್ಸೆ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ (VerSe Innovation) ತನ್ನ ದೀರ್ಘಕಾಲೀನ ಗುರಿಗಳಿಗೆ ಹೊಂದಿಕೊಳ್ಳುವ ದೃಷ್ಟಿಯಿಂದ ತನ್ನ ಕಾರ್ಯತಂತ್ರವನ್ನು ಬದಲಾಯಿಸುತ್ತಿದ್ದು, ಈ ತಿಂಗಳು ಉದ್ಯೋಗಿಗಳ ಸಂಖ್ಯೆಯಲ್ಲಿ 350 ಕಡಿತ ಮಾಡಿರುವುದಾಗಿ ಶನಿವಾರ ಘೋಷಿಸಿದೆ. ಇದು ಕಂಪನಿಯ ಎರಡೂವರೆ ವರ್ಷಗಳ ನಂತರದ ಮತ್ತೊಂದು ಬಹುದೊಡ್ಡ ಉದ್ಯೋಗ ಕಡಿತವಾಗಿದೆ. ಈ ಹಿಂದೆ ವೆಚ್ಚದ ನಿಯಂತ್ರಣದ ಭಾಗವಾಗಿ 150 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿತ್ತು. ಇದರ ಜೊತೆಗೆ ಅಂಗ ಸಂಸ್ಥೆ ಒನ್‌ಇಂಡಿಯಾ ನ್ಯೂಸ್ ನಲ್ಲಿ ಕೂಡ ನೂರಾರು ಮಂದಿಯನ್ನು ಕೆಲಸದಿಂದ ತೆಗೆದಿದ್ದಾರೆ. ಮುಂದೆ ಓದಿ......
ಕಂಪನಿಯ ವಕ್ತಾರರು ಹೇಳುವಂತೆ ಈ ಬದಲಾವಣೆಯು AI ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಮಾಡುವುದು, ಕಾರ್ಯಾಚರಣೆಗಳನ್ನು ಸುಗಮಗೊಳಿಸುವುದು ಮತ್ತು ಕಂಪನಿಯ ಆಂತರಿಕ ವ್ಯವಸ್ಥೆಯನ್ನು ದೀರ್ಘಕಾಲೀನ ಉದ್ದೇಶಗಳಿಗೆ ತಕ್ಕಂತೆ ತಿದ್ದುಪಡಿ ಮಾಡುವ ಗುರಿಯನ್ನು ಇಟ್ಟುಕೊಂಡಿದೆಯಂತೆ. ಕಂಪೆನಿಯ CEO ಉಮಾಂಗ್ ಬೇಡಿ ಹೇಳುವಂತೆ, VerSe ಈಗಾಗಲೇ ತನ್ನ ಕೆಳಗೆ ಕೆಲಸ ಮಾಡುತ್ತಿರುವ ಪ್ರತಿಯೊಂದು ವಿಭಾಗಗಳಲ್ಲೂ AI ತಂತ್ರಜ್ಞಾನವನ್ನು ಅಳವಡಿಕೆ ಮಾಡುತ್ತಿದೆ. ಇದರಿಂದ ಬಳಕೆದಾರರ ಸಮಸ್ಯೆಗಳನ್ನು ಕಡಿಮೆ ಮಾಡುವುದು, ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಮತ್ತು ಆದಾಯವನ್ನು ಹೆಚ್ಚಿಸುವುದು ಸಾಧ್ಯವಾಗುತ್ತಿದೆಯಂತೆ.
VerSe ತನ್ನ ಹಲವು ಉದ್ಯೋಗಿಗಳು ಮಾಡುವ ಕೆಲಸವನ್ನು ಸ್ವಯಂಚಾಲಿತಗೊಳಿಸುತ್ತಿದ್ದು, ಇದರ ಫಲವಾಗಿ ವರ್ಷಾಂತ್ಯದೊಳಗೆ ಲಾಭದಾಯಕ ಸಂಸ್ಥೆಯಾಗಿ ಹೊರಹೊಮ್ಮಲು ಆಶಿಸುತ್ತಿದೆ. ಭವಿಷ್ಯದಲ್ಲಿ ಹೊಸ ಕಂಪನಿಗಳನ್ನು ಪಡೆದುಕೊಳ್ಳುವುದು ಮತ್ತು ನೂತನ ಸೇವೆಗಳ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳುವುದು ಕಂಪನಿಯ ಮಹತ್ವದ ಉದ್ದೇಶವಾಗಿದೆ.
2023–24 ಹಣಕಾಸು ವರ್ಷದಲ್ಲಿ, VerSe ತನ್ನ EBITDA ನಷ್ಟವನ್ನು 51% ರಷ್ಟು ಕಡಿಮೆ ಮಾಡಿದೆ. 1,448 ಕೋಟಿ ರೂ.ಗಳಿಂದ 710 ಕೋಟಿ ರೂ.ಗಳಿಗೆ ಇಳಿಕೆ ಮಾಡಿದೆ. ಈ ಸಾಧನೆ ಸೇವೆ ಮತ್ತು ಮಾರ್ಕೆಟಿಂಗ್ ವೆಚ್ಚಗಳನ್ನು ಕಡಿತಗೊಳಿಸಿದ ಫಲಿತಾಂಶವಾಗಿದೆ. ಆರ್ಥಿಕ ವರ್ಷ FY24ರ ಒಟ್ಟು ಆದಾಯವು 1,261 ಕೋಟಿ ರೂಪಾಯಿ ಆಗಿತ್ತು. 2024–25 ರಲ್ಲಿ, VerSe ಭಾರತೀಯ ಡಿಜಿಟಲ್ ಜಾಹೀರಾತು ಮಾರುಕಟ್ಟೆಯಲ್ಲಿ ನಡೆಯುವ ನಿರೀಕ್ಷಿತ 10–15% ಬೆಳವಣಿಗೆಯಿಗಿಂತಲೂ ಹೆಚ್ಚು 75% ಕ್ಕಿಂತ ಹೆಚ್ಚಿನ ಆದಾಯದ ಬೆಳವಣಿಗೆ ನ್ನು ನಿರೀಕ್ಷಿಸುತ್ತಿದೆ. ಇದನ್ನು NexVerse.ai ಎಂಬ ಹೊಸ AdTech ಪ್ಲಾಟ್‌ಫಾರ್ಮ್, Magzter ಜತೆಗಿನ ಡೈಲಿಹಂಟ್ ಪ್ರೀಮಿಯಂ ಸೇವೆ, ಮತ್ತು VerSe Collab ಎಂಬ ಪ್ರಭಾವಿ ಮಾರುಕಟ್ಟೆ ವೇದಿಕೆ ಮುಂತಾದ AI ಆಧಾರಿತ ಉಪಕರಣಗಳು ಬಳಸಿಕೊಳ್ಳಲು ಮುಂದಾಗಿದೆ
ಬೆಂಗಳೂರು ಮೂಲದ ಸುದ್ದಿ ಮತ್ತು ಇ-ಪುಸ್ತಕಗಳ ಮೊಬೈಲ್ ಅಪ್ಲಿಕೇಶನ್ ಡೈಲಿಹಂಟ್ 2016ರಲ್ಲಿ ಡಿಜಿಟಲ್ ನ್ಯೂಸ್ ಪೋರ್ಟಲ್ ನಲ್ಲಿ ಉನ್ನತ ಸ್ಥಾನದಲ್ಲಿದ್ದ ಒನ್‌ಇಂಡಿಯಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಒನ್‌ಇಂಡಿಯಾವನ್ನು ಖರೀದಿಸುವುದಕ್ಕೂ ಮುನ್ನ ವರ್ಸೆ ತನ್ನ ಡೈಲಿಹಂಟ್ ಮೂಲಕ ಇತರ ಡಿಜಿಟಲ್ ಮೂಲಗಳಿಂದ ಸುದ್ದಿ ಸಂಗ್ರಹಿಸಿ ಓದುಗರಿಗೆ ತಲುಪಿಸುತ್ತಿತ್ತು. ಬಳಿಕ ತಾನೇ ಸುದ್ದಿ ಉತ್ಪಾದಿಸುವ ಸಂಸ್ಥೆಯಾಗಿ ಒನ್‌ಇಂಡಿಯಾಗೆ ಪೋಷಕ ಸಂಸ್ಥೆಯಾಯ್ತು. ಆದರೆ ಈಗ ಹಲವು ಭಾಷೆಗಳಲ್ಲಿ ಡಿಜಿಟಲ್ ಮೂಲಕ ಸುದ್ದಿ ತಲುಪಿಸುತ್ತಿರುವ ಒನ್‌ಒಂಡಿಯಾದಲ್ಲೂ ನೂರಾರು ಜನರನ್ನು ಕೆಲಸದಿಂದ ಕಿತ್ತುಹಾಕಿದೆ. ಡೈಲಿ ಹಂಟ್ ಸಂಸ್ಥಾಪಕ ವೀರೇಂದ್ರ ಗುಪ್ತಾ ಮತ್ತು ಸಿಇಒ ಉಮಾಂಗ್ ಬೇಡಿ ಅವರ ಮುಂದಿನ ಯೋಜನೆ ಏನು ಎಂಬುದು ಭವಿಷ್ಯದಲ್ಲಿ ತಿಳಿಯಲಿದೆ.
2021ರಲ್ಲಿ ಕಿರು-ವಿಡಿಯೋ ಪ್ಲಾಟ್‌ಫಾರ್ಮ್ ಜೋಶ್ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಯ್ತು. ಡೈಲಿಹಂಟ್ ಪೋಷಕ ಕಂಪನಿಯಾದ ವರ್ಸೆ ಜೋಶ್ ಗಾಗಿ 1.5 ಬಿಲಿಯನ್ ಬಂಡವಾಳ ಹೂಡಿಕೆ ಮಾಡಿತು. ಜುಲೈ 2023 ರಿಂದ ಮಾಸಿಕ ಡೌನ್‌ಲೋಡ್‌ಗಳಲ್ಲಿ 80% ಕ್ಕಿಂತ ಹೆಚ್ಚು ಕುಸಿತ ಮತ್ತು 50% MAU ಕುಸಿತದಿಂದಾಗಿ ಲಾಭ ಗಳಿಸುವ ಜೋಶ್‌ನ ಪ್ರಯತ್ನಗಳು ವಿಫಲವಾದವು. ಕಿರು ವೀಡಿಯೊ ಅಪ್ಲಿಕೇಶನ್ ಜೋಶ್ ಹಾಕಿದ ಬಂಡವಾಳಕ್ಕೆ ಲಾಭ ಗಳಿಸುವಲ್ಲಿ ಸೋತು 2 ವರ್ಷಗಳಲ್ಲೇ ಮುಚ್ಚುವ ಸ್ಥಿತಿಯಲ್ಲಿದೆ ಎನ್ನಲಾಗಿದೆ. ಈ ಮೂಲಕ ಶೇರ್‌ಚಾಟ್ ಬೆಂಬಲಿತ ಮೋಜ್, ಟ್ರೆಲ್, ಎಂಎಕ್ಸ್ ಟಕಾಟಕ್, ಚಿಂಗಾರಿ ಮತ್ತು ಇತರ ಭಾರತೀಯ ಕಿರು ವೀಡಿಯೊ ಅಪ್ಲಿಕೇಶನ್‌ಗಳಂತೆ ಈಗ ಇತಿಹಾಸದ ಪುಟ ಸೇರಲು