'ಏನೂ ಮಾಡದೆ' ಲಕ್ಷಾಂತರ ಸಂಪಾದಿಸುವ ವ್ಯಕ್ತಿ…. ಅಷ್ಟಕ್ಕೂ ಆತ ಮಾಡ್ತಿರೋದೇನು?
ಟೋಕಿಯೊದ 39 ವರ್ಷದ ಶೋಜಿ ಮೊರಿಮೊಟೊ (Shoji Morimoto) 2018 ರಲ್ಲಿ ವಿಶಿಷ್ಟ ವ್ಯವಹಾರ ಪ್ರಾರಂಭಿಸಿದರು. ಅವನು ತನ್ನನ್ನು 'ಬಾಡಿಗೆ ವ್ಯಕ್ತಿ' ಎಂದು ಪರಿಚಯಿಸಿಕೊಂಡನು. ತನ್ನನ್ನು ತಾನು ಬಾಡಿಗೆ ನೀಡುವ ಮೂಲಕ ಲಕ್ಷಾಂತರ ರೂಪಾಯಿ ಗಳಿಸಿದ್ದಾನೆ ಈತ.
ಜನರು ಕೆಲಸಕ್ಕಾಗಿ ಸಂಬಳ ತೆಗೆದುಕೊಳ್ಳುತ್ತಾರೆ ಅಲ್ವಾ? ಕೆಲವರು ಕಡಿಮೆ ಹಣ ಪಡೆಯುತ್ತಾರೆ ಮತ್ತು ಕೆಲವರು ಹೆಚ್ಚು ಹಣ ಪಡೆಯುತ್ತಾರೆ. ಆದರೆ ಏನೂ ಮಾಡದೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿರುವ ಒಬ್ಬ ವ್ಯಕ್ತಿ ಇದ್ದಾನೆ ಅನ್ನೋದು ಗೊತ್ತಾ?. ಅವನು 'ಏನೂ ಮಾಡದೆ; ಹಣ ತೆಗೆದುಕೊಳ್ಳುತ್ತಾನೆ. ಅದು ಹೇಗೆ ಸಾಧ್ಯ ಎಂದು ನೀವು ಅಂದುಕೊಂಡಿದ್ರೆ, ಈ ಲೇಖನವನ್ನು ಪೂರ್ತಿಯಾಗಿ ಓದಿ…
ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಟೋಕಿಯೊ ನಿವಾಸಿ 39 ವರ್ಷದ ಶೋಜಿ ಮೊರಿಮೊಟೊ (Shoji Morimoto) 2018 ರಲ್ಲಿ ವಿಶಿಷ್ಟ ವ್ಯವಹಾರವನ್ನು ಪ್ರಾರಂಭಿಸಿದರು. ಅವನು ತನ್ನನ್ನು 'ಬಾಡಿಗೆ ವ್ಯಕ್ತಿ' ಎಂದು ಪರಿಚಯಿಸಿಕೊಂಡನು, ಅಂದರೆ, ಖಾಲಿ ಇರುವ ಮತ್ತು ನಿಮಗೆ ಬಾಡಿಗೆಗೆ ಲಭ್ಯವಿರುವ ವ್ಯಕ್ತಿ. ಆದರೆ ಅವರು ಏನನ್ನೂ ಮಾಡಬೇಕಾಗಿಲ್ಲ.
ಹಾಗಿದ್ರೆ ಇವನಿಗೆ ದುಡ್ಡು ಯಾಕೆ ಸಿಗುತ್ತೆ ಎಂದು ನೀವು ಅಂದುಕೊಂಡಿರಬಹುದು. ಇವನೇನು ಮಾಡ್ತಾ ಇರಬಹುದು ಎಂದು ನೀವು ಕೇಳೊದಾದ್ರೇ ನಾವು ಹೇಳ್ತಿವಿ ಕೇಳಿ…. ಜನರೊಂದಿಗೆ ಕುಳಿತುಕೊಳ್ಳೋದು, ಅವರೊಂದಿಗೆ ಕಷ್ಟ ಸುಖ ಕೇಳಿಕೊಂಡು ಮಾತನಾಡೋದು,. ಸ್ನೇಹಿತನಂತೆ ಅವರ ಮಾತನ್ನು ಕೇಳಿಸಿಕೊಳ್ಳೋದು ಮತ್ತು ಅವರ ನೋವು ಮತ್ತು ದುಃಖ ಹಂಚಿಕೊಳ್ಳೋದು. ಇದಕ್ಕೆ ಪ್ರತಿಯಾಗಿ, ಈತನಿಗೆ ಬಾಡಿಗೆ ನೀಡುತ್ತಾರಂತೆ.
ಶೋಜಿ ಮೊರಿಮೊಟೊ ಇದನ್ನೇ ಐದು ವರ್ಷಗಳಿಂದ ಮಾಡುತ್ತ ಬಂದಿದ್ದಾರೆ. ಅವನು ಜನರ ಬಳಿ ಸುಮ್ಮನೆ ಹೋಗಿ ಇದ್ದು ಬರೋದಕ್ಕೆ ಅವನಿಗೆ ಬಾಡಿಗೆ ಹಣ (rental money) ನೀಡುತ್ತಾರೆ ಜನ. ಇದನ್ನು ಜನರು ಸೆಲ್ಫ್ ಸರ್ವೀಸ್ ಫೀಸ್ (self service fees) ಎನ್ನುತ್ತಾರೆ. ಇಂತಹ ಜನರಿಗೆ ಬೇಡಿಕೆ ಕೂಡ ಹೆಚ್ಚಿದೆ. ಜೊತೆಗೆ ತಮ್ಮ ಬಳಿ ಇಂತವರನ್ನು ಇಟ್ಟುಕೊಳ್ಳಲೂ ಜನ ಬಯಸುತ್ತಾರೆ.
ಪ್ರತಿ ಬುಕಿಂಗ್ ಗೆ ಸುಮಾರು 5,633 ರೂ. ಪಡೆಯುತ್ತಾನೆ ಈತ
ಮೊರಿಮೊಟೊ ಸ್ವತಃ ಇದರ ಕುರಿತು ಮಾಹಿತಿ ನೀಡಿದ್ದು, ಉದ್ಯಮ ಪ್ರಾರಂಭಿಸಿದಾಗಿನಿಂದ, ಅವರು 4000ಕ್ಕೂ ಹೆಚ್ಚು ಜನರಿಗೆ ಕೆಲಸ ಮಾಡಿದ್ದಾರೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಅವರು ಪ್ರತಿ ಬುಕಿಂಗ್‌ಗೆ 10,000 ಯೆನ್ (ಸುಮಾರು 5,633 ರೂ.) ಪಡೆಯುತ್ತಾರೆ. ಸಾಮಾನ್ಯವಾಗಿ ಮೊರಿಮೊಟೊ ಯಾರು ಬುಕ್ಕಿಂಗ್ ಮಾಡಿದ್ದಾರೋ ಅವರ ಜೊತೆ ಹೋಗುತ್ತಾರೆ.
ಉದಾಹರಣೆಗೆ ಯಾರಾದರೂ ಕ್ಲಬ್ ಗೆ ಹೋಗಲು ಬಯಸುತ್ತಾರೆ ಮತ್ತು ಕಪಲ್ಸ್‌ಗೆ ಅವಕಾಶ ಸಿಗುತ್ತದೆ, ಆವಾಗ ಸಿಂಗಲ್ ಆಗಿರುವ ವ್ಯಕ್ತಿ ಜೊತೆ ಕಪಲ್ ಆಗಿ ಶೋಜಿ ಹೋಗ್ತಾರೆ.ಪಾರ್ಟಿಗೆ ಹೋಗಲು ಬಯಸಿದರೆ, ವಾಕಿಂಗ್ ಹೋಗಲು ಬಯಸಿದರೂ ಸಹ ಅವರ ಜೊತೆ ಶೋಜಿ ಹೋಗ್ತಾರೆ. ಆದರೆ ಗಂಟೆಗೊಮ್ಮೆ ಈ ದರ ಏರಿಕೆಯಾಗುತ್ತಾ ಹೋಗುತ್ತಂತೆ.
ಬಾಡಿಗೆಗೆ ನನ್ನನ್ನು ಅರ್ಪಿಸಿಕೊಳ್ಳುತ್ತೇನೆ ಎನ್ನುತ್ತಾರೆ ಶೋಜಿ
ಶೋಜಿ ಬಾಡಿಗೆಗಾಗಿ ತನ್ನನ್ನು ತಾನು ಅರ್ಪಿಸುತ್ತಾನೆ. ಅಲ್ಲದೇ ಆನ್ ಲೈನ್ (online) ಮೂಲಕವೇ ಹೆಚ್ಚಿನ ಗ್ರಾಹಕರನ್ನು ಸಹ ಪಡೆದಿದ್ದಾರೆ. ವರದಿ ಪ್ರಕಾರ, ಶೋಜಿ ನಾಲ್ಕು ವರ್ಷಗಳಲ್ಲಿ 3 ಕೋಟಿ ಗಳಿಸಿದ್ದಾರೆ. ಅವನು ಯಾವ ಕೆಲಸವನ್ನು ಮಾಡುತ್ತಾನೆ ಮತ್ತು ಯಾವುದನ್ನು ಮಾಡುವುದಿಲ್ಲ, ಅನ್ನೋದು ಸಂಪೂರ್ಣವಾಗಿ ಅವನ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಕೆಲವೊಮ್ಮೆ ಕೆಲಸ ಅರ್ಥವಾಗದೇ ಇದ್ದರೆ, ಅಥವಾ ಮಾಡಲು ಇಷ್ಟವಿಲ್ಲದಿದ್ದರೆ, ಅವನು ಹೋಗೋದೆ ಇಲ್ವಂತೆ.