ಸುಂದರ ದ್ವೀಪದಲ್ಲಿ ಕೆಲಸಕ್ಕೆ ಆಹ್ವಾನ… ಊಟ, ತಿಂಡಿ, ವಸತಿ ಎಲ್ಲವೂ ಉಚಿತ ಆದ್ರೆ ...!?
ದ್ವೀಪ ಅಥವಾ ಐಲ್ಯಾಂಡ್ ನಂತಹ ಒಂದು ಸುಂದರ ಸ್ಥಳದಲ್ಲಿ ಉಚಿತ ವಸತಿ ಮತ್ತು ಆಹಾರ ಎಲ್ಲವೂ ಸಿಕ್ಕಿದ್ರೆ ಎಂತಹ ಅದೃಷ್ಟ ಅಲ್ವಾ?. ಇದಲ್ಲದೆ, ಅಲ್ಲಿ ಹಣವನ್ನು ಸಂಪಾದಿಸುವ ವ್ಯವಸ್ಥೆ ಇದ್ದರೆ, ಮತ್ತೆ ಹಿಂತಿರುಗುವ ಪ್ರಶ್ನೆಯೇ ಇಲ್ಲ. ಇದೆಲ್ಲವನ್ನೂ ನೀಡುವ ಸ್ಥಳವಿದೆ ಅಂದ್ರೆ ನೀವು ನಂಬಲೇಬೇಕು.
ನಾವು ಯಾವುದೇ ಸುಂದರ ಸ್ಥಳಕ್ಕೆ ಹೋದಾಗ, ಇಲ್ಲಿ ಇದ್ದು ಬಿಡಬಾರದೇ ಎಂದು ಅನಿಸೋದು ಖಂಡಿತಾ ಅಲ್ವಾ? ಅದರಲ್ಲೂ ಐಲ್ಯಾಂಡ್ ಗಳಿಗೆ ಹೋದಾಗ, ಅಥವಾ ಅಂತಹ ಫೋಟೋಗಳನ್ನು ನೋಡಿದ್ರೆ, ಮನಸು ತೇಲಾಡಿ ಬಿಡುತ್ತೆ. ಆದ್ರೆ ಅಂತಹ ಸ್ಥಳಗಳಲ್ಲಿ ಉಳಿಯೋದು ಅಷ್ಟೊಂದು ಸುಲಭ ಅಲ್ಲ. ಯಾಕಂದ್ರೆ ಅಲ್ಲಿಯೇ ಉಳಿಯಬೇಕಂದ್ರೆ ಲಕ್ಷಾಂತರ, ಕೊಟ್ಯಾಂತರ ರೂಪಾಯಿ ಖರ್ಚು ಮಾಡಬೇಕಾಗಿ ಬರುತ್ತೆ. ಅಂತಹ ಪರಿಸ್ಥಿತಿಯಲ್ಲಿ, ಉತ್ತಮ ಸ್ಥಳದಲ್ಲಿ ಫ್ರೀ ಆಗಿ ವಾಸಿಸಲು ಯಾರಾದರೂ ನಿಮಗೆ ಆಫರ್ ನೀಡಿದ್ರೆ ಎಷ್ಟು ಚೆನ್ನಾಗಿರುತ್ತದೆ ಎಂದು ಊಹಿಸಿ!
ಒಂದು ಅದ್ಭುತ ಐಲ್ಯಾಂಡ್ ನಲ್ಲಿ (Island) ಫ್ರೀ ಆಗಿ ವಾಸಿಸುವಂತಹ ಒಂದು ಅವಕಾಶವನ್ನು ಐರ್ಲೆಂಡ್ ನ ಅತ್ಯಂತ ಸುಂದರವಾದ ಗ್ರೇಟ್ ಬ್ಲಾಸ್ಸೇಟ್ ದ್ವೀಪವು ನೀಡುತ್ತಿದೆ, ಇದು ಒಬ್ಬ ವ್ಯಕ್ತಿಗೆ ಅಲ್ಲ, ಕಪಲ್ಸ್ ಗೆ. ಅಲ್ಲಿನ ದ್ವೀಪವೇ ಹಣವನ್ನು ಪಾವತಿಸುವ ಮೂಲಕ ದಂಪತಿಗೆ ಬದುಕುವ ಅವಕಾಶವನ್ನು ನೀಡುತ್ತಿದೆ. ಇದರ ಫುಲ್ ಡಿಟೇಲ್ಸ್ ಅನ್ನು ನೀವು ತಿಳಿಯಿರಿ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಈ ಅವಕಾಶವು ಐರ್ಲೆಂಡ್ ನ ಗ್ರೇಟ್ ಬ್ಲಾಸ್ಕೆಟ್ ದ್ವೀಪ (Great Blasket Island) ನೀಡುತ್ತಿದೆ.. ಅಂತಹ ಸುಂದರವಾದ ಸ್ಥಳದಲ್ಲಿ ಉಚಿತ ವಸತಿ ಮತ್ತು ಆಹಾರ ಪಡೆಯಲು ಯಾರು ಇಷ್ಟಪಡೋದಿಲ್ಲ ಹೇಳಿ? ಇದಲ್ಲದೆ, ಅಲ್ಲಿ ಹಣವನ್ನು ಸಂಪಾದಿಸುವ ವ್ಯವಸ್ಥೆ ಇದ್ದರೆ, ಹಿಂತಿರುಗುವ ಪ್ರಶ್ನೆಯೇ ಇಲ್ಲ. ಗ್ರೇಟ್ ಬ್ಲೇಜ್ ಎಲ್ಲವನ್ನೂ ನೀಡುತ್ತಿದೆ. ಇಲ್ಲಿ ಪ್ರವಾಸಿಗರ ಕೊರತೆಯಿಲ್ಲದಿದ್ದರೂ, ಜನರನ್ನು ಉಚಿತವಾಗಿ ಕರೆಯುತ್ತಿರೋದು ಯಾಕೆ?
ಇಲ್ಲಿ ಏನೇನು ಕೆಲಸ ಮಾಡಬೇಕು?
ಇಲ್ಲಿಗೆ ಪ್ರವಾಸಿಗರು (tourist) ಹೆಚ್ಚಿನ ಸಂಖ್ಯೆಯಲ್ಲೇ ಬರುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ದಂಪತಿಗಳನ್ನು ಇಲ್ಲಿ ಉದ್ಯೋಗಕ್ಕಾಗಿ ಕರೆಯಲಾಗುತ್ತಿದೆ, ಅವರು ಈ ಪ್ರವಾಸಿಗರ ಸೇವೆಯಲ್ಲಿ ತೊಡಗಬೇಕಾಗುತ್ತೆ. ಅಷ್ಟೇ ಅಲ್ಲ ಕಪಲ್ಸ್ ಅತಿಥಿಗಳಿಗೆ ಚಹಾ ಮತ್ತು ಕಾಫಿಯನ್ನು ಸರ್ವ್ ಮಾಡಬೇಕು ಮತ್ತು ಅವರ ಅಗತ್ಯಗಳನ್ನು ನೋಡಿಕೊಳ್ಳಬೇಕು. ಈ ಕೆಲಸಕ್ಕೆ ಸಂಬಳ ನೀಡಲಾಗುವುದು ಮತ್ತು ಅದೇ ಶಾಪ್ ನ ಮಹಡಿಯ ಅಪಾರ್ಟ್ಮೆಂಟ್ನಲ್ಲಿ ವಾಸಿಸಲು ವ್ಯವಸ್ಥೆ ಕೂಡ ಪಡೆಯುತ್ತೀರಿ
ರಜೆ ಇಲ್ಲದೇ ಕೆಲಸ ಮಾಡಬೇಕು
ಈ ಕೆಲಸವು 2024 ರ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ನಡೆಯುತ್ತದೆ ಏಕೆಂದರೆ ಇದು ಇಲ್ಲಿನ ಪ್ರವಾಸೋದ್ಯಮದ (tourism) ದೃಷ್ಟಿಯಿಂದ ಗರಿಷ್ಠ ಋತುವಾಗಿದೆ. ಆತಿಥ್ಯ ನೀಡುವಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು ಮತ್ತು ಅವರಿಗೆ ಇಂಗ್ಲಿಷಿನಲ್ಲಿ ಮಾತನಾಡಲು ಗೊತ್ತಿರಬೇಕು ಎಂದು ದ್ವೀಪದ ವೆಬ್ಸೈಟ್ ಹೇಳುತ್ತದೆ. ಒಂದೇ ಸಮಸ್ಯೆಯೆಂದರೆ ಈ ಉದ್ಯೋಗವು ನಿಮಗೆ ಒಂದೇ ಒಂದು ರಜೆ ನೀಡುವುದಿಲ್ಲ ಮತ್ತು ಅರ್ಜಿ ಸಲ್ಲಿಸುವವರ ವಯಸ್ಸು 40 ವರ್ಷಗಳಿಗಿಂತ ಕಡಿಮೆ ಇರಬೇಕು
ಆಫರ್ ಈ ಹಿಂದೆಯೇ ಇತ್ತು
ಕೆಲವು ಸಮಯದ ಹಿಂದೆ, Fairfax and Kensington ಎಂಬ ನೇಮಕಾತಿ ಸಂಸ್ಥೆ ಬ್ರಿಟಿಷ್ ವರ್ಜಿನ್ ದ್ವೀಪ ಇದೇ ರೀತಿಯ ವರದಿ ಮಾಡಿತು. ಇಲ್ಲಿ ಬಿಲಿಯನೇರ್ ಒಬ್ಬರು ಖಾಸಗಿ ದ್ವೀಪದಲ್ಲಿ ಕಪಲ್ಸ್ ಗೆ ಪೂರ್ಣ ಸಮಯದ ಉದ್ಯೋಗವನ್ನು ನೀಡುತ್ತಿದ್ದರು. ನಿವಾಸಿಗಳು ಇಲ್ಲಿನ ಜೀವನವನ್ನು ಇನ್ ಫ್ಲ್ಯೂಯನ್ಸರ್ ರೀತಿ ಡಾಕ್ಯುಮೆಂಟ್ ಮಾಡಬೇಕಾಗಿತ್ತು ಮತ್ತು ಪ್ರತಿಯಾಗಿ ಅವರಿಗೆ ಹೆಚ್ಚಿನ ಸಂಬಳ ಮತ್ತು ಅನೇಕ ಸೌಲಭ್ಯಗಳನ್ನು ಸಹ ನೀಡಲಾಗುತ್ತಿತ್ತು. ಅಂತಹ ಕೊಡುಗೆಗಳ ಲಾಭವನ್ನು ಪಡೆಯಲು ನೀವು ಬಯಸುವಿರಾ?