ಮತದಾನಕ್ಕೆ ಒಂದು ದಿನ ಇರುವಾಗಲೇ ನಾಡ ದೇವತೆಗೆ ಕಾಂಗ್ರೆಸ್ ಜೋಡೆತ್ತುಗಳ ವಿಶೇಷ ಪ್ರಾರ್ಥನೆ
ಮೈಸೂರು (ಮೇ.9): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಾಡದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಒಂದೇ ಕಾರಿನಲ್ಲಿ ಜೊತೆಗೆ ಆಗಮಿಸಿದ ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವ ಕೆ.ಜಿ.ಜಾರ್ಜ್, ಶಾಸಕ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಸ್ಥಳೀಯ ಮುಖಂಡರು ಸಾಥ್ ನೀಡಿದರು.
ನಾಡದೇವತೆ ಚಾಮುಂಡೇಶ್ವರಿ ಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ಕಾಂಗ್ರೆಸ್ ನ ಐದು ಗ್ಯಾರಂಟಿ ಗಳನ್ನು ನಾಡಿನ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡುವಂತೆ ವಿಶೇಷ ಪ್ರಾರ್ಥನೆ.
ಮನಸ್ಸಿದ್ದಲ್ಲಿ ಮಾರ್ಗ, ಭಕ್ತಿ ಇದ್ದಲಿ ಭಗವಂತ ಇದ್ದಾನೆ. ಭಕ್ತಿ ಪೂರ್ವಕವಾಗಿ ಪ್ರಾರ್ಥನೆ ಮಾಡಿದ್ದೇವೆ. ನಾವು ಕೊಟ್ಟ ಗ್ಯಾರೆಂಟಿಯನ್ನ ದೇವಿ ಸನ್ನಿಧಾನದಲ್ಲಿ ನಿಂತು ಹೇಳುತ್ತಿದ್ದೇನೆ. ಮೊದಲ ಕ್ಯಾಬಿನೆಟ್ ನಲ್ಲಿ ಜಾರಿ ಮಾಡ್ತೇವೆ. ಖಂಡಿತ ಮೇ 14 ರ ನಂತರ ಶುಭ ದಿನ ಬಂದೆ ಬರುತ್ತೆ-ಡಿಕೆಶಿ
ಇಡೀ ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದ್ರೆ, ಜನರಿಗೆ ದುಃಖ ಬಂದ್ರೆ ಅವೆಲ್ಲವನ್ನ ದೂರ ಮಾಡು ಅಂತ ನಾಡದೇವೆತೆ ಪ್ರಾರ್ಥನೆ ಮಾಡ್ತೀವಿ. ಹಾಗಾಗಿ ಇಲ್ಲಿಗೆ ಬಂದಿದ್ದೇವೆ. ಸದ್ಯ ಜನರಿಗಿರುವ ದುಃಖ ಸರ್ಕಾರ. ಇದನ್ನ ಜನ ಬದಲಾಯಿಸುವ ಇಚ್ಚೆ ಮಾಡಿದ್ದಾರೆ. ಆ ಕೆಲಸವನ್ನ ದೇವಿ ಮಾಡ್ತಾಳೆ ಅನ್ನೋ ನಂಬಿಕೆ ಇದೆ -ಡಿಕೆಶಿ
ನಾವು ನೆನ್ನೆ ಸಂಜೆ 6 ಗಂಟೆವರೆಗೂ ಪ್ರಚಾರ ಮಾಡಿದ್ದೇವೆ. ಇಂದು ನಾನು ಡಿಕೆಶಿ ಚಾಮುಂಡಿ ತಾಯಿ ದರ್ಶನ ಪಡೆದು ಆಶೀರ್ವಾದ ಬೇಡಿದ್ದೇವೆ. ಕಾಂಗ್ರೆಸ್ ಗೆ ಜನ ಆಶೀರ್ವಾದ ಮಾಡು ಆಶಯ ಇದೆ. ಜನ ಬದಲಾವಣೆ ತೀರ್ಪು ನೀಡಲಿದ್ದಾರೆ - ಸಿದ್ದರಾಮಯ್ಯ
ನಾವಿಬ್ಬರು ಒಟ್ಟಿಗೆ ಪ್ರಾರ್ಥನೆ ಮಾಡಿದ್ದೇವೆ. 150 ಸ್ಥಾನ ಬರಲಿ ಅಂತಾ ಪ್ರಾರ್ತನೆ ಮಾಡಿದ್ದೇವೆ. ದೊಡ್ಡ ಅಂತರದಲ್ಲಿ ಗೆಲ್ಲುವ ಆಶಯ ಇದೆ. ಈಗಾಗಲೇ ಗ್ಯಾರೆಂಟಿ ಕಾರ್ಡ್ ಕೊಟ್ಟಿದ್ದೇವೆ -ಸಿದ್ದರಾಮಯ್ಯ
ಮೊದಲ ಕ್ಯಾಬಿನೆಟ್ ನಲ್ಲಿ ನಾವು ಕೊಟ್ಟ ಗ್ಯಾರೆಂಟಿಯನ್ನ ಜಾರಿ ಮಾಡುತ್ತೇವೆ. ನಮಗೆ ಎಲ್ಲ ಗ್ಯಾರೆಂಟಿಗಳನ್ನ ಈಡೇರಿಸುವಂತೆ ಶಕ್ತಿ ಕೊಡು ಅಂತಾ ಪ್ರಾರ್ಥನೆ ಮಾಡಿದ್ದೇವೆ-
ಸಿದ್ದರಾಮಯ್ಯ