ಒಲಂಪಿಕ್ ವಿಜೇತರು ಗೆದ್ದ ಪದಕವನ್ನು ಕಚ್ಚೋದ್ಯಾಕೆ?
ಒಲಂಪಿಕ್ ಕ್ರೀಡಾಕೂಟಗಳಲ್ಲಿ ಅಥ್ಲೀಟ್‌ಗಳು ಗೆದ್ದ ನಂತರ ವಿಜೇತ ಪದಕಗಳನ್ನು ಕಚ್ಚುವುದನ್ನು ನಾವು ನೋಡಿದ್ದೇವೆ. ಈ ಅಭ್ಯಾಸಕ್ಕೆ ಅದರದೇ ಆದ ಒಂದು ಕಾರಣವಿದೆ, ಸುದೀರ್ಘ ಇತಿಹಾಸವನ್ನೂ ಹೊಂದಿದೆ. ಒಲಂಪಿಕ್ ವಿಜೇತರು ಪದಕ ಕಚ್ಚುವುದರ ಹಿಂದಿರುವ ಕೂತುಹಲಕಾರಿ ಅಂಶ ಏನು ಗೊತ್ತಾ?
ಒಲಿಂಪಿಕ್ ಕ್ರೀಡಾಕೂಟದಲ್ಲಿ ವಿಜೇತರು ಗೆದ್ದ ನಂತರ ಪದಕಗಳನ್ನು ಹೇಗೆ ಕಚ್ಚುತ್ತಾರೆ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ.
ಅದರ ಹಿಂದಿನ ಕಾರಣವೆಂದರೆ ಪದಕವು ನಿಜವಾದ ಚಿನ್ನವಾಗಿದೆಯೇ ಅಥವಾ ಇಲ್ಲವೇ ಎಂದು ವಿಜೇತರು ಪರಿಶೀಲಿಸುವುದು ಎಂದು ಹೇಳಲಾಗುತ್ತದೆ..
ಹೀಗೆ ವಿಜೇತರು ಗೆದ್ದ ನಂತರ ಪದಕಗಳನ್ನ ಕಚ್ಚುವ ಅಭ್ಯಾಸಕ್ಕೆ ಸುಮಾರು 100 ವರ್ಷಗಳ ಹಿಂದಿನ ಇತಿಹಾಸವಿದೆ. ಹಿಂದೆ ಒಲಿಂಪಿಕ್ ಇತಿಹಾಸಕಾರರಿಗೆ ಪದಕ ಚಿನ್ನದ್ದು ಖಚಿತವಾಗದಿದ್ದಾಗ ಈ ಪದ್ಧತಿಯು ಪ್ರಾರಂಭವಾಯಿತಂತೆ.
ಅವರ ಪ್ರಕಾರ ನಾಣ್ಯದ ಮೇಲೆ ಸಣ್ಣ ಹಲ್ಲಿನ ಗುರುತು ಬಿದ್ದರೆ ಅವರು ಗೆದ್ದ ಪದಕ ನಿಜವಾದ ಚಿನ್ನದಿಂದ ಮಾಡಲ್ಪಟ್ಟಿದೆ ಎಂದು ಸೂಚಿಸುತ್ತದೆ.
ನಿಜವಾದ ಚಿನ್ನದ ಪದಕ ನಕಲಿ ಚಿನ್ನದ ಲೇಪಿತ ಸೀಸದ ನಾಣ್ಯಗಳಿಗಿಂತ ಹೆಚ್ಚು ಮೆದುವಾಗಿರುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.
ಆದರೆ ಇಂದಿಗೂ ಗೆದ್ದಾಗ ಪದಕ ಕಚ್ಚುವ ಪದ್ಧತಿ ಮುಂದುವರಿಯುತ್ತಿದೆ. ಏಕೆಂದರೆ ಈಗ ವಿಜೇತರು ಅದನ್ನು ಸಂಪ್ರದಾಯದ ಗೌರವಕ್ಕಾಗಿ ಮಾಡುತ್ತಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.