ಕೋರ್ಟ್ರೂಮ್ ಡ್ರಾಮಾ ಸಿನಿಮಾಗಳಲ್ಲಿ ಟಾಪ್ 8, ಕೇಸರಿ ಚಾಪ್ಟರ್ 2 ದಾಖಲೆ ಮುರಿಯುತ್ತಾ?
ಅಕ್ಷಯ್ ಕುಮಾರ್ ಅವರ 'OMG 2' ಭಾರತದ ಅತಿ ಹೆಚ್ಚು ಗಳಿಕೆ ಮಾಡಿದ ಕೋರ್ಟ್‌ರೂಮ್ ಡ್ರಾಮಾ ಚಿತ್ರವಾಗಿದೆ. ಆದರೆ ಉಳಿದ ಟಾಪ್ ಚಿತ್ರಗಳ ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲಿದೆ ಪೂರ್ಣ ಪಟ್ಟಿ...

ಹೆಚ್ಚು ಗಳಿಕೆಯ ಕೋರ್ಟ್ರೂಮ್ ಡ್ರಾಮಾಗಳು
ಅಕ್ಷಯ್ ಕುಮಾರ್ ಮತ್ತು ಆರ್. ಮಾಧವನ್ ನಟಿಸಿರುವ 'ಕೇಸರಿ ಚಾಪ್ಟರ್ 2' ಏಪ್ರಿಲ್ 18 ರಂದು ಬಿಡುಗಡೆಯಾಗಲಿದೆ. ಬಾಲಿವುಡ್‌ನ ಅತಿ ಹೆಚ್ಚು ಗಳಿಕೆಯ ಕೋರ್ಟ್ರೂಮ್ ಡ್ರಾಮಾ ಚಿತ್ರಗಳು ಯಾವುವು ಮತ್ತು ಅವುಗಳ ಗಳಿಕೆ ಎಷ್ಟು ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ, ಇಲ್ಲಿ ನೋಡಿ...
8. ಜಾಲಿ ಎಲ್‌ಎಲ್‌ಬಿ (2013)
ವಿಶ್ವಾದ್ಯಂತ ಗಳಿಕೆ: 48.7 ಕೋಟಿ ರೂ. ಅರ್ಷದ್ ವಾರ್ಸಿ, ಬೋಮನ್ ಇರಾನಿ, ಸೌರಭ್ ಶುಕ್ಲಾ ಮತ್ತು ಅಮೃತಾ ರಾವ್ ನಟಿಸಿದ ಈ ಚಿತ್ರವನ್ನು ಸುಭಾಷ್ ಕಪೂರ್ ನಿರ್ದೇಶಿಸಿದ್ದಾರೆ.
7.ಕೋರ್ಟ್: ಸ್ಟೇಟ್ vs ನೋಬಡಿ
ವಿಶ್ವಾದ್ಯಂತ ಗಳಿಕೆ: 56 ಕೋಟಿ ರೂ. ಇದು ತೆಲುಗು ಭಾಷೆಯ ಚಿತ್ರವಾಗಿದ್ದು, ಇದನ್ನು ರಾಮ್ ಜಗದೀಶ್ ನಿರ್ದೇಶಿಸಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಇದೀಗ ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ.
6. ನೇರು (2023)
ವಿಶ್ವಾದ್ಯಂತ ಗಳಿಕೆ: 85.6 ಕೋಟಿ ರೂ. ಇದು ಮಲಯಾಳಂ ಚಿತ್ರವಾಗಿದ್ದು, ಇದನ್ನು ಜೀತು ಜೋಸೆಫ್ ನಿರ್ದೇಶಿಸಿದ್ದಾರೆ. ಈ ಚಿತ್ರ ಸಹ ಕಡಿಮೆ ಬಜೆಟ್ ನಿರ್ಮಾಣದಲ್ಲಿ ಉತ್ತಮ ಕಲೆಕ್ಷನ್ ದಾಖಲಿಸಿದೆ.
5. ಪಿಂಕ್ (2016)
ವಿಶ್ವಾದ್ಯಂತ ಗಳಿಕೆ: 104.26 ಕೋಟಿ ರೂ. ಅನಿರುದ್ಧ ರಾಯ್ ಚೌಧರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪಿಂಕ್ ಚಿತ್ರವು ವಿಮರ್ಶಕರು ಹಾಗೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಭಾರೀ ಹಿಟ್ ದಾಖಲಿಸಿದೆ.
4. OMG: ಓ ಮೈ ಗಾಡ್ (2012)
ವಿಶ್ವಾದ್ಯಂತ ಗಳಿಕೆ: 123.97 ಕೋಟಿ ರೂ. ಈ ಚಿತ್ರವನ್ನು ಉಮೇಶ್ ಶುಕ್ಲಾ ನಿರ್ದೇಶಿಸಿದ್ದಾರೆ. ಈ ಚಿತ್ರವು ಬಿಡುಗಡೆ ಆದಾಗ ಭಾರೀ ಚರ್ಚೆ ಹುಟ್ಟುಹಾಕಿತ್ತು.
3. ಜಾಲಿ ಎಲ್‌ಎಲ್‌ಬಿ 2 (2017)
ವಿಶ್ವಾದ್ಯಂತ ಗಳಿಕೆ: 197.34 ಕೋಟಿ ರೂ. ಈ ಚಿತ್ರವನ್ನು ಸುಭಾಷ್ ಕಪೂರ್ ನಿರ್ದೇಶಿಸಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
2. ರುಸ್ತಮ್ (2016)
ವಿಶ್ವಾದ್ಯಂತ ಗಳಿಕೆ: 218.12 ಕೋಟಿ ರೂ. ಈ ಚಿತ್ರವನ್ನು ಟೀನು ಸುರೇಶ್ ದೇಸಾಯಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ನಟಿಸಿದ್ದು, ಈ ಚಿತ್ರ ಕೂಡ ಹಿಟ್ ಲಿಸ್ಟ್‌ಗೆ ಸೇರಿಕೊಂಡಿದೆ.
1. OMG 2 (2023)
ವಿಶ್ವಾದ್ಯಂತ ಗಳಿಕೆ: 221.08 ಕೋಟಿ ರೂ. ಈ ಚಿತ್ರವನ್ನು ಅಮಿತ್ ರೈ ನಿರ್ದೇಶಿಸಿದ್ದಾರೆ. ಓ ಮೈ ಗಾಡ್ 2 ಚಿತ್ರ ಸಹ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ.