ಬಾಲಿವುಡ್ ಈ ಟಾಪ್ ನಟ-ನಟಿಯರಿಗೆ ತಮ್ಮ ಸಹೋದರನ್ನ ಕಂಡ್ರೆ ಆಗಲ್ಲ
ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಫ್ಯಾಮಿಲಿ ನೋಡಿದ್ರೆ ಅಲ್ಲಿ ಅಣ್ಣ ತಮ್ಮಂದಿರ ಮಧ್ಯೆ ಒಳ್ಳೆಯ ಭಾಂದವ್ಯ ಇದೆ. ಆದರೆ ಕೆಲವು ಸಹೋದರ, ಸಹೋದರಿಯರ ನಡುವೆ ಉತ್ತಮ ಬಾಂಧವ್ಯವೆ ಇಲ್ಲ. ಹೃತಿಕ್ ರೋಷನ್ ಮತ್ತು ಸುನಯನಾ ರೋಷನ್ ರಿಂದ ಅಮೀರ್ ಖಾನ್ ಮತ್ತು ಫೈಸಲ್ ಖಾನ್ ಈ ಪಟ್ಟಿಯಲ್ಲಿ ಸೇರಿದ್ದಾರೆ.
ಅಮಿತಾಭ್ ಬಚ್ಚನ್ (Amitabh Bacchan): ಮಾಧ್ಯಮ ವರದಿಗಳ ಪ್ರಕಾರ, ಅಮಿತಾಬ್ ಬಚ್ಚನ್ ಮತ್ತು ಅಜಿತಾಬ್ ಬಚ್ಚನ್ ನಡುವಿನ ಸಂಬಂಧವೂ ತುಂಬಾ ಉತ್ತಮವಾಗಿಲ್ಲ. ಇಬ್ಬರೂ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ. ಇಬ್ಬರು ಸರಿಯಾಗಿ ಮಾತನಾಡೋದು ಇಲ್ಲ ಎನ್ನಲಾಗುತ್ತಿದೆ.
ಅಮೀರ್ ಖಾನ್ (Amir Khan): ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ಅಮೀರ್ ವಿರುದ್ಧ ಅನೇಕ ಗಂಭೀರ ಆರೋಪಗಳನ್ನು ಮಾಡಿದ್ದರು. ಅಮೀರ್ ತನ್ನನ್ನು ಜೈಲಿನಲ್ಲಿರಿಸಿದ್ದಾನೆ ಎಂದು ಫೈಸಲ್ ಹೇಳಿದರು, ಜೊತೆಗೆ ಅವರನ್ನು ಮಾನಸಿಕ ಅಸ್ವಸ್ಥ ಎಂದು ಬಣ್ಣಿಸಿದರು.
ಸುಶ್ಮಿತಾ ಸೇನ್ (Sushmita Sen): ಒಡಹುಟ್ಟಿದವರಾಗಿದ್ದರೂ ಸುಶ್ಮಿತಾ ಸೇನ್ ಮತ್ತು ರಾಜೀವ್ ಸೇನ್ ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನಲಾಗುತ್ತಿದೆ. ಸುಶ್ಮಿತಾ ಸೇನ್ ಮತ್ತು ರಾಜೀವ್ ಸೇನ್ ಇನ್ನೊಬ್ಬರ ವ್ಯವಹಾರಗಳಿಂದ ದೂರವಿರಲು ಬಯಸುತ್ತಾರೆ.
ಪೂಜಾ ಭಟ್ (Pooja Bhatt): ಮಹೇಶ್ ಭಟ್ ಪುತ್ರಿಯಾದ ಮಾಜಿ ನಟಿ ಪೂಜಾ ಭಟ್ ತಮ್ಮ ಸಹೋದರ ರಾಹುಲ್ ಭಟ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿಲ್ಲ. ನಟಿಗೆ ತನ್ನ ಮಲ ಸಹೋದರ ಅಂದ್ರೆ ಇಷ್ಟಾನೇ ಇಲ್ಲ ಎಂದು ಹೇಳಲಾಗುತ್ತದೆ.
ಹೃತಿಕ್ ರೋಷನ್ (Hrithik Roshan): ಹೃತಿಕ್ ರೋಷನ್ ಮತ್ತು ಕಂಗನಾ ರನೌತ್ ನಡುವಿನ ವಿವಾದದ ಸಮಯದಲ್ಲಿ, ಹೃತಿಕ್ ರೋಶನ್ ಸಹೋದರಿ ಸುನಯನಾ ನಟಿಯನ್ನು ಬೆಂಬಲಿಸಿದ್ದರು. ಅವರು ಹೃತಿಕ್ ವಿರುದ್ಧ ವಿಷ ಕಾರಿದ್ದರು. ಹೀಗಾಗಿ ಇವರಿಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ಜಗಜ್ಜಾಹಿರಾಗಿತ್ತು.
ಅಮೀಷಾ ಪಟೇಲ್ (Ameesha Patel): 'ಗದರ್ 2' ನಟಿ ಅಮೀಷಾ ಪಟೇಲ್ ತನ್ನ ಸಹೋದರ ಅಶ್ಮಿತ್ ಪಟೇಲ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ. ಆದರೆ ಹಲವು ಸಮಯದ ನಂತರ, ಇಬ್ಬರ ಬಂಧವು ಸುಧಾರಿಸಿದೆ. ಈವಾಗ ಇಬ್ಬರು ಉತ್ತಮ ಬಾಂಧವ್ಯ ಹೊಂದಿದ್ದಾರೆ ಎನ್ನಲಾಗಿದೆ.