ಬೆಳಕನ್ನೇ ಕಾಣದೆ ಶತದಿನೋತ್ಸವ ಆಚರಿಸುತ್ತಿವೆ ಬೆಳ್ಳಿಪರದೆಗಳು!

First Published Jun 24, 2020, 2:42 PM IST

ಕೊರೋನಾ ವೈರಸ್ ಅಟ್ಟಹಾಸಕ್ಕೆ ಅಕ್ಷರಶಃ ನಲುಗಿ ಹೋಗುತ್ತಿರುವ ಕರುನಾಡಿನಲ್ಲಿ ದಿನೇದಿನೇ ವ್ಯಾಪಾರವಹಿವಾಟು ನೆಲಕಚ್ಚುತ್ತಿವೆ.ಇದಕ್ಕೆ ಮನರಂಜನಾ ಮಾಧ್ಯಮ ,ಸಿನಿಮಾ ಚಿತ್ರೀಕರಣ,ಚಿತ್ರಮಂದಿರಗಳು ಹೊರತಾಗಿಲ್ಲ.ಪ್ರತಿದಿನ ನಮ್ಮೆಲ್ಲರನ್ನೂ ೨ ರಿಂದ ೩ ಗಂಟೆಗಳ ಕತ್ತಲ ಕೋಣೆಯಲ್ಲಿ ರಂಜಿಸುತ್ತಿದ್ದ,ಬೇಸರ,ನಗು,ಅಳು,ವ್ಯಂಗ್ಯ ಎಲ್ಲವನ್ನೂ ತನ್ನೊಳಗೆ ನುಂಗಿಕೊಂಡು ನಗುನಗುತ್ತಾ ಪ್ರದರ್ಶಿಸುತ್ತಿದ್ದ ಬೆಳ್ಳಿಪರದೆ ಇಂದು ಬೆಳಕನ್ನೇ ಕಾಣದ ಬಡಪಾಯಿಯಂತಾಗಿದೆ.ಯಾವ ಸ್ಟಾರ್ ನಟರ ಸಿನಿಮಾಗಳು ಇಲ್ಲದೆಯೂ ಶತಕ ಬಾರಿಸಿದೆ.ಇಷ್ಟೆಲ್ಲಾ ಪೀಠಿಕೆಗೆ ಕಾರಣವೇನೆಂದರೆ ಥಿಯೇಟರ್ ಗಳು ಬಾಗಿಲು ಮುಚ್ಚಿಕೊಂಡು ಇಂದಿಗೆ ಸರಿಯಾಗಿ ನೂರು ದಿನಗಳಾಗಿವೆ.