ನಟ ದೀಪ್ ಸಿಧು ಅಪಘಾತದಲ್ಲಿ ನಿಧನ, ಜೊತೆಗಿದ್ದ ಯುವತಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ
ಖ್ಯಾತ ಪಂಜಾಬಿ ನಟ ದೀಪ್ ಸಿಧು ಮಂಗಳವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ರೈತ ಆಂದೋಲನದ ಸಂದರ್ಭದಲ್ಲಿ 2021 ರ ಜನವರಿ 26 ರಂದು (ಗಣರಾಜ್ಯೋತ್ಸವ 2021) ಕೆಂಪು ಕೋಟೆಯ ಮೇಲೆ ಧ್ವಜವನ್ನು ಹಾರಿಸುವ ಮೂಲಕ ಅವರು ಬೆಳಕಿಗೆ ಬಂದಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ದೀಪ್ ಸಿಧು, ಇದೇ ವಿಚಾರವಾಗಿ ಜೈಲು ಸೇರಬೇಕಾಯಿತು. ದೀಪ್ ಅಪಘಾತವಾದಾಗ ಅವರೊಂದಿಗೆ ರೀನಾ ರಾಯ್ ಎಂಬ ಯುವತಿಯೂ ಇದ್ದರೆಂಬುವುದು ಉಲ್ಲೇಖನೀಯ. ಅಪಘಾತದಲ್ಲಿ ಗಾಯಗೊಂಡ ರೀನಾ ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ಸದ್ಯ ಆ ಯುವತಿ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದೆ.
ವಾಸ್ತವವಾಗಿ, ಮಂಗಳವಾರ ರಾತ್ರಿ ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ವೇಯಲ್ಲಿ ದೀಪ್ ಸಿಧು ಅವರ ಅಪಘಾತ ಸಂಭವಿಸಿದೆ. ಕೆಎಂಪಿಯ ಪಿಪ್ಲಿ ಟೋಲ್ ಪ್ಲಾಜಾ ಬಳಿ ಅತಿವೇಗದಲ್ಲಿ ಹೋಗುತ್ತಿದ್ದ ಅವರ ಕಾರು ಟ್ರಾಲಿಗೆ ಡಿಕ್ಕಿ ಹೊಡೆದಿದೆ. ರಾತ್ರಿ 8 ರಿಂದ 8:30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ದೀಪ್ ಸಿಧು ಅವರೇ ಸ್ಕಾರ್ಪಿಯೋ ಓಡಿಸುತ್ತಿದ್ದರು. ಇನ್ನು ಈ ಅಪಘಾತ ಅದೆಷ್ಟು ಭೀಕರವಾಗಿತ್ತು ಎಂದರೆ ದೀಪ್ ಸ್ಥಳದಲ್ಲೇ ಸಾವನ್ನಪ್ಪಿದರು, ಅವರ ಸ್ನೇಹಿತೆ ರೀನಾ ರೈ ಅವರನ್ನು ಚಿಕಿತ್ಸೆಗಾಗಿ ಖಾರ್ಖೋಡಾ ಸಿಎಚ್‌ಎಸಿಗೆ ಕರೆದೊಯ್ಯಲಾಯಿತು.
ದೀಪ್ ಸಿಧು ಸಾವಿನ ಸಂದರ್ಭದಲ್ಲಿ ಜೊತೆಗಿದ್ದ ರೀನಾ ರಾಯ್ ಖುದ್ದು ಓರ್ವ ಪಂಜಾಬಿ ನಟಿ. ಈಕೆ ದೀಪ್ ಸಿಧು ಅವರ ವಧು ಎಂದು ಹೇಳಲಾಗುತ್ತಿದೆ, ಅವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರೀನಾ ಮತ್ತು ದೀಪ್ ಅನೇಕ ಪಂಜಾಬಿ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ದೀಪ್ ಸಿಧು ಮತ್ತು ರೀನಾ ರೈ ಮೊದಲಿಗೆ ಸ್ನೇಹಿತರಾಗಿದ್ದರು, ಆದರೆ ಪ್ರೀತಿಯಲ್ಲಿ ಬಿದ್ದ ನಂತರ ಅವರು ತಮ್ಮ ಜೀವನವನ್ನು ಒಟ್ಟಿಗೆ ಕಳೆಯಲು ನಿರ್ಧರಿಸಿದರು. ಆದರೆ ಮದುವೆಗೆ ಮುಂಚೆಯೇ ದೀಪ್ ರೀನಾರಿಂದ ದೂರ, ಬಾರದ ಲೋಕಕ್ಕೆ ಹೋಗಿದ್ದಾರೆ.
ದೀಪ್ ಸಿಧು ಮತ್ತು ರೀನಾ ರಾಯ್ ಅನೇಕ ಪಂಜಾಬಿ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರೂ 'ರಂಗ್ ಪಂಜಾಬ್' ಮತ್ತು 'ದೇಸಿ' ಅತ್ಯಂತ ಜನಪ್ರಿಯ ಸಿನಿಮಾಗಳಾಗಿವೆ. ರಂಗ್ ಪಂಜಾಬ್ 2018 ರಲ್ಲಿ ಬಿಡುಗಡೆಯಾಯಿತು, ಆದರೆ 'ದೇಸಿ' ಇನ್ನೂ ಬಿಡುಗಡೆಯಾಗಬೇಕಿದೆ.
ರೀನಾ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಅಪಘಾತದ ಒಂದು ದಿನ ಮೊದಲು, ದೀಪ್ ಸಿಧು ಮತ್ತು ರೀನಾ ರಾಯ್ ಪ್ರೇಮಿಗಳ ದಿನವನ್ನು ಆಚರಿಸುತ್ತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇದು ಕೂಡ ವೈರಲ್ ಆಗಿತ್ತು. ಈ ಫೋಟೋದಲ್ಲಿ ಇಬ್ಬರೂ ಒಟ್ಟಿಗೆ ಪೋಸ್ ಕೊಡುತ್ತಿರುವುದು ಕಂಡು ಬಂದಿದೆ.
deep
ದೀಪ್ ಸಿಧು ಅವರ ಸಂಬಂಧ ಹೊಂದಿದ್ದ ಮತ್ತು ಅವರಿಗೆ ಸಹಾಯ ಮಾಡುವ ಕಾರಣ ರೀನಾ ರಾಯ್ ಆಗಾಗ್ಗೆ ಚರ್ಚೆಯಲ್ಲಿರುತ್ತಿದ್ದರು. ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ ಆರೋಪದಲ್ಲಿ ಸಿಕ್ಕಿಬಿದ್ದಿದ್ದ ದೀಪ್ ಅವರಿಗೆ ಸಹಾಯ ಮಾಡಿದ ಆರೋಪ ರೀನಾ ರಾಯ್ ಮೇಲಿತ್ತು. ಬಂಧನಕ್ಕೂ ಮುನ್ನ ದೀಪ್ ಸಿದ್ದು ತಪ್ಪಿಸಿಕೊಳ್ಳಲು ಸಹಾಯ ಮಾಡಿದವರು ಇವರೇ. ಆದರೆ, ಅವರನ್ನು ಇನ್ನೂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಲಭ್ಯವಾದ ಚಿತ್ರಗಳನ್ನು ನೋಡಿದರೆ ರೀನಾಗೆ ಗಂಭೀರ ಗಾಯಗಳಾಗಿಲ್ಲ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ.