MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • News
  • ಫಿಟ್ನೆಸ್, ಸ್ಟೈಲ್, ಫ್ಯಾಷನ್‌ನಲ್ಲೂ ಸಿನಿಮಾ ತಾರೆಯರಿಗೆ ಸೆಡ್ಡು ಹೊಡಿತಾರೆ ಬಿಜೆಪಿ ನಾಯಕನ ಪತ್ನಿ

ಫಿಟ್ನೆಸ್, ಸ್ಟೈಲ್, ಫ್ಯಾಷನ್‌ನಲ್ಲೂ ಸಿನಿಮಾ ತಾರೆಯರಿಗೆ ಸೆಡ್ಡು ಹೊಡಿತಾರೆ ಬಿಜೆಪಿ ನಾಯಕನ ಪತ್ನಿ

ಫೋಟೋ ನೋಡಿದ ಮೇಲೆ ನೀವೂ ಕೂಡ ಯಾರಪ್ಪಾ ಈ ಸುಂದರಿ, ಯಾವ ಸಿನಿಮಾದಲ್ಲೂ ನೋಡಿದ ಹಾಗಿಲ್ಲ… ಮತ್ಯಾರಿದು ಎಂದು ಯೋಚ್ನೆ ಮಾಡ್ತಿದ್ದೀರಾ? ಜಾಸ್ತಿ ಯೋಚ್ನೆ ಮಾಡ್ಬೇಡಿ ಇವರು ಬೇರೆ ಯಾರು ಅಲ್ಲ, ನಮ್ಮ ಬಿಜೆಪಿ ನಾಯಕ, ಹಾಗೂ ನಟ ಸಿ.ಪಿ.ಯೋಗೇಶ್ವರ್ ಅವರ ಪತ್ನಿ ಶೀಲಾ ಯೋಗೇಶ್ವರ್.

2 Min read
Suvarna News
Published : Feb 01 2023, 06:23 PM IST
Share this Photo Gallery
  • FB
  • TW
  • Linkdin
  • Whatsapp
19

ಚಕ್ಕೆರೆ ಪುಟ್ಟಮಾದೇಗೌಡ ಯೊಗೇಶ್ವರ್ ಅಲಿಯಾಸ್ ಸಿ.ಪಿ.ಯೋಗೇಶ್ವರ್ (CP Yogeshwar) ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ ಮತ್ತು ರಾಜಕಾರಣಿಯೂ ಹೌದು. ಇವರು ಚೆನ್ನಪಟ್ಟಣದ ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಪ್ರವಾಸೋದ್ಯಮ ಮತ್ತು ಪರಿಸರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಇವರ ಪತ್ನಿ ಬಗ್ಗೆ ಹೆಚ್ಚಿನ ಜನಕ್ಕೆ ತಿಳಿದಿಲ್ಲ. 

29

ಯೋಗೇಶ್ವರ್ ಪತ್ನಿ ಶೀಲಾ ಯೋಗೇಶ್ವರ್ ಚೆಲುವೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. 17-18 ವರ್ಷದ ಮಗನ ತಾಯಿಯಾಗಿದ್ದರೂ, ಈಗಲೂ ಸಹ ಶೀಲಾ ತಮ್ಮ ಫಿಟ್ನೆಸ್ (Sheela yogeshwar fitness) ಬಗ್ಗೆ ತುಂಬಾನೆ ಕಾಳಜಿ ವಹಿಸುತ್ತಾರೆ. ಅದಕ್ಕಾಗಿಯೇ ಅವರು ಈವಾಗ್ಲೂ ಸುಂದರವಾಗಿ ಕಾಣಿಸ್ತಿದ್ದಾರೆ. 

39

ಯೋಗೇಶ್ವರ್ ಮತ್ತು ಶೀಲಾ ಅವರದ್ದು ಲವ್ ಮ್ಯಾರೇಜ್ (love marriage). ಮೂಲತಃ ಉದ್ಯಮ ಮತ್ತು ಥಿಯೇಟರ್ ನಂಟು ಹೊಂದಿರುವ ಶೀಲಾ ಅವರು ಯೋಗೇಶ್ವರನ್ನು ಭೇಟಿಯಾಗಿದ್ದು ಮೆಗಾ ಸಿಟಿ ಆಫೀಸ್ನಲ್ಲಂತೆ. ನಂತರ ಎಂಟು - ಒಂಭತ್ತು ತಿಂಗಳು ಒಬ್ಬರನ್ನೊಬ್ಬರು ಅರಿತ ಬಳಿಕ ಮದ್ವೆಯಾದ್ರಂತೆ ಈ ಜೋಡಿಗಳು. ಇವರಿಗೆ ಧ್ಯಾನ್ ಎಂಬ ಮಗ ಕೂಡ ಇದ್ದಾನೆ.
 

49

ಇನ್ನೂ ಸೋಷಿಯಲ್ ಮೀಡಿಯಾದಲ್ಲಿ (Social media) ಸಖತ್ ಆಕ್ಟೀವ್ ಆಗಿರುವ ಶೀಲಾ ಯೋಗೇಶ್ವರ್ ಇನ್ಸ್ಟಾಗ್ರಾಂ ಖಾತೆ ತೆರೆದರೆ ಅಲ್ಲಿ ನಿಮಗೆ ಶೀಲಾರ ಫಿಟ್ನೆಸ್, ಸ್ಟೈಲ್, ಫ್ಯಾಷನ್ ಕುರಿತಾದ ಕ್ರೇಜ್ ಬಗ್ಗೆ ಸಾಕಷ್ಟು ವಿಷಯಗಳು ಸಿಗುತ್ತವೆ. ಫಿಟ್ ಆಗಿರಲು ಶೀಲಾ ಪ್ರತಿದಿನ ಒಂದೂವರೆ ಗಂಟೆಗಳ ಕಾಲ ಜಿಮ್ ಅಥವಾ ಎಕ್ಸರ್ ಸೈಜ್ ಮಾಡ್ತಾರಂತೆ. 

59

ಅಷ್ಟೇ ಯಾಕೆ ಕುದುರೆ ಸವಾರಿ (Horse Riding) ಮಾಡೋ ಕ್ರೇಜ್ ಕೂಡ ಇವರಿಗಿದ್ದು, ಕುದುರೆಗಳನ್ನು ಸಹ ಸಾಕುತ್ತಾರೆ. ಕುದುರೆ ಸವಾರಿ ಮಾಡುವ, ಕುದುರೆ ಜೊತೆ ಸ್ಟಂಟ್ ಮಾಡುವ, ಕುದುರೆಗೆ ಆಹಾರ ನೀಡುವ ಹಾಗೂ ಪ್ರೀತಿಯ ಕುದುರೆ ಜೊತೆ ಸೆಲ್ಫಿ ತೆಗೆದುಕೊಂಡಿರುವ ಹಲವಾರು ಫೋಟೋಗಳನ್ನು ಇವರ ಖಾತೆಯಲ್ಲಿ ಕಾಣಬಹುದು. ಜೊತೆಗೆ ಇವರು ಶ್ವಾನ ಪ್ರಿಯರೂ ಕೂಡ ಹೌದು.

69

ಫಿಟ್ನೆಸ್ (Fitness) ಬಗ್ಗೆ ಮಾತನಾಡುವ ಇವರು ಮಹಿಳೆಯರು ಪ್ರತಿದಿನ ಗಂಡ, ಮಕ್ಕಳಿಗಾಗಿ ಎಲ್ಲಾ ಮಾಡೋದು ಇದ್ದೇ ಇದೆ. ಅದಕ್ಕೂ ಮುನ್ನ ಆಕೆ ತನ್ನನ್ನು ತಾನು ಚೆನ್ನಾಗಿ ನೋಡಿಕೊಳ್ಳಬೇಕು ಅಂತಾರೆ. ಅದಕ್ಕಾಗಿ ಪ್ರತಿದಿನ ಸರಿಯಾದ ಸಮಯಕ್ಕೆ ಆಹಾರ ಸೇವಿಸಬೇಕು, ಕನಿಷ್ಟ ಇಪ್ಪತ್ತು ನಿಮಿಷಗಳ ಕಾಲವಾದ್ರೂ ವ್ಯಾಯಾಮ ಮಾಡಿ ತಮ್ಮನ್ನು ತಾವು ಫಿಟ್ ಆಗಿ ಇಟ್ಟುಕೊಳ್ಳಬೇಕು ಎನ್ನುತ್ತಾರೆ ಶೀಲಾ. 

79

ಸೀರೆಯಲ್ಲೂ, ಮಾಡರ್ನ್ ಡ್ರೆಸ್ ಗಳಲ್ಲೂ ಸಖತ್ತಾಗಿ ಮಿಂಚುವ ಶೀಲಾ, ತಮ್ಮ ಇನ್ಸ್ಟಾ ಖಾತೆಯಲ್ಲಿ ತಮ್ಮ ವಿವಿಧ ಭಂಗಿಯ ಮಾಡರ್ನ್ ಫೋಟೋಗಳನ್ನು ಹಾಕುತ್ತಿರುತ್ತಾರೆ. ಇವರು ಫೋಟೋ ಶೂಟ್ ಮಾಡಿಸಿದ ಮಾಡರ್ನ್ ಫೋಟೋ (photo shoot) ನೋಡಿದ್ರೆ ಅವರೇನ ಇವರು ಎನ್ನುವಷ್ಟು ಸ್ಟೈಲಿಶ್ ಆಗಿ ಕಾಣಿಸುತ್ತಾರೆ.
 

89

ಡಯಟ್ ಕಾನ್ಶಿಯಸ್ ಆಗಿರುವ ಶೀಲಾ, ಪತಿಯ ಆರೋಗ್ಯದ ಬಗ್ಗೆ ಸಹ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಹಾಗಾಗಿ ಆರೋಗ್ಯಯುತ ಆಹಾರಗಳನ್ನಷ್ಟೇ ತಿಂತಾರಂತೆ. ಇವರ ಬಗ್ಗೆ ಇನ್ನೊಂದು ವಿಷ್ಯ ಅಂದ್ರೆ ಇವರಿಗೆ ಬರೆಯುವ ಹವ್ಯಾಸವೂ ಇದೆ. ಬೇಸರವಾದಾಗ ತಮ್ಮ ಮನದ ಮಾತನ್ನು ಕವನವಾಗಿ ಬರೆದು ಇಟ್ಟುಕೊಳ್ಳುತ್ತಾರಂತೆ ಇವರು. 

99

ಸಿಪಿ ಯೋಗೇಶ್ವರ್ ಕನ್ನಡ ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ', 'ಬದ್ರಿ', 'ಸೈನಿಕ', 'ಕಂಬಾಲಹಳ್ಳಿ' ಮುಂತಾದ ಚಿತ್ರಗಳಲ್ಲಿ ಅದ್ಭುತ ಅಭಿನಯಿಸಿದ್ದರು. ಸದ್ಯ ಬಿಜೆಪಿ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ನಿ ಶೀಲಾ ಪತಿಗೆ ಸದಾ ಬೆಂಬಲ ನೀಡುತ್ತಾ, ಸಮಾಜ ಸೇವೆ ಮಾಡುತ್ತಿದ್ದಾರೆ. ಅವರಂತ ಗಂಡನನ್ನು ಪಡೆದ ನಾನು ಅದೃಷ್ಟವಂತೆ ಎನ್ನುತ್ತಾರೆ ಇವರು.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved