- Home
- Entertainment
- News
- ಮುಖೇಶ್ ಅಂಬಾನಿ ತಿಂಗಳೊಂದಕ್ಕೆ ಕಟ್ಟುವ ಮನೆಯ ವಿದ್ಯುತ್ ಬಿಲ್‌ನಲ್ಲಿ ನಾವೊಂದು ದೊಡ್ಡ ಮನೆಯೇ ಕಟ್ಟಿಸ್ಬೋದು!
ಮುಖೇಶ್ ಅಂಬಾನಿ ತಿಂಗಳೊಂದಕ್ಕೆ ಕಟ್ಟುವ ಮನೆಯ ವಿದ್ಯುತ್ ಬಿಲ್‌ನಲ್ಲಿ ನಾವೊಂದು ದೊಡ್ಡ ಮನೆಯೇ ಕಟ್ಟಿಸ್ಬೋದು!
ಅಬ್ಬಬ್ಬಾ! ಸಾಮಾನ್ಯ ತಿಂಗಳೊಂದರಲ್ಲಿ ಆ್ಯಂಟಿಲಿಯಾದ ವಿದ್ಯುತ್ ಬಿಲ್ ಕೇಳಿದರೇ ಹೌಹಾರುವಂತಾಗುತ್ತದೆ. ಅಂಥದರಲ್ಲಿ ಈ ಮದುವೆ ತಿಂಗಳುಗಳಲ್ಲಿ ಆ್ಯಂಟಿಲಿಯಾ ವಿದ್ಯುತ್ ಬಿಲ್ ಅದೆಷ್ಟು ಕೋಟಿಗಳಲ್ಲಿರುತ್ತೋ?!

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮುಂಬೈನಲ್ಲಿರುವ ತಮ್ಮ ಐಷಾರಾಮಿ ಮನೆ ಆಂಟಿಲಿಯಾದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. 27 ಅಂತಸ್ತಿನ ಆಂಟಿಲಿಯಾ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ.
ಮುಕೇಶ್ ಅಂಬಾನಿಯವರ 27 ಅಂತಸ್ತಿನ ಐಷಾರಾಮಿ ಮನೆ ಆಂಟಿಲಿಯಾ ವಿದ್ಯುತ್ ಬಿಲ್ ಎಷ್ಟು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
ಅಂಬಾನಿ ಅರಮನೆ ಆಂಟಿಲಿಯಾ ಮನೆಯ ಒಂದು ತಿಂಗಳ ವಿದ್ಯುತ್ ಬಿಲ್‌ನ್ನು ಜನಸಾಮಾನ್ಯರೂ ಅವರ ಜೀವನವಿಡಿಯೂ ತಮ್ಮ ಮನೆಗಾಗಿ ಕಟ್ಟುವುದಿಲ್ಲ.
ಹೌದು, 2010ರಲ್ಲಿ ಆ್ಯಂಟಿಲಿಯಾದ ಮೊದಲ ತಿಂಗಳ ವಾಸದ ವಿದ್ಯುತ್ ಬಿಲ್ಲೇ ಬರೋಬ್ಬರಿ 70 ಲಕ್ಷ ರೂಪಾಯಿಗಳು! ಆ ನಂತರದಲ್ಲೂ ಹೆಚ್ಚೂ ಕಡಿಮೆ 70 ಲಕ್ಷದಿಂದ 1 ಕೋಟಿವರೆಗೆ 1 ತಿಂಗಳ ವಿದ್ಯುತ್ ಬಿಲ್ ಬರುತ್ತದೆ.
ವರದಿಯ ಪ್ರಕಾರ, ಮುಖೇಶ್ ಅಂಬಾನಿ ಅವರ ಐಷಾರಾಮಿ ಆಂಟಿಲಿಯಾ ತಿಂಗಳಿಗೆ ಸುಮಾರು 6,37,240 ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ.
ಆಂಟಿಲಿಯಾದಲ್ಲಿ ಮನೆಯ ಒಳಾಂಗಣಗಳಷ್ಟೇ ಅಲ್ಲ, ಆರು ಮಹಡಿಗಳಲ್ಲಿ ಹರಡಿರುವ ಕಾರ್ ಪಾರ್ಕಿಂಗ್ ಸ್ಥಳವೂ ಹವಾನಿಯಂತ್ರಿತವಾಗಿದೆ.
ಇನ್ನು, ಜಗತ್ತಿನ ಎಲ್ಲ ಐಶಾರಾಮಿ ವಿದ್ಯುತ್ ಉಪಕರಣಗಳೂ ಇಲ್ಲಿರುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ಅದರೊಂದಿಗೆ, ಮನೆಯಲ್ಲಿ ಒಂದಿಲ್ಲೊಂದು ಕಾರ್ಯಕ್ರಮಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ.
ಇಂಥ ಹಬ್ಬ, ಮದುವೆ, ಮತ್ತಿತರೆ ವಿಶೇಷ ಸಂದರ್ಭಗಳಲ್ಲಿ ಆ್ಯಂಟಿಲಿಯಾ ಹೊರಭಾಗವನ್ನೂ ಪೂರ್ತಿ ಝಗಮಗಿಸುವಂತೆ ಮಾಡಲಾಗುತ್ತದೆ.
ಈ ಎಲ್ಲ ಕಾರಣಗಳಿಂದ ಆ್ಯಂಟಿಲಿಯಾ ವಿದ್ಯುತ್ ಬಿಲ್ ಕೋಟಿ ಕೋಟಿ ಹತ್ತಿರದಲ್ಲೇ ಪ್ರತಿ ತಿಂಗಳೂ ಬರುತ್ತದೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಅಂಬಾನಿಗೆ ಇದೇನು ಅಂಥಾ ದೊಡ್ಡ ಮೊತ್ತವಲ್ಲ ಬಿಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.