Highest Paid Actress: ಬಾಲಿವುಡ್‌ನ ಅತ್ಯಂತ ದುಬಾರಿ ನಟಿಯರು ಇವರು..!
ಬಾಲಿವುಡ್‌ನಲ್ಲಿ ಅತ್ಯಂತ ದುಬಾರಿ ನಟಿಯರು ಯಾರು ಎನ್ನುವ ಕುತೂಹಲಕ್ಕೆ ಎಂದಿಗೂ ಉತ್ತರ ಸಿಗೋದಿಲ್ಲ. ಕೆಲವು ಊಹಾಪೋಹಗಳೇ ಕೊನೆಗೆ ನಿಜವಾಗುತ್ತದೆ. ಬಾಲಿವುಡ್‌ನ ಪ್ರಖ್ಯಾತ ನಿರ್ಮಾಪಕರೊಬ್ಬರು ಪ್ರಸ್ತುತ ಬಾಲಿವುಡ್‌ನ ಅತ್ಯಂತ ದುಬಾರಿ ನಟಿಯರು ಯಾರು ಅನ್ನೋದನ್ನ ತಿಳಿಸಿದ್ದಾರೆ.

ಇಡೀ ಬಾಲಿವುಡ್‌ಗೆ ಟಾಪ್ ನಟಿಯಿದ್ದರೆ ಅದು ದೀಪಿಕಾ ಪಡುಕೋಣೆ. ಸಾಲು ಸಾಲು ಯಶಸ್ಸಿನ ಬಳಿಕ ಒಂದು ಸಿನಿಮಾಕ್ಕೆ ಅವರು 15 ರಿಂದ 20 ಕೋಟಿ ಚಾರ್ಜ್ ಮಾಡುತ್ತಾರೆ.
alia bhatt
2ನೇ ಸ್ಥಾನದಲ್ಲಿ ರಣಬೀರ್ ಕಪೂರ್ ಪತ್ನಿ ಆಲಿಯಾ ಭಟ್ ಇದ್ದಾರೆ. ವಿಭಿನ್ನಪಾತ್ರಗಳ ಮೂಲಕ ಗಮನಸೆಳೆದಿರುವ ಆಲಿಯಾ ಭಟ್ ಅವರು 15 ಕೋಟಿ ಫೀಸ್ ತೆಗೆದುಕೊಳ್ಳುತ್ತಾರೆ.
Kareena
ಹಿರಿಯ ನಟಿ ಕರೀನಾ ಕಪೂರ್ ಖಾನ್ ಮೂರನೇ ಸ್ಥಾನದಲ್ಲಿದ್ದಾರೆ.ನಟ ಸೈಫ್ ಅಲಿ ಖಾನ್ ಪತ್ನಿ ಒಂದು ಸಿನಿಮಾಗೆ 8 ರಿಂದ 11 ಕೋಟಿ ಚಾರ್ಜ್ ಮಾಡುತ್ತಾರೆ.
ನಂತರದ ಸ್ಥಾನದಲ್ಲಿ ಕತ್ರಿನಾ ಕೈಫ್ ಇದ್ದಾರೆ. ವಿಕ್ಕಿ ಕೌಶಾಲ್‌ರನ್ನು ಮದುವೆಯಾದ ಬಳಿಕ ಸಿನಿಮಾದಿಂದ ಕೊಂಚ ದೂರವಿರುವ ಕತ್ರಿನಾ ಒಂದು ಸಿನಿಮಾಗೆ 8 ರಿಂದ 10 ಕೋಟಿ ಚಾರ್ಜ್ ಮಾಡುತ್ತಾರೆ.
ನಟಿ ಶ್ರದ್ಧಾ ಕಪೂರ್ ನಂತರದ ಸ್ಥಾನದಲ್ಲಿದ್ದಾರೆ. ಸಿನಿಮಾಗಳನ್ನು ಮಾಡುವುದು ಕಡಿಮೆಯಾದರೂ ಇವರೂ ಕೂಡ 8 ರಿಂದ 10 ಕೋಟಿ ರೂಪಾಯಿ ಒಂದು ಸಿನಿಮಾಗೆ ಚಾರ್ಜ್ ಮಾಡುತ್ತಾರೆ.
ಕ್ರೀವ್ ಯಶಸ್ಸಿನ ಬಳಿಕ ನಟಿ ಕೃತಿ ಶನನ್ ಅವರ ಫೀಸ್ ಕೂಡ ಏರಿಕೆಯಾಗಿದೆ. ಮೂಲಗಳ ಪ್ರಕಾರ ಇವರು ಒಂದು ಸಿನಿಮಾಗೆ 6-10 ಕೋಟಿ ಚಾರ್ಜ್ ಮಾಡುತ್ತಾರೆ.
ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಕಿಯಾರಾ ಆಡ್ವಾಣಿ, ಟಾಕ್ಸಿಕ್ ಸಿನಿಮಾದ ಮೂಲಕ ದಕ್ಷಿಣಕ್ಕೂ ಕಾಲಿಡುತ್ತಿದ್ದಾರೆ. ಇವರ ಸಂಭಾವನೆ 5 ರಿಂದ 8 ಕೋಟಿ ಎನ್ನಲಾಗಿದೆ.
ಹಿಮಾಚಲ ಪ್ರದೇಶದ ಮಂಡಿ ಸಂಸದೆಯಾಗಿರುವ ಕಂಗನಾ ರಾಣಾವತ್ ಅವರು ಒಂದು ಸಿನಿಮಾಗೆ 5-8 ಕೋಟಿ ರೂಪಾಯಿ ವೇತನ ಪಡೆದುಕೊಳ್ಳುತ್ತಾರೆ.
ನಟಿ ತಾಪ್ಸಿ ಪನ್ನು ತಮ್ಮ ಸಿನಿಮಾಗಳ ಮೂಲಕ ಸುದ್ದಿಯಾಗದೇ ಇದ್ದರೂ, ಅವರು ಶುಲ್ಕ ಮಾತ್ರ ಕಡಿಮೆಯಿಲ್ಲ. ಒಂದು ಸಿನಿಮಾಗೆ ಅವರು 5 ರಿಂದ 8 ಕೋಟಿ ರೂಪಾಯಿ ವೇತನ ಪಡೆಯುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.