MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • News
  • ನಿವೇದಿತಾ ಗೌಡ ಮಾದಕ ಭಂಗಿ ವಿಡಿಯೋ ನೋಡಿ ಸುಸ್ತಾದ ಪಡ್ಡೆಗಳು! ನೀರಿಗೆ ಹೋಗ್ಬೇಡಾ ಎಂದು ಎಚ್ಚರಿಕೆ...

ನಿವೇದಿತಾ ಗೌಡ ಮಾದಕ ಭಂಗಿ ವಿಡಿಯೋ ನೋಡಿ ಸುಸ್ತಾದ ಪಡ್ಡೆಗಳು! ನೀರಿಗೆ ಹೋಗ್ಬೇಡಾ ಎಂದು ಎಚ್ಚರಿಕೆ...

ದಿನದಿಂದ ದಿನಕ್ಕೆ ಹಾಟ್​ ಅವತಾರದಲ್ಲಿ ಕಾಣಿಸಿಕೊಳ್ತಿರೋ ಬಿಗ್​ಬಾಸ್​ ನಿವೇದಿತಾ ಗೌಡ, ಇದೀಗ ಮಾದಕ ಭಂಗಿಯಲ್ಲಿ ರೀಲ್ಸ್​ ಮಾಡಿ ಮೋಡಿ ಮಾಡಿದ್ದಾರೆ. ನೆಟ್ಟಿಗರು ಏನು ಹೇಳಿದ್ರು ಎನ್ನೋದನ್ನು ಕಮೆಂಟ್​ನಲ್ಲೇ ನೋಡಿಬಿಡಿ! 

2 Min read
Suchethana D
Published : Jul 28 2025, 10:46 PM IST
Share this Photo Gallery
  • FB
  • TW
  • Linkdin
  • Whatsapp
17
ಜಲ್​ಪರಿಯಾಗಿ ಕಂಗೊಳಿಸಿದ ನಿವೇದಿತಾ ಗೌಡ
Image Credit : Instagram

ಜಲ್​ಪರಿಯಾಗಿ ಕಂಗೊಳಿಸಿದ ನಿವೇದಿತಾ ಗೌಡ

ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್​ ಮೀಡಿಯಾದ ಸೆನ್ಸೇಷನಲ್​ ಆಗಿರುವುದು ಗೊತ್ತಿರುವ ವಿಷಯವೇ. ದಿನದಿಂದ ದಿನಕ್ಕೆ ಮೇಲಕ್ಕೆ ಹೋಗುತ್ತಿರುವ ಬಟ್ಟೆಗಳನ್ನು ಹಾಕುತ್ತಲೇ ಕಮೆಂಟಿಗರಿಗೆ ಉಗಿಯಲು ಸಾಕಷ್ಟು ಅವಕಾಶ ಕಲ್ಪಿಸುತ್ತಿದ್ದಾರೆ. ತಮ್ಮ ಡಿಕ್ಷನರಿಯಲ್ಲಿ ಇದ್ದ ಬೈಗುಳಗಳನ್ನೆಲ್ಲಾ ಕಮೆಂಟ್​ ಬಾಕ್ಸ್​ನಲ್ಲಿ ತುಂಬುತ್ತಲೇ, ಈಕೆಯ ವಿಡಿಯೋ ಮಾತ್ರ ನೋಡಲು ಬಿಡುವುದಿಲ್ಲ ಒಂದಿಷ್ಟು ಕಮೆಂಟಿಗ ಅಭಿಮಾನಿಗಳು.

27
ಜಲ್​ಪರಿಯಾಗಿ ಕಂಗೊಳಿಸಿದ ನಿವೇದಿತಾ ಗೌಡ
Image Credit : Instagram

ಜಲ್​ಪರಿಯಾಗಿ ಕಂಗೊಳಿಸಿದ ನಿವೇದಿತಾ ಗೌಡ

ಅದೇ ನಿವೇದಿತಾಗೆ ವರದಾನ. ಆಕೆಗೂ ಗೊತ್ತು, ಎಷ್ಟು ಹಾಟ್​ ಆಗಿ ರೀಲ್ಸ್​ ಮಾಡುತ್ತೇನೋ, ಅಷ್ಟು ಬೈಯುತ್ತಲೇ ತಮ್ಮ ವಿಡಿಯೋ, ರೀಲ್ಸ್​ ನೋಡುತ್ತಾರೆ ಎನ್ನುವುದು. ಹಾಟ್​ ಆದಷ್ಟೂ ವ್ಯೂಸ್​ ಜಾಸ್ತಿಯಾಗುತ್ತದೆ ಎನ್ನುವುದು ಇಂಥ ಹಲವು ನಟಿಯರು ಇದಾಗಲೇ ಅರಿತುಕೊಂಡಿದ್ದಾರೆ. ಏಕೆಂದರೆ, ಸಭ್ಯತೆ, ಸಂಸ್ಕೃತಿ, ಸನ್ನಡತೆ... ಹೀಗೆ ಕಮೆಂಟ್​ಗಳಲ್ಲಿ ಭಾಷಣ ಬಿಗಿಯುವ ಕಮೆಂಟಿಗರು ಯಾವುದೇ ಸಭ್ಯತೆಯ ರೀಲ್ಸ್​ಗಳನ್ನು, ಉತ್ತಮ ಸಂದೇಶ ನೀಡುವ ವಿಷಯಗಳನ್ನು ವೀಕ್ಷಿಸುವುದು ಎಷ್ಟು ಎಂದು ಅವರಿಗೇ ಗೊತ್ತು.

Related Articles

Related image1
Nivedita Gowda Reels: ಕಾಶ್ಮೀರದ ಉಗ್ರರಿಗೂ, ನಿವೇದಿತಾ ಗೌಡ ಬಾತ್​ರೂಮ್​ಗೆ ಏನಿದು ಸಂಬಂಧ?
Related image2
Nivedita Gowda in Saree: ಸೊಂಟದ ವಿಷ್ಯ... ಎನ್ನುತ್ತಲೇ ನಿವೇದಿತಾಗೆ ಈ ಒಂದು ಪ್ರಶ್ನೆ ಕೇಳಿದ ಫ್ಯಾನ್ಸ್​
37
ಜಲ್​ಪರಿಯಾಗಿ ಕಂಗೊಳಿಸಿದ ನಿವೇದಿತಾ ಗೌಡ
Image Credit : Instagram

ಜಲ್​ಪರಿಯಾಗಿ ಕಂಗೊಳಿಸಿದ ನಿವೇದಿತಾ ಗೌಡ

ಇದೀಗ ನಿವೇದಿತಾ ಗೌಡ ಜಲಪರಿಯಂತೆ ಉಡುಗೆ ತೊಟ್ಟು ಪೋಸ್​ ಕೊಟ್ಟಿದ್ದಾರೆ. ಥೇಟ್​ ಮತ್ಸ್ಯಕನ್ಯೆಯಂತೆಯೇ ಹಾಟ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನೀರಿನ ಬಳಿ ಹೋದ್ರೆ ಮೀನುಗಾರ ಬಲೆಯಲ್ಲಿ ಬೀಳಿಸಿಕೊಳ್ತಾನೆ, ಹುಷಾರ್​ ಕಣಮ್ಮೀ ಎಂದು ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ. ದಯವಿಟ್ಟು ನೀರಿನ ಬಳಿ ಹೋಗಬೇಡ ಎನ್ನುತ್ತಿದ್ದಾರೆ.

47
ಜಲ್​ಪರಿಯಾಗಿ ಕಂಗೊಳಿಸಿದ ನಿವೇದಿತಾ ಗೌಡ
Image Credit : Instagram

ಜಲ್​ಪರಿಯಾಗಿ ಕಂಗೊಳಿಸಿದ ನಿವೇದಿತಾ ಗೌಡ

ಫಾರಿನ್​ ಟೂರ್​ ಸುತ್ತಿ, ಶ್ರೀಲಂಕಾದ ಜೂಜು ಅಡ್ಡೆಗೂ ಹೋಗಿ, ವಾಪಸ್​ ಮನೆಗೆ ಬಂದಾಗಿದೆ. ದಿನದಿಂದ ದಿನಕ್ಕೆ ಈಕೆಯ ರೀಲ್ಸ್​ ಹೆಚ್ಚುತ್ತಲೇ ಇದೆ. ಸಿನಿಮಾಗಳಲ್ಲಿ ನಟಿಸದಿದ್ದರೂ, ಧಾರಾಳ ದೇಹ ಪ್ರದರ್ಶನ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುತ್ತಲೇ ಫೇಮಸ್​ ಆಗ್ತಿರೋ ನಟಿಯರು ಒಂದಿಷ್ಟು ಮಂದಿ ಇದ್ದಾರೆ. ಅಂಗಾಂಗಗಳ ಪ್ರದರ್ಶನ ಹೆಚ್ಚಾದಷ್ಟೂ ಅವರಿಗೆ ಡಿಮಾಂಡ್​ ಜಾಸ್ತಿಯಾಗ್ತಿರೋದು ಈಗಿನ ಟ್ರೆಂಡ್​.

57
ಜಲ್​ಪರಿಯಾಗಿ ಕಂಗೊಳಿಸಿದ ನಿವೇದಿತಾ ಗೌಡ
Image Credit : Instagram

ಜಲ್​ಪರಿಯಾಗಿ ಕಂಗೊಳಿಸಿದ ನಿವೇದಿತಾ ಗೌಡ

ಟ್ರೋಲ್​ ಮಾಡುವುದಕ್ಕಾಗಿಯೇ ಒಂದಿಷ್ಟು ಜನ ಇಂಥ ನಟಿಯರ ವಿಡಿಯೋ ಕಾಯುತ್ತಲೇ ಇರುತ್ತಾರೆ. ಅವರು ಟ್ರೋಲ್​ ಮಾಡಿ ಖುಷಿ ಪಟ್ಟುಕೊಂಡರೆ, ದೇಹ ಪ್ರದರ್ಶನ ಧಾರಾಳವಾಗಿ ಮಾಡುವ ನಟಿಯರೂ ಫುಲ್​ ಖುಷ್​. ಒಟ್ಟಿನಲ್ಲಿ ಪ್ರಚಾರ ಬೇಕು ಅಷ್ಟೇ, ಪಾಸಿಟಿವ್​, ನೆಗೆಟಿವ್​ ಅದೆಲ್ಲಾ ಯಾರಿಗೆ ಬೇಕು ಎನ್ನುವ ಜಾಯಮಾನ ಇವರದ್ದು. ಅವರ ಸಾಲಿಗೆ ನಿವೇದಿತಾ ಸೇರಿ ವರ್ಷಗಳೇ ಕಳೆದು ಹೋಗಿವೆ.

67
ಬಿಗ್​ಬಾಸ್​ ಸ್ಪರ್ಧಿಗಳ ಜೊತೆ ನಿವೇದಿತಾ ರೀಲ್ಸ್​
Image Credit : Instagram

ಬಿಗ್​ಬಾಸ್​ ಸ್ಪರ್ಧಿಗಳ ಜೊತೆ ನಿವೇದಿತಾ ರೀಲ್ಸ್​

ಇಂತಿಪ್ಪ ನಿವೇದಿತಾ ಗೌಡ, ಇದೀಗ ಬಿಗ್​ಬಾಸ್​ ಸ್ಪರ್ಧಿಗಳಾಗಿದ್ದ ರಜತ್, ಧನರಾಜ್ ಹಾಗೂ ನಟಿ ಅಖಿಲಾ ಪ್ರಕಾಶ್ ಜೊತೆ ಭರ್ಜರಿ ರೀಲ್ಸ್​ ಮಾಡಿದ್ದರು. ಮಾಮೂಲಿನಂತೆ ತುಂಡುಡುಗೆಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಇವರೆಲ್ಲರೂ ರಜನಿಕಾಂತ್ ಅಭಿನಯದ ಕೂಲಿ ಸಿನಿಮಾದ ಮೋನಿಕಾ ಹಾಡು ಮೊನಿಕಾಕ್ಕೆ ಸ್ಟೆಪ್​ ಹಾಕಿದ್ದಾರೆ. ಕೂಲಿ ಸಿನಿಮಾದಲ್ಲಿ ಮೋನಿಕಾ ಆಗಿ ಸೊಂಟ ಬಳುಕಿಸಿದ್ದಾರೆ ಪೂಜಾ ಹೆಗ್ಡೆ. ಅದೇ ಹಾಡಿಗೆ ನಿವೇದಿತಾ ಗೌಡ ಹಾಗೂ ಸ್ನೇಹಿತರು ಭರ್ಜರಿ ಸ್ಟೆಪ್​ ಹಾಕಿದ್ದು ಅದೀಗ ಭಾರಿ ವೈರಲ್​ ಆಗ್ತಿದೆ.

77
ಕ್ವಾಟ್ಲೆ ಕಿಚನ್​ನಲ್ಲಿ ಸೌಂಡ್​ ಮಾಡ್ತಿರೋ ನಟಿ
Image Credit : Instagram

ಕ್ವಾಟ್ಲೆ ಕಿಚನ್​ನಲ್ಲಿ ಸೌಂಡ್​ ಮಾಡ್ತಿರೋ ನಟಿ

ನಿವೇದಿತಾ ಗೌಡ ಕುರಿತು ಹೇಳುವುದಾದರೆ, ಸದ್ಯ ಕ್ವಾಟ್ಲೆ ಕಿಚನ್​ ಷೋನಲ್ಲಿ ಕಾಣಿಸಿಕೊಳ್ತಿದ್ದಾರೆ. ಅವರಿಗೆ ಕೆಲ ವಾರಗಳ ಹಿಂದೆ ಹಸುವಿನ ಹಾಲು ಕರೆಯುವ ಟಾಸ್ಕ್​ ಕೊಡಲಾಗಿತ್ತು. ಇದನ್ನು ಕೇಳಿ ನಿವೇದಿತಾ ಸುಸ್ತಾಗಿ ಹೋಗಿದ್ದರು. ಇವರಿಗೆ ಈ ಟಾಸ್ಕ್​ ಕೊಟ್ಟಿರೋದಕ್ಕೆ ಇನ್ನಿಲ್ಲದ ತಮಾಷೆಯ ಕಮೆಂಟ್ಸ್​ಗಳು ಬಂದಿದ್ದವು.

 
 
 
 
View this post on Instagram
 
 
 
 
 
 
 
 
 
 
 

A post shared by Niveditha Gowda 👑 (@niveditha__gowda)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ನಿವೇದಿತಾ ಗೌಡ
ರೀಲ್ಸ್
ಮಹಿಳೆಯರು
ಸಂಬಂಧಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved