ಬಾತ್ರೂಮಿನಲ್ಲಿ ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ರೀಲ್ಸ್ ಮಾಡಿದ್ರೆ ಕಾಶ್ಮೀರದ ಉಗ್ರರ ನೆನಪಾಗಿದೆ ನೆಟ್ಟಿಗರಿಗೆ. ಏನಿದು ನೋಡಿ!
ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದ ಸೆನ್ಸೇಷನಲ್ ಆಗಿರುವುದು ಗೊತ್ತಿರುವ ವಿಷಯವೇ. ದಿನದಿಂದ ದಿನಕ್ಕೆ ಮೇಲಕ್ಕೆ ಹೋಗುತ್ತಿರುವ ಬಟ್ಟೆಗಳನ್ನು ಹಾಕುತ್ತಲೇ ಕಮೆಂಟಿಗರಿಗೆ ಉಗಿಯಲು ಸಾಕಷ್ಟು ಅವಕಾಶ ಕಲ್ಪಿಸುತ್ತಿದ್ದಾರೆ. ತಮ್ಮ ಡಿಕ್ಷನರಿಯಲ್ಲಿ ಇದ್ದ ಬೈಗುಳಗಳನ್ನೆಲ್ಲಾ ಕಮೆಂಟ್ ಬಾಕ್ಸ್ನಲ್ಲಿ ತುಂಬುತ್ತಲೇ, ಈಕೆಯ ವಿಡಿಯೋ ಮಾತ್ರ ನೋಡಲು ಬಿಡುವುದಿಲ್ಲ ಒಂದಿಷ್ಟು ಕಮೆಂಟಿಗ ಅಭಿಮಾನಿಗಳು. ಅದೇ ನಿವೇದಿತಾಗೆ ವರದಾನ. ಆಕೆಗೂ ಗೊತ್ತು, ಎಷ್ಟು ಹಾಟ್ ಆಗಿ ರೀಲ್ಸ್ ಮಾಡುತ್ತೇನೋ, ಅಷ್ಟು ಬೈಯುತ್ತಲೇ ತಮ್ಮ ವಿಡಿಯೋ, ರೀಲ್ಸ್ ನೋಡುತ್ತಾರೆ ಎನ್ನುವುದು. ಹಾಟ್ ಆದಷ್ಟೂ ವ್ಯೂಸ್ ಜಾಸ್ತಿಯಾಗುತ್ತದೆ ಎನ್ನುವುದು ಇಂಥ ಹಲವು ನಟಿಯರು ಇದಾಗಲೇ ಅರಿತುಕೊಂಡಿದ್ದಾರೆ. ಏಕೆಂದರೆ, ಸಭ್ಯತೆ, ಸಂಸ್ಕೃತಿ, ಸನ್ನಡತೆ... ಹೀಗೆ ಕಮೆಂಟ್ಗಳಲ್ಲಿ ಭಾಷಣ ಬಿಗಿಯುವ ಕಮೆಂಟಿಗರು ಯಾವುದೇ ಸಭ್ಯತೆಯ ರೀಲ್ಸ್ಗಳನ್ನು, ಉತ್ತಮ ಸಂದೇಶ ನೀಡುವ ವಿಷಯಗಳನ್ನು ವೀಕ್ಷಿಸುವುದು ಎಷ್ಟು ಎಂದು ಅವರಿಗೇ ಗೊತ್ತು.
ಇದೀಗ ನಟಿ ಬಾತ್ರೂಮ್ ಪ್ರೀತಿಯನ್ನು ಮತ್ತೆ ಮೆರೆದಿದ್ದಾರೆ. ಇದಾಗಲೇ ಹಲವಾರು ಬಾತ್ರೂಮ್ ವಿಡಿಯೋಗಳನ್ನು ಶೇರ್ ಮಾಡಿರುವ ನಿವೇದಿತಾ, ಅಲ್ಲಿಯೇ ಮತ್ತೆ ಸ್ಟೆಪ್ ಹಾಕಿದ್ದಾರೆ. ಇದಕ್ಕೂ ಟ್ರೋಲ್ಗಳ ಸುರಿಮಳೆಯೇ ಆಗುತ್ತಿದ್ದರೆ, ಮತ್ತೆ ಕೆಲವರು ಹಾರ್ಟ್ ಎಮೋಜಿ ಹಾಕಿದ್ದಾರೆ. ನೆಟ್ಟಿಗನೊಬ್ಬ ಈ ವಿಡಿಯೋ ಮಧ್ಯೆ ಉಗ್ರರು, ಸೊಳ್ಳೆಗಳನ್ನೆಲ್ಲಾ ತಂದಿದ್ದು, ಕಾಶ್ಮೀರದಲ್ಲಿ ಉಗ್ರರ ಕಾಟ, ರಾತ್ರಿ ಸೊಳ್ಳೆ ಕಾಟ, ಇನ್ಸ್ಟಾದಲ್ಲಿ ಇವಳ ಕಾಟ ಎಂದು ಬರೆದುಕೊಂಡಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯ ಕಮೆಂಟ್ಸ್ ಮಾಡುತ್ತಿದ್ದಾರೆ.
ಕೆಲ ತಿಂಗಳ ಹಿಮದೆ ನಟಿ ಕೆಲ ತಿಂಗಳ ಹಿಂದೆ ಶ್ರೀಲಂಕಾದ ಜೂಜು ಅಡ್ಡೆಗೆ ಹೋಗಿ ಬಂದಿದ್ದರು. ಅಲ್ಲಿಯ ಕಾರ್ಯಕ್ರಮವೊಂದರಲ್ಲಿ ಈಕೆಯನ್ನು ಆಹ್ವಾನಿಸಲಾಗಿತ್ತು. ಆದರೆ ಇದೀಗ ನಟಿ, ಥಾಯ್ಲೆಂಡ್ಗೆ ಹೋಗಿದ್ದರು. ಅದರ ವಿಡಿಯೋ ಅನ್ನು ದಿಜೇಕೋಬ್ಜ್ ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ. ನಿಮ್ಮ ಹೆಸರೇನು? ಇಲ್ಲಿ ಯಾವ ಜಾಗ ಇಷ್ಟ ಎಂದೆಲ್ಲಾ ಆತ ನಿವೇದಿತಾರನ್ನು ಕೇಳಿದ್ದಾನೆ. ಅದಕ್ಕೆ ನಿವೇದಿತಾ, ನನ್ನ ಹೆಸರು ನಿವೇದಿತಾ, ಭಾರತದವಳು ಎನ್ನುತ್ತಲೇ ಥಾಯ್ಲೆಂಡ್ನಲ್ಲಿ ತಮಗೆ ಯಾವ ಜಾಗ ಇಷ್ಟ ಎಂದು ಹೇಳಿದ್ದಾರೆ. ಇದು ಎರಡನೆಯ ಬಾರಿ ನಾನು ಇಲ್ಲಿಗೆ ಬರುತ್ತಿರುವುದು ಎನ್ನುತ್ತಲೇ ಇಲ್ಲಿಯ ಬೀಚ್ ಸೇರಿದಂತೆ ಕೆಲವೊಂದು ಸ್ಥಳಗಳ ಹೆಸರನ್ನು ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಲೇ ಕೆಲವರು ನಿಮ್ಮಂಥವರಿಂದಲೇ ನಮ್ಮ ದೇಶದ ಬೀಚ್ ಹಾಳಾಗ್ತಿದೆ ಎಂದಿದ್ದರೆ, ಮತ್ತೊಬ್ಬ ನಮ್ಮ ಬಾರ್ಗೆ ಮಾತ್ರ ಬರಬೇಡ ಎಂದಿದ್ದಾನೆ. ನಾನು ಥಾಯ್ಲೆಂಡ್ನಲ್ಲಿ ಬಾರ್‌ಗಳನ್ನು ಹೊಂದಿದ್ದೇನೆ. ಅಲ್ಲಿ ಭಾರತೀಯರಿಗೆ ಎಂಟ್ರಿ ಇಲ್ಲ ಎಂದು ಬರೆದಿದ್ದೇನೆ. ಆದ್ದರಿಂದ ಅಲ್ಲಿಗೆ ಬರಬೇಡಿ ಎಂದಿರೋ ಆತ, ಸಿಂಗಪುರದವರಾಗಿ ನಾವು ಆಗ್ನೇಯ ಏಷ್ಯಾವನ್ನು ಭಾರತದಿಂದ ರಕ್ಷಿಸುತ್ತೇವೆ ಮತ್ತು ನಿಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಭಾರತವು ಹಾಳು ಮಾಡದಂತೆ ನೋಡಿಕೊಳ್ಳಲು ಎಲ್ಲವನ್ನೂ ಮಾಡುತ್ತೇವೆ ಎಂದು ಬರೆದುಕೊಂಡಿದ್ದಾನೆ. ಭಾರತದವರು ಬಂದರೆ ತಮ್ಮ ಸಂಸ್ಕೃತಿ ಹಾಳು ಆಗುತ್ತೆ ಎಂದು ಆತ ಬರೆದುಕೊಂಡಿರುವ ಹಿಂದಿನ ಅರ್ಥ ಮಾತ್ರ ಆತನೇ ಬಲ್ಲ. ಆದರೆ ನಿವೇದಿತಾ ಗೌಡ ಅವರ ಈ ವಿಡಿಯೋದಲ್ಲಿಯೂ ಆತ ಬಾರ್ಗೆ ಬರದಂತೆ ಈ ಮೂಲಕ ತಾಕೀತು ಮಾಡಿದ್ದಾನೆ!
