MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • News
  • ಕುಂಚ ಮಾತ್ರವಲ್ಲ ದಾರದಲ್ಲೂ ಕಲಾ ಲೋಕ ಸೃಷ್ಟಿಸುತ್ತಿದ್ದ ಬಿಕೆಎಸ್ ವರ್ಮಾ

ಕುಂಚ ಮಾತ್ರವಲ್ಲ ದಾರದಲ್ಲೂ ಕಲಾ ಲೋಕ ಸೃಷ್ಟಿಸುತ್ತಿದ್ದ ಬಿಕೆಎಸ್ ವರ್ಮಾ

ರವಿ ವರ್ಮಾನ ಕಲೆಯಿಂದ ಪ್ರಭಾವಿತರಾಗಿಗೆ ತಮ್ಮ ಹೆಸರಿನ ಜೊತೆಯೇ ವರ್ಮಾ ಎಂಬ ನಾಮ ಸೇರಿಸಿಕೊಂಡ ಡಾ.ಬಿಕೆಎಸ್ ವರ್ಮಾ ಹೃದಯಾಘಾತದಿಂದ ಕನ್ನಡ ನಾಡನ್ನು ಅಗಲಿದ್ದಾರೆ. ತಮ್ಮ ಅದ್ಭುತ ಕಲೆಯಿಂದ ದೇಶ ವಿದೇಶದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತಿದ್ದ ಈ ಕಲಾವಿದನ ಕುಂಚದಲ್ಲಿ ಸೃಷ್ಟಿಯಾಗುತ್ತಿದ್ದ ಕಲಾ ಲೋಕವೇ ಅತ್ಯದ್ಭುತ. ದೇವಾನುದೇವತೆಗಳಿಗೆ ಮೂರ್ತ ಸ್ವರೂಪದ ಜೀವ ತಂದ ಮಾಂತ್ರಿಕ. BKS ವರ್ಮ ರಚಿಸಿದ ದೇವಾನುದೇವತೆಗಳ ಚಿತ್ರಗಳು ಅದೆಷ್ಚೋ ಆಸ್ತಿಕರ ಮನೆಯ ದೇವರ ಕೋಣೆಯಲ್ಲಿ ನಿತ್ಯ ಪೂಜೆಯನ್ನು ಸ್ವೀಕರುಸುತ್ತಿವೆ. ಇದಲ್ಲವೇ? ಕಲಾವಿದನ ಸಾರ್ಥಕ ಬದುಕು?

2 Min read
Suvarna News
Published : Feb 06 2023, 12:09 PM IST| Updated : Feb 06 2023, 12:54 PM IST
Share this Photo Gallery
  • FB
  • TW
  • Linkdin
  • Whatsapp
113

ಕುಂಚದಲ್ಲಿ ವಿಭಿನ್ನ ಕಲಾ ಲೋಕವನ್ನು ಸೃಷ್ಟಿಸುತ್ತಿದ್ದ ಕಲಾವಿದ ಬಿಕೆಎಸ್ ವರ್ಮಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇವರ ದಿಢೀರ್ ಸಾವಿನಿಂದ ಕರ್ನಾಟಕದ ಕುಂಚಲೋಕಕ್ಕ ತುಂಬಲಾರದ ನಷ್ಟ. 

213

ಮೈಸೂರಿನ ಅರಮನೆಯೊಂದರಲ್ಲಿ ರಾಜ ರವಿ ವರ್ಮಾನ ಕಲೆಗಳು ವರ್ಮಾ ಅವರ ಕಲೆ ಮೇಲೆ ಬೀರಿದ ಪ್ರಭಾವ  ಅಷ್ಟಿಷ್ಟಲ್ಲ. ಆ ಅದ್ಭುತ ಕಲಾಕೃತಿಗಳಿಂದೆ ಅದೆಷ್ಟು ಪ್ರಭಾವಿತರಾಗಿದ್ದರೆಂದರೆ ತಮ್ಮ ಹೆಸರಿನ ಮುಂದೆ ವರ್ಮಾ ಎಂಬ ಶೀರೋಮಾನೆಯನ್ನೇ ಸೇರಿಸಿಕೊಂಡರು. 

313

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟಿವ್ ಇದ್ದ ವರ್ಮಾ ಅವರು ತಮ್ಮ ಮುಂದಿನ ಕಲಾಕೃತಿ ಬಗ್ಗೆ ಸುಳಿವು ನೀಡಿ, ಪೋಟೋಸ್ ಶೇರ್ ಮಾಡಿಕೊಳ್ಳುತ್ತಿದ್ದರು. ಆಗಲೇ ಕಲಾ ರಸಿಕರಲ್ಲಿ ಎಲ್ಲಿಲ್ಲದ ಕುತೂಹಲ ಸೃಷ್ಟಿಸುತ್ತಿತ್ತು. ಅವರ ಪೋಸ್ಟ್ ಮಾಡುವ ಕಲಾಕೃತಿಗೆ ಕಾಯುತ್ತಿದ್ದರು. 

413

ಸಂದರ್ಭಕ್ಕೆ ತಕ್ಕಂತೆ ಅವರು ದಾರ ಬಳಸಿ ಕೆಲವೇ ಕೆಲವು ನಿಮಿಷಗಳಲ್ಲಿ ಮೂಡಿಸುತ್ತಿದ್ದ ಕಾಲಕೃತಿಗಳು ಎಂಥವರನ್ನೂ ಮೂಕವಿಸ್ಮಿತರಾಗಿಸುತ್ತಿದ್ದು ಸುಳ್ಳಲ್ಲ. ಅದರಲ್ಲೂ ಪ್ರಕೃತಿ ಹಾಗೂ ದೇವಾನುದೇವತೆಗಳ ಚಿತ್ರಗಳನ್ನು ನೋಡಿದರೆ ಮೌನವೇ ಮಾತಾಗುತ್ತಿತ್ತು. 

513

ವರ್ಮಾ ಅವರಿಗೆ ಮೂವರು ಮಕ್ಕಳು. ಪತ್ನಿ ಶಾಂತಾ ಅವರನ್ನು ಅಗಲಿದ್ದಾರೆ. ತಮ್ಮ ವೈವಾಹಿಕ ವಾರ್ಷಿಕೋತ್ಸವದಂದು ಪತ್ನಿಯೊಂದಿಗೆ ಫೋಟೋ ಹಾಕಿ ಪ್ರತಿ ವರ್ಷವೂ ವಿಶ್ ಮಾಡುತ್ತಿದ್ದರು. 

613

ಸಾವಿರಾರು ಕಲಾ ಕೃತಿಗಳನ್ನು ಸೃಷ್ಟಿಸಿರುವ ಡಾ.ವರ್ಮಾ ಅವರ ಡಾ.ರಾಜ್‌ಕುಮಾರ್, ಕನ್ನಡ ನಾಡಿನ ತಾಯಿ ಭುವನೇಶ್ವರಿ ಹಾಗೂ ರಾಘವೇಂದ್ರ ಸ್ವಾಮಿಗಳು ಪೂಜೆಯಲ್ಲಿ ನಿರತರವಾಗಿರುವ ಪೇಟಿಂಗ್ಸ್ ಎಂಥ ಅರಸಿಕರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ನೋಡಿದರೆ ನೋಡುತ್ತಲೇ ಇರಬೇಕೆಂದು ಬಯಸುವ ಈ ಕೃತಿಗಳು ನೋಡಿದವರ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸುವುದರಲ್ಲಿ ಅನುಮಾನವೇ ಇಲ್ಲ. 

713

ದಕ್ಷಿಣ ಭಾರತದ ಪ್ರಖ್ಯಾತ ಹಾಸ್ಯ ನಟ ಬ್ರಹ್ಮಾನಂದಮ್ ಅವರೂ ವರ್ಮಾ ಅವರ ಅಭಿಮಾನಿಯಾಗಿದ್ದು, ಖುದ್ದು ಕಲಾವಿದರಾಗಿದ್ದರ ನಟ ಬಿಕೆಎಸ್ ವರ್ಮಾ ಅವರ ಪೋರ್ಟ್ರೈಟ್ ಅನ್ನು ಬರೆದು ಉಡುಗೊರೆಯಾಗಿ ನೀಡಿದ್ದರು. ಅದನ್ನು ಸಂತೋಷದಿಂದ ಸ್ವೀಕರಿಸಿದ್ದರು ವರ್ಮಾ ಅವರು. 

813

ದೇಶ ವಿದೇಶದಲ್ಲೂ ತಮ್ಮ ವಿಭಿನ್ನ ಕಲಾಕೃತಿಗಳಿಂದ ಹೆಸರು ಮಾಡಿದ್ದ ವರ್ಮಾ ಅವರು ವಿಶ್ವದ ಹಲವೆಡೆ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಸದಾ ಪತ್ನಿಯೊಂದಿಗಿನ ಪೋಟೋವನ್ನು ಶೇರ್ ಮಾಡಿಕೊಳ್ಳುತ್ತಿದ್ದರು. 

913

ದೈವಿ ಕಲಾವಿದನೆಂಬಂತೆ ಇವರು ತಮ್ಮ ಕುಂಚದಲ್ಲಿ ಮೂಡಿಸುತ್ತಿದ್ದ ದೇವಾನುದೇವತೆಗಳ ಕಲಾಕೃತಿಗಳು ಮನಸ್ಸಿನಲ್ಲಿ ದೈವಿಕ, ಮಾತೃ ಸ್ವರೂಪಿ ಭಾವ ಮೂಡಿಸುತ್ತಿದ್ದವು. 

1013

ಅಮೋಘ ಕಲಾವಿದ, ಆಧುನಿಕ ರವಿ ವರ್ಮಾ ಎಂದೇ ಖ್ಯಾತರಾಗಿದ್ದದ್ದ ವರ್ಮಾ ಅವರ ಮರಣ ಕರ್ನಾಟಕದ ಚಿತ್ರ ಜಗತ್ತಿಗೆ ತುಂಬಲಾರದ ನಷ್ಟವೆಂದು ಕಲಾ ರಸಿಕರು ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ. 

1113

ಇದು ಇತ್ತೀಚೆಗೆ ಸೃಷ್ಟಿಸಿದ ಕಲಾಕೃತಿಯನ್ನು ವರ್ಮಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೃಷ್ಣ ಯಶೋಧೆಯ ಚಿತ್ರ ಹಲವು ಭಾವನೆಗಳನ್ನು ಏಕ ಕಾಲದಲ್ಲಿ ಅಭಿವೃಕ್ತಿಗೊಳಿಸುವಂತಿದೆ. 

1213

ರಾಜ ರವಿ ವರ್ಮಾರಿಂದ ಪ್ರಭಾವಿತರಾದ ಬಿಕೆಎಸ್ ವರ್ಮ ಅವರು ರಚಿಸಿದ ಈ ಕಲಾಕೃತಿ, ದೀಪವಿಲ್ಲದಿದ್ದರೂ ಗಣಪತಿ ಮುಖ ಗ್ಲೋ ಆಗುವುದು ಇದರ ವಿಶೇಷ. ಕನ್ನಡದ ಸುಪ್ರಸಿದ್ಧ ಪತ್ರಕರ್ತ ವಿಶ್ವೇಶ್ವರ್ ಭಟ್ ಅವರಿಗೆ ವರ್ಮಾ ಅವರು ವಿಶ್ವಂಬರ ಎಂಬ ಹೆಸರಿನ ಈ ಕಲಾಕೃತಿಯನ್ನು ಮಾಡಿ ಕೊಟ್ಟಿದ್ದಾರೆ. 

1313

ವರನಟ ಡಾ. ರಾಜಕುಮಾರ್ ಅವರ ಕಲಾಕೃತಿ ವೃಕ್ಷರಾಜ ಅತ್ಯಂತ ಜನಪ್ರಿಯ ಕಲಾಕೃತಿ. ಮೇರು ನಟರು, ದೇವಾನುದೇವತೆಗಳ ಚಿತ್ರಗಳೊಂದಿಗೆ ವಿಭಿನ್ನವಾಗ ಪ್ರಕೃತಿಯನ್ನು ಮಾತೆಯನ್ನು ಚಿತ್ರಿಸುತ್ತಿದ್ದ ವರ್ಮಾ ಅವರ ಪ್ರಕೃತಿ ಚಿತ್ರಗಳಿಗೂ ಹಲವು ಪ್ರಶಸ್ತಿಗಳು ಬಂದಿವೆ. 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved