- Home
- Karnataka Districts
- Mysuru
- ಮೈಸೂರು ಮಹಾರಾಜ ಯದುವೀರ್ ಒಡೆಯರ್ ಹುಟ್ಟುಹಬ್ಬ: ಬೆಸ್ಟ್ ಫ್ರೆಂಡ್’ಗೆ ಪತ್ನಿಯಿಂದ ಸ್ಪೆಷಲ್ ವಿಶ್
ಮೈಸೂರು ಮಹಾರಾಜ ಯದುವೀರ್ ಒಡೆಯರ್ ಹುಟ್ಟುಹಬ್ಬ: ಬೆಸ್ಟ್ ಫ್ರೆಂಡ್’ಗೆ ಪತ್ನಿಯಿಂದ ಸ್ಪೆಷಲ್ ವಿಶ್
Yaduveer Wadiyar Birthday: ಮೈಸೂರು ಸಂಸ್ಥಾನದ ಮಹಾರಾಜರಾದ ಯದುವೀರ್ ಒಡೆಯರ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪತ್ನಿ ತ್ರಿಷಿಕಾ ಕುಮಾರಿ ಗಂಡನ ಫೋಟೊ ಜೊತೆ ವಿಶೇಷ ಮೆಸೇಜ್ ಶೇರ್ ಮಾಡಿ ಶುಭ ಕೋರಿದ್ದಾರೆ.

ಮೈಸೂರು ಮಹಾರಾಜ
ಮೈಸೂರು ಮಹಾರಾಜ ಹಾಗೂ ರಾಜಕಾರಣಿ ಶ್ರೀ ಯದುವೀರ್ ಒಡೆಯರ್ ಅವರು ಇಂದು ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪತ್ನಿ ಮಹಾರಾಣಿ ತ್ರಿಷಿಕಾ ಕುಮಾರಿ ದೇವಿ ಪತಿಯ ಫೋಟೊ ಜೊತೆಗೆ ವಿಶೇಷ ಮೆಸೇಜ್ ಹಂಚಿಕೊಂಡು ಶುಭ ಕೋರಿದ್ದಾರೆ.
ತ್ರಿಷಿಕಾ ಕುಮಾರಿ ವಿಶ್
ಯದುವೀರ್ ಒಡೆಯರ್ ಜೊತೆಗಿನ ಫೋಟೊ ಜೊತೆಗೆ ತ್ರಿಷಿಕಾ ದೇವಿ ‘ನನ್ನ ಪತಿ, ನನ್ನ ಅತ್ಯುತ್ತಮ ಸ್ನೇಹಿತ ಹಾಗೂ ಅದ್ಭುತ ತಂದೆಯಾದ ಶ್ರೀ ಯದುವೀರ್ ಒಡೆಯರ್ ಅವರಿಗೆ ಹೃತ್ಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು. ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ನಿಮ್ಮನ್ನು ಸದಾ ಆಶೀರ್ವದಿಸಿ ಕಾಪಾಡಲಿ ಎಂದು ಶುಭ ಹಾರೈಸಿದ್ದಾರೆ.
ಫ್ಯಾಮಿಲಿ ಫೋಟೊ ಹಂಚಿಕೊಂಡ ತ್ರಿಷಿಕಾ
ಜೊತೆಗೆ ತ್ರಿಷಿಕಾ ದೇವಿ ಪತಿ ಜೊತೆಗಿನ ಫಾರಿನ್ ಟ್ರಿಪ್ ಫೋಟೊಗಳನ್ನು ಶೇರ್ ಮಾಡಿದ್ದಾರೆ, ಅಲ್ಲದೇ ಪತಿ ಹಾಗೂ ಮಕ್ಕಳ ಜೊತೆಗೆ ಸೇರಿ ಪೂಜೆ ಮಾಡುತ್ತಿರುವ ಫೋಟೊ ಕೂಡ ಹಂಚಿಕೊಂಡಿದ್ದಾರೆ. ಎರಡರಲ್ಲೂ ರಾಯರ್ ಫ್ಯಾಮಿಲಿಯಾದರೂ ಅವರು ಪಾಲಿಸಿಕೊಂಡು ಬರುತ್ತಿರುವ ಸಿಂಪ್ಲಿಸಿಟಿ ಎದ್ದು ಕಾಣುತ್ತಿದೆ.
ಯದುವೇರ್ ಒಡೆಯರ್ ಜೀವನ
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾರ್ಚ್ 24, 1992 ರಂದು ಜನಿಸಿದರು. ಅವರು ರಾಜಮನೆತನದ 27 ನೇ ರಾಜ. ಬೆಟ್ಟದ ಕೋಟೆ ಕುಟುಂಬದ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರನ್ನು ಫೆಬ್ರವರಿ 23, 2015 ರಂದು ಪ್ರಮೋದಾ ದೇವಿ ಒಡೆಯರ್ ದತ್ತು ಪಡೆದರು. ಡಿಸೆಂಬರ್ 10, 2013 ರಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ನಂತರ ದತ್ತು ಸ್ವೀಕಾರ ನಡೆದಿತ್ತು.
ಮಹಾರಾಜರ ಪಟ್ಟಾಭಿಷೇಕ
ಮೇ 28, 2015 ರಂದು ಯದು ರಾಜವಂಶದ 27 ನೇ ಮಹಾರಾಜರಾಗಿ ಅಧಿಕೃತವಾಗಿ ಪಟ್ಟಾಭಿಷೇಕ ಮಾಡಲಾಯಿತು. ಜೂನ್ 27, 2016 ರಲ್ಲಿ ತ್ರಿಷೀಕಾ ದೇವಿಯನ್ನು ಮದುವೆಯಾದರು. ಈ ದಂಪತಿಗಳಿಗೆ ಡಿಸೆಂಬರ್ 6, 2017 ಆದ್ಯವೀರ್ ನರಸಿಂಹದತ್ತ ಒಡೆಯರ್ ಮತ್ತು 2024ರ ಅಕ್ಟೋಬರ್ 11ರಂದು ಎರಡನೇ ಗಂಡು ಮಗು ಜನಿಸಿತ್ತು.
ರಾಜಸ್ಥಾನದ ರಾಜಕುಮಾರಿ ತ್ರಿಷಿಕಾ
ತ್ರಿಷಿಕಾ ಕುಮಾರಿ ಸಿಂಗ್, ರಾಜಸ್ಥಾನದ ಡುಂಗರ್‌ಪುರ ರಾಜಮನೆತನದ ಹರ್ಷವರ್ಧನ್ ಸಿಂಗ್ ಮತ್ತು ಮಹೇಶಿ ಕುಮಾರಿ ಅವರ ಪುತ್ರಿ. ತ್ರಿಷಿಕಾ ದೇವಿ ಹಾಗೂ ಯದುವೀರ್ ಒಡೆಯರ್ ಜೊತೆಯಾಗಿ ಓದಿದ್ದರು, ಬಳಿಕ ಪ್ರೀತಿಸಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

