ತ್ರಿಶಿಕಾ ಕುಮಾರಿಯವರಿಂದ ಹೊಸ ಬ್ಯುಸಿನೆಸ್ , ಕಾಯ್ದಿರಿಸಿದ್ದಾರೆ ಸಸ್ಪೆನ್ಸ್...!
First Published Jan 15, 2021, 3:33 PM IST
ಮಹಾರಾಣಿ ತ್ರಿಶಿಕಾ ಕುಮಾರಿ ಒಡೆಯರ್ ಹೊಸ ಬ್ಯುಸಿನೆಸ್ ಆರಂಭಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆ ಮೂಲಕ ಜನರೊಟ್ಟಿಗೆ ಹಂಚಿಕೊಂಡಿದ್ದಾರೆ.

ಇತ್ತೀಚಿಗೆ ಇನ್‌ಸ್ಟಾಗ್ರಾಂ ಖಾತೆ ತೆರೆದ ಮೈಸೂರು ಮಹಾರಾಣಿ ತ್ರಿಶಿಕಾ ಕುಮಾರಿ ಒಡೆಯರ್ ತಮ್ಮ ಕನಸಿನ ಪ್ರಾಜೆಕ್ಟ್ ಬಗ್ಗೆ ಬರೆದುಕೊಂಡಿದ್ದಾರೆ.

'The little bunting India' ಹೆಸರಿನ ಬ್ಯುಸನೆಸ್ ಆರಂಭಿಸುತ್ತಿರುವ ವಿಚಾರ ಹಂಚಿಕೊಂಡಿದ್ದಾರೆ.

'ಸುಮಾರು ಒಂದು ವರ್ಷದಿಂದ ನಾವು ಇದಕ್ಕೆ ಕೆಲಸ ಮಾಡುತ್ತಿರುವ ಯೋಜನೆಯನ್ನು ಇನ್ನು ಕೇವಲ 10 ದಿನಗಳಲ್ಲಿ ಪ್ರಕಟಿಸಲಿದ್ದೇವೆ. ಹೆಚ್ಚಿನ ಮಾಹಿತಿಗಾಗಿ @thelittlebuntingindia ಪೇಜ್ ಅನ್ನು ಅನುಸರಿಸಿ' ಎಂದು ಬರೆದುಕೊಂಡಿದ್ದಾರೆ.

ಇದರಲ್ಲಿ ಮಕ್ಕಳ ವಸ್ತ್ರ, ಆಟಿಕೆ ಹಾಗೂ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ಬಳಸುವುದಿಲ್ಲ, ಸಂಪೂರ್ಣವಾಗಿ ಆರ್ಗ್ಯಾನಿಕ್ ಆಗಿರುತ್ತದೆ.

ತಮ್ಮ ಹೊಸ ಬ್ಯುಸಿನೆಸ್ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದು, ದಿನೆ ದಿನೇ ಫಾಲೋವರ್ಸ್ ಹೆಚ್ಚಾಗುತ್ತಿದ್ದಾರೆ.

ಮೈಸೂರು ಮಹಾರಾಣಿ ಆರಂಭಿಸುತ್ತಿರುವ ಮೊದಲ ಬ್ಯುಸಿನೆಸ್ ಇದಾಗಿದ್ದು, ಇಡೀ ಕರ್ನಾಟಕವೇ ಸಾಥ್ ಕೊಡುವುದರಲ್ಲಿ ಅನುಮಾನವಿಲ್ಲ.

ಮಹಾರಾಣಿ ತ್ರಿಶಿಕಾ ಕುಮಾರಿ ಅವರು ಸುಮಾರು 17 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಹಬ್ಬದ ದಿನ ಶುಭಾಶುಯಗಳು, ಪ್ರವಾಸ, ಅದ್ಭುತ ಫೋಟೋಗ್ರಾಫಿಗಳನ್ನು ಇನ್‌ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.