ಈ ಗಿಡಗಳು ಮನೆಯಲ್ಲಿದ್ದರೆ ಎಸಿ ಕೂಲರ್ ಯಾವುದು ಬೇಡ: ಬೇಸಿಗೆಯಲ್ಲೂ ತಂಪಾಗಿರುತ್ತೆ ಮನೆ
ಬೇಸಿಗೆ ಬಂತೆಂದ್ರೆ ಮೈ ಉರಿಯುವಂತಹ ಬಿಸಿಲು, ಉಕ್ಕಿ ಬರುವ ಬೆವರು. ಇದರಿಂದ ತಪ್ಪಿಸಿಕೊಳ್ಳೋಕೆ ಜನ ಎಸಿ ಕೂಲರ್‌ಗಳ ಮೊರೆ ಹೋಗ್ತಾರೆ. ಇದರಿಂದ ಕರೆಂಟ್ ಬಿಲ್ ಜಾಸ್ತಿ ಆಗುತ್ತೆ. ಆದ್ರೆ ಎಸಿ ಯೂಸ್ ಮಾಡೋ ಬದಲು ಮನೆಯಲ್ಲಿಯೇ ಒಂದಿಷ್ಟು ಗಿಡಗಳನ್ನ ಬೆಳೆಸಿ. ಅವುಗಳು ಮನೆಯಲ್ಲಿದ್ದರೆ ನಿಮಗೆ ಯಾವ ಏಸಿಯ ಅಗತ್ಯವೂ ಇರುವುದಿಲ್ಲ.

ಏಪ್ರಿಲ್‌ನಲ್ಲೇ ಬಿಸಿಲು ಬಹಳ ಜೋರಾಗಿದೆ. ಇನ್ನೆರಡು ತಿಂಗಳು ಇನ್ನಷ್ಟು ಬಿಸಿಲು ಹೆಚ್ಚಾಗಿ ಕಷ್ಟ ಆಗೋದು ಗ್ಯಾರಂಟಿ. ಈ ವರ್ಷ ಉಷ್ಣಾಂಶ ಜಾಸ್ತಿ ಆಗುತ್ತೆ ಅಂತ ಹವಾಮಾನ ಇಲಾಖೆ ಹೇಳಿದೆ. ಬಿಸಿಲಿನಿಂದ ತಪ್ಪಿಸಿಕೊಳ್ಳೋಕೆ ಎಲ್ಲರೂ ಎಸಿ ಕೂಲರ್‌ಗಳ ಮೊರೆ ಹೋಗ್ತಿದ್ದಾರೆ. ಇದರಿಂದ ಕರೆಂಟ್ ಬಿಲ್ ಜಾಸ್ತಿ ಆಗೋದಲ್ಲದೆ, ಆರೋಗ್ಯ ಸಮಸ್ಯೆಗಳು ಬರುತ್ತವೆ.
ಆದರೆ ಮನೆಯನ್ನು ಕೃತಕವಾವಾಗಿ ತಂಪು ಮಾಡೋ ಬದಲು, ಪ್ರಕೃತಿ ಕೊಟ್ಟ ಗಿಡಗಳನ್ನ ಮನೆಯೊಳಗೆ ನೆಟ್ಟರೆ ರೂಂ ತಂಪಾಗಿರುತ್ತೆ. ಯಾವ ರೂಮಲ್ಲಿ ಯಾವ ಗಿಡ ಇಟ್ಟರೆ ತಂಪಾಗಿರುತ್ತೆ ಅಂತ ತಿಳ್ಕೊಳೋಣ. ಬೆಡ್‌ರೂಮ್‌ನಲ್ಲಿ ಸ್ನೇಕ್ ಪ್ಲಾಂಟ್ (Snake Plant) ಇಡಿ. ಇದು ರಾತ್ರಿ ಹೊತ್ತು ಹೆಚ್ಚು ಆಕ್ಸಿಜನ್ ಕೊಡುತ್ತೆ, ಕೋಣೆಯನ್ನು ತಂಪಾಗಿಡುತ್ತೆ.
ಬಾಲ್ಕನಿ ಅಥವಾ ರೋಡ್ ಕಡೆ ಇರೋ ರೂಮಲ್ಲಿ ಫಿಕಸ್ (Ficus) ಗಿಡ ನೆಡಿ. ಇದು ಗಾಳಿಯನ್ನ ಶುದ್ಧ ಮಾಡುತ್ತೆ, ಗಾಳಿಯ ಗುಣಮಟ್ಟ ಹೆಚ್ಚಿಸುತ್ತೆ. ಜೊತೆಗೆ ಉಷ್ಣಾಂಶ ಕಂಟ್ರೋಲ್ ಮಾಡುತ್ತೆ. ಗೋಲ್ಡನ್ ಪಾಥೋಸ್ (Golden Pathos) ಅನ್ನೋ ಗಿಡವನ್ನ ಮನೆಯಲ್ಲಿ ನೆಟ್ಟರೆ ಸುತ್ತಮುತ್ತಲಿನ ವಾತಾವರಣ ತಂಪಾಗಿರುತ್ತೆ. ಆದ್ರೆ ಈ ಗಿಡಕ್ಕೆ ಬೆಳಕು ಬೇಕು, ಅದಕ್ಕೆ ಬೆಳಕು ಬರೋ ಕಡೆ ನೆಡಿ.
ಈ ಟೈಮಲ್ಲಿ ನೋಳಿಸರ (Aloe Vera) ಗಿಡ ನೆಡದೋರು ಇರಲ್ಲ. ತುಂಬಾ ಜನ ಮನೆ ಹತ್ರ ನೆಡ್ತಾರೆ, ಆದ್ರೆ ಇದನ್ನು ಮನೆಯೊಳಗಿಟ್ಟರೆ ಉಷ್ಣಾಂಶ ಕಂಟ್ರೋಲ್ ಆಗುತ್ತೆ, ಬಿಸಿಲಿನ ತಾಪ ಕಮ್ಮಿ ಆಗುತ್ತೆ. ಲಿವಿಂಗ್ ರೂಮ್ (Living Room)ನಲ್ಲಿ ಅರೆಕಾ ಪಾಮ್ (Areca Palm) ಇಡಿ. ಇದು ಗಾಳಿಯಲ್ಲಿ ತೇವಾಂಶ ಉಳಿಸಿಕೊಳ್ಳುತ್ತೆ, ಇದರಿಂದ ರೂಂ ಟೆಂಪರೇಚರ್ ನಾರ್ಮಲ್ ಆಗಿರುತ್ತೆ. ಈ ಗಿಡಗಳು ನರ್ಸರಿಗಳಲ್ಲಿ ಸಿಗುತ್ತವೆ. ನಿಮ್ಮ ಹತ್ತಿರದ ನರ್ಸರಿಯಿಂದ ಗಿಡಗಳನ್ನ ತಂದು ನಿಮ್ಮ ರೂಂ ತಂಪಾಗಿ ಇಟ್ಟುಕೊಳ್ಳಬಹುದಾಗಿದೆ.