- Home
- My Home Care
- Apartment Living
- Rent Agreementನಲ್ಲಿ ತಪ್ಪದೇ ಈ ವಿಷಯವನ್ನು ಬರೆಸಿ; ಇಲ್ಲಾಂದ್ರೆ ಪೊಲೀಸರ ಬಳಿ ಹೋಗಬೇಕಾಗುತ್ತೆ!
Rent Agreementನಲ್ಲಿ ತಪ್ಪದೇ ಈ ವಿಷಯವನ್ನು ಬರೆಸಿ; ಇಲ್ಲಾಂದ್ರೆ ಪೊಲೀಸರ ಬಳಿ ಹೋಗಬೇಕಾಗುತ್ತೆ!
Rent Agreement: ಮಹಾನಗರಗಳಲ್ಲಿ ಬಾಡಿಗೆ ಮನೆ ಪಡೆಯುವಾಗ ಕಾನೂನಿನ ಪ್ರಕಾರ ಒಪ್ಪಂದ ಮಾಡಿಕೊಳ್ಳುವುದು ಮುಖ್ಯ. ಬಾಡಿಗೆ ಒಪ್ಪಂದದಲ್ಲಿಕೆಲವು ಅಂಶವನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು, ಇಲ್ಲವಾದ್ರೆ ಪೊಲೀಸ್ ಠಾಣೆಗೆ ಅಲೆಯಬೇಕಾಗುತ್ತದೆ.

ಮಹಾನಗರಗಳಲ್ಲಿ ಬಾಡಿಗೆ ಮನೆ ಪಡೆಯುವಾಗ ಕಾನೂನಿನ ಪ್ರಕಾರ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಜನರು ಒಂದು ನಗರದಿಂದ ಮತ್ತೊಂದು ನಗರಕ್ಕೆ ತೆರಳಿದ ಸಂದರ್ಭದಲ್ಲಿ ವಾಸಿಸಲು ಬಾಡಿಗೆ ಮನೆ ಪಡೆದುಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ Rent Agreement ಮಾಡಿಸಿಕೊಳ್ಳಬೇಕಾಗುತ್ತದೆ.
ಬಾಡಿಗೆ ಒಪ್ಪಂದ ಅನ್ನೋದು ಬಾಡಿಗೆದಾರ ಮತ್ತು ಮನೆ ಮಾಲೀಕನ ನಡುವೆ ಏರ್ಪಡುತ್ತದೆ. ಈ ಒಪ್ಪಂದ ಇಬ್ಬರ ಹಕ್ಕು ಮತ್ತು ಜವಾಬ್ದಾರಿಗಳನ್ನು ಒಳಗೊಂಡಿರುತ್ತವೆ. ಭವಿಷ್ಯದಲ್ಲಿ ಯಾವುದೇ ವಿವಾದ ಅಥವಾ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗಬಾರದು ಎಂಬ ಉದ್ದೇಶದಿಂದ ಕಾನೂನಿನ ಪ್ರಕಾರ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.
ಬಾಡಿಗೆ ಒಪ್ಪಂದದಲ್ಲಿ ಬಾಡಿಗೆ ಹಣ, ಒಪ್ಪಂದದ ದಿನಾಂಕ ಸೇರಿದಂತೆ ಹಲವು ವಿಷಯಗಳಿರುತ್ತವೆ. ನೀವು ಬಾಡಿಗೆದಾರರಾಗಿದ್ರೆ ಅಗ್ರಿಮೆಂಟ್ ಬರೆಸುವ ಮುನ್ನ ಒಂದು ವಿಷಯವನ್ನು ನೆನಪಿನಿಂದ ಸೇರಿಸಬೇಕಾಗುತ್ತದೆ. ಇಲ್ಲವಾದ್ರೆ ಪೊಲೀಸ್ ಠಾಣೆಗೆ ಅಲೆಯಬೇಕಾಗುತ್ತದೆ.
ಬಾಡಿಗೆ ಒಪ್ಪಂದದಲ್ಲಿ ಮನೆಯನ್ನು ಯಾವಾಗ ಮತ್ತು ಹೇಗೆ ಖಾಲಿ ಮಾಡಬೇಕು ಎಂಬ ಅಂಶವನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಒಪ್ಪಂದದ ಅವಧಿ ಮುಕ್ತಾಯದ ಬಳಿಕ ಅಥವಾ ಅದಕ್ಕಿಂತ ಮೊದಲು ಮನೆ ಖಾಲಿ ಮಾಡಬೇಕಾ ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ.
ಮನೆ ಖಾಲಿ ಮಾಡಿಸುವ ಮುನ್ನ ಮಾಲೀಕರು ಮುಂಚಿತವಾಗಿಯೇ ಇಂತಿಷ್ಟು ದಿನದ ಮೊದಲೇ ಮಾಹಿತಿ ಹೇಳಬೇಕು. ದಿಡೀರ್ ಮನೆ ಖಾಲಿ ಮಾಡಲು ಅಸಾಧ್ಯವಾದ ಕಾರಣ ಅಂಶವನ್ನು ನೆನಪಿನಿಂದ ಬರೆಸಬೇಕು. ಮನೆ ನಿರ್ಗಮನದ ರೀತಿಯನ್ನು ಉಲ್ಲೇಖಿಸದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.
ನಿರ್ಗಮನದ ಬಗ್ಗೆ ಯಾವುದೇ ಮಾಹಿತಿ ಬರೆಸದಿದ್ದರೆ, ಮಾಲೀಕರು ಸೂಚಿಸಿದ ಸಮಯದಲ್ಲಿ ಮನೆ ಖಾಲಿ ಮಾಡಬೇಕು. ಒಂದು ವೇಳೆ ನೀವು ಮನೆ ಖಾಲಿ ಮಾಡಲು ಒಪ್ಪದಿದ್ರೆ, ಮಾಲೀಕರು ನಿಮ್ಮ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು.