- Home
- Money
- Financial Tips: ಈ ಲೆಕ್ಕಾಚಾರ ತಿಳಿದರೆ 30 ಸಾವಿರ ಸಂಬಳದಲ್ಲಿ ಮನೆ ಸಾಲ, ಕಾರಿನ ಲೋನ್ ಕಟ್ಟುವುದು ಸುಲಭ!
Financial Tips: ಈ ಲೆಕ್ಕಾಚಾರ ತಿಳಿದರೆ 30 ಸಾವಿರ ಸಂಬಳದಲ್ಲಿ ಮನೆ ಸಾಲ, ಕಾರಿನ ಲೋನ್ ಕಟ್ಟುವುದು ಸುಲಭ!
₹30 ಸಾವಿರ ಮಾಸಿಕ ಸಂಬಳದಲ್ಲೂ ಮನೆ ಮತ್ತು ಕಾರು ಸಾಲದ ಇಎಂಐ ಕಟ್ಟುವುದು ಸಾಧ್ಯ. ಆದರೆ ಒಟ್ಟು EMI ಆದಾಯದ 40-50% ಮೀರಬಾರದು. FOIR ನಿಯಮ, ಉತ್ತಮ ಕ್ರೆಡಿಟ್ ಸ್ಕೋರ್, ಡೌನ್ ಪೇಮೆಂಟ್ ಹಾಗೂ ತುರ್ತು ಉಳಿತಾಯದ ಬಗ್ಗೆ ಗಮನಿಸಿದರೆ ಆರ್ಥಿಕ ಒತ್ತಡವಿಲ್ಲದೆ ಸಾಲ ನಿರ್ವಹಿಸಬಹುದು.

30,000 ಸಂಬಳದಲ್ಲಿ ಮನೆ ಮತ್ತು ಕಾರು ಸಾಲ ಇಎಂಐ ಕಟ್ಟುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಕಾರು ಖರೀದಿಸುವುದು ಬಹುತೇಕ ಯುವಕರ ಕನಸಾಗಿದೆ. ಆದರೆ ಬರುವ ಮಾಸಿಕ 30 ಸಾವಿರ ಸಂಬಳದಲ್ಲಿ ಹೇಗಪ್ಪ ಖರೀದಿಸೋದು ಅನ್ನೋ ಚಿಂತೆಯೂ ಕಾಡ್ತಿದೆ. ಚಿಂತೆ ಮಾಡಬೇಕಿಲ್ಲ. ಈ ಲೆಕ್ಕಾಚಾರ ತಿಳಿದುಕೊಂಡರೆ ನಿಮಗೆ ಬರೋ ಮೂವತ್ತು ಸಾವಿರ ರೂಪಾಯಿ ಸಂಬಳದಲ್ಲೇ ಕಾರು ಖರೀದಿಸಬಹುದು ಪ್ರತಿ ತಿಂಗಳು ಕಾರು ಸಾಲದ ಇಎಂಐ ಸುಲಭವಾಗಿ ಪಾವತಿಸಬಹುದು. ಇದು ಹೇಗೆ ಸಾಧ್ಯಪ್ಪ ಅಂತಾ ಆಶ್ಚರ್ಯವಾಯ್ತೇ? ಇಲ್ಲಿದೆ ಲೆಕ್ಕಾಚಾರ..
ಬ್ಯಾಂಕ್‌ಗಳು ಯಾವಾಗ ಸಾಲ ನೀಡುತ್ತವೆ?
ಮೊದಲನೆಯದಾಗಿ ತಿಳಿದುಕೊಳ್ಳಬೇಕಾಗಿದ್ದೇನೆಂದರೆ ಬ್ಯಾಂಕ್‌ಗಳು ಸಾಲ ನೀಡುವ ವಿಷಯಕ್ಕೆ ಬಂದಾಗ EMI ನಿಮ್ಮ ತಿಂಗಳ ಸಂಬಳದ 40-50 ಪರ್ಸೆಂಟ್ ಮೀರದಂತೆ ನೋಡಿಕೊಳ್ಳುತ್ತದೆ. ಇದನ್ನ ಬ್ಯಾಂಕ್ ಭಾಷೆಯಲ್ಲಿ FOIR ಎಂದು ಕರೆಯಲಾಗುತ್ತೆ. ಅಂದರೆ ನಿಮ್ಮ ಸಂಬಳ ₹30,000 ಆಗಿದ್ದರೆ ಅದರಲ್ಲಿ 40 ಪರ್ಸೆಂಟ್ EMI ಸುಮಾರು 15000 ರೂಪಾಯಿ ಆಗಿರುತ್ತೆ. ಬ್ಯಾಂಕ್‌ಗಳು ಯಾವಾಗಲು ನಿಮ್ಮ ಒಟ್ಟು ಇಎಂಐ ಇಷ್ಟೇ ಮೊತ್ತದೊಳಗೆ ಇರುವಂತೆ ನೋಡಿಕೊಳ್ಳುತ್ತವೆ.
ಇನ್ನು ಗೃಹ ಸಾಲದ ಲೆಕ್ಕಾಚಾರ ತಿಳಿಯೋಣ
ಈಗ ನಿಮ್ಮ ಗೃಹ ಸಾಲದ EMI ತಿಂಗಳಿಗೆ ₹9,000, ಕಾರಿನ ಲೋನ್ EMI ತಿಂಗಳಿಗೆ ₹4,000 ಆಗಿದ್ದರೆ, ನಿಮ್ಮ ಒಟ್ಟು EMI ತಿಂಗಳಿಗೆ ₹13,000 ಆಗುತ್ತೆ. ಇದು ನಿಮ್ಮ ₹30,000 ಸಂಬಳದ ಸರಿಸುಮಾರು 43% ಆಗಿದೆ. ಈ ಲೆಕ್ಕಾಚಾರದ ಮೇಲೆ ನೀವು ಬ್ಯಾಂಕಿನಿಂದ ಸಾಲವನ್ನು ಪಡೆಯಲು ಸಾಧ್ಯ. ಆದರೆ ಬ್ಯಾಂಕ್ ಸಾಲ ಕೊಡುವ ಮೊದಲು ನಿಮ್ಮ ಕ್ರೆಡಿಟ್ ಪ್ರೊಫೈಲ್, ಹಿಂದಿನ ಸಾಲದ ವಿವರಗಳು ಮತ್ತು ವೆಚ್ಚಗಳನ್ನು ಪರಿಶೀಲಿಸುತ್ತದೆ.
ಮನೆ, ಕಾರು ಲೋನ್ ಕಟ್ಟಿದ ಬಳಿಕ ಎಷ್ಟು ಉಳಿಯುತ್ತೆ?
ನಿಮ್ಮ ಸಂಬಳ ₹30,000. ಅದರಲ್ಲಿ ನಿಮ್ಮ EMI ₹13,000 ಆಗಿದ್ದರೆ, ನಿಮಗೆ ಪ್ರತಿ ತಿಂಗಳು ಸುಮಾರು ₹17,000 ಉಳಿಯುತ್ತದೆ. ಈ ₹17,000 ದಿಂದ, ನೀವು ನಿಮ್ಮ ಮನೆಯ ಖರ್ಚುಗಳನ್ನು, ನಿಮ್ಮ ವಿದ್ಯುತ್ ಮತ್ತು ನೀರಿನ ಬಿಲ್‌ಗಳನ್ನು, ವೈದ್ಯಕೀಯ ವೆಚ್ಚಗಳನ್ನು ಪಾವತಿಸಬೇಕಾಗುತ್ತದೆ. ಇನ್ನು ಕಾರಿನ ಪೆಟ್ರೋಲ್ ಅಥವಾ CNG ಗಾಗಿ ಖರ್ಚು ಮಾಡಬೇಕಾಗುತ್ತದೆ. ಆದರೆ ನಿಮ್ಮ ಬಳಿ ಉಳಿತಾಯಕ್ಕೆ, ಇನ್ವಸ್ಟ್ ಮಾಡಲು ಹಣವೇ ಉಳಿದಿರುವುದಿಲ್ಲ.
ಸಾಲ ಪಡೆಯುವ ಮುನ್ನ ಈ ವಿಷಯ ಗಮನದಲ್ಲಿರಲಿ
ನಿಮ್ಮ ಒಟ್ಟು ಇಎಂಐ ನಿಮ್ಮ ಆದಾಯದ 40% ಮೀರದಂತಿರಲಿ.
ಎಮರ್ಜೆನ್ಸಿಗೆ ಹಣ ಉಳಿತಾಯ ಇರಲಿ.
ಉತ್ತಮ ಕ್ರೆಡಿಟ್ ಸ್ಕೋರ್ ಕಾಯ್ದುಕೊಳ್ಳಿ.
ನೀವು ಹೆಚ್ಚಿನ ಡೌನ್ ಪೇಮೆಂಟ್ ಮಾಡಿದರೆ, ಕಡಿಮೆ ಇಎಂಐ ಇರುತ್ತದೆ.
ಹಾಗಾದರೆ ಮೂವತ್ತು ಸಾವಿರ ಸಂಬಳದಲ್ಲಿ ಸಾಲ ಪಡೆಯುವುದು ಸರಿಯೆ?
ನಿಮಗೆ ಒಂದು ನಿಶ್ಚಿತವಾದ ಉದ್ಯೋಗವಿದ್ದರೆ, ಬೇರೆ ಯಾವುದೇ ಪ್ರಮುಖ ಸಾಲವಿಲ್ಲದಿದ್ದರೆ ಅಥವಾ ನಿಮ್ಮ ತಿಂಗಳ ಖರ್ಚುಗಳನ್ನ ಉಳಿದ ಹಣದಲ್ಲಿ ನಿಭಾಯಿಸಲು ಸಾಧ್ಯವಾದರೆ, ಸರಿಯಾಗಿ ಮೇಲೆ ಹೇಳಿದ ಲೆಕ್ಕಾಚಾರದ ಮೂಲಕ ನಿಮ್ಮ ಗೃಹ ಸಾಲ, ಕಾರು ಸಾಲ ಎರಡಕ್ಕೂ ಇಎಂಐ ಪಾವತಿಸಲು ಸಾಧ್ಯ. ಆದರೂ ನೀವು ಈಗಾಗಲೇ ಸಾಲ ಮಾಡಿಕೊಂಡಿದ್ದರೆ, ಅಥವಾ ನಿಮ್ಮ ತಿಂಗಳ ಖರ್ಚುಗಳು ಹೆಚ್ಚಿದ್ದರೆ ಮನೆ ಮತ್ತು ಕಾರು ಲೋನ್ ಒಟ್ಟಿಗೆ ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸುವುದು ಮುಖ್ಯ.

