- Home
- Technology
- Mobiles
- ಮೊಬೈಲ್ ಪ್ರಿಯರಿಗೆ ಹಬ್ಬದೂಟ! ಆಗಸ್ಟ್‌ನಲ್ಲಿ ಗ್ರ್ಯಾಂಡ್ ಎಂಟ್ರಿ ಕೊಡಲಿವೆ ಹೊಸ AI & ಪವರ್‌ಫುಲ್ ಬ್ಯಾಟರಿ ಫೋನ್‌ಗಳು!
ಮೊಬೈಲ್ ಪ್ರಿಯರಿಗೆ ಹಬ್ಬದೂಟ! ಆಗಸ್ಟ್‌ನಲ್ಲಿ ಗ್ರ್ಯಾಂಡ್ ಎಂಟ್ರಿ ಕೊಡಲಿವೆ ಹೊಸ AI & ಪವರ್‌ಫುಲ್ ಬ್ಯಾಟರಿ ಫೋನ್‌ಗಳು!
ಈ ಆಗಸ್ಟ್ ತಿಂಗಳಲ್ಲಿ ಗೂಗಲ್, ಪೊಕೊ, ವಿವೋ, ಮತ್ತು ಒನ್‌ಪ್ಲಸ್‌ನಂತಹ ಪ್ರಮುಖ ಕಂಪನಿಗಳು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಬೃಹತ್ ಬ್ಯಾಟರಿ, ಉನ್ನತ ಕ್ಯಾಮೆರಾ, ಗೇಮಿಂಗ್ ಮತ್ತು ಎಐ ವೈಶಿಷ್ಟ್ಯಗಳನ್ನು ಹೊಂದಿರುವ ಈ ಫೋನ್‌ಗಳು ಎಲ್ಲಾ ರೀತಿಯ ಗ್ರಾಹಕರ ಅಗತ್ಯಗಳನ್ನು ಪೂರೈಸಲಿವೆ.

ಗ್ರಾಹಕರಿಗೆ ಗುಡ್ ನ್ಯೂಸ್!
ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್‌ನಲ್ಲಿರುವ ಗ್ರಾಹಕರಿಗೆ ಈ ಆಗಸ್ಟ್ ತಿಂಗಳು ಅತ್ಯಂತ ಸೂಕ್ತ ಸಮಯವಾಗಿದೆ. ಬಜೆಟ್ ಫೋನ್‌ಗಳಿಂದ ಹಿಡಿದು ಹೈ-ಎಂಡ್ ಫ್ಲ್ಯಾಗ್‌ಶಿಪ್ ಮಾದರಿಗಳವರೆಗೆ, ಪ್ರಮುಖ ಮೊಬೈಲ್ ಕಂಪನಿಗಳು ತಮ್ಮ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಂಪೂರ್ಣ ಸಜ್ಜಾಗಿವೆ. ಗೇಮಿಂಗ್, ಉನ್ನತ ಕ್ಯಾಮೆರಾ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಹಾಗೂ ಬೃಹತ್ ಬ್ಯಾಟರಿ ಸಾಮರ್ಥ್ಯ ಬಯಸುವ ಗ್ರಾಹಕರಿಗೆ ಈ ತಿಂಗಳು ಸಾಲು ಸಾಲು ಆಕರ್ಷಕ ಆಯ್ಕೆಗಳು ಲಭ್ಯವಾಗಲಿವೆ.
ಗ್ರ್ಯಾಂಡ್ ಎಂಟ್ರಿ ಕೊಡಲಿರುವ ಗೂಗಲ್ ಪಿಕ್ಸೆಲ್!
ಈ ಪೈಕಿ ಅತ್ಯಂತ ನಿರೀಕ್ಷಿತ ಪ್ರೀಮಿಯಂ ಸರಣಿಯಾದ ಗೂಗಲ್ ಪಿಕ್ಸೆಲ್ 11 ಆಗಸ್ಟ್ 12 ರಂದು ಗ್ರ್ಯಾಂಡ್ ಲಾಂಚ್ ಆಗಲಿದ್ದು, ಇದರಲ್ಲಿ ಪಿಕ್ಸೆಲ್ 11, 11 ಪ್ರೊ, 11 ಪ್ರೊ ಎಕ್ಸ್‌ಎಲ್ ಮತ್ತು 11 ಪ್ರೊ ಫೋಲ್ಡ್ ಮಾದರಿಗಳು ಬರಲಿವೆ. ಇವು ಹೊಸ ಟೆನ್ಸರ್ ಜಿ6 ಪ್ರೊಸೆಸರ್, ಜೆಮಿನಿ ಎಐ ಹಾಗೂ ಕರೆಗಳು ಮತ್ತು ನೋಟಿಫಿಕೇಶನ್‌ಗಳಿಗೆ ಅನುಕೂಲವಾಗುವ 'ಪಿಕ್ಸೆಲ್ ಗ್ಲೋ' ಎಲ್‌ಇಡಿ ವ್ಯವಸ್ಥೆಯನ್ನು ಹೊಂದಿರಲಿವೆ. ಮತ್ತೊಂದೆಡೆ ದೀರ್ಘ ಬ್ಯಾಟರಿ ಬ್ಯಾಕಪ್ ಬಯಸುವವರಿಗಾಗಿ ಆಗಸ್ಟ್ 4 ರಂದು ಪೊಕೊ ಎಂ8 ಪವರ್ ಮತ್ತು ಆಗಸ್ಟ್ 6 ರಂದು ರೆಡ್ಮಿ ನೋಟ್ 17 5ಜಿ ಬಿಡುಗಡೆಯಾಗುತ್ತಿದ್ದು, ಇವೆರಡೂ ಬೃಹತ್ 8,000mAh ಬ್ಯಾಟರಿ ಪವರ್ ಹೊಂದಿದೆ.
ಬರಲಿದೆ ಹೊಸ ವೈಶಿಷ್ಟ್ಯದೊಂದಿಗೆ ವಿವೋ ಎಸ್2!
ಛಾಯಾಗ್ರಹಣ ಪ್ರಿಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿವೋ ಎಸ್2 ಆಗಸ್ಟ್ 6 ರಂದು ಮಾರುಕಟ್ಟೆಗೆ ಬರಲಿದ್ದು, ಇದು 50MP ಹಿಂಬದಿಯ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾ ಜೊತೆಗೆ 7,050mAh ಬ್ಯಾಟರಿಯನ್ನು ನೀಡಲಿದೆ. ಹಾಗೆಯೇ, ಸುಮಾರು ₹30,000 ಬೆಲೆ ಶ್ರೇಣಿಯಲ್ಲಿ ಗೇಮಿಂಗ್ ಮತ್ತು ಸ್ಪೀಡ್ ಪರ್ಫಾರ್ಮೆನ್ಸ್‌ಗೆ ಹೆಸರುವಾಸಿಯಾದ iQOO Z11 ಫೋನ್ 9,020mAh ಬ್ಯಾಟರಿ ಹಾಗೂ 90W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಲಭ್ಯವಾಗಲಿದೆ.
ಕಡಿಮೆ ಬಜೆಟ್‌ನಲ್ಲಿ ಉತ್ತಮ ಗೇಮಿಂಗ್!
ಕಡಿಮೆ ಬಜೆಟ್‌ನಲ್ಲಿ ಉತ್ತಮ ಗೇಮಿಂಗ್ ಬಯಸುವವರಿಗೆ 144Hz ರಿಫ್ರೆಶ್ ದರ ಹೊಂದಿರುವ ಇನ್ಫಿನಿಕ್ಸ್ ಹಾಟ್ 70 ಪ್ರೊ ಬೆಸ್ಟ್ ಆಯ್ಕೆಯಾಗಲಿದೆ. ಹಾಗೆಯೇ ಆಗಸ್ಟ್‌ನಲ್ಲಿ ಖರೀದಿಗೆ ಸಿಗಲಿರುವ ಒನ್‌ಪ್ಲಸ್ N6x ಫೋನ್, 7,000mAh ಬ್ಯಾಟರಿ, ಮಿಲಿಟರಿ ಗ್ರೇಡ್ ಬಾಳಿಕೆ ಮತ್ತು ವಿ ಸಿ ಕೂಲಿಂಗ್ ವ್ಯವಸ್ಥೆಯೊಂದಿಗೆ ಆರಂಭಿಕ ಹಂತದ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದೆ. ಒಟ್ಟಾರೆಯಾಗಿ, ಬ್ಯಾಟರಿ, ಕ್ಯಾಮೆರಾ, ಎಐ ಹಾಗೂ ಗೇಮಿಂಗ್ ಹೀಗೆ ಪ್ರತಿಯೊಬ್ಬ ಬಳಕೆದಾರನ ಅಗತ್ಯಕ್ಕೆ ತಕ್ಕಂತೆ ಆಗಸ್ಟ್ ತಿಂಗಳಲ್ಲಿ ಸೂಕ್ತ ಸ್ಮಾರ್ಟ್‌ಫೋನ್‌ಗಳು ಲಭ್ಯವಿರಲಿವೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.
