ಛಾವಣಿಯಿಲ್ಲ, ಗೋಡೆಗಳಿಲ್ಲ...! ಆದ್ರೂ ಈ Hotelಗೆ ಫುಲ್ ಡಿಮ್ಯಾಂಡ್!

First Published 4, May 2019, 5:29 PM

ಜಗತ್ತಿನಾದ್ಯಂತ ಚಿತ್ರ ವಿಚಿತ್ರ ವಸ್ತುಗಳಿವೆ. ಇವು ನಿರಾಯಾಸವಾಗಿ ಜನರನ್ನು ಆಕರ್ಷಿಸುತ್ತಿರುತ್ತವೆ. ಇಂತಹ ಪಟ್ಟಿಗೆ ಒಂದು ಹೋಟೆಲ್ ಕೂಡಾ ಸೇರ್ಪಡೆಗೊಳ್ಳುತ್ತದೆ. ಈ ಹೋಟೆಲ್ ಗೆ ಗೋಡೆಗಳೂ ಇಲ್ಲ, ಛಾವಣಿಯೂ ಇಲ್ಲ...! ಇದೇನಪ್ಪಾ ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ವಿವರ

ಹೌದು ಹೋಟೆಲ್ ಗೆ ಗೋಡೆಗಳೂ ಇಲ್ಲ, ಛಾವಣಿಯೂ ಇಲ್ಲ... ಆಕಾಶದ ಕೆಳಗೆ ತೆರೆದ ಪ್ರದೇಶದಲ್ಲಿದೆ. ಇದು ಒಂದು ಪ್ರಕಾರದಲ್ಲಿ ಓಪನ್ ಏರ್ ಹೋಟೆಲ್ ರೂಂ ಎನ್ನಬಹುದು. ಸ್ವಿಡ್ಜರ್ಲೆಂಡ್ ನ ಸುಂದರವಾದ ಬೆಟ್ಟ ಗುಡ್ಡಗಳ ನಡುವೆ ಇದನ್ನು ನಿರ್ಮಿಸಲಾಗಿದೆ.

ಈ ಹೋಟೆಲ್ ಹೆಸರು the null stern hotel. ಛಾವಣಿಯಾಗಲೀ ನಾಲ್ಕೂ ಕಡೆ ಗೋಡೆಗಳಿಲ್ಲದೇ ಇರುವುದು ಈ ಹೋಟೆಲ್ ವಿಶೇಷತೆ. ಇಲ್ಲೊಂದು ಸುಂದರವಾದ ಕ್ವೀನ್ ಸೈಜ್ ಬೆಡ್ ಹಾಕಿದ್ದು, ಇದರ ಮೇಲೆ ಬಿಳಿ ಬಣ್ಣದ ಬೆಡ್ ಶೀಟ್ ಹಾಸಿಟ್ಟಿರುತ್ತಾರೆ. ಈ ಬೆಡ್ ಸುತ್ತಲೂ ಲ್ಯಾಂಪ್ ಸೆಟ್ ಗಳನ್ನು ಹಾಕಿರುತ್ತಾರೆ.

ಇಲ್ಲಿ ಬೆಡ್ ಬಿಟ್ಟರೆ ಮತ್ತೇನೂ ಇರುವುದಿಲ್ಲ. ಇದು ಕೇಳಲು ವಿಚಿತ್ರವಾಗಿದ್ದರೂ, ಫೋಟೋ ನೋಡಿದ ಬಳಿಕ ಒಂದು ಬಾರಿಯಾದರೂ ನೋಡಬೇಕೆಂಬ ಇಚ್ಛೆ ಮೂಡುವುದರಲ್ಲಿ ಅನುಮಾನವಿಲ್ಲ. ಯಾಕೆಂದರೆ ಈ ಹೋಟೇಲ್ ರೂಂ ಸುತ್ತಮುತ್ತಲಿನ ಪರಿಸರವೇ ಅಷ್ಟು ಮನಮೋಹಕವಾಗಿದೆ.

ಸಮುದ್ರ ಮಟ್ಟಕ್ಕಿಂತ ಸುಮಾರು 6,463 ಅಡಿ ಎತ್ತರದಲ್ಲಿರುವ ಈ ರೂಂನಲ್ಲಿ ಒಂದು ರಾತ್ರಿ ಉಳಿದುಕೊಳ್ಳಬೇಕಾದರೆ 15,000 ರೂಪಾಯಿ ಬಾಡಿಗೆ ನೀಡಬೇಕಾಗುತ್ತದೆ.

ಜರ್ಮನ್ ನಲ್ಲಿ ಈ ಹೋಟೆಲ್ ಹೆಸರು ಜೀರೋ ಸ್ಟಾರ್ ಎಂಬ ಅರ್ಥ ಪಡೆದುಕೊಳ್ಳುತ್ತದೆ. ಜಗತ್ತಿನಾದ್ಯಂತ ಹೋಟೇಲ್ ಗಳ ವಿಸೇಷತೆಯನ್ನು ಅವುಗಳಿಗೆ ನೀಡಲಾಗುವ ಸ್ಟಾರ್ ಗಳನ್ನು ಅವಲಂಭಿಸಿರುತ್ತದೆ. ಆದರೆ ಈ ಹೋಟೆಲ್ ಹೆಸರು ಮಾತ್ರ ಹೀರೋ ಸ್ಟಾರ್ ಎಂಬುವುದು ಬಹಳ ಅಚ್ಚರಿ ಮುಡಿಸುವ ವಿಚಾರ.

2016ರಲ್ಲಿ ಆರಂಭವಾದ ಈ ಹೋಟೆಲ್ ಬುಕ್ಕಿಂಗ್ ಆರಂಭವಾಗಿದ್ದು ಮಾತ್ರ 2017ರಲ್ಲಿ. ಈ ಹೋಟೆಲ್ ಡಿಮ್ಯಾಂಡ್ ಅದೆಷ್ಟರ ಮಟ್ಟಿಗೆ ಇದೆ ಎಂದರೆ ಸದ್ಯ ಇದರ ಮಾಲೀಕ ಇಂತಹುದೇ ಇನ್ನೂ ಹಲವು ಹೋಟೇಲ್ ನಿರ್ಮಿಸುವ ಯೋಚನೆಯಲ್ಲಿದ್ದಾರೆ.

ಹೊಟೇಲ್ ಮಾಲೀಕರು ಹೋಟೆಲ್ ಕುರಿತಾಗಿ ಮಾತನಾಡುತ್ತಾ ಇಲ್ಲಿಗೆ ಭೇಟಿ ನೀಡಿ ಉಳಿದುಕೊಳ್ಳುವವರೇ ನಮ್ಮ ಸ್ಟಾರ್ ಗಳು. ನಾವು ಈ ಹೋಟೆಲ್ ಗೋಡೆ, ಛಾವಣಿ ಎಲ್ಲವನ್ನೂ ತೆಗೆದಿದ್ದೇವೆ. ಕೇವಲ ಇಲ್ಲಿಗೆ ಭೇಟಿ ನೀಡುವ ಜನರ ನೆನಪುಗಳನ್ನಷ್ಟೇ ಉಳಿಸಿಕೊಂಡಿದ್ದೇವೆ ಎಂದಿದ್ದಾರೆ.

loader