ಊಟ ಮಾಡುವಾಗ ಫೋನ್ ಬಳಸಿದ್ರೆ ಏನಾಗುತ್ತದೆ? ನಿಮಗೆ ಗೊತ್ತಿರದ ಅಚ್ಚರಿಯ ಸತ್ಯ ರಿವೀಲ್
ಇವತ್ತು ಫೋನ್ ನಮ್ಮ ಕೈಯಲ್ಲಿ ಇಲ್ಲದೇ ಇದ್ದರೆ ಜೀವನವೇ ನಡೆಯೋದಿಲ್ಲ ಎಂಬ ಸ್ಥಿತಿಗೆ ನಾವು ಬಂದು ಬಿಟ್ಟಿದ್ದೇವೆ. ಕೂತಾಗ, ನಿಂತಾಗ ಎಲ್ಲೇ ಹೋದರೂ ಫೋನ್ ಸ್ಕ್ರಾಲ್ ಮಾಡೋದು, ಮಾತಾಡೋದನ್ನ ಬಿಡೋದಿಲ್ಲ. ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ಅಚ್ಚರಿಯ ಸತ್ಯ.

ಊಟ ಮಾಡುವಾಗ ಮೊಬೈಲ್ ಬಳಸಿದ್ರೆ ಏನಾಗುತ್ತೆ?
ಅದರಲ್ಲೂ ಕೆಲವರು ಊಟ, ತಿಂಡಿ ತಿನ್ನುವಾಗ ಫೋನ್ಗಳನ್ನ ಹೆಚ್ಚಾಗಿ ಬಳಸುತ್ತಾರೆ. ಊಟ ಮಾಡುವಾಗ ಮಕ್ಕಳು, ದೊಡ್ಡವರು ಫೋನ್ ಬಳಸಿದ್ರೆ ಅನಾಹುತ ಗ್ಯಾರಂಟಿ. ವೈದ್ಯರು ನೀಡುವ ಮಾಹಿತಿ ಪ್ರಕಾರ, ಊಟ ಮಾಡುವಾಗ ಫೋನ್ ಬಳಕೆ ಅದೊಂದು ಚಟ. ಇದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೇ ಡೇಂಜರ್. ನೀವು ಏನಾದರೂ ಹಾಗೆ ಮಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ವಿವರ ಇಲ್ಲಿದೆ.
ದೇಹದ ಮೇಲೆ ಅಡ್ಡ ಪರಿಣಾಮ, ಮೊದಲನೇಯದು ಬೊಜ್ಜು
- ವಿಜ್ಞಾನದ ಪ್ರಕಾರ ಹೊಟ್ಟೆ ಮತ್ತು ಮೆದುಳಿನ ನಡುವೆ ನೇರ ಸಂಪರ್ಕ ಇದೆ
- ಊಟ ಮಾಡುವ ವೇಳೆ ಹೊಟ್ಟೆಯಿಂದ ಮೆದುಳಿಗೆ ಆಹಾರ ತುಂಬಲಾಗಿದೆ ಎಂಬ ಸಂದೇಶ
- ಊಟ ಮಾಡುವಾಗ 20 ನಿಮಿಷಗಳ ಬಳಿಕ ಈ ಸಂದೇಶ ಹೋಗುತ್ತದೆ
- ನಾವು ನಿರಂತರವಾಗಿ ಮೊಬೈಲ್ ನೋಡಿದಾಗ ಮೆದುಳು ಮತ್ತು ಹೊಟ್ಟೆ ನಡುವಿನ ಸಂಪರ್ಕ ಕಟ್
- ಇದನ್ನು ಬುದ್ಧಿಹೀನ ಆಹಾರ ಪದ್ಧತಿ ಎಂದು ವೈಜ್ಞಾನಿಕ ಭಾಷೆಯಲ್ಲಿ ಕರೆಯುತ್ತಾರೆ
- ಮೊಬೈಲ್ ಬಳಸುತ್ತ ಊಟ ಮಾಡಿದಾಗ ಹಸಿವಿಗಿಂತ 30 ರಿಂದ 40 ರಷ್ಟು ಹೆಚ್ಚುವರಿಯಾಗಿ ದೇಹಕ್ಕೆ ಹೋಗುತ್ತೆ
- ಇದು ನಮ್ಮ ಗಮನಕ್ಕೆ ಬರೋದೇ ಇಲ್ಲ, ಜೊತೆಗೆ ಮೊಬೈಲ್ ಬಳಸುತ್ತ ಚೆನ್ನಾಗಿ ಅಗಿಯದೇ ನುಂಗುವ ಸಾಧ್ಯತೆ
- ಇದು ಹೊಟ್ಟೆಯಲ್ಲಿನ ಕೊಬ್ಬಿನಾಂಶವನ್ನು ಹೆಚ್ಚು ಮಾಡಲು ಕಾರಣವಾಗುತ್ತದೆ
ಜೀರ್ಣಾಂಗ ವ್ಯವಸ್ಥೆ ಮೇಲೆ ಎಫೆಕ್ಟ್
ನಮ್ಮ ಜೀರ್ಣಾಂಗ ಪ್ರಕ್ರಿಯೆಯು ಹೊಟ್ಟೆಯಲ್ಲಿ ಅಲ್ಲ. ಮೊದಲು ಶುರುವಾಗುವುದು ಬಾಯಿ ಮೂಲಕ. ಒಂದು ಆಹಾರವನ್ನು ನಾವು ನೋಡಿದಾಗ ಮತ್ತು ವಾಸನೆ ಪಡೆದಾಗ.. ನಮ್ಮ ಬಾಯಲ್ಲಿ ಲಾಲಾರಸ ಉತ್ಪತ್ತಿ ಆಗುತ್ತದೆ. ಅದರ ಜೊತೆಗೆ ಜೀರ್ಣಕಾರಿ ಕಿಣ್ವಗಳು ಹೊಟ್ಟೆಯಲ್ಲಿ ಉತ್ಪತ್ತಿ ಆಗುತ್ತವೆ. ಆದರೆ ಮೊಬೈಲ್ ಬಳಸುವಾಗ ನಮ್ಮ ಗಮನ ಮೊಬೈಲ್ ಮೇಲೆ ಇರೋದ್ರಿಂದ ಈ ಎಲ್ಲಾ ಪ್ರಕ್ರಿಯೆ ಅಸಾಧ್ಯ. ಇದರಿಂದ ಜೀರ್ಣಾಂಗ ವ್ಯವಸ್ಥೆಗೆ ರಕ್ತದ ಹರಿವು ಕಡಿಮೆಯಾಗಿ.. ನಾವು ತಿಂದ ವಸ್ತು ಜೀರ್ಣ ಆಗೋದಿಲ್ಲ. ಇದರಿಂದ ಹೊಟ್ಟೆಯ ಉಬ್ಬು, ಗ್ಯಾಸ್ಸ್ಟ್ರಿಕ್ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಟಾಯ್ಲೆಟ್ ಸೀಟಿಗಿಂತ ಕೊಳಕು ಫೋನ್
ಟಾಯ್ಲೆಟ್ ಸೀಟಿಗಿಂತ 10 ಪಟ್ಟು ನಮ್ಮ ಮೊಬೈಲ್ ಕೊಳಕಾಗಿರುತ್ತದೆ. ಫೋನಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಜೀವಿಗಳು ಫೋನ್ ಪರದೆ ಮೇಲೆ ಇರುತ್ತದೆ. ಇದು ಅನೇಕ ಸಂಶೋಧನೆಯಲ್ಲಿ ಸಾಬೀತಾಗಿದೆ. ನಾವು ಎಷ್ಟೇ ಕೈತೊಳೆದು ಕೂತರೂ ಫೋನಿನಲ್ಲಿರುವ ಕೊಳಕು ನಮ್ಮ ದೇಹವನ್ನು ಸೇರುತ್ತದೆ.
ಇ ಕೋಲಿಯಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಆಹಾರದ ಮೂಲಕ ನೇರವಾಗಿ ಹೊಟ್ಟೆ ಪ್ರವೇಶ ಮಾಡುತ್ತವೆ. ಇದು ನಮ್ಮನ್ನು ಅನಾರೋಗ್ಯದಿಂದ ಹಾಸಿಗೆ ಹಿಡಿಯುವಂತೆ ಮಾಡುತ್ತದೆ. ಹೀಗಾಗಿ ಊಟದ ಕೋಣೆಯಿಂದ ಮೊಬೈಲ್ ಅನ್ನು ದೂರ ಇಡಿ. 20 ನಿಮಿಷಗಳ ಕಾಲ ಮೊಬೈಲ್ ಬಳಸದೇ ಊಟ ಮಾಡಿ ಆರೋಗ್ಯವಾಗಿರಿ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

