ಮಹಿಳೆಯರು ರಾತ್ರಿ ತಲೆಸ್ನಾನ ಮಾಡಿದರೆ ಮನೆಗೆ ಗಂಡಾಂತರ! ಇಲ್ಲಿವೆ ವಾಸ್ತು, ವೈಜ್ಞಾನಿಕ ಸಲಹೆಗಳು
ಮನೆಯಲ್ಲಿ ರಾತ್ರಿ ವೇಳೆ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಯಾವುದೇ ಕಾರಣಕ್ಕೂ ತಲೆ ಸ್ನಾನವನ್ನು ಮಾಡಬಾರದು. ಒಂದು ವೇಳೆ ರಾತ್ರಿ ತಲೆಸ್ನಾನ ಮಾಡಿದರೆ ಏನಾಗುತ್ತದೆ ಎಂಬ ಮಾಹಿತಿ ಇಲ್ಲಿದೆ ನೋಡಿ. ಇನ್ನು ತಲೆ ಸ್ನಾನದ ಬಗ್ಗೆ ಶಾಸ್ತ್ರಗಳು ಏನ್ ಹೇಳುತ್ತವೆ ಎಂದು ತಿಳಿದುಕೊಳ್ಳಿ..
ನಮ್ಮ ಕೂದಲು ಆರೋಗ್ಯವಾಗಿರೋದು ಮುಖ್ಯ. ಕೂದಲು ಆರೈಕೆಗೆ ರೆಗ್ಯುಲರ್ ತಲೆಸ್ನಾನ ಮಾಡ್ಬೇಕು. ಕೆಲವರು ಕೂದಲು ಆರೋಗ್ಯವಾಗಿರಲಿ ಅಂತ ದಿನಾ ತಲೆಸ್ನಾನ ಮಾಡ್ತಾರೆ. ಇನ್ನು ಕೆಲವರು ಬೆಳಿಗ್ಗೆ ಟೈಮ್ ಸಿಗದೆ ರಾತ್ರಿ ತಲೆಸ್ನಾನ ಮಾಡ್ತಾರೆ.
ಬೆಳಿಗ್ಗೆ ಟೈಮ್ ಇಲ್ದೆ, ದಿನವಿಡೀ ಕೆಲಸದ ಒತ್ತಡದಲ್ಲಿ ರಾತ್ರಿ ತಲೆಸ್ನಾನ ಮಾಡೋರು ಇದ್ದಾರೆ. ಆದ್ರೆ ಜ್ಯೋತಿಷ್ಯ ಶಾಸ್ತ್ರ ಹೆಂಗಸರು ರಾತ್ರಿ ತಲೆಸ್ನಾನ ಮಾಡ್ಬಾರ್ದು ಅಂತ ಹೇಳುತ್ತೆ. ಯಾಕೆ ಅಂತ ತಿಳ್ಕೊಳ್ಳೋಣ...
ಲಕ್ಷ್ಮಿಗೆ ಕೋಪ ಬರುತ್ತೆ: ಜ್ಯೋತಿಷ್ಯದ ಪ್ರಕಾರ ಹೆಂಗಸರು ರಾತ್ರಿ ತಲೆಸ್ನಾನ ಮಾಡಿದ್ರೆ ಲಕ್ಷ್ಮಿಗೆ ಕೋಪ ಬರುತ್ತೆ, ಆರ್ಥಿಕ ಸಮಸ್ಯೆ ಬರುತ್ತೆ. ಹೆಂಗಸರನ್ನ ಗೃಹಲಕ್ಷ್ಮಿ ಅಂತಾರೆ, ಹಾಗಾಗಿ ರಾತ್ರಿ ತಲೆಸ್ನಾನ ಮಾಡಬಾರದು.
ಸಿರಿಸಂಪತ್ತು ಇರಲ್ಲ: ಹೆಂಗಸರನ್ನ ಗೃಹಲಕ್ಷ್ಮಿ ಅಂತಾರೆ, ಹಾಗಾಗಿ ರಾತ್ರಿ ತಲೆಸ್ನಾನ ಮಾಡಿದ್ರೆ ಸಿರಿಸಂಪತ್ತು ಇರಲ್ಲ. ಶಾಸ್ತ್ರದ ಪ್ರಕಾರ ರಾತ್ರಿ ತಲೆಸ್ನಾನ ಮಾಡಿದ್ರೆ ಗ್ರಹ, ನಕ್ಷತ್ರಗಳ ದಿಕ್ಕು ಬದಲಾಗುತ್ತೆ. ಇದ್ರಿಂದ ಸಮಸ್ಯೆಗಳು ಬರುತ್ತೆ. ಅದಕ್ಕೇ ರಾತ್ರಿ ತಲೆಸ್ನಾನ ಬೇಡ. ಇದರಿಂದ ಒಟ್ಟಾರೆಯಾಗಿ ಮನೆಗೆ ಆರ್ಥಿಕ ಮತ್ತು ಅನಾರೋಗ್ಯದ ಗಂಡಾಂತರ ಬರುತ್ತದೆ.
ರಾತ್ರಿ ತಲೆಸ್ನಾನ ಬೇಡ: ಕಾರಣಗಳು
ರಾತ್ರಿ ತಲೆಸ್ನಾನ ಬೇಡ ಎನ್ನಲು ವೈಜ್ಞಾನಿಕ ಕಾರಣಗಳು:
- ರಾತ್ರಿ ತಲೆಸ್ನಾನ ಮಾಡಿ, ಒದ್ದೆ ಕೂದಲಲ್ಲಿ ಮಲಗಿದರೆ ಕೂದಲು ಒಡೆಯುತ್ತದೆ. ಕೂದಲು ಬುಡ ಬಲಹೀನವಾಗುತ್ತದೆ.
- ಒದ್ದೆ ಕೂದಲಲ್ಲಿ ಮಲಗಿದರೆ ಕೂದಲು ಉದುರುತ್ತೆ. ಮಲಗಿ ತಿರುಗಾಡುವಾಗ ಕೂದಲು ಸಿಕ್ಕಿಹಾಕಿಕೊಂಡು, ಉದುರುವುದು ಹಾಗೂ ಒಡೆಯುತ್ತದೆ. ಆದ್ದರಿಂದ ಒದ್ದೆ ಕೂದಲಲ್ಲಿ ಮಲಗಬಾರದು..
- ಒದ್ದೆ ಕೂದಲಲ್ಲಿ ಮಲಗಿದರೆ ತಲೆಯಲ್ಲಿ ಫಂಗಸ್ ಬೆಳೆಯುತ್ತದೆ. ಇದರಿಂದ ಅಲರ್ಜಿ, ತಲೆಹೊಟ್ಟು ಬರುತ್ತದೆ. ತಲೆನೋವು, ಜ್ವರ, ಕೆಮ್ಮು ಬರುತ್ತದೆ.