MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಕುರಿ ಮಾಂಸಕ್ಕೆ ಮಾತ್ರ ಮಟನ್ ಎನ್ನುತ್ತಾರೆ! ಆದ್ರೆ ಮೇಕೆ ಮಾಂಸಕ್ಕೆ ಏನೆನ್ನುತ್ತಾರೆ? ನಿಮ್ಮ ಬುದ್ಧಿಗೊಂದು ಸವಾಲ್!

ಕುರಿ ಮಾಂಸಕ್ಕೆ ಮಾತ್ರ ಮಟನ್ ಎನ್ನುತ್ತಾರೆ! ಆದ್ರೆ ಮೇಕೆ ಮಾಂಸಕ್ಕೆ ಏನೆನ್ನುತ್ತಾರೆ? ನಿಮ್ಮ ಬುದ್ಧಿಗೊಂದು ಸವಾಲ್!

ನಾವು ಸಾಮಾನ್ಯವಾಗಿ ಬಳಸುವ 'ಮಟನ್' ಪದವು ಫ್ರೆಂಚ್ ಭಾಷೆಯಿಂದ ಬಂದಿದ್ದು, ಇದರರ್ಥ ಕುರಿ ಮಾಂಸ. ಆದರೆ, ಭಾರತದಲ್ಲಿ ಕುರಿ ಮತ್ತು ಮೇಕೆ ಎರಡರ ಮಾಂಸವನ್ನೂ ಮಟನ್ ಎಂದೇ ಕರೆಯಲಾಗುತ್ತದೆ. ಹಾಗಾದರೆ ಮೇಕೆ ಮಾಂಸಕ್ಕೆ ಏನೆಂದು ಕರೆಯುತ್ತಾರೆ? ಇಲ್ಲಿದೆ ನೋಡಿ ನಿಮಗೆ ಗೊತ್ತಿಲ್ಲದ ಮಾಹಿತಿ.

2 Min read
Author : Sathish Kumar KH
Published : Jul 05 2026, 03:47 PM IST
Share this Photo Gallery
  • FB
  • TW
  • Linkdin
  • Whatsapp
16
ಮಟನ್ ಎಂದರೆ ಯಾವುದರ ಮಾಂಸ?
Image Credit : AI

ಮಟನ್ ಎಂದರೆ ಯಾವುದರ ಮಾಂಸ?

ಭಾನುವಾರ ಬಂತೆಂದರೆ ಮಾಂಸಾಹಾರಿಗಳ ಮನೆಯಲ್ಲಿ ಹಬ್ಬದ ವಾತಾವರಣ. ಅಡುಗೆ ಮನೆಯಿಂದ ಹೊರಬರುವ ಮಟನ್ ಸಾಂಬಾರಿನ ಘಮವು ಹಸಿವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಬ್ಬ-ಹರಿದಿನ ಇರಲಿ ಅಥವಾ ವೀಕೆಂಡ್ ಇರಲಿ, ಮಾಂಸದ ಅಡುಗೆ ಇರಲೇಬೇಕು. ಆದರೆ, ನಾವು ಪ್ರತಿದಿನ ಬಳಸುವ ಈ 'ಮಟನ್' ಎಂಬ ಪದದ ಹಿಂದೆ ಒಂದು ಕುತೂಹಲಕಾರಿ ಇತಿಹಾಸವಿದೆ ಎಂಬುದು ನಿಮಗೆ ತಿಳಿದಿದೆಯೇ? ಕುರಿ ಮಾಂಸಕ್ಕೆ ಮಟನ್ ಎಂದು ಯಾಕೆ ಕರೆಯುತ್ತಾರೆ ಮತ್ತು ಮೇಕೆ ಮಾಂಸದ ಸರಿಯಾದ ಹೆಸರೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
'ಮಟನ್' ಪದದ ಉಗಮ:
Image Credit : Getty

'ಮಟನ್' ಪದದ ಉಗಮ:

ನಮಗೆಲ್ಲ ತಿಳಿದಿರುವಂತೆ 'ಮಟನ್' ಎನ್ನುವುದು ಇಂಗ್ಲಿಷ್ ಪದ. ಆದರೆ ಈ ಪದದ ಮೂಲ ಇರುವುದು ಫ್ರೆಂಚ್ ಭಾಷೆಯಲ್ಲಿ. ಹಳೆಯ ಫ್ರೆಂಚ್ ಭಾಷೆಯಲ್ಲಿ 'ಮೌಟನ್' (Mouton) ಎಂಬ ಪದವಿತ್ತು, ಇದರ ಅರ್ಥ 'ಕುರಿ' ಎಂದು. ಬ್ರಿಟನ್ ಮೇಲೆ ನಾರ್ಮನ್ನರು ಆಕ್ರಮಣ ಮಾಡಿದ ಕಾಲದಲ್ಲಿ ಫ್ರೆಂಚ್ ಭಾಷೆಯ ಅನೇಕ ಪದಗಳು ಇಂಗ್ಲಿಷ್‌ಗೆ ಸೇರ್ಪಡೆಗೊಂಡವು. ಕಾಲಾನಂತರದಲ್ಲಿ 'ಮೌಟನ್' ಎಂಬ ಪದವೇ ಬದಲಾಗಿ 'ಮಟನ್' (Mutton) ಎಂದಾಯಿತು.

Related Articles

Related image1
ಚಿಕನ್, ಮಟನ್, ಮೀನನ್ನು ಫ್ರಿಜ್‌ನಲ್ಲಿ ಎಷ್ಟು ದಿನ ಇಡಬಹುದು ಗೊತ್ತಾ? ಈ ತಪ್ಪನ್ನು ಮಾಡಲೇಬೇಡಿ
Related image2
ಹೆಚ್ಚಿನ ಪ್ರೋಟೀನ್ ಯಾವುದರಲ್ಲಿದೆ? ಚಿಕನ್, ಮಟನ್, ಮೀನಿನ ನಡುವೆ ಜಿಮ್ ಪ್ರಿಯರ ಅಲ್ಟಿಮೇಟ್ ಚಾಯ್ಸ್ ಯಾವುದು ಗೊತ್ತಾ?
36
ಗುಡ್ಡೆ ಮಾಂಸ- ತಲೆಕಾಲು:
Image Credit : Getty

ಗುಡ್ಡೆ ಮಾಂಸ- ತಲೆಕಾಲು:

ಬ್ರಿಟಿಷರು ಭಾರತವನ್ನು ಆಳಿದ ಸಮಯದಲ್ಲಿ, ಅವರು ಕುರಿ ಮಾಂಸಕ್ಕೆ ಬಳಸುತ್ತಿದ್ದ 'ಮಟನ್' ಪದವು ಭಾರತೀಯರಿಗೂ ರೂಢಿಯಾಯಿತು. ಅಂದಿನಿಂದ ಇಂದಿನವರೆಗೂ ನಾವು ಕುರಿ ಮಾಂಸವನ್ನು ಮಟನ್ ಎಂದೇ ಕರೆಯುತ್ತಿದ್ದೇವೆ. ಇದರ ಬದಲಾಗಿ ನಾವು ಕನ್ನಡ ಭಾಷೆಯಲ್ಲಿ ಕುರಿಮಾಂಸ ಎಂದು ಕರೆದರೆ ಆಯಾ ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳನ್ನು ಕರೆಯುತ್ತಾರೆ.

ಬಹುತೇಕರು ಬ್ರಿಟೀಷರು ಬಳಸಿದ ಮಟನ್ ಪದವನ್ನೇ ಬಳಕೆ ಮಾಡುವುದು ರೂಢಿಯಲ್ಲಿದೆ. ಇನ್ನು ಮಾಂಸವನ್ನು ಕತ್ತರಿಸಿ ಕೊಡುವ ವಿಭಿನ್ನ ಮಾದರಿಗಳಿಂದಾಗಿ ಗುಡ್ಡೆಮಾಂಸ, ತಲೆ-ಕಾಲು, ಬೋಟಿ-ಲಿವರ್, ತೊಡೆಮಾಂಸ ಹೀಗೆ ವಿಭಿನ್ನವಾಗಿ ಹೇಳುತ್ತಾರೆ.

46
ಮೇಕೆ ಮಾಂಸಕ್ಕೆ ಏನನ್ನುತ್ತಾರೆ?
Image Credit : ai

ಮೇಕೆ ಮಾಂಸಕ್ಕೆ ಏನನ್ನುತ್ತಾರೆ?

ಬಹಳಷ್ಟು ಜನರಿಗೆ ಇರುವ ಗೊಂದಲವೆಂದರೆ ಕುರಿ ಮತ್ತು ಮೇಕೆ ಎರಡರ ಮಾಂಸವನ್ನೂ ಮಟನ್ ಎಂದು ಕರೆಯುವುದು. ಆದರೆ ತಾಂತ್ರಿಕವಾಗಿ ಮೇಕೆ ಮಾಂಸಕ್ಕೆ ಮಟನ್ ಎಂದು ಕರೆಯುವುದಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಮೇಕೆ ಮಾಂಸವನ್ನು 'ಶೆವಾನ್' (Chevon) ಎಂದು ಕರೆಯುತ್ತಾರೆ. ಇದು ಕೂಡ ಫ್ರೆಂಚ್ ಪದವಾದ 'ಚೆವ್ರೆ' (Chevre - ಮೇಕೆ) ಇಂದ ಬಂದಿದೆ. ಕೆಲವೆಡೆ ಇದನ್ನು ಕೇವಲ 'ಗೋಟ್ ಮೀಟ್' (Goat Meat) ಎಂದೂ ಕರೆಯಲಾಗುತ್ತದೆ.

56
ಲ್ಯಾಂಬ್ ಮತ್ತು ಮಟನ್ ನಡುವಿನ ವ್ಯತ್ಯಾಸ:
Image Credit : Gemini AI

ಲ್ಯಾಂಬ್ ಮತ್ತು ಮಟನ್ ನಡುವಿನ ವ್ಯತ್ಯಾಸ:

ವಿದೇಶಗಳಲ್ಲಿ ಕುರಿ ಮಾಂಸದ ವಯಸ್ಸಿನ ಆಧಾರದ ಮೇಲೆ ಎರಡು ಹೆಸರುಗಳನ್ನು ಬಳಸಲಾಗುತ್ತದೆ:

ಲ್ಯಾಂಬ್ (Lamb): ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಳೆಯ ಕುರಿಮರಿಯ ಮಾಂಸವನ್ನು 'ಲ್ಯಾಂಬ್' ಎನ್ನಲಾಗುತ್ತದೆ. ಇದು ತುಂಬಾ ಮೃದುವಾಗಿರುತ್ತದೆ.

ಮಟನ್ (Mutton): ಒಂದು ವರ್ಷಕ್ಕಿಂತ ಹೆಚ್ಚು ವಯಸ್ಸಿನ, ಬಲಿತ ಕುರಿಯ ಮಾಂಸವನ್ನು 'ಮಟನ್' ಎಂದು ಕರೆಯಲಾಗುತ್ತದೆ. ಇದರ ರುಚಿ ಎಳೆಯ ಮಾಂಸಕ್ಕಿಂತ ಸ್ವಲ್ಪ ಭಿನ್ನವಾಗಿರುತ್ತದೆ.

66
ಭಾರತದಲ್ಲಿ ಎಲ್ಲವೂ 'ಮಟನ್':
Image Credit : gemini

ಭಾರತದಲ್ಲಿ ಎಲ್ಲವೂ 'ಮಟನ್':

ಪಾಶ್ಚಿಮಾತ್ಯ ದೇಶಗಳಲ್ಲಿ ಕುರಿ ಮತ್ತು ಮೇಕೆ ಮಾಂಸಕ್ಕೆ ಸ್ಪಷ್ಟ ವ್ಯತ್ಯಾಸವಿದ್ದರೂ, ಭಾರತದಲ್ಲಿ ಮಾತ್ರ ಮೇಕೆ ಅಥವಾ ಕುರಿ ಎರಡನ್ನೂ ಸಾಮಾನ್ಯವಾಗಿ 'ಮಟನ್' ಎಂದೇ ಕರೆಯುವುದು ವಾಡಿಕೆ. ಹೋಟೆಲ್ ಇರಲಿ ಅಥವಾ ಮಾಂಸದ ಅಂಗಡಿ ಇರಲಿ, ನಾವು ಕೇಳುವುದು ಮಟನ್ ಎಂದೇ! ಮುಂದಿನ ಬಾರಿ ನೀವು ಭಾನುವಾರ ಮಟನ್ ಊಟ ಮಾಡುವಾಗ, ಈ ಕುತೂಹಲಕಾರಿ ಇತಿಹಾಸವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಆಹಾರ
ಆಹಾರ ವ್ಲಾಗರ್
ಜೀವನಶೈಲಿ
ಮಹಿಳೆಯರು

Latest Videos
Recommended Stories
Recommended image1
ಬೆಳಗ್ಗೆ ನೋಡಿದ್ರೆ 57 ವರ್ಷದವ, ಮಧ್ಯಾಹ್ನಕ್ಕೆ 25ರ ಯುವಕನಂತೆ ಬಿಂದಾಸ್ ಆಗಿರುವ ವ್ಯಕ್ತಿಯ ವಿಡಿಯೋ ವೈರಲ್
Recommended image2
ಗಂಡಸ್ರು ಬೆಚ್ಚಿಬೀಳೋ ಇನ್ನೊಂದು ಕೊಲೆ: ಬಾತ್​ರೂಮ್​ನಲ್ಲೇ ಗಂಡನ ಸಮಾಧಿ! 45 ದಿನ ಯಾಮಾರಿಸಿದ ಖತರ್ನಾಕ್​ ಲೇಡಿ
Recommended image3
Aamir Khan and Gauri Spratt Wedding: ಮುಂಬೈ ಮಳೆಯ ನಡುವೆ ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಮದುವೆ; ಆಪ್ತರಿಗಷ್ಟೇ ಆಹ್ವಾನ!
Related Stories
Recommended image1
ಚಿಕನ್, ಮಟನ್, ಮೀನನ್ನು ಫ್ರಿಜ್‌ನಲ್ಲಿ ಎಷ್ಟು ದಿನ ಇಡಬಹುದು ಗೊತ್ತಾ? ಈ ತಪ್ಪನ್ನು ಮಾಡಲೇಬೇಡಿ
Recommended image2
ಹೆಚ್ಚಿನ ಪ್ರೋಟೀನ್ ಯಾವುದರಲ್ಲಿದೆ? ಚಿಕನ್, ಮಟನ್, ಮೀನಿನ ನಡುವೆ ಜಿಮ್ ಪ್ರಿಯರ ಅಲ್ಟಿಮೇಟ್ ಚಾಯ್ಸ್ ಯಾವುದು ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved