A4 Paper In The Fridge: ಫ್ರಿಡ್ಜ್‌ನಲ್ಲಿ A4 ಶೀಟ್ ಇಟ್ಟರೆ ಕರೆಂಟ್ ಬಿಲ್ ಕಮ್ಮಿ ಆಗುತ್ತೆ; ಹೇಗೆ?
Fridge paper test: ಬೇಸಿಗೆಯಲ್ಲಿ ಫ್ರಿಡ್ಜ್ ಇನ್ನಷ್ಟು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಆಗ ಹೆಚ್ಚು ವಿದ್ಯುತ್ ಬಿಲ್ ಬರುತ್ತದೆ, ಆಹಾರ ಬೇಗನೆ ಹಾಳಾಗೋದಿಲ್ಲ. ನಿಮ್ಮ ಫ್ರಿಡ್ಜ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸಲು ತಜ್ಞರು "A4 ಪೇಪರ್ ಟ್ರಿಕ್" ಬಳಸಿ ಅಂತಾರೆ.

A4 ಪೇಪರ್ ಪರೀಕ್ಷೆ ಮಾಡುವುದು ಹೇಗೆ?
ಒಂದು ಸಾಮಾನ್ಯ ಕಾಗದದ (A4 ಪೇಪರ್) ಅರ್ಧ ಭಾಗ ಫ್ರಿಡ್ಜ್ ಒಳಗಡೆ, ಅರ್ಧ ಭಾಗ ಹೊರಗಡೆ ಇರುವಂತೆ ಬಾಗಿಲ ಸಂದಿನಲ್ಲಿ ಇಟ್ಟು ಫ್ರಿಡ್ಜ್ ಬಾಗಿಲು ಮುಚ್ಚಿ.
ಈಗ ಆ ಕಾಗದವನ್ನು ನಿಧಾನವಾಗಿ ಹೊರಗೆಳೆಯಲು ಪ್ರಯತ್ನಿಸಿ.
ಹೇಗೆ ಗೊತ್ತಾಗುತ್ತದೆ?
ಕಾಗದವನ್ನು ಎಳೆಯುವಾಗ ಗಟ್ಟಿಯಾಗಿ ಸಿಕ್ಕಿಹಾಕಿಕೊಂಡರೆ, ನಿಮ್ಮ ಫ್ರಿಡ್ಜ್ ಬಾಗಿಲಿನ ರಬ್ಬರ್ ಸೀಲ್ (ಗ್ಯಾಸ್ಕೆಟ್) ಚೆನ್ನಾಗಿದೆ ಎಂದು ಅರ್ಥ.
ಕಾಗದವು ಯಾವುದೇ ಶ್ರಮವಿಲ್ಲದೆ ಸುಲಭವಾಗಿ ಹೊರಗೆ ಬಂದರೆ, ಬಾಗಿಲಿನ ರಬ್ಬರ್ ಸೀಲ್ ಸಡಿಲವಾಗಿದೆ ಅಥವಾ ಹಾಳಾಗಿದೆ ಎಂದು ಅರ್ಥ.
ಸೀಲ್ ಸಡಿಲವಾಗಿದ್ದರೆ ಏನಾಗುತ್ತದೆ?
ಬಾಗಿಲಿನ ರಬ್ಬರ್ ಸಡಿಲವಾಗಿದ್ದರೆ, ಹೊರಗಿನ ಬಿಸಿ ಗಾಳಿ ಫ್ರಿಡ್ಜ್ ಒಳಗಡೆ ಹೋಗುತ್ತದೆ. ಆಗ ಒಳಗಿನ ತಾಪಮಾನವನ್ನು ತಂಪು ಮಾಡಲು ಫ್ರಿಡ್ಜ್‌ನ ಕಂಪ್ರೆಸರ್ ನಿರಂತರವಾಗಿ ಕೆಲಸ ಮಾಡಬೇಕಾಗುತ್ತದೆ.
ಇದರಿಂದ ವಿದ್ಯುತ್ ಬಿಲ್ ತುಂಬಾ ಜಾಸ್ತಿ ಬರುತ್ತದೆ. ಫ್ರಿಡ್ಜ್ ಒಳಗಿನ ತಂಪು ಕಡಿಮೆಯಾಗಿ ಆಹಾರ ಪದಾರ್ಥಗಳು ಬೇಗನೆ ಹಾಳಾಗುತ್ತವೆ.
ಪರಿಹಾರವೇನು?
ಬಾಗಿಲು ಸರಿಯಾಗಿ ಮುಚ್ಚದಿದ್ದರೆ ತಕ್ಷಣ ಹೊಸ ರಬ್ಬರ್ ಹಾಕಿಸುವ ಅಗತ್ಯವಿಲ್ಲ. ಕೆಲವೊಮ್ಮೆ ಜಿಡ್ಡು ಅಥವಾ ಧೂಳು ಕೂತಿರುವುದರಿಂದ ಹೀಗಾಗಬಹುದು. ಸೋಪು, ಉಗುರುಬೆಚ್ಚಗಿನ ನೀರಿನಿಂದ ರಬ್ಬರ್ ಅನ್ನು ಚೆನ್ನಾಗಿ ಒರೆಸಿ ಸ್ವಚ್ಛಗೊಳಿಸಿ.
ರಬ್ಬರ್ ಸ್ವಲ್ಪ ಗಟ್ಟಿಯಾಗಿದ್ದರೆ, ಹೇರ್ ಡ್ರೈಯರ್ ಮೂಲಕ ಲಘುವಾಗಿ ಬಿಸಿ ಗಾಳಿ ಕೊಟ್ಟರೆ ಅದು ಮತ್ತೆ ಮೃದುವಾಗಿ ಬಿಗಿಯಾಗುತ್ತದೆ.
ರಬ್ಬರ್ ಸಂಪೂರ್ಣವಾಗಿ ಹರಿದುಹೋಗಿದ್ದರೆ ಅಥವಾ ಬಿರುಕು ಬಿಟ್ಟಿದ್ದರೆ ಹೊಸದನ್ನು ಹಾಕಿಸುವುದು ಒಳಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

